
ಬೆಂಗಳೂರು, (ಫೆಬ್ರವರಿ 09): ನಿನ್ನೆಯಷ್ಟೇ (ಫೆಬ್ರವರಿ 08) ಮೆಟ್ರೋ ದರ ಏರಿಕೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಬರುತ್ತಿದ್ದಂತೆಯೇ ಬಿಎಂಆರ್‌ಸಿಎಲ್ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಇಂದು (ಫೆಬ್ರವರಿ 09) ಬೆಳಗ್ಗೆ 7 ಗಂಟೆಯಿಂದಲೇ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೊಳಿಸಿದೆ. ಟೋಕನ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 50% ರಷ್ಟು ದರ ಹೆಚ್ಚಳವಾದ್ರೆ, ಸ್ಮಾರ್ಟ್ ಕಾರ್ಡ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 45% ರಷ್ಟು ಹೆಚ್ಚಳವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಆದ್ರೆ, ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ.
0 ಯಿಂದ 2 ಕಿಲೋ ಮೀಟರ್ವರೆಗಿನ ಪ್ರಯಾಣದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ಇದ್ದ 10ರೂಪಾಯಿಯೇ ಮುಂದುವರಿಯಲಿದೆ. 2 ರಿಂದ 40 ಕಿಲೋ ಮೀಟರ್ಗೆ ಹಿಂದೆ 15 ರೂಪಾಯಿ ಇದ್ದ ದರ ಇದೀಗ 20 ರೂ. ಆಗಿದೆ. 4ರಿಂದ 6 ಕಿಲೋ ಮೀಟರ್ಗೆ 25 ಇದ್ದ ದರ 30ಕ್ಕೆ ಏರಿಕೆಯಾಗಿದೆ. 6 ರಿಂದ 8 ಕಿಲೋ ಮೀಟರ್ಗೆ ಹಿಂದೆ 30 ಇದ್ದದ್ದು, ಇದೀಗ 40ರೂಪಾಯಿ ಆಗಿದೆ. 8 ರಿಂದ 10 ಕಿಲೋ ಮೀಟರ್ ಪ್ರಯಾಣಿಸುವವರಿಗೆ 40 ರೂಪಾಯಿ ಇದ್ದ ಟಿಕೆಟ್ ದರ 50ಕ್ಕೆ ತಲುಪಿದೆ.
10 ರಿಂದ 15 ಕಿಲೋ ಮೀಟರ್ಗೆ 45 ರೂಪಾಯಿ ಪಾವತಿಸ್ತಿದ್ದವರು ಇದೀಗ 60 ರೂಪಾಯಿ ಪೇ ಮಾಡ್ಬೇಕಿದೆ. 15 ರಿಂದ 20 ಕಿಲೋ ಮೀಟರ್ಗೆ 50 ರೂಪಾಯಿಗೆ ಸಿಗ್ತಿದ್ದ ಟಿಕೆಟ್ 70 ರೂಪಾಯಿಗೆ ಕೊಂಡುಕೊಳ್ಳಬೇಕಿದೆ. 20 ರಿಂದ 25 ಕಿಲೋ ಮೀಟರ್ನ ಹೊಸ ದರ 80 ರೂಪಾಯಿ ಆದ್ರೆ, ಹಳೇ ದರ 60 ರೂಪಾಯಿ ಇತ್ತು. 25 ರಿಂದ 30 ಕಿಲೋ ಮೀಟರ್ ಪ್ರಯಾಣಕ್ಕೆ 60ರೂಪಾಯಿ ಇದ್ದದ್ದು ಇದೀಗ 90 ರೂಪಾಯಿಗೆ ಏರಿಕೆಯಾಗಿದೆ.
ಮೆಟ್ರೋ ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ. ನಾನು ಪ್ರತಿದಿನ ಮೂರ್ನಾಲ್ಕು ಬಾರಿ ಮೆಟ್ರೋದಲ್ಲಿ ಪ್ರಯಾಣಿಸುತ್ತೇನೆ. ದರ ಏರಿಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.
ಬೆನ್ನಿಗಾನಹಳ್ಳಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ನಿಲ್ದಾಣ ( ವಿಧಾನಸೌಧಕ್ಕೆ ) ಕಳೆದ ಭಾನುವಾರ 26.6 ರುಪಾಯಿ ಇತ್ತು. ಈ ವಾರ ಬರೋಬ್ಬರಿ 60 ರುಪಾಯಿ ಆಗಿದೆ ಎಂದು ದಾಖಲೆ ಸಮೇತ ಪ್ರಯಾಣಿಕ ಅರ್ಜುನ್ ಎನ್ನುವರು ಮೆಟ್ರೋ ವಿರುದ್ಧ ಆಕ್ರೋಶ ಹೊರಹಾಕಿದರು.
ಓನ್ ಟು ಡಬಲ್ ದರ ಹೆಚ್ಚಳ ಮಾಡಿದ್ದಾರೆ. ನಾನು ಪ್ರತಿವಾರ ಬೆನ್ನಿಗಾನಹಳ್ಳಿಯಿಂದ ಕಬ್ಬನ್ ಪಾರ್ಕ್ ಗೆ ಬರುತ್ತೇನೆ. ಕಳೆದ ಭಾನುವಾರ ಆನ್ಲೈನ್ ಮೂಲಕ ಟಿಕೆಟ್ ತಗೊಂಡಿದ್ದೆ 26 ರುಪಾಯಿ ಇತ್ತು. ಈ ವಾರ 60 ರುಪಾಯಿ ತಗೊಂಡ್ರು .ಇದು ಸರಿಯಲ್ಲ. ಇಷ್ಟೊಂದು ಏರಿಕೆ ಮಾಡಿದ್ರೆ ಕಷ್ಟ ಆಗುತ್ತದೆ ಎಂದು ಕಿಡಿಕಾರಿದರು.
Published On - 1:48 pm, Sun, 9 February 25