ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ

ಮಂಡ್ಯ: ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾಮೇಗೌಡ ಅವರು ಇದುವರೆಗೂ 16 ಕೆರೆ ನಿರ್ಮಿಸಿದ್ದಾರೆ. ಈ ಹಿಂದೆ ಅವರ ಸಾಧನೆಯನ್ನ ಗುರುತಿಸಿದ್ದ ಟಿವಿ9 ಕಾಮೇಗೌಡರಿಗೆ ಟಿವಿ9 ಕರುನಾಡ ನಕ್ಷತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಾಣ ಇರೋವರೆಗೂ ಕಾಯಕ ಮುಂದುವರಿಸುತ್ತೇನೆ ಮೋದಿ ಸಾಹೇಬರು ನನ್ನಂಥ ಬಡವನ ಬಗ್ಗೆ ಮಾತನಾಡಿರುವುದು ಸಂತಸ ತಂದಿದೆ. ನಾನು ಭಾರತದಲ್ಲಿ ಹುಟ್ಟಿರುವುದಕ್ಕೂ ಸಾರ್ಥಕವಾಯಿತು. ಪ್ರಾಣ ಇರೋವರೆಗೂ ನನ್ನ ಕಾಯಕ […]

ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಸಾಧು ಶ್ರೀನಾಥ್​ Edited By:

Updated on: Jun 28, 2020 | 5:46 PM

ಮಂಡ್ಯ: ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾಮೇಗೌಡ ಅವರು ಇದುವರೆಗೂ 16 ಕೆರೆ ನಿರ್ಮಿಸಿದ್ದಾರೆ. ಈ ಹಿಂದೆ ಅವರ ಸಾಧನೆಯನ್ನ ಗುರುತಿಸಿದ್ದ ಟಿವಿ9 ಕಾಮೇಗೌಡರಿಗೆ ಟಿವಿ9 ಕರುನಾಡ ನಕ್ಷತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಪ್ರಾಣ ಇರೋವರೆಗೂ ಕಾಯಕ ಮುಂದುವರಿಸುತ್ತೇನೆ
ಮೋದಿ ಸಾಹೇಬರು ನನ್ನಂಥ ಬಡವನ ಬಗ್ಗೆ ಮಾತನಾಡಿರುವುದು ಸಂತಸ ತಂದಿದೆ. ನಾನು ಭಾರತದಲ್ಲಿ ಹುಟ್ಟಿರುವುದಕ್ಕೂ ಸಾರ್ಥಕವಾಯಿತು. ಪ್ರಾಣ ಇರೋವರೆಗೂ ನನ್ನ ಕಾಯಕ ಮುಂದುವರಿಸುತ್ತೇನೆ ಎಂದು ದಾಸನದೊಡ್ಡಿ ಗ್ರಾಮದಲ್ಲಿ ಕಾಮೇಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.

ಮೋದಿ ಸಾಹೇಬರು ಭಾರತವನ್ನೇ ಮನೆ, ಜನರನ್ನ ತಮ್ಮ ಕುಟುಂಬ ಎಂದು ಭಾವಿಸಿದ್ದಾರೆ. ಪ್ರಧಾನಿ ಅವರು ಜನಾಗಂವನ್ನು ಹಂಚಿ ಹಾಕುವ ಕೆಲಸ ಮಾಡುತ್ತಿಲ್ಲ. ಬೇರೆಯವರು ಪ್ರಧಾನಿ ಆಗಿದ್ರೆ ಈ ರೀತಿಯ ಕೆಲಸಗಳು ಆಗುತ್ತಿರಲಿಲ್ಲ. ಮೋದಿ ಅವರು ದೇಶವನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಯಾವಾಗಲೂ ಯೋಚನೆ ಮಾಡ್ತಾರೆ.

ನನ್ನಂತ ಬಡವನ ಮೇಲೆ ಅವರಿಗೆ ಇಷ್ಟು ಕರುಣೆ ಇದೆ. ಇನ್ನು ದೇಶದ ಮೇಲೆ ಎಷ್ಟು ಕರುಣೆ ಇದೆ ಎನ್ನೋದನ್ನು ನೋಡಬೇಕು. ಮೋದಿ ಅವರು ಸೈನ್ಯಕ್ಕೆ ತೊಂದರೆ ಆದಾಗ ಸುಮ್ಮನೆ ಕೂರಲಿಲ್ಲ, ಹೋರಾಡೋಣಾ ಎಂದು ಹೇಳಿದವರು. ಮೋದಿ ಅವರಿಗೆ ದಶರಥ ಮಹಾರಾಜರಷ್ಟೇ ಧೈರ್ಯ ಸಾಹಸ ಇದೆ ಎಂದರು.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us