Photo Gallery: ದಾವಣಗೆರೆ ಕುಸ್ತಿ ಪಂದ್ಯಾವಳಿಯ ರೋಚಕ ಕ್ಷಣಗಳು ಇಲ್ಲಿದೆ
ಕಳೆದ ಒಂದು ವರ್ಷದಿಂದ ಈ ನಗರದಲ್ಲಿ ಯಾವುದೇ ಕ್ರೀಡೆಯನ್ನು ಆಯೋಜನೆ ಮಾಡಿಲ್ಲ, ಅದಕ್ಕೆ ಕಾರಣ ಕೋವಿಡ್ 19 . ದಾವಣಗೆರೆ ಎಂದರೆ ಬರೀ ಬೆಣ್ಣೆ ದೋಸೆ ಎಂದು ಮಾತ್ರ ಗೊತ್ತು. ಇದಕ್ಕೂ ಪ್ರಸಿದ್ಧವಾದ ಸಾಹಸ ಕಲೆಯೊಂದು ಇಲ್ಲಿ ಜೀವಂತವಾಗಿದೆ. ಅದೇ ಕುಸ್ತಿ. ದಾವಣಗೆರೆ ಪೈಲ್ವಾನರು ಎಂದರೆ ಮೈಸೂರು ದಸರಾದಲ್ಲಿ ಪ್ರಸಿದ್ಧರು ಗಲ್ಲಿಗೊಂದು ಗರಡಿ ಮನೆ ಸಹ ಈ ನಗರದಲ್ಲಿವೆ.