ಮೀಸಲಾತಿಗೆ ಧ್ವನಿ ಎತ್ತದ ಜನಪ್ರತಿನಿಧಿಗಳು: ನ್ಯಾಯಾಂಗದ ಮೊರೆ ಹೋಗಲು ತೀರ್ಮಾನಿಸಿದ ಜಯಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಕೆಲ ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಇವೆ. ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿ ಸೇರಿದಂತೆ ಹಲವು ಕಡೆಗಳಲ್ಲಿ ಬೃಹತ್​ ಸಮಾವೇಶಗಳು ನಡೆದಿವೆ. ಆದ್ರೆ, ಇದೀಗ ಜನಪ್ರತಿನಿಧಿಗಳು ಹಿಂದೆ ಸರಿದಿರುವುದರಿಂದ ಅಸಮಾಧಾನಗೊಂಡಿರುವ ಸ್ವಾಮೀಜಿ, ನ್ಯಾಯಾಂಗದ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

ಮೀಸಲಾತಿಗೆ ಧ್ವನಿ ಎತ್ತದ ಜನಪ್ರತಿನಿಧಿಗಳು: ನ್ಯಾಯಾಂಗದ ಮೊರೆ ಹೋಗಲು ತೀರ್ಮಾನಿಸಿದ ಜಯಮೃತ್ಯುಂಜಯ ಸ್ವಾಮೀಜಿ
ಮೀಸಲಾತಿಗೆ ಧ್ವನಿ ಎತ್ತದ ಜನಪ್ರತಿನಿಧಿಗಳು, ನ್ಯಾಯಾಂಗದ ಮೊರೆ ಹೋಗಲು ತೀರ್ಮಾನಿಸಿದ ಜಯಮೃತ್ಯುಂಜಯ ಸ್ವಾಮೀಜಿ
Edited By:

Updated on: Aug 30, 2024 | 6:30 PM

ಕೊಪ್ಪಳ, ಆಗಸ್ಟ್​ 30: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಹೋರಾಟ ವಿಚಾರವಾಗಿ ಸಿದ್ದರಾಮಯ್ಯನವರ (Siddaramaiah) ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಸಮಾಜದ ಶಾಸಕರಿಗೆ ಅಧಿವೇಶನದಲ್ಲಿ ಮಾತಾಡಲು ಹೇಳಿದ್ವಿ. ಆದರೆ ಅವರು ಮಾತನಾಡಿಲ್ಲ. ಹೀಗಾಗಿ ನ್ಯಾಯಾಂಗದ ಮೊರೆಹೋಗಲು ಮುಂದಾಗಿದ್ದೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಋಣ ತೀರಿಸುವ ಕೆಲಸ ಶಾಸಕರು, ಸಚಿವರು ಮಾಡಬೇಕು

ಕೊಪ್ಪಳ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜದ ವಕೀಲರ ಸಭೆ ನಡೆಸಿ ಚಿಂತನೆ ನಡೆಸುತ್ತಿದ್ದೇವೆ. ಸೆ.22ಕ್ಕೆ ಬೆಳಗಾವಿಯಲ್ಲಿ ಮಹಾಪರಿಷತ್ ಸಭೆ ನಡೆಸುತ್ತೇವೆ. ಪಂಚಮಸಾಲಿ ಹೋರಾಟದಿಂದಾಗಿ ಅನೇಕರು ಗೆದ್ದಿದ್ದಾರೆ. ಋಣ ತೀರಿಸುವ ಕೆಲಸ ಶಾಸಕರು, ಸಚಿವರು ಮಾಡಬೇಕು. ಹಿಂದಿನ ಸರ್ಕಾರ ಮಾಡಿದ ಸ್ಪಂದನೆ ಈ ಸರ್ಕಾರ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ; ಮತ್ತೆ‌ ಹೋರಾಟಕ್ಕೆ ಸಜ್ಜಾದ ಬಸವ ಜಯಮೃತ್ಯುಂಜಯಶ್ರೀ

ಗಂಗಾವತಿಯಲ್ಲಿ ಬೀದಿ ದೀಪ ಕಂಬಗಳ ಧರ್ಮ ದಂಗಲ್‌ ವಿಚಾರವಾಗಿ ಮಾತನಾಡಿದ ಅವರು, ಆಯಾ ಧರ್ಮಗಳ ಕ್ಷೇತ್ರಗಳಲ್ಲಿ ಅವರ ಧರ್ಮದ ಸಂಕೇತಗಳನ್ನು ಅಳವಡಿಸಲು ಯಾವುದೇ ತೊಂದರೆ ಇಲ್ಲಾ. ಅನ್ಯ ಧರ್ಮೀಯರು ಅದನ್ನು ಪ್ರಶ್ನಿಸುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.

ರಾಜಕೀಯ ಹಸ್ತಕ್ಷೇಪ ಮಾಡಬಾರದು

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಫ್ಯಾಕ್ಟರಿಗೆ ಪರವಾನಗಿ ನೀಡದೇ ಇರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ರೈತರಿಗೆ ಪೂರಕವಾಗಿರುವ ಕಾರ್ಖಾನೆ ಮಾಡಿದ್ದಾರೆ. ದುರುದ್ದೇಶದಿಂದ ಅದನ್ನು ಮುಚ್ಚುವ ಕೆಲಸ ಮಾಡಬಾರದು. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದಿದ್ದಾರೆ.

ಇದನ್ನೂ ಓದಿ: ವೀರಶೈವ ಲಿಂಗಾಯತ ಸಮಾವೇಶಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಠಕ್ಕರ್

ಮುಂಗಾರು‌ ಅಧಿವೇಶನದಲ್ಲಿ ಪಂಚಮಸಾಲಿ ಮೀಸಲಾತಿ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡುವಂತೆ ಸಮುದಾಯದ‌ ಶಾಸಕರಿಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಆಗ್ರಹಿಸಿದ್ದರು. ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲರಿಗೆ ಶ್ರೀಗಳು ಆಗ್ರಹಿಸಿದ್ದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪಪಂಗಡಗಳಿಗೆ ಓಬಿಸಿ ಮೀಸಲಾತಿ ನೀಡಬೇಕು. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಶಾಸಕರಿಗೆ ಮನವಿ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.