AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಗತ್ಯ ಓಡಾಡುವ ಬೈಕ್ ಹಿಡಿದಿದ್ದಕ್ಕೆ ಮಹಿಳಾ ಎಎಸ್ಐ ಅಮಾನತು ಆರೋಪ; ಗದಗ ಜಿಲ್ಲೆಯಲ್ಲಿ ಭಾರಿ ಆಕ್ರೋಶ

ಬೆಟಗೇರಿ ಬಸ್ ನಿಲ್ದಾಣ ಬಳಿ ಬೈಕ್ ಸವಾರ ಅನಗತ್ಯವಾಗಿ ಓಡಾಡುತ್ತಿದ್ದರು. ಈ ವೇಳೆ ಮಹಿಳಾ ಎಎಸ್ಐ ಬೈಕ್ ಸವಾರನ್ನು ತಡೆದಿದ್ದರು. ರೋಣ ಶಾಸಕ ಕಳಕಪ್ಪ ಬಂಡಿ ಕಾರ್ಯಕರ್ತನ ಬೈಕ್ ಬಿಡುವಂತೆ ಫೋನಿನಲ್ಲಿ ಒತ್ತಾಯಿಸಿದ್ದರು.

ಅನಗತ್ಯ ಓಡಾಡುವ ಬೈಕ್ ಹಿಡಿದಿದ್ದಕ್ಕೆ ಮಹಿಳಾ ಎಎಸ್ಐ ಅಮಾನತು ಆರೋಪ; ಗದಗ ಜಿಲ್ಲೆಯಲ್ಲಿ ಭಾರಿ ಆಕ್ರೋಶ
ಅಮಾನತುಗೊಡಿರುವ ಎಎಸ್ಐ ಎನ್.ಸಿ.ಮೂಲಿಮನಿ
sandhya thejappa
|

Updated on: May 22, 2021 | 10:33 AM

Share

ಗದಗ: ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಸರ್ಕಾರ ಅವಕಾಶ ನೀಡಿದೆ. ಆ ನಂತರ ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಬೆಟಗೇರಿ ಬಸ್ ನಿಲ್ದಾಣ ಬಳಿ ಓರ್ವ ವ್ಯಕ್ತಿ ಅನಗತ್ಯವಾಗಿ ಓಡಾಡುತ್ತಿದ್ದರು. ಈ ವೇಳೆ ಮಹಿಳಾ ಎಎಸ್ಐ ಎನ್.ಸಿ.ಮೂಲಿಮನಿ ಬೈಕ್ ಸವಾರನನ್ನು ಹಿಡಿದಿದ್ದರು. ಆದರೆ ಇದೇ ಕಾರಣಕ್ಕೆ ಮಹಿಳಾ ಎಎಸ್ಐ ಇದೀಗ ಅಮಾನತುಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಟಗೇರಿ ಬಸ್ ನಿಲ್ದಾಣ ಬಳಿ ಬೈಕ್ ಸವಾರ ಅನಗತ್ಯವಾಗಿ ಓಡಾಡುತ್ತಿದ್ದರು. ಈ ವೇಳೆ ಮಹಿಳಾ ಎಎಸ್ಐ ಬೈಕ್ ಸವಾರನ್ನು ತಡೆದಿದ್ದರು. ರೋಣ ಶಾಸಕ ಕಳಕಪ್ಪ ಬಂಡಿ ಕಾರ್ಯಕರ್ತನ ಬೈಕ್ ಬಿಡುವಂತೆ ಫೋನಿನಲ್ಲಿ ಒತ್ತಾಯಿಸಿದ್ದರು. ಆದರೆ ಶಾಸಕರ ಆಪ್ತರಿಗೊಂದು, ಜನಸಾಮಾನ್ಯರಿಗೊಂದು ನ್ಯಾಯವಾ ಎಂದು ಪ್ರಶ್ನಿಸಿದ ಎಎಸ್ಐ ಎನ್.ಸಿ.ಮೂಲಿಮನಿ ಬೈಕ್ ಬಿಡುವುದಿಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಸಿಟ್ಟಿಗೆದ್ದ ಶಾಸಕರು ಎಸ್ಪಿಗೆ ಹೇಳಿ ಸಸ್ಪೆಂಡ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಮಹಿಳಾ ಎಎಸ್ಐ ಸಸ್ಪೆಂಡ್ಗೆ ಗದಗ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೊವಿಡ್ ಕೇರ್ ಸೆಂಟರ್​ನಿಂದ ಸೋಂಕಿತ ಪರಾರಿ ಶಿರಹಟ್ಟಿ ಪಟ್ಟಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೊವಿಡ್ ಕೇರ್ ಸೆಂಟರ್​ನಿಂದ ಸೋಂಕಿತ ಪರಾರಿಯಾಗಿದ್ದಾನೆ. ಪರಾರಿಯಾದ ಸೋಂಕಿತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಸೋಂಕಿತ ವ್ಯಕ್ತಿ ಸದ್ಭವ ಇಂಜಿನಿಯರಿಂಗ್ ರೋಡ್ ವರ್ಕ್ಸ್ ಕಂಪನಿ ನೌಕರನೆಂದು ತಿಳಿದುಬಂದಿದೆ. ಕಂಪನಿ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಶೋಧ ಕಾರ್ಯ ನಡೆಯುತ್ತಿದೆ.

ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸಲು ಒತ್ತಾಯ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಪ್ಯಾಕೇಜ್ ಘೋಷಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪರಿಷತ್ ಸದಸ್ಯ ಎಸ್.ವಿ.ಸುಂಕನೂರ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಶಾಲೆ ಕಾಲೇಜುಗಳ ಶಿಕ್ಷಕರು ಇದ್ದಾರೆ. ಒಂದು ವರ್ಷದಿಂದ ಎರಡೂವರೆ ಲಕ್ಷ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವೇತನ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಶೇಕಡಾ 90 ರಷ್ಟು ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಶಿಕ್ಷಕ ಸಮುದಾಯಕ್ಕೆ ನೆರವು ನೀಡಲು ಸರ್ಕಾರ ಮುಂದಾಗಬೇಕು ಅಂತ ಮನವಿ ಮಾಡಿದ್ದಾರೆ.

ಇದನ್ನೂ ಓದಿ

ಮಹಿಳಾ ತಂಡದ ಕೋಚ್ ವಿವಾದ: ರಾಮನ್ ಕೈಬಿಟ್ಟಿದ್ದಕ್ಕೆ ಅಸಮಾಧಾನ ಹೊರಹಾಕಿದ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ

ಚಿಕ್ಕಬಳ್ಳಾಪುರ ಆಸ್ಪತ್ರೆಯ ಅವ್ಯವ್ಯಸ್ಥೆ ಬಗ್ಗೆ ಸಚಿವರ ಬೆಂಬಲಿಗನಿಂದಲೇ ಆರೋಗ್ಯ ಸಚಿವರಿಗೆ ಪತ್ರ

(People of gadag expressed outraged for Woman ASI suspended for stop unnecessary riding bike)