PM Modi in Mysore Highlights: ಮೈಸೂರಿನ ರ‍್ಯಾಡಿಸನ್​ ಬ್ಲೂ ಹೋಟೆಲ್​ನಲ್ಲಿ ಮೋದಿ ವಾಸ್ತವ್ಯ

TV9 Web
| Updated By: ಆಯೇಷಾ ಬಾನು

Updated on:Jun 20, 2022 | 10:25 PM

PM Modi Mysuru Visit Highlights: 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮೈಸೂರಿಗೆ ಆಗಮಿಸಿದ್ದಾರೆ. ಸಂ.6ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ಕೇಂದ್ರ ಯೋಜನಗೆಳ ಫಲಾನುವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

PM Modi in Mysore Highlights: ಮೈಸೂರಿನ ರ‍್ಯಾಡಿಸನ್​ ಬ್ಲೂ ಹೋಟೆಲ್​ನಲ್ಲಿ ಮೋದಿ ವಾಸ್ತವ್ಯ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ

PM Narendra Modi Mysuru Visit Highlights: ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi)ಇಂದು  ಬೆಂಗಳೂರಿಗೆ ಆಗಮಿಸಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.  ಬೆ.12.05ಕ್ಕೆ ಬೆಂಗಳೂರು ಯಲಹಂಕ ವಾಯುನೆಲೆಗೆ ಆಗಮಿಸಿದ್ದು, ಮ.12.40ಕ್ಕೆ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಧ್ಯಾಹ್ನ 1.45ಕ್ಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮಧ್ಯಾಹ್ನ .3.35ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಿದ್ದಾರೆ. ಇಂದು ಸಂಜೆ ಮೈಸೂರಿಗೆ ಆಗಮಿಸಿದ್ದಾರೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಅನಾವರಣ. ಸಂ.5 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಸಂ.6ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ಕೇಂದ್ರ ಯೋಜನಗೆಳ ಫಲಾನುವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಸೋಮವಾರ ಸಂಜೆ ಮೋದಿ ಮೈಸೂರಿಗೆ ಆಗಮಿಸುತ್ತಿದ್ದು, ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊರಭಾಗದಿಂದ ಬಸ್‌ಗಳು ಸಿಟಿ ಪ್ರವೇಶ ಮಾಡದಂತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ದ್ವಿಚಕ್ರ, ನಾಲ್ಕೂ ಚಕ್ರ ಹಾಗೂ ಬಸ್ ನಿಲುಗಡೆಯಲ್ಲೂ ಬದಲಾವಣೆ ಮಾಡಲಾಗಿದೆ. ನಗರಕ್ಕೆ ನಾಲ್ಕು ದಿಕ್ಕುಗಳಿಂದ ಆಗಮಿಸುವ ಬಸ್, ಕಾರ್ ತಾತ್ಕಾಲಿಕ ಬಸ್ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ. ನಗರ ಪೊಲಿಸ್ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LIVE NEWS & UPDATES

The liveblog has ended.
  • 20 Jun 2022 09:02 PM (IST)

    PM Modi in Mysore Live Updates: ಮೈಸೂರಿನ ಱಡಿಸನ್​ ಬ್ಲೂ ಹೋಟೆಲ್​ನಲ್ಲಿ ಮೋದಿ ವಾಸ್ತವ್ಯ

    ಚಾಮುಂಡಿಬೆಟ್ಟದಿಂದ ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸಿದ್ದಾರೆ. ನಾಡಿನ ಅಧಿದೇವತೆ ಚಾಮುಂಡಿ ದರ್ಶನ ಪಡೆದು ಚಾಮುಂಡಿಬೆಟ್ಟದಿಂದ ಮೈಸೂರು ನಗರದತ್ತ ಪ್ರಯಾಣ ಬೆಳೆಸಿದ್ದಾರೆ.  ಮೈಸೂರಿನ ಱಡಿಸನ್​ ಬ್ಲೂ ಹೋಟೆಲ್​ನಲ್ಲಿ  141 ನೇ ಕೊಠಡಿಯ ಪ್ರೆಸಿಡೆಂಟ್ ಸ್ಯೂಟ್ ನಲ್ಲಿ ವಾಸ್ಥವ್ಯ ಹೊಡಿದ್ದಾರೆ. ನಾಳೆ ಬೆಳಗ್ಗೆ ಮೈಸೂರು ಅರಮನೆ ಮೈದಾನದಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

  • 20 Jun 2022 08:24 PM (IST)

    PM Modi in Mysore Live Updates: ಮೈಸೂರಿನ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    ಮೈಸೂರಿನ ಚಾಮುಂಡಿಬೆಟ್ಟಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು ದೇವಾಲಯದ ಪ್ರಧಾನ ಅರ್ಚಕರು ಪ್ರಧಾನಿ ಮೋದಿಗೆ ಸ್ವಾಗತ ಕೋರಿದ್ದಾರೆ. ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇನ್ನು ನಾಡಿನ ಅಧಿದೇವತೆ ಚಾಮುಂಡಿ ದರ್ಶನ ಪಡೆದ ಪ್ರಧಾನಿ ಮೋದಿ, ತಾಯಿ ಚಾಮುಂಡೇಶ್ವರಿಗೆ ಸಂಕಲ್ಪ ಪೂಜೆ ನೆರವೇರಿಸಿದ್ದಾರೆ. ಮುಖ್ಯ ಅರ್ಚಕ ಡಾ.ಶಶಿಶೇಖರ ದೀಕ್ಷಿತ್​ ಅವರು ಮೋದಿ ಸಂಕಲ್ಪ ಪೂಜೆ ಮಾಡಿದ್ರು. ಇದೇ ಮೊದಲ ಬಾರಿಗೆ ಚಾಮುಂಡಿ ದರ್ಶನ ಪಡೆದ ಮೋದಿ ಚಾಮುಂಡಿ ಸನ್ನಿಧಿಯಲ್ಲಿ ಆಶಯದಂತೆ ಸಂಕಲ್ಪ ಪೂಜೆ ನೆರವೇರಿಸಿದ್ದಾರೆ.

  • 20 Jun 2022 08:10 PM (IST)

    PM Modi in Mysore Live Updates: ರಸ್ತೆ ಮಾರ್ಗವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿದ ಪ್ರಧಾನಿ ಮೋದಿ

    ಸುತ್ತೂರು ಶಾಖಾ ಮಠದಿಂದ ನಿರ್ಗಮಿಸಿದ ಪ್ರಧಾನಿ ಮೋದಿ ರಸ್ತೆ ಮಾರ್ಗವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿದ್ದಾರೆ. ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

  • 20 Jun 2022 08:01 PM (IST)

    PM Modi in Mysore Live Updates: ಮೈಸೂರಿನ ಚಾಮುಂಡಿ ತಾಯಿಗೆ ಶಿರಸಾಷ್ಟಾಂಗ ನಮಸ್ಕಾರಗಳು -ಮೋದಿ

    ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ನನ್ನ ಪ್ರಣಾಮ. ತಾಯಿ ಕೃಪೆಯಿಂದಲೇ ನನಗೆ ಮೈಸೂರಿಗೆ ಬರುವ ಸೌಭಾಗ್ಯ ಸಿಕ್ಕಿದೆ. ಮೈಸೂರು ಅಭಿವೃದ್ಧಿಗೆ ಚಾಮುಂಡೇಶ್ವರಿಗೆ ನನ್ನ ಪ್ರಾರ್ಥನೆ. ಮೈಸೂರು ಅಭಿವೃದ್ಧಿಗೆ ಕಾರ್ಯಕ್ರಮ ಮಾಡುವ ಅವಕಾಶ ಸಿಕ್ಕಿದೆ. ಸಂತರು ಸೇರಿರುವ ಈ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯತೆ ಸಿಕ್ಕಿದೆ. ಇಲ್ಲಿಂದ ನಾನು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುತ್ತೇನೆ ಎಂದು ಸುತ್ತೂರಿನ ಶಾಖಾ ಮಠದ ಭಾಷಣದಲ್ಲಿ ಹೇಳಿದ್ರು.

  • 20 Jun 2022 07:58 PM (IST)

    PM Modi in Mysore Live Updates: ಸುತ್ತೂರಿನ ಶಾಖಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

    ಸುತ್ತೂರಿನ ಶಾಖಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ಸಾಮಾಜಿಕ ಸೇವೆ, ಅನ್ನ ದಾಸೋಹಕ್ಕೆ ಪ್ರಖ್ಯಾತಿ ಪಡೆದಿರುವ ವಿಶ್ವಪ್ರಸಿದ್ಧದ ಈ ಕ್ಷೇತ್ರಕ್ಕೆ ಆಗಮಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮೈಸೂರಿನ ಚಾಮುಂಡಿ ತಾಯಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಶಿವರಾತ್ರಿ ಶಿವಯೋಗಿ ಸ್ವಾಮೀಗೆ ಧನ್ಯವಾದಗಳು ಹೇಳುತ್ತೇನೆ. ಸಂಸ್ಕೃತಿ ಪಾಠಶಾಲೆಯ ಕಟ್ಟಡದ ಲೋಕಾರ್ಪಣೆ ಮಾಡಲಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಬರೆದ ಯೋಗ ಸಂಬಂಧಿಸಿದ 3 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇನೆ. ವಿಶ್ವದಲ್ಲಿ ಸಮಾಜ ವಿಜ್ಞಾನದಲ್ಲಿ ಏನು ಬರೆದಿದ್ದಾರೆ ಅದನ್ನು ಅಧ್ಯಯನ ಮಾಡಿದ್ದಾರೆ. ‘ನಾರದ ಸೂತ್ರ’ ಪುಸ್ತಕ ಅತೀ ಪುರಾತವಾದದ್ದು ಜ್ಞಾನಕ್ಕಿಂತ ದೊಡ್ಡದ್ದು ಯಾವುದೂ ಇಲ್ಲ. ಇದನ್ನು ನಮ್ಮ ಶಾಸ್ತ್ರದಲ್ಲಿ ಹೇಳಲಾಗಿದೆ. ಕಾಶಿಯಿಂದ ಹಿಡಿದು ನಂಜನಗೂಡಿನ ಕಾಶಿವರೆಗೂ ಶಿವರಾತ್ರಿ ಸ್ವಾಮೀಜಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಯಾವುದೇ ಶುಲ್ಕ ಪಡೆಯದೇ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. 300ಕ್ಕೂ ಹೆಚ್ಚು ಸಂಸ್ಥೆಗಳು & 2 ವಿವಿಗಳು ಸೇರಿದಂತೆ ವಿದೇಶದಲ್ಲೂ ಸುತ್ತೂರು ಮಠದ ವಿದ್ಯಾ ಸಂಸ್ಥೆಗಳಿವೆ. ಇನ್ನೂ ಈ ಮಠದ ವಿದ್ಯಾಸಂಸ್ಥೆಗಳು ವಿಸ್ತರಣೆಯಾಗಲಿವೆ. ಲಂಡನ್​ನಲ್ಲಿ ಬಸವೇಶ್ವರ ಪ್ರತಿಮೆ ಅನಾವರಣಗೊಳಿಸುವ ಸೌಭಾಗ್ಯ ಸಿಕ್ಕಿದೆ ಎಂದರು.

  • 20 Jun 2022 07:50 PM (IST)

    PM Modi in Mysore Live Updates: ಯೋಗ ಸಂಬಂಧ 3 ಗ್ರಂಥಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ವೇದ ಪಾಠಶಾಲೆ ಕಟ್ಟಡ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ ಯೋಗ ಸಂಬಂಧ 3 ಗ್ರಂಥಗಳನ್ನು ಬಿಡುಗಡೆ ಮಾಡಿದ್ದಾರೆ. ಯೋಗ ಸೂತ್ರ, ಶಿವ ಸೂತ್ರ, ನಾರದ ಸೂತ್ರ ಗ್ರಂಥಗಳ ಬಿಡುಗಡೆ ಮಾಡಲಾಗಿದೆ.

  • 20 Jun 2022 07:49 PM (IST)

    PM Modi in Mysore Live Updates: ತಮ್ಮ ಜೀವನವನ್ನು ದೇಶದ ಅಭಿವೃದ್ಧಿಗೆ ಮೀಸಲಿಟ್ಟವರು ಮೋದಿ -ಸಿದ್ದೇಶ್ವರ ಸ್ವಾಮೀಜಿ

    ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡುವುದೇ ಸೌಭಾಗ್ಯ. ತಮ್ಮ ಜೀವನವನ್ನು ದೇಶದ ಅಭಿವೃದ್ಧಿಗೆ ಮೀಸಲಿಟ್ಟವರು ಮೋದಿ. ಇಡೀ ದಿನ ಬಿಡುವಿಲ್ಲದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ ಮೋದಿ ಮುಖದಲ್ಲಿ ಕಾಂತಿ ಕಡಿಮೆಯಾಗಿಲ್ಲ. ಪ್ರಧಾನಿ ಮೋದಿ ಬಟ್ಟೆಯಲ್ಲಿ ಜೇಬಿದೆ, ತುಂಬಿಸಿಕೊಳ್ಳುವ ಮನಸ್ಸಿಲ್ಲ. ಭಾರತ ಕಂಡ ಅತ್ಯಂತ ಪ್ರಭಾವಿ ಪ್ರಧಾನಮಂತ್ರಿ ನರೇಂದ್ರ ಮೋದಿ. ಯೋಗ ಕುರಿತು 3 ಗ್ರಂಥ ಬಿಡುಗಡೆ ಮಾಡಿದ್ದಾರೆ. ನಿಮ್ಮನ್ನು ನೀವು ಪ್ರೀತಿಸಿ ಎಂದು ಈ 3 ಗ್ರಂಥಗಳ ಅರ್ಥವಾಗಿದೆ. ಪ್ರಧಾನಿ ಮೋದಿ ತಾಯಿ ಹಿರಾಬೆನ್​ 100 ವರ್ಷ ಪೂರೈಸಿದ್ದಾರೆ ಎಂದು ಸುತ್ತೂರು ಶಾಖಾ ಮಠದಲ್ಲಿ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ರು.

  • 20 Jun 2022 07:36 PM (IST)

    PM Modi in Mysore Live Updates: ಬಸವಣ್ಣನವರ ವಚನ ಮೂಲಕ ಭಾಷಣ ಆರಂಭಿಸಿದ ಸುತ್ತೂರುಶ್ರೀ

    ಬಸವಣ್ಣನವರ ವಚನದ ಮೂಲಕ ಸುತ್ತೂರುಶ್ರೀ ಭಾಷಣ ಆರಂಭಿಸಿದ್ರು. ಪ್ರಾಚೀನ ಸಂಸ್ಕೃತಿಗೆ ಗೌರವ ನೀಡಿ ಸಂಸ್ಕೃತ ಪಾಠ ಶಾಲೆ ಉದ್ಘಾಟನೆ ಮಾಡಿದ್ದಾರೆ. ನರೇಂದ್ರ ಮೋದಿ ವಿಶ್ವ ಯೋಗದಿನಾಚರಣೆಗೆ ಆಗಮಿಸಿದ್ದಾರೆ. ಪತಂಜಲಿ ಯೋಗ ಸೂತ್ರದ ಬಗ್ಗೆ ಸಿದ್ದೇಶ್ವರಶ್ರೀ ಪುಸ್ತಕ ಬರೆದಿದ್ದಾರೆ. ಸಿದ್ದೇಶ್ವರಶ್ರೀಗಳ ಪುಸ್ತಕಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ಅದೇ ಪುಸ್ತಕವನ್ನು ಇಂದು ಪ್ರಧಾನಿ ಮೋದಿ ಬಿಡುಗಡೆ ಮಾಡುತ್ತಾರೆ. ಸುತ್ತೂರುಮಠಕ್ಕೆ ಮೋದಿಯವರು ಈವರೆಗೆ 3 ಬಾರಿ ಭೇಟಿ ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಒಂದು ದಿನವೂ ರಜೆ ಪಡೆಯದೆ ಮೋದಿ ಕೆಲಸ ಮಾಡಿದ್ದಾರೆ. ವಿಶ್ವದಲ್ಲಿ ರಜೆ ಪಡೆಯದೆ ಕೆಲಸ ಮಾಡಿರುವ ವ್ಯಕ್ತಿಯಿದ್ರೆ ಅದು ಮೋದಿ ಮಾತ್ರ. ಮಾನವೀಯತೆ ಬಗ್ಗೆ ವಿಶ್ವಕ್ಕೆ ಸಂದೇಶ ಸಾರಿದವರು ಪ್ರಧಾನಿ ಮೋದಿ ಎಂದು ಸುತ್ತೂರುಶ್ರೀ ಮೋದಿಯವರನ್ನು ಹೊಗಳಿದ್ದಾರೆ.

  • 20 Jun 2022 07:29 PM (IST)

    PM Modi in Mysore Live Updates: ಪ್ರಧಾನಿಗೆ ರುದ್ರಾಕ್ಷಿಮಾಲೆ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನ

    ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗಿಯಾಗಿದ್ದು ರಾಜ್ಯಪಾಲ ಥಾವರ್ ​ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ, ಸಿದ್ಧಗಂಗಾಶ್ರೀ, ಸಿದ್ದೇಶ್ವರಶ್ರೀಗಳು ಉಪಸ್ಥಿತರಿದ್ದಾರೆ. ಪ್ರಧಾನಿಗೆ ರುದ್ರಾಕ್ಷಿಮಾಲೆ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಲಾಗಿದ್ದು ಮೋದಿ ತಾಯಿ ಜೊತೆಗಿರುವ ಫೋಟೋ, ಬಸವಣ್ಣನ ಫೋಟೋ ಕಾಣಿಕೆ ನೀಡಲಾಗಿದೆ.

  • 20 Jun 2022 07:01 PM (IST)

    PM Modi in Mysore Live Updates: ಸುತ್ತೂರಿನ ಶಾಖಾ ಮಠಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    ಮೈಸೂರಿನ ಮಹಾರಾಜ ಕಾಲೇಜು ಮೈದಾನದಿಂದ ತೆರಳಿ ಸುತ್ತೂರಿನ ಶಾಖಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಸುತ್ತೂರು ಮಠದ ಆವರಣದಲ್ಲಿ ನಿರ್ಮಿಸಿರುವ ವೇದ ಪಾಠಶಾಲೆ ಕಟ್ಟಡವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ರು. ಸುತ್ತೂರು ಶ್ರೀಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ.

  • 20 Jun 2022 06:51 PM (IST)

    PM Modi in Mysore Live Updates: ಆಯುಷ್ಮಾನ್ ಭಾರತ್ ಯೋಜನೆ ಬಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ

    ಆಯುಷ್ಮಾನ್ ಭಾರತ್ ಯೋಜನೆ ದೇಶದ ಎಲ್ಲರಿಗೂ ಸಿಗುತ್ತಿದೆ. ಬಡವರು ಕಡಿಮೆ ದರದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಬಡವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಸಮಾಜದ ಎಲ್ಲ ವರ್ಗ, ಕ್ಷೇತ್ರಕ್ಕೂ ನಮ್ಮ ಸರ್ಕಾರ ಯೋಜನೆಗಳನ್ನು ತಲುಪಿಸಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯೂ ಅನೇಕರಿಗೆ ಉಪಯೋಗವಾಗಿದೆ. ಕರ್ನಾಟಕದ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದೇವೆ. ಪಶುಪಾಲನೆ ಮಾಡುವವರಿಗೆ ಬ್ಯಾಂಕ್​ನಿಂದ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಇಂದು ಬಡವರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸ ಬಂದಿದೆ. ಕರ್ನಾಟಕದಲ್ಲಿ ಬಡವರಿಗೆ ಉಚಿತ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದೇವೆ. ದಿವ್ಯಾಂಗ ವ್ಯಕ್ತಿಗಳಿಗೆ ಸರ್ಕಾರದಿಂದ ಅನೂಕೂಲ ಮಾಡಿ ಕೊಟ್ಟದ್ದೇವೆ. ಮೈಸೂರಿನ ಭಾರತೀಯ ವಾಕ್‌ಶ್ರವಣ ಸಂಸ್ಥೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ನರೇಂದ್ರ ಮೋದಿ ಭಾಷಣದಲ್ಲಿ ತಿಳಿಸಿದ್ರು.

  • 20 Jun 2022 06:37 PM (IST)

    PM Modi in Mysore Live Updates: ಮೈಸೂರಿನ ರೈಲ್ವೆ ನಿಲ್ದಾಣ ಆಧುನೀಕರಣಗೊಳಿಸಲಾಗುವುದು -ನರೇಂದ್ರ ಮೋದಿ

    ಮೈಸೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ರು. ಮೈಸೂರು ಹಾಗೂ ಕರ್ನಾಟಕದ ಸಮಸ್ತ ನಾಹರಿಕ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು. ಕರ್ನಾಟಕ ದೇಶದ ಆರ್ಥಿಕ & ಆಧ್ಯಾತ್ಮಿಕ ಕೇಂದ್ರವಾಗಿದೆ. ಮೈಸೂರಿನ ಐತಿಹಾಸಿಕ ಸ್ಥಳಗಳು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ, ಉತ್ತಮ ಆರೋಗ್ಯ ಸುಧಾರಣೆಗೆ ಈ ಬಾರಿ ಮೈಸೂರು ಆಯ್ಕೆ ಮಾಡಿದ್ದೇವೆ. ನಾಳೆ ಕೋಟ್ಯಂತರ ಜನರು ಮೈಸೂರಿನ ಈ ಕಾರ್ಯಕ್ರಮದ ಮೂಲಕ ಭಾಗಿಯಾಗಲಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕದಲ್ಲಿ ಅಭಿವೃದ್ಧಿ ಮಾಡುತ್ತಿದೆ. ಹೆಗಲಿಗೆ ಹೆಗಲು ಕೊಟ್ಟು ನಾವು ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ. ಇಂದು ಹಲವು ಯೋಜನೆಗಳಿಗೆ ಲೋಕಾರ್ಪಣೆಗೊಳಿಸಿದ್ದೇವೆ. ಮೈಸೂರಿನ ರೈಲ್ವೆ ನಿಲ್ದಾಣ ಆಧುನೀಕರಣಗೊಳಿಸಲಾಗುವುದು. ಬಡವರು, ಮಹಿಳೆಯರು, ದಲಿತರುಮ ವಂಚಿತರಿಗೆ ಹಲವು ಯೋಜನೆ ನಮ್ಮ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. 2014ರಲ್ಲಿ ನೀವು ನಮಗೆ ಅವಕಾಶ ನೀಡಿದ್ದೀರಿ. ಕಳೆದ 8 ವರ್ಷಗಳಲ್ಲಿ ಗರೀಬ್ ಕಲ್ಯಾನ್ ಯೋಜನೆ ವಿಸ್ತರಣೆಯಾಗಿದೆ. ಮೊದಲು ಒಂದು ರಾಜ್ಯಕ್ಕೆ ಸೀಮಿತವಾಗಿದ್ದ ಯೋಜನೆ ಎಲ್ಲ ರಾಜ್ಯಕ್ಕೂ ವಿಸ್ತರಣೆಯಾಗಿದೆ ಎಂದರು.

  • 20 Jun 2022 06:27 PM (IST)

    PM Modi in Mysore Live Updates: ಮೋದಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಕಾದು ಕುಳಿತಿರುವ ಅಭಿಮಾನಿಗಳು

    ಮೈಸೂರಿನ ರಾಮಸ್ವಾಮಿ ಸರ್ಕಲ್ ಮಾರ್ಗವಾಗಿ ಸುತ್ತೂರು ಮಠ ಹಾಗೂ ಚಾಮುಂಡಿ ಬೆಟ್ಟಕ್ಕೆ ಮೋದಿ ತೆರಳಲುವ ಹಿನ್ನೆಲೆ ರಾಮ ಸ್ವಾಮಿ ಸರ್ಕಲ್ ನಲ್ಲಿ ನೂರಾರು ಜನ ಸೇರಿದ್ದಾರೆ. ಮೋದಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೈಯಲ್ಲಿ ಮೋದಿ ಹಾಗೂ ಬಿಜೆಪಿ ಬಾವುಟವನ್ನ ಹಿಡಿದು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದಾರೆ. ಮಹಿಳೆಯರು ಮಕ್ಕಳು ಸಹ ಕೈಯಲ್ಲಿ ಬಾವುಟ ಹಾಗೂ ಬಾವಚಿತ್ರವನ್ನ ಹಿಡಿದು ಮೋದಿಯ ಬರುವಿಕೆಗಾಗಿ ಕಾಯುತ್ತಿದ್ದಾರೆ.

  • 20 Jun 2022 06:25 PM (IST)

    PM Modi in Mysore Live Updates: ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ

    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ರು. ಅಭಿವೃದ್ಧಿ ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರಧಾನಿಗೆ ಸ್ವಾಗತ. ಪ್ರಧಾನಿ ಮೋದಿಗೆ ಮೈಸೂರು ಅಂದ್ರೆ ತುಂಬಾನೇ ಪ್ರೀತಿ. ಕಳೆದ ವರ್ಷವೇ ಯೋಗ ದಿನಾಚರಣೆಗೆ ಪ್ರಧಾನಿ ಬರಬೇಕಿತ್ತು. ನಾವು ಆಹ್ವಾನ ನೀಡಿದ ತಕ್ಷಣ ಮೈಸೂರಿಗೆ ಬರಲು ಒಪ್ಪಿದರು. ಇದು ಮೈಸೂರಿನ ಬಗ್ಗೆ ಪ್ರಧಾನಿ ಮೋದಿಗೆ ಇರುವ ಪ್ರೀತಿ ತೋರಿಸುತ್ತೆ. ಇಂದು ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆ. ಹಿಂದಿನ ಪ್ರಧಾನಿಗಳು ಅಧಿಕಾರಕ್ಕಾಗಿ ರಾಜಕಾರಣ ಮಾಡಿದರು. ಈಗಿನ ಪ್ರಧಾನಿ ಮೋದಿ ಜನರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಬಡತನ, ಹಸಿವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಗೊತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಸೈದ್ಧಾಂತಿಕ ರಾಜಕಾರಣ ಮಾಡುತ್ತಿದ್ದಾರೆ. ಬಡವರಿಗಾಗಿ ಹಲವು ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ಸಾಕಷ್ಟು ಅನುಕೂಲವಾಗಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ ಹೊಂದಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಯೋಜನೆ ಪರಿಣಾಮಕಾರಿ ಜಾರಿಯಾಗಿದೆ. ಮೈಸೂರಿನಲ್ಲಿ ಏರ್‌ಪೋರ್ಟ್‌, ಆಸ್ಪತ್ರೆಗಳ ಅಭಿವೃದ್ಧಿ ಮಾಡಿದ್ದೇವೆ. ಮೈಸೂರಿನ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ ಎಂದರು.

  • 20 Jun 2022 06:16 PM (IST)

    PM Modi in Mysore Live Updates: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತ ಭಾಷಣ

    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತ ಭಾಷಣ ಮಾಡ್ತಿದ್ದಾರೆ. 12 ವರ್ಷಗಳ ಕಾಲ ಗುಜರಾತ್‌ ಸಿಎಂ ಆಗಿದ್ದ ನರೇಂದ್ರ ಮೋದಿ 8 ವರ್ಷಗಳಿಂದ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಯೋಗದಿನಾಚರಣೆಗೆ ಆಗಮಿಸಿರುವ ಪ್ರಧಾನಿ ಮೋದಿಗೆ ಸ್ವಾಗತ. ರಾಜ್ಯ, ಮೈಸೂರಿಗೆ ಪ್ರಧಾನಿ ಮೋದಿ ಹಲವು ಯೋಜನೆ ನೀಡಿದ್ದಾರೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಪ್ರಧಾನಿ ಮೋದಿ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ.

  • 20 Jun 2022 06:01 PM (IST)

    PM Modi in Mysore Live Updates: ನರೇಂದ್ರ ಮೋದಿಗೆ ಸಿಎಂ ಬೊಮ್ಮಾಯಿ ಸನ್ಮಾನ

    ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಿಎಂ ಬೊಮ್ಮಾಯಿ ಸನ್ಮಾನ ಮಾಡಿದ್ರು. ಇನ್ನು ಪ್ರಧಾನಿ ಕಾರ್ಯಕ್ರಮದಲ್ಲಿ ನಾಗನಹಳ್ಳಿ ರೈಲ್ವೆ ನಿಲ್ದಾಣದ ಕೋಚಿಂಗ್ ಟರ್ಮಿನಲ್‌ಗೆ ಅಡಿಗಲ್ಲು ಹಾಕಿದ್ದಾರೆ. ಸಂವಹನ ಅಸ್ವಸ್ಥೆಗಳುಳ್ಳ ವ್ಯಕ್ತಿಗಳಿಗೆ ಉತ್ಕೃಷ್ಟತಾ ಕೇಂದ್ರ ಉದ್ಘಾಟನೆ ಮಾಡಿದ್ರು. ಮೈಸೂರಿನ ಭಾರತೀಯ ವಾಕ್‌ಶ್ರವಣ ಸಂಸ್ಥೆಯಲ್ಲಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.

  • 20 Jun 2022 05:58 PM (IST)

    PM Modi in Mysore Live Updates: ಮೈಸೂರಿನಲ್ಲಿ ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮ ಅಂತ್ಯ

    ಮೈಸೂರಿನಲ್ಲಿ ಕೇಂದ್ರದ ಯೋಜನೆಗಳ ಫಲಾನುಭವಿಗಳ ಜೊತೆ ನಡೆದಿದ್ದ ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮ ಅಂತ್ಯಗೊಂಡಿದೆ. ಸಂವಾದ ಬಳಿಕ ಸಾರ್ವಜನಿಕ ಕಾರ್ಯಕ್ರಮಕ್ಕೆ ಪ್ರಧಾನಿ ತೆರಳಿದ್ದಾರೆ. ಸಂವಾದದ ನಂತರ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.

  • 20 Jun 2022 05:54 PM (IST)

    PM Modi in Mysore Live Updates: ಕ್ಯಾಮರ ಕಡೆ ಕೈ ಮಾಡಿ ಮಹಾರಾಜ ಮೈದಾನಕ್ಕೆ ತೆರಳಿದ ನಮೋ

    ಓವೆಲ್ ಹೆಲಿಪ್ಯಾಡ್ ನಿಂದ ಮಹಾರಾಜ ಮೈದಾನಕ್ಕೆ ನರೇಂದ್ರ ಮೋದಿ ತೆರಳಿದ್ದಾರೆ. ಕ್ಯಾಮರ ಕಡೆ ಕೈ ಮಾಡಿ ರೇಂಜ್ ರೋವರ್ ಕಾರಿನಲ್ಲಿ ಮಹಾರಾಜ ಮೈದಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.

  • 20 Jun 2022 05:47 PM (IST)

    PM Modi in Mysore Live Updates: ಕೇಂದ್ರದ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ

    ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರದ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಸಚಿವರಾದ ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್​, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಸಂಸದರಾದ ಪ್ರತಾಪ್ ಸಿಂಹ, ವಿ.ಶ್ರೀನಿವಾಸ ಪ್ರಸಾದ್, ಸುಮಲತಾ, ಶಾಸಕ ಜಿ.ಟಿ.ದೇವೇಗೌಡ, ಮೇಯರ್ ಸುನಂದಾ ಪಾಲನೇತ್ರಾ ಕಾರ್ಯಕ್ರಮದಲ್ಲಿ ಉಪಸ್ಥತರಿದ್ದಾರೆ. ಮೋದಿ ಕಾರ್ಯಕ್ರಮದಲ್ಲಿ ಒಟ್ಟು 32 ಸಾವಿರ ಆಸನಗಳ ವ್ಯವಸ್ಥೆ, ವಾಟರ್​ಪ್ರೂಫ್​ ಶಾಮಿಯಾನ, ಎಲ್​ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

  • 20 Jun 2022 05:39 PM (IST)

    PM Modi in Mysore Live Updates: ಮೋದಿ ಕಾರ್ಯಕ್ರಮಕ್ಕೆ ಆಗಮಿಸಿದ ಸುಮಲತಾ

    ಮೋದಿ ಕಾರ್ಯಕ್ರಮಕ್ಕೆ ಮಂಡ್ಯ ಸಂಸದೆ ಸುಮಲತಾ ಆಗಮಿಸಿದ್ದು ವೇದಿಕೆ ಮೇಲೆ ಆಗಮಿಸಿದ್ದಾರೆ.

  • 20 Jun 2022 05:29 PM (IST)

    PM Modi in Mysore Live Updates: ಪ್ರಧಾನಮಂತ್ರಿ ಮೋದಿ ಭೇಟಿಯಾದ ನವೀನ್ ಕುಟುಂಬಸ್ಥರು

    ಉಕ್ರೇನ್​ನಲ್ಲಿ ಮೃತಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿನಿ ನವೀನ್ ಕುಟುಂಬಸ್ಥರು ಪ್ರಧಾನಮಂತ್ರಿ ಮೋದಿ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಕಮ್ಮಘಟ್ಟ ಕಾರ್ಯಕ್ರಮದ ಹಿಂಭಾಗದಲ್ಲಿ ಮೋದಿಯವರನ್ನು ಭೇಟಿ ಆದ ಬಗ್ಗೆ ಮೃತ ನವೀನ್ ತಂದೆ ಶೇಖರಗೌಡ ಗ್ಯಾನಗೌಡರ್ ಮಾಹಿತಿ ನೀಡಿದ್ದು, ನಾಲ್ಕೈದು ನಿಮಿಷ ಪ್ರಧಾನಿ ನಮ್ಮ ಜೊತೆ ಮಾತನಾಡಿದರು. ನಮ್ಮ ಕಣ್ಣೀರು ನೋಡಿ ಮೋದಿಯವರು ಭಾವುಕರಾಗಿದ್ದರು. ಸಾವಿನ ದುಃಖದಲ್ಲೂ ಮಗನ ದೇಹದಾನ ಮಾಡಿದ್ದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನವೀನ್ ಮೃತಪಟ್ಟ ನಂತರ ನಿಮ್ಮ ಭೇಟಿಗೆ ಬರಬೇಕಾಗಿತ್ತು. ಆದರೆ ಈಗ ಕಾಲ ಕೂಡಿ ಬಂತು ಎಂದು ಪ್ರಧಾನಿ ಮೋದಿ ಹೇಳಿದ್ರು ಎಂದು ಮೃತ ನವೀನ್ ತಂದೆ ಮಾಹಿತಿ ನೀಡಿದ್ದಾರೆ.

  • 20 Jun 2022 05:25 PM (IST)

    PM Modi in Mysore Live Updates: ಮೈಸೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆ

    ಮೈಸೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಪ್ರಧಾನಿ ಮೋದಿ ಫಲಾನುಭವಿಗಳ ಜತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ವೇದಿಕೆಯ ಮೊದಲ ಸಾಲಿನಲ್ಲಿ 9 ಆಸನ ವ್ಯವಸ್ಥೆ ಮಾಡಲಾಗಿದ್ದು ವೇದಿಕೆಯ 2ನೇ ಸಾಲಿನಲ್ಲಿ 19 ಆಸನಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯಪಾಲ ಗೆಹ್ಲೋಟ್​, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮತ್ತಿತರರು ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು 32 ಸಾವಿರ ಆಸನಗಳ ವ್ಯವಸ್ಥೆ, ವಾಟರ್​ಪ್ರೂಫ್​ ಶಾಮಿಯಾನ, ಎಲ್​ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

  • 20 Jun 2022 05:22 PM (IST)

    PM Modi in Mysore Live Updates: ಹೆಲಿಪ್ಯಾಡ್​ನಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಪ್ರಯಾಣ

    ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರು ವಿವಿ ಓವೆಲ್​ ಮೈದಾನದ ಹೆಲಿಪ್ಯಾಡ್​ಗೆ  ಆಗಮಿಸಿದ್ದು ಪ್ರಧಾನಿ ಮೋದಿ ಜತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಆಗಮಿಸಿದ್ದಾರೆ. ಹೆಲಿಪ್ಯಾಡ್​ನಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.

  • 20 Jun 2022 04:06 PM (IST)

    PM Narendra Modi Speech Live: ಬೆಂಗಳೂರಿನಿಂದ ಮೈಸೂರಿನ ಕಡೆಗೆ ಹೊರಟ ಪ್ರಧಾನಿ ಮೋದಿ

    ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

  • 20 Jun 2022 04:03 PM (IST)

    PM Narendra Modi Speech Live: ನರೇಂದ್ರ ಮೋದಿ ಭಾಷಣ ಮುಕ್ತಾಯ

    ನಮ್ಮ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಟೆಕ್ನಾಲಜಿಗೆ ಹೆಚ್ಚು ಒತ್ತು ನೀಡುತ್ತಿದೆ, ಸಿಎಂ ಬಸವರಾಜ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ, ಎಲ್ಲರಿಗೂ ನಮಸ್ಕಾರಿ ಹೇಳಿ ಭಾಷಣ ಮೊಟಕುಗೊಳಿಸಿದ ಮೋದಿ.

  • 20 Jun 2022 04:02 PM (IST)

    PM Narendra Modi Speech Live: ಹಣ ಹೂಡಿಕೆಗೆ ಬರುವ ಕಂಪನಿಗಳ ಸಂಖ್ಯೆ ಹೆಚ್ಚಿದೆ: ಮೋದಿ

    ದೇಶದ ಸ್ಟಾರ್ಟ್​​ಪ್ ಕೇಂದ್ರಗಳಲ್ಲಿ ಬೆಂಗಳೂರಿನ ಕೇಂದ್ರ ಅತಿ ದೊಡ್ಡದ್ದು​, ಕಳೆದ 8 ವರ್ಷಗಳಿಂದ ನಿರಂತರ ವಿದೇಶಿ ಕಂಪನಿಗಳು ಹೂಡಿಕೆ, ದೇಶದಲ್ಲಿ ಹಣ ಹೂಡಿಕೆಗೆ ಬರುವ ಕಂಪನಿಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತದೆ.

  • 20 Jun 2022 04:00 PM (IST)

    PM Narendra Modi Speech Live:ಪ್ರಧಾನಿ ಮೋದಿ ಮಾತು

    ಕಳೆದ 8 ವರ್ಷಗಳಲ್ಲಿ ಸರ್ಕಾರವು ತೆಗೆದುಕೊಂಡ ನಿರ್ಧಾರ ಅಥವಾ ಯೋಜನೆಗಳು ಸುಲಭವಾಗಿರಲಿಲ್ಲ, ಸಾಕಷ್ಟು ಮಂದಿಗೆ ಅದು ಅಪ್ರಿಯವೆನಿಸಿತ್ತು. ಆದರೆ ಕ್ರಮೇಣವಾಗಿ ಜನರು ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ.

  • 20 Jun 2022 03:59 PM (IST)

    PM Narendra Modi Speech Live: ಭಾರತದಲ್ಲಿ ಕಳೆದ 8 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಬಿಲಿಯನ್ ಡಾಲರ್ ಕಂಪನಿಗಳು ತಲೆ ಎತ್ತಿವೆ.

    ಭಾರತದಲ್ಲಿ ಕಳೆದ 8 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಬಿಲಿಯನ್ ಡಾಲರ್ ಕಂಪನಿಗಳು ತಲೆ ಎತ್ತಿವೆ- ಮೋದಿ

  • 20 Jun 2022 03:57 PM (IST)

    PM Narendra Modi Speech Live:ಬೆಂಗಳೂರು ಆತ್ಮನಿರ್ಭರ ಶಕ್ತಿಗೆ ಪ್ರೇರಣೆ ನೀಡಿದೆ: ಮೋದಿ

    ಬೆಂಗಳೂರು ನಗರ ಆತ್ಮನಿರ್ಭರ್​ ಶಕ್ತಿಗೆ ಪ್ರೇರಣೆ ನೀಡಿದೆ, ಭಾರತೀಯ ಯುವಜನರು ಮನಸು ಮಾಡಿದ್ರೆ ಎಲ್ಲವನ್ನೂ ಸಾಧಿಸುತ್ತಾರೆ, ಬೆಂಗಳೂರು ತಾಕತ್ತು ಬಹಳ ದೊಡ್ಡದ್ದು, ಜನರ ಮನಸ್ಥಿತಿಯನ್ನು ಬದಲಾವಣೆಗೆ ಹೊಂದಿಸುವಂತೆ ಮಾಡುತ್ತದೆ ಎಂದು ಮೋದಿ ಹೇಳಿದರು.

  • 20 Jun 2022 03:56 PM (IST)

    PM Narendra Modi Speech Live:ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳು

    -ಬೆಂಗಳೂರು ನಗರದ ಅಭಿವೃದ್ಧಿಯೇ ಯುವ ಜನತೆ ಕನಸು -ಒಂದು ಭಾರತ ಶ್ರೇಷ್ಟ ಭಾರತ ಸಾಲಿಗೆ ಬೆಂಗಳೂರು ಮಾದರಿ -ಬೆಂಗಳೂರು ಅಭಿವೃದ್ಧಿಗೆ ನಮ್ಮ ಡಬಲ್ ಇಂಜಿನ್ ಸರ್ಕಾರ ಬದ್ಧ -ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕಾಗಿ ನಗರ ರೈಲು ಯೋಜನೆ -1980ನೇ ಇಸವಿಯಿಂದಲೂ ಸಿಟಿ ರೈಲು ಬಗ್ಗೆ ಚರ್ಚೆ -14 ತಿಂಗಳಲ್ಲಿ ನಗರ ರೈಲು ಯೋಜನಮ ಪೂರ್ಣಗೊಳಿಸಲು ಪಣ -ಹಿಂದಿನ 40 ವರ್ಷಗಳಲ್ಲೇ ಯೋಜನೆ ಮಾಡಿದ್ದರೆ ಕಥೆ ಬೇರೆ ಇರ್ತಿತ್ತು -ಆದರೆ ನಾವು ಈ ಬಾರಿ ಬೆಂಗಳೂರು ನಗರ ರೈಲು ಯೋಜನೆ ಮಾಡುತ್ತೇವೆ -8 ವರ್ಷಗಳಿಂದ ರೈಲು ಯೋಜನೆಗಳಲ್ಲಿ ಆಮೂಲಾಗ್ರ ಬದಲಾವಣೆ -ಸ್ವಚ್ಛ, ಸುರಕ್ಷ, ಜನಸ್ನೇಹಿ ರೈಲು ಸಂಚಾರದ ಸುಧಾರಣೆ ಮಾಡಿದ್ದು ನಾವು

  • 20 Jun 2022 03:54 PM (IST)

    PM Narendra Modi Speech Live: ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು ನನ್ನಿಂದ; ಕನ್ನಡಿಗರ ಕ್ಷಮೆ ಕೇಳಿದ ಪ್ರಧಾನಿ ಮೋದಿ

    ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು ನನ್ನಿಂದ; ಕನ್ನಡಿಗರ ಕ್ಷಮೆ ಕೇಳಿದ ಪ್ರಧಾನಿ ಮೋದಿ

  • 20 Jun 2022 03:53 PM (IST)

    PM Narendra Modi Speech Live: ಮಲ್ಟಿಮಾಡೆಲ್ ಕನೆಕ್ಟಿವಿಟಿ ಬಗ್ಗೆಯೂ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ: ಮೋದಿ

    21ನೇ ಶತಮಾನದಲ್ಲಿ ರೈಲ್ವೆ, ಬಸ್, ವಿಮಾನ ಅಷ್ಟೇ ಅಲ್ಲದೆ ಮಲ್ಟಿಮಾಡೆಲ್ ಕನೆಕ್ಟಿವಿಟಿಯ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಅದಕ್ಕೆ ಪಿಎಂ ಗತಿ ಶಕ್ತಿ ಯೋಜನೆಯು ಸಹಾಯ ಮಾಡುತ್ತಿದೆ.

  • 20 Jun 2022 03:51 PM (IST)

    PM Narendra Modi Speech Live:ಭಾರತೀಯ ರೈಲ್ವೆ ಯೋಜನೆಗೆ ಹೆಚ್ಚಿನ ಒತ್ತು: ಮೋದಿ

    ನೀವು ಕಳೆದ ಎಂಟು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಭಾರತೀಯ ರೈಲ್ವೆಯು ಈಗ ಹೆಚ್ಚು ಆಧುನಿಕ, ಸಿಟಿಜನ್ ಫ್ರೆಂಡ್ಲಿ ಆಗಿದ್ದು, ಸ್ವಚ್ಛತೆ ಕೂಡ ಹೆಚ್ಚಿದೆ. ಭಾರತೀಯ ರೈಲ್ವೆಯನ್ನು ಉತ್ತಮಗೊಳಿಸಲು ಸಾಕಷ್ಟು ಯೋಜನೆ ಕೈಗೊಳ್ಳಲಾಗಿದೆ-ಮೋದಿ

  • 20 Jun 2022 03:49 PM (IST)

    PM Narendra Modi Speech Live: ಕಳೆದ 40 ವರ್ಷಗಳಿಂದ ಕೇವಲ ಚರ್ಚೆಯಲ್ಲಿ ಸಮಯ ಕಳೆದರು: ಮೋದಿ

    ಕಳೆದ 40 ವರ್ಷಗಳಿಂದ ಕೇವಲ ಚರ್ಚೆಯಲ್ಲಿ ಸಮಯ ಕಳೆದರು, ನಮ್ಮ ಸರ್ಕಾರ ಬಂದ ಮೇಲೆ ಕೇವಲ 40 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ, ಪ್ರತಿ ಕ್ಷಣವನ್ನು ನಿಮ್ಮ ಸೇವೆಗೆ ಸಮಯವನ್ನು ಮೀಸಲಿಟ್ಟಿದ್ದೇವೆ ಎಂದು ಮೋದಿ ಹೇಳಿದರು.

  • 20 Jun 2022 03:48 PM (IST)

    PM Narendra Modi Speech Live: ಬೆಂಗಳೂರಿನ ಅಭಿವೃದ್ಧಿಗೆ ನಮ್ಮ ಒತ್ತು

    ಡಬಲ್ ಇಂಜಿನ್ ಕರ್ನಾಟಕದ ಅಭಿವೃದ್ಧಿಗೆ ಭರವಸೆ ನೀಡಿತ್ತು, ಆ ಭರವಸೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೇವೆ, ನಿಮ್ಮ ಸೇವೆಗೆ ನಾವು ಸದಾ ಸಿದ್ದರಿದ್ದೇವೆ, ಇಲ್ಲಿ ಬರುವುದಕ್ಕಿಂತ ಮುಂಚೆ ಇಂಡಿಯನ್​ ಇನ್​ಸ್ಟಿಟ್ಯೂಟ್ & ಅಂಬೇಡ್ಕರ್ ಸ್ಕೂಲ್ ಆಫ್​ ಎಕನಾಮಿಕ್ಸ್​ಗೆ​ ಭೇಟಿ ನೀಡಿದ್ದೆ, ಇಲ್ಲಿಂದ ಹೊಸದನ್ನು ಏನೋ ತೆಗೆದುಕೊಂಡು ಹೋಗುತ್ತಿದ್ದೇನೆ, ಕರ್ನಾಟಕದಲ್ಲಿ 5 ರಾಷ್ಟ್ರೀಯ ಹೆದ್ದಾರಿ ಯೋಜನೆ & 7 ರೈಲು ಯೋಜನೆಗೆ ಚಾಲನೆ ನೀಡಿದ್ದೇವೆ ಎಂದು ಮೋದಿ ಹೇಳಿದರು.

  • 20 Jun 2022 03:45 PM (IST)

    PM Narendra Modi Speech Live: ಬೆಂಗಳೂರು ಲಕ್ಷಾಂತರ ಯುವಕರಿಗೆ ಸ್ವಪ್ನ ನಗರಿಯಾಗಿದೆ: ಮೋದಿ

    ಬೆಂಗಳೂರು ಲಕ್ಷಾಂತರ ಯುವಕರಿಗೆ ಸ್ವಪ್ನ ನಗರಿಯಾಗಿದೆ, ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬೆಂಗಳೂರಿನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ. ಜನತೆಗೆ ಟ್ರಾವೆಲ್ ಕಡಿಮೆ ಮಾಡಿ, ಡಬಲ್ ಎಂಜಿನ್ ಸರ್ಕಾರವು ನರಂತರ ಕೆಲಸ ಮಾಡಿದೆ.

  • 20 Jun 2022 03:42 PM (IST)

    PM Modi Bengaluru Visit Live:ಈ ಹೊಸ ಯೋಜನೆಗಳಿಂದ ಜನರಿಗೆ ಹಲವು ಪ್ರಯೋಜನಗಳಿವೆ

    ಈ ಪ್ರಾಜೆಕ್ಟ್​ ಹೈಯರ್ ಎಜುಕೇಷನ್, ರಿಸರ್ಚ್​, ಸ್ಕಿಲ್ ಡೆವಲಾಪ್​ಮೆಂಟ್, ಕನೆಕ್ಟಿವಿಟಿ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ನಿಮಗೆ ಸಹಕಾರಿಯಾಗಲಿದೆ..ಮೋದಿ

  • 20 Jun 2022 03:40 PM (IST)

    PM Modi Bengaluru Visit Live: ಪ್ರಧಾನಿ ನರೇಂದ್ರ ಮೋದಿ ಮಾತು

    ರಾಜ್ಯದಲ್ಲಿ ಹಲವಾರು ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸಲು ನನಗೆ ಸಂತೋಷವಾಗಿದೆ ಎಂದು ಕನ್ನಡದಲ್ಲಿಯೇ ಮೋದಿ ಹೇಳಿದರು.

  • 20 Jun 2022 03:39 PM (IST)

    PM Modi Bengaluru Visit Live: ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

    ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

  • 20 Jun 2022 03:38 PM (IST)

    PM Modi Bengaluru Visit Live: ಕೊಮ್ಮಘಟ್ಟದಲ್ಲಿ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭವಾಗಿದೆ.

    ಕೊಮ್ಮಘಟ್ಟದಲ್ಲಿ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭವಾಗಿದೆ

  • 20 Jun 2022 03:24 PM (IST)

    PM Modi Bengaluru Visit Live: ರೈಲ್ವೆ ಯೋಜನೆ ಕುರಿತಾದ ಕಿರುಚಿತ್ರ ಪ್ರದರ್ಶನ ವೀಕ್ಷಿಸುತ್ತಿರುವ ಪ್ರಧಾನಿ ಮೋದಿ

    ರೈಲ್ವೆ ಯೋಜನೆ ಕುರಿತಾದ ಕಿರುಚಿತ್ರ ಪ್ರದರ್ಶನ ವೀಕ್ಷಿಸುತ್ತಿರುವ ಪ್ರಧಾನಿ ಮೋದಿ

  • 20 Jun 2022 03:21 PM (IST)

    PM Modi Bengaluru Visit Live: ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

    ಕೊಮ್ಮಘಟ್ಟದಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಕಾರ್ಯಕ್ರಮ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

  • 20 Jun 2022 03:19 PM (IST)

    PM Modi Bengaluru Visit Live:ಪ್ರಧಾನಿ ಮೋದಿ ರಾಜ್ಯಕ್ಕೆ ಹಲವು ಯೋಜನೆ ಜಾರಿ ಮಾಡಿದ್ದಾರೆ: ಸಿಎಂ

    ಪ್ರಧಾನಿ ಮೋದಿ ರಾಜ್ಯಕ್ಕೆ ಹಲವು ಯೋಜನೆ ಜಾರಿ ಮಾಡಿದ್ದಾರೆ ದೇಶದಲ್ಲಿ 67 ಏರ್‌ಪೋರ್ಟ್‌ಗಳನ್ನು ನಿರ್ಮಿಸಿದ್ದಾರೆ ಮೆಟ್ರೋ ರೈಲು ಯೋಜನೆ 5 ನಗರಗಳಿಗೆ ವಿಸ್ತರಿಸಿದ್ದಾರೆ ಪ್ರಧಾನಿ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತಿದೆ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ನೀಡಿದ್ದೇವೆ ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ನವ ಕರ್ನಾಟಕ ನಿರ್ಮಿಸುತ್ತೇವೆ

  • 20 Jun 2022 03:16 PM (IST)

    PM Modi Bengaluru Visit Live: ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

    2047ರಲ್ಲಿ ಭಾರತ ಅತ್ಯಂತ ದೊಡ್ಡ ರಾಷ್ಟ್ರವಾಗಬೇಕು, ಗತಿ ಶಕ್ತಿಯನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಕೊಟ್ಟಿದ್ದಾರೆ. ಕೇಂದ್ರದ್ದು ಎಲ್ಲವು ದೊಡ್ಡ ಯೋಜನೆಗಳಲ್ಲ, ಮಾನವ ಸಂಪನ್ಮೂಲವನ್ನು ಹೆಚ್ಚು ಬಳಕೆ ಮಾಡಬೇಕು ಎಂದರು. ಪ್ರಧಾನಿ ಮೋದಿ ಯೋಜನೆಯನ್ನು ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ, ದೂರದೃಷ್ಟಿ ನಾಯಕತ್ವದಿಂದ ಮಾತ್ರ ಇದು ಸಾಧ್ಯವಾಗುತ್ತೆ ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯತ್ತ ಸಾಗಿದೆ, ಬಡವರು, ರೈತರಿಗೆ ಪ್ರಧಾನಿ ಮೋದಿ ಹಲವು ಕಾರ್ಯಕ್ರಮ ಜಾರಿ, ರೈತರಿಗಾಗಿ ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿ ಮಾಡಿದ್ದಾರೆ ಎಂದರು.

  • 20 Jun 2022 03:12 PM (IST)

    PM Modi Bengaluru Visit Live: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು

    -33 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು -ಕರ್ನಾಟಕದ ಇತಿಹಾಸದಲ್ಲೇ ಇಂದು ಹೊಸ ಮೈಲಿಗಲ್ಲು -ರಾಜ್ಯದ ಅಭಿವೃದ್ಧಿಗೆ ಇಂದಿನ ಕಾರ್ಯಕ್ರಮ ಅತಿ ಮುಖ್ಯ -ಸಬ್‌ಅರ್ಬನ್‌ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದೆ -ಬೆಂಗಳೂರಿನ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿದೆ -ಯೋಜನೆಯು ಸಂಚಾರ ದಟ್ಟಣೆಗೆ ಇತಿಶ್ರೀ ಹಾಡಲಿದೆ

  • 20 Jun 2022 03:11 PM (IST)

    PM Modi Bengaluru Visit Live:ಸಬ್​ಅರ್ಬನ್ ಯೋಜನೆ ಕುರಿತು ಬೊಮ್ಮಾಯಿ ಮಾತು

    ಸಬ್​ಅರ್ಬನ್ ಯೋಜನೆಯನ್ನು ಇಂದು ಪ್ರಾರಂಭ ಮಾಡುತ್ತಿದ್ದೇವೆ, ಇಂದು ಯಲಹಂಕದಿಂದ ಹೈದರಾಬಾದ್​ಗೆ ಡಬ್ಲಿಂಗ್ ಲೈನ್ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.

  • 20 Jun 2022 03:10 PM (IST)

    PM Modi Bengaluru Visit Live:ಕರ್ನಾಟಕದ ಜಿಡಿಪಿ ಶೇ.2ರಷ್ಟು ಹೆಚ್ಚಳವಾಗಲಿದೆ

    33 ಸಾವಿರ ಕೋಟಿ ರೂ. ಯೋಜನೆ ಸಂಪೂರ್ಣವಾದಾಗ ಕರ್ನಾಟಕದ ಜಿಡಿಪಿ ಶೇ.2ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

  • 20 Jun 2022 03:07 PM (IST)

    PM Modi Bengaluru Visit Live:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಭಾಷಣ ಆರಂಭ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಭಾಷಣ ಆರಂಭ

  • 20 Jun 2022 03:05 PM (IST)

    PM Modi Bengaluru Visit Live: ಪ್ರಲ್ಹಾದ್ ಜೋಶಿ ಮಾತು

    8 ವರ್ಷಗಳ ಹಿಂದೆ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಮೋದಿ, ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಹಲವು ಜನಪರ ಯೋಜನೆ, ಬಡವರಿಗೆ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಮೋದಿಗೆ ಸಲ್ಲುತ್ತೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

  • 20 Jun 2022 03:03 PM (IST)

    PM Modi Bengaluru Visit Live: ನರೇಂದ್ರ ಮೋದಿ ಕುರಿತು ಪ್ರಲ್ಹಾದ್ ಜೋಶಿ ಮಾತು

    ಎಂಟು ವರ್ಷಗಳ ಹಿಂದೆ ಮೇ ತಿಂಗಳಿನಲ್ಲಿ ನಾವೆಲ್ಲರೂ ಸೇರಿ ನರೇಂದ್ರ ಪಾರ್ಲಿಮೆಂಟರಿ ಪಾರ್ಟಿಯ ನಾಯಕನನ್ನಾಗಿ ನಾವು ಆಯ್ಕೆ ಮಾಡಿದ್ದೆವು, ಮೊದಲನೇ ಬಾರಿಗೆ ಓರ್ವ ಸಂಸದನಾಗಿ ಆ ಪ್ರಜಾ ಪ್ರಭುತ್ವದ ಗುಡಿಗೆ ನಮಸ್ಕರಿಸಿ ಬಂದು , ನನ್ನ ಸರ್ಕಾರ ಬಡವರಿಗೆ ಸಮರ್ಪಿತವಾದಂತಹ ಸರ್ಕಾರ ಎಂದು ಹೇಳಿದ್ದರು- ಪ್ರಲ್ಹಾದ್ ಜೋಶಿ

  • 20 Jun 2022 03:01 PM (IST)

    PM Modi Bengaluru Visit Live: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಂದ ಆರಂಭಿಕ ನುಡಿ

    ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಂದ ಆರಂಭಿಕ ನುಡಿ

  • 20 Jun 2022 03:00 PM (IST)

    PM Modi Bengaluru Visit Live:ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಸನ್ಮಾನ

    ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಸನ್ಮಾನ

  • 20 Jun 2022 03:00 PM (IST)

    PM Modi Bengaluru Visit Live: ಕೊಮ್ಮಘಟ್ಟದಲ್ಲಿ ಪ್ರಧಾನಿ ಸಾರ್ವಜನಿಕ ಕಾರ್ಯಕ್ರಮ ಆರಂಭ

    ಕೊಮ್ಮಘಟ್ಟದಲ್ಲಿ ಪ್ರಧಾನಿ ಸಾರ್ವಜನಿಕ ಕಾರ್ಯಕ್ರಮ ಆರಂಭ

  • 20 Jun 2022 02:57 PM (IST)

    PM Modi Bengaluru Visit Live:ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

  • 20 Jun 2022 02:54 PM (IST)

    PM Modi Bengaluru Visit Live:ಕೊಮ್ಮಘಟ್ಟದಲ್ಲಿ ಕೆಲವೇ ನಿಮಿಷಗಳಲ್ಲಿ ಸಮಾವೇಶ ಆರಂಭ,

    ಕೊಮ್ಮಘಟ್ಟದಲ್ಲಿ ಕೆಲವೇ ನಿಮಿಷಗಳಲ್ಲಿ ಸಮಾವೇಶ ಆರಂಭ, ವೇದಿಕೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ

  • 20 Jun 2022 02:49 PM (IST)

    PM Modi Bengaluru Visit Live:ಸಂಸದ ಪ್ರತಾಪ್‌ ಸಿಂಹ ಚಾಮುಂಡೇಶ್ವರಿ ದೇವಾಲಯದಲ್ಲಿ ಸಿದ್ದತೆ ಪರಿಶೀಲನೆ

    ಪ್ರಧಾನಿ ಮೋದಿ ಚಾಮುಂಡಿ ಬೆಟ್ಟಕ್ಕೆ ಭೇಟಿ ಹಿನ್ನೆಲೆ ಸಂಸದ ಪ್ರತಾಪ್‌ ಸಿಂಹ ಚಾಮುಂಡೇಶ್ವರಿ ದೇವಾಲಯದಲ್ಲಿ ಸಿದ್ದತೆ ಪರಿಶೀಲನೆ ನಡೆಸಿದರು. 8:15 ಸುಮಾರಿಗೆ ಪ್ರಧಾನಿ ದೇವಸ್ಥಾನಕ್ಕೆ ಬರುತ್ತಾರೆ, ಸುಮಾರು 20 ನಿಮಿಷ ದೇವರ ಸನ್ನಿಧಿಯಲ್ಲಿ ಮೋದಿ ಇರುತ್ತಾರೆ. ಯಾವುದೇ ವಿಶೇಷ ಪೂಜೆ ಇರುವುದಿಲ್ಲ ಸರಳವಾದ ಪೂಜೆಯನ್ನು ಮೋದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

  • 20 Jun 2022 02:40 PM (IST)

    PM Modi Bengaluru Visit Live: ಮೈಸೂರು: 5 ಸಾವಿರ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ

    ಮೈಸೂರಿಗೆ ಪ್ರಧಾನಿ ನರೇಂದ್ರ ಭೇಟಿ ಹಿನ್ನೆಲೆ ಬಿಗಿ ಭದ್ರತೆ, ಎಡಿಜಿಪಿ ಅಲೋಕ್ ಕುಮಾರ್ ಮಾರ್ಗದರ್ಶನದಲ್ಲಿ ಭದ್ರತೆ ಅಲೋಕ್ ಕುಮಾರ್, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಎಸ್​ಪಿಗಳು 5 ಸಾವಿರ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ.

  • 20 Jun 2022 02:32 PM (IST)

    PM Modi Bengaluru Visit Live:ಪ್ರಧಾನಿ ಮೋದಿ ಭಾಷಣದ ಕುರಿತು ಮಾಹಿತಿ

    ಮಧ್ಯಾಹ್ನ 2.45ಕ್ಕೆ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿರುವ ಮೋದಿ ಮಧ್ಯಾಹ್ನ 2.45ರಿಂದ 2.55ರವರೆಗೆ ಯೋಜನೆಗಳ ಬಗ್ಗೆ ವಿವರಣೆ ಮಧ್ಯಾಹ್ನ 2.56ಕ್ಕೆ ವೇದಿಕೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಮಧ್ಯಾಹ್ನ 2.56ರಿಂದ 2.59ರವರೆಗೆ ನಾಡಗೀತಿ ಗಾಯನ ಮಧ್ಯಾಹ್ನ 2.59ರಿಂದ 3.01ರವರೆಗೆ ಕೇಂದ್ರ ಸಚಿವ ಜೋಶಿ ಭಾಷಣ ಮಧ್ಯಾಹ್ನ 3.06ರ 3.13ರವರೆಗೆ ಸಿಎಂ ಬೊಮ್ಮಾಯಿ ಭಾಷಣ ಮಧ್ಯಾಹ್ನ 3.13ರಿಂದ 3.30ರವರೆಗೆ ಎಲ್​ಇಡಿಯಲ್ಲಿ ವಿವರಣೆ ಎಲ್​ಇಡಿ ಪರದೆ ಮೂಲಕ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಮಧ್ಯಾಹ್ನ 3.30ರಿಂದ ಸಂಜೆ 4ರವರೆಗೆ ಪ್ರಧಾನಿ ಮೋದಿ ಭಾಷಣ ಸಂಜೆ 4 ಗಂಟೆಗೆ ವೇದಿಕೆಯಿಂದ ನಿರ್ಗಮಿಸುವ ಪ್ರಧಾನಿ ಮೋದಿ

  • 20 Jun 2022 02:28 PM (IST)

    PM Modi Bengaluru Visit Live: ಕೊಮ್ಮಘಟ್ಟಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    ಪ್ರಧಾನಿ ನರೇಂದ್ರ ಮೋದಿ ಕೊಮ್ಮಘಟ್ಟಕ್ಕೆ ಆಗಮಿಸಿದ್ದಾರೆ

  • 20 Jun 2022 02:24 PM (IST)

    PM Modi Bengaluru Visit Live: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ 15 ನಿಮಿಷಗಳ ಅವಕಾಶ

    ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇನ್ನು 15 ನಿಮಿಷ ಮಾತ್ರ ಅವಕಾಶ, ಬಳಿಕ ಪ್ರವೇಶಕ್ಕೆ ನಿರ್ಬಂಧ, ಸಮಾವೇಶದತ್ತ ಆಗಮಿಸುತ್ತಿರುವ ಜನರು ಸಮಾರಂಭ ವೇದಿಕೆ ಬಳಿ ತೆರಳಲು ನೂಕು ನುಗ್ಗಲು

  • 20 Jun 2022 02:16 PM (IST)

    PM Modi Bengaluru Visit Live:ಅಂಬೇಡ್ಕರ್ ಯೂನಿವರ್ಸಿಟಿಯಿಂದ ತೆರಳಲಿದ ಪ್ರಧಾನಿ ಮೋದಿ

    ಅಂಬೇಡ್ಕರ್ ಯೂನಿವರ್ಸಿಟಿ ಆಫ್ ಎಕನಾಮಿಕ್ಸ್ ನಿಂದ ಹೊರಟ ಪ್ರಧಾನಿ ಮೋದಿ

  • 20 Jun 2022 02:05 PM (IST)

    PM Modi Bengaluru Visit Live: ಉನ್ನತೀಕರಿಸಿದ ಐಟಿಐ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

    ಉನ್ನತೀಕರಿಸಿದ ಐಟಿಐ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಜ್ಞಾನಭಾರತಿ ಆವರಣದಲ್ಲಿ ಉನ್ನತೀಕರಿಸಿದ ಐಟಿಐ ಲೋಕಾರ್ಪಣೆ.

  • 20 Jun 2022 02:01 PM (IST)

    PM Modi Bengaluru Visit Live:ಮೈಸೂರು:ಪ್ರಧಾನಿ ಮೋದಿ ಸಂಚರಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ

    ಮಹರಾಜ ಕಾಲೇಜು ಮೈದಾನದ ಕಾರ್ಯಕ್ರಮ ಬಳಿಕ ರಸ್ತೆ ಮೂಲಕ ಸಂಚಾರ. ಸುತ್ತೂರು ಮಠಕ್ಕೆ ತೆರಳಲಿರುವ ಮೋದಿ. ಚಾಮರಾಜ ಜೋಡಿ ರಸ್ತೆ ಮೂಲಕ ಮಠಕ್ಕೆ ತೆರಳಲಿರುವ ಪ್ರಧಾನಿ. ಮೋದಿ ಸಂಚರಿಸುವ ರಸ್ತೆಗಳಲ್ಲಿ ಭದ್ರತೆ ದೃಷ್ಟಿಯಿಂದ ಬ್ಯಾರಿಕೇಡ್ ಅಳವಡಿಕೆ. ಭದ್ರತೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು. ಪ್ರಧಾನಿ ಸಂಚರಿಸುವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿಷೇಧ. ಒಂದೆರಡು ಗಂಟೆ ಬಳಿಕ ಸಂಚಾರ ನಿಷೇಧ.

  • 20 Jun 2022 01:58 PM (IST)

    PM Modi Bengaluru Visit Live: ಸ್ಕೂಲ್ ಆಫ್ ಎಕನಾಮಿಕ್ಸ್​ನಿಂದ ಕೊಮ್ಮಘಟ್ಟದತ್ತ ಪ್ರಧಾನಿ ಮೋದಿ ಪ್ರಯಾಣ

    ಸ್ಕೂಲ್ ಆಫ್ ಎಕನಾಮಿಕ್ಸ್​ನಿಂದ ಕೊಮ್ಮಘಟ್ಟದತ್ತ ಪ್ರಧಾನಿ ಮೋದಿ ಪ್ರಯಾಣ

  • 20 Jun 2022 01:57 PM (IST)

    PM Modi Bengaluru Visit Live:ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಸಿದ ಪ್ರಧಾನಿ ಮೋದಿ

    ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಸಿದ ಪ್ರಧಾನಿ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

  • 20 Jun 2022 01:54 PM (IST)

    PM Modi Bengaluru Visit Live:ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ

    ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ

  • 20 Jun 2022 01:45 PM (IST)

    PM Modi Bengaluru Visit Live:ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್​ಗೆ ಆಗಮಿಸಿದ ಪ್ರಧಾನಿ ಮೋದಿ

  • 20 Jun 2022 01:42 PM (IST)

    PM Modi Bengaluru Visit Live:ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಮೈಸೂರಿನಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ

    ಎಲ್ಲೆಡೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಾರ್ಗದರ್ಶನದಲ್ಲಿ ಭದ್ರತೆ, ಮೈಸೂರು ಮಂಡ್ಯ ಹಾಸನ ಚಾಮರಾಜನಗರ ಎಸ್ ಪಿ ಗಳ ನಿಯೋಜನೆ , 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಡಿವೈಎಸ್‌ಪಿ ಡಿಸಿಪಿ ಎಸಿಪಿ ಇನ್ಸಪೆಕ್ಟರ್ ಸಬ್ ಇನ್ಸಪೆಕ್ಟರ್ ಸೇರಿ ಎಲ್ಲಾ ಸಿಬ್ಬಂದಿಗಳ ಬಳಕೆ ಹೊರ ಜಿಲ್ಲೆಗಳಿಂದಲೂ ಆಗಮಿಸಿರುವ ಪೊಲೀಸರು. ಮೋದಿ ಸಂಚರಿಸುವ ಮಾರ್ಗದಲ್ಲಿ ರಸ್ತೆ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಕೆ ರಸ್ತೆ ಬದಿಯಲ್ಲಿ ಜನರು ನಿಂತು ನೋಡಲು ವ್ಯವಸ್ಥೆ ಮಹಾರಾಜ ಕಾಲೇಜು ಮೈದಾನದಿಂದ ಸುತ್ತೂರು ಮಠಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ವ್ಯವಸ್ಥೆ ಮಹಾರಾಜ ಕಾಲೇಜು ಮೈದಾನ ಅರಮನೆ ಯೋಗ ಕಾರ್ಯಕ್ರಮಕ್ಕೆ ಮಾರ್ಗಸೂಚಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು

  • 20 Jun 2022 01:36 PM (IST)

    PM Modi Bengaluru Visit Live:ಮೈಸೂರಿನಲ್ಲಿ ಡ್ರೋನ್ ಕಡ್ಗಾವಲು

    ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಹಿನ್ನೆಲೆ ಭದ್ರತೆಗೆ ಡ್ರೋನ್ ಕಣ್ಗಾವಲಿರಿಸಿದೆ. ಮೂರು ಡ್ರೋನ್ ಗಳ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ, ಮೂರು ತಂಡಗಳಿಂದ ಡ್ರೋನ್ ಗಳ ನಿರ್ವಹಣೆ ಮಾಡಲಾಗುತ್ತಿದೆ. ಅರಮನೆ ಮಹಾರಾಜ ಕಾಲೇಜು ಮೈದಾನ ಚಾಮುಂಡಿ ಬೆಟ್ಟದಲ್ಲಿ ಡ್ರೋನ್ ಬಳಕೆ ಏರಿಯಲ್ ಮೂಲಕ ಪರಿಶೀಲನೆ ಅನುಮಾನಸ್ಪದ ವ್ಯಕ್ಯಿಗಳು, ಅನುಮಾನಸ್ಪದ ವಸ್ತುಗಳ ಮೇಲೆ ನಿಗಾ, ಸಾಕಷ್ಟು ಪರಿಣಾಮಕಾರಿ ಹಾಗೂ ಸಹಕಾರಿಯಾಗಿರುವ ಡ್ರೋನ್ ಕಣ್ಗಾವಲು

  • 20 Jun 2022 01:34 PM (IST)

    PM Modi Bengaluru Visit Live: ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್​ಗೆ ತೆರಳಿದ ಮೋದಿ

    ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್​ಗೆ ತೆರಳಿದ ಮೋದಿ ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನೆ ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸುವ ಪ್ರಧಾನಿ

  • 20 Jun 2022 01:31 PM (IST)

    PM Modi Bengaluru Visit Live:HQTCಯಿಂದ ಕೊಮ್ಮಘಟ್ಟ ಹೆಲಿಪ್ಯಾಡ್​ಗೆ ಆಗಮಿಸಿದ ಮೋದಿ

    HQTCಯಿಂದ ಕೊಮ್ಮಘಟ್ಟ ಹೆಲಿಪ್ಯಾಡ್​ಗೆ ಆಗಮಿಸಿದ ಮೋದಿ

  • 20 Jun 2022 01:24 PM (IST)

    PM Modi Bengaluru Visit Live: ಐಐಎಸ್​ಸಿ ಸಂಶೋಧನಾ ಕೇಂದ್ರಕ್ಕೆ ದೇಣಿಗೆ ನೀಡಿದವರು ಯಾರು?

    ಐಐಎಸ್‌ಸಿ ಹೊಸ ಆಸ್ಪತ್ರೆ ಮತ್ತು ಪಿಜಿ ವೈದ್ಯಕೀಯ ಕೇಂದ್ರವನ್ನು ಮೈಂಡ್‌ಟ್ರೀ ಸಹ-ಸಂಸ್ಥಾಪಕರಿಂದ ಪಡೆಯುತ್ತದೆ. ಈ ಹೆಜ್ಜೆಗೆ ಸುಬ್ರೋತೊ ಬಾಗ್ಚಿ ಮತ್ತು ಎನ್‌ಎಸ್ ಪಾರ್ಥಸಾರಥಿ 425 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. ದಾನ ಎಂಬ ಪದವೇ ಭಾರತೀಯರ ಪಾಲಿಗೆ ಆಕರ್ಷಣೆ. ತಮ್ಮ ಸಂಪತ್ತನ್ನು ಇಲ್ಲದವರೊಂದಿಗೆ ಹಂಚಿಕೊಳ್ಳುವ ಕಲ್ಪನೆಯು ಈಗ ಹೆಚ್ಚೆಚ್ಚು ಪ್ರಚಾರಕ್ಕೆ ಬರುತ್ತಿದೆ.

  • 20 Jun 2022 01:22 PM (IST)

    PM Modi Bengaluru Visit Live: ಬಾಗ್ಚಿ ಮತ್ತು ಪಾರ್ಥಸಾರಥಿ ಯಾರು?

    1975 ರಲ್ಲಿ ಅತ್ಯುತ್ತಮ ಎನ್‌ಸಿಸಿ ಕೆಡೆಟ್ ಪ್ರಶಸ್ತಿಯನ್ನು ಪಡೆದ ಸುಬ್ರೋತೊ ಬಾಗ್ಚಿ ವಿಪ್ರೋದಲ್ಲಿ ಜಾಗತಿಕ ಆರ್ ಅಂಡ್ ಡಿ ಮುಖ್ಯಸ್ಥರಾಗಿದ್ದರು. ಈಗ ಎಲ್​ ಅಂಡ್ ಟಿ ಸ್ಟೇಬಲ್‌ನ ಭಾಗವಾಗಿರುವ ಐಟಿ ಸಂಸ್ಥೆಯಾದ ಮೈಂಡ್‌ಟ್ರೀ ಅನ್ನು ಮುನ್ನಡೆಸಲು ಹೋದ ಮಾಜಿ ವಿಪ್ರೋ ಕಾರ್ಯನಿರ್ವಾಹಕರಲ್ಲಿ ಬಾಗ್ಚಿ ಕೂಡ ಒಬ್ಬರು. ಎನ್​ಎಸ್​ ಪಾರ್ಥಸಾರಥಿ ಅವರು ಮೈಂಡ್‌ಟ್ರೀಯ ಪ್ರವರ್ತಕರಲ್ಲಿ ಒಬ್ಬರಾಗಿದ್ದರು ಮತ್ತು ಅದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (COO) ಸೇವೆ ಸಲ್ಲಿಸಿದರು. ಅವರು ವಿಪ್ರೋ ಆರ್ ಅಂಡ್ ಡಿ ವಿಭಾಗದೊಂದಿಗೆ ಇದ್ದರು ಮತ್ತು 1999ರಲ್ಲಿ ಮೈಂಡ್‌ಟ್ರೀಗೆ ಬಂದರು. ಪಾರ್ಥಸಾರಥಿ ಈಗ ಮೈಂಡ್‌ಟ್ರೀಯ ಮತ್ತೊಬ್ಬ ಸಹ-ಪ್ರವರ್ತಕರಾಗಿದ್ದ ಕೃಷ್ಣಕುಮಾರ್ ನಟರಾಜನ್ ಅವರನ್ನು ಒಳಗೊಂಡಿರುವ ವಿಸಿ ಸಂಸ್ಥೆಯಾದ ಮೇಲಾ ವೆಂಚರ್ಸ್‌ನೊಂದಿಗೆ ತೊಡಗಿಸಿಕೊಂಡಿದ್ದಾರೆ.

  • 20 Jun 2022 01:20 PM (IST)

    PM Modi Bengaluru Visit Live: ಪ್ರಧಾನಿ ಮೋದಿಯಿಂದ ಮೆದುಳು ಸಂಶೋಧನಾ ಕೇಂದ್ರದ ಉದ್ಘಾಟನೆ

  • 20 Jun 2022 01:18 PM (IST)

    PM Modi Bengaluru Visit Live:ಪ್ರದಾನಿಯಿಂದ ಮೆದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆ

    ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 280 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಮೆದುಳು ಸಂಶೋಧನಾ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದರು. ಹಾಗೆಯೇ, ಇದೇ ವೇಳೆ 425 ಕೋಟಿ ರೂ. ವೆಚ್ಚದಲ್ಲಿ ಐಐಎಸ್ಸಿ ಆವರಣದಲ್ಲಿ ನಿರ್ಮಾಣ ವಾಗಲಿರುವ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಗೂ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ದಾನಿಗಳಾದ ಕ್ರಿಸ್ ಗೋಪಾಲಕೃಷ್ಣನ್ ದಂಪತಿ ಹಾಗೂ ಬಾಗ್ಚಿ ಮತ್ತು ಪಾರ್ಥಸಾರಥಿ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • 20 Jun 2022 01:16 PM (IST)

    PM Modi Bengaluru Visit Live:ಇಂದಿನಿಂದ ನಾಳೆ ಬೆಳಗ್ಗೆ 7.30ವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

    ಇಂದು 12 ಮಧ್ಯಾಹ್ನ ಗಂಟೆಯಿಂದ ನಾಳೆ ಬೆಳಗ್ಗೆ 7:30 ವರಗೆ ದೇವರ ದರ್ಶನಕ್ಕೆ ನಿರ್ಬಂಧದ ಮಾಹಿತಿಯನ್ನು ಈಗಾಲೆ ನೀಡಿರುವ ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ, ಅದರೆ ಮಾಹಿತಿ ಇಲ್ಲದೆ 12 ಗಂಟೆ ನಂತರ ದೇವರ ದರ್ಶನಕ್ಕೆ ಬಂದು ಅವಕಾಶ ಸಿಗದೆ ಬೇಸರಗೊಂಡಿರುವ ಹಲವಾರು ಭಕ್ತರು.

  • 20 Jun 2022 01:09 PM (IST)

    PM Modi Bengaluru Visit Live: ಕೊಮ್ಮಘಟ್ಟ ಹೆಲಿಪ್ಯಾಡ್​​ನಿಂದ ಜ್ಞಾನಭಾರತಿಗೆ ತೆರಳಿದ ಪ್ರಧಾನಿ ಮೋದಿ

    ಕೊಮ್ಮಘಟ್ಟ ಹೆಲಿಪ್ಯಾಡ್​​ನಿಂದ ಜ್ಞಾನಭಾರತಿಗೆ ತೆರಳಿದ ಮೋದಿ

    ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್​ಗೆ ಮೋದಿ ಭೇಟಿ

    ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನೆ

    ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸುವ ಪ್ರಧಾನಿ

  • 20 Jun 2022 01:05 PM (IST)

    PM Modi Bengaluru Visit Live: ಕೊಮ್ಮಘಟ್ಟದಲ್ಲಿ ಪ್ರಧಾನಿ ಮೋದಿ ನೋಡಲು ಜನಸಾಗರ

    ಕೊಮ್ಮಘಟ್ಟ ಸಮಾರಂಭಕ್ಕೆ ಹರಿದು ಬರುತ್ತಿರುವ ಜನ ಸಾಗರ, ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಜನರು ವಿಜಯನಗರ, ಗೋವಿಂದರಾಜನಗರ, ಯಶವಂತಪುರ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ಜನರ ಆಗಮನ

  • 20 Jun 2022 01:03 PM (IST)

    PM Modi Bengaluru Visit Live: IIScಯಿಂದ HQTCಗೆ ಪ್ರಧಾನಿ ನರೇಂದ್ರ ಮೋದಿ ವಾಪಸ್

    IIScಯಿಂದ HQTCಗೆ ವಾಪಸಾದ ಪ್ರಧಾನಿ ನರೇಂದ್ರ ಮೋದಿ ರಸ್ತೆ ಮಾರ್ಗವಾಗಿ HQTCಗೆ ತೆರಳಿದ ಪ್ರಧಾನಿ ಮೋದಿ ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿ ಮೋದಿ ವಾಪಸ್ ಮಧ್ಯಾಹ್ನ 1.45ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್​ಗೆ ಭೇಟಿ ಬಳಿಕ ಬೇಸ್ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟನೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸುವ ಪ್ರಧಾನಿ

  • 20 Jun 2022 01:01 PM (IST)

    PM Modi Bengaluru Visit Live:ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ

    ಪ್ರಧಾನಿ ಮೋದಿ ಆಗಮನ ಹಿನ್ನೆಲೆ ನಾಳೆ ಬೆಳಗ್ಗೆ 7.30ರವರೆಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ; ಚಾಮುಂಡೇಶ್ವರಿ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

  • 20 Jun 2022 12:57 PM (IST)

    PM Modi Bengaluru Visit Live: ಐಐಎಸ್​ಸಿ ಸಿಬ್ಬಂದಿ ಜತೆ ಪ್ರಧಾನಿ ಮೋದಿ ಸಮಾಲೋಚನೆ

    ಐಐಎಸ್​ಸಿ ಸಿಬ್ಬಂದಿ ಜತೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸುತ್ತಿದ್ದಾರೆ

  • 20 Jun 2022 12:55 PM (IST)

    PM Modi Bengaluru Visit Live:ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ

    ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು.

  • 20 Jun 2022 12:53 PM (IST)

    PM Modi Bengaluru Visit Live: ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

    ಐಐಎಸ್​ಸಿಯಲ್ಲಿ ಮೆದುಳು ಸಂಶೋಧನಾ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

  • 20 Jun 2022 12:50 PM (IST)

    PM Modi Bengaluru Visit Live: IIScಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

    -HQTCಯಿಂದ IIScಗೆ ಆಗಮಿಸಿದ ಪ್ರಧಾನಿ ಮೋದಿ -ರಸ್ತೆ ಮಾರ್ಗದಲ್ಲಿ IIScಗೆ ಆಗಮಿಸಿದ ಪ್ರಧಾನಿ ಮೋದಿ -ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಿರುವ ಪಿಎಂ ಮೋದಿ -ಜೊತೆಗೆ ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು

  • 20 Jun 2022 12:48 PM (IST)

    PM Modi Bengaluru Visit Live:ಮೇಖ್ರಿ ಸರ್ಕಲ್ ಬಳಿ ಕಾರು ನಿಲ್ಲಿಸಿ ಕಾರ್ಯಕರ್ತರಿಗೆ ಕೈಬೀಸಿದ ಪ್ರಧಾನಿ ಮೋದಿ

    ಮೇಖ್ರಿ ಸರ್ಕಲ್ ಬಳಿ ಕಾರು ನಿಲ್ಲಿಸಿ ಕಾರ್ಯಕರ್ತರಿಗೆ ಕೈಬೀಸಿದ ಪ್ರಧಾನಿ ಮೋದಿ

  • 20 Jun 2022 12:44 PM (IST)

    PM Modi Karnataka Visit Live:ರಸ್ತೆ ಮಾರ್ಗದಲ್ಲಿ ಐಐಎಸ್​ಸಿಗೆ ತೆರಳುತ್ತಿರುವ ಪ್ರಧಾನಿ ಮೋದಿ.

    ಹೆಡ್ ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ ಇಂಡಿಯನ್ ಏರ್‌ಫೋರ್ಸ್ ನಿಂದ ರಸ್ತೆ ಮಾರ್ಗದಲ್ಲಿ ಐಐಎಸ್​ಸಿಗೆ ತೆರಳುತ್ತಿರುವ ಪ್ರಧಾನಿ ಮೋದಿ. ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಿರುವ ಪಿಎಂ ಮೋದಿ, ಜೊತೆಗೆ ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಗಲ್ಲು

  • 20 Jun 2022 12:36 PM (IST)

    PM Modi Karnataka Visit Live: HQTCಗೆ ಆಗಮಿಸಿದ ಪ್ರಧಾನಿ ಮೋದಿ

    ಹೆಡ್ ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ ಇಂಡಿಯನ್ ಏರ್‌ಫೋರ್ಸ್ ಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ, ಅಲ್ಲಿಂದ ರಸ್ತೆ ಮಾರ್ಗದಲ್ಲಿ ಐಐಎಸ್​ಸಿಗೆ ತೆರಳಲಿದ್ದಾರೆ.

  • 20 Jun 2022 12:30 PM (IST)

    PM Modi Karnataka Visit Live: ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿಯವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

    ಯಲಹಂಕ ವಾಯುನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಪ್ರಧಾನಿಯವರನ್ನು ಭೇಟಿಯಾದರು. ಯಡಿಯೂರಪ್ಪ ಅವರನ್ನು ಆತ್ಮೀಯವಾಗಿ ಕೈ ಹಿಡಿದು‌ ಮಾತನಾಡಿಸಿದ ಪ್ರಧಾನಿ ಮೋದಿ. ಸಿಎ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮೊದಲ ಬಾರಿಗೆ ಇಂದು ಪ್ರಧಾನಿ ಭೇಟಿ ಮಾಡಿದ ಯಡಿಯೂರಪ್ಪ

  • 20 Jun 2022 12:28 PM (IST)

    PM Modi Karnataka Visit Live:ಪ್ರಧಾನಿ ನರೇಂದ್ರ ಮೋದಿ ನೋಡಲು ಜನರ ಜಮಾವಣೆ

    ಮೆಖ್ರಿ ಸರ್ಕಲ್ ನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಜಮಾವಣೆ, ಜೈ ಜೈ ಮೋದಿ .. ಜೈ ಶ್ರೀರಾಮ್ ಚಂದ್ರ ಕಿ ಜೈ ಎಂದು ಜೈಕಾರ ಹಾಕುತ್ತಿದ್ದಾರೆ.

  • 20 Jun 2022 12:23 PM (IST)

    PM Modi Karnataka Visit Live: ಯಲಹಂಕ ವಾಯುನೆಲೆಯಿಂದ ಐಐಎಸ್​ಸಿ ಕಡೆಗೆ ಪ್ರಧಾನಿ ಮೋದಿ ಪ್ರಯಾಣ

    ಯಲಹಂಕ ವಾಯುನೆಲೆಯಿಂದ ಐಐಎಸ್​ಸಿ ಕಡೆಗೆ ಪ್ರಧಾನಿ ಮೋದಿ ಪ್ರಯಾಣಬೆಳೆಸಿದ್ದಾರೆ.

  • 20 Jun 2022 12:15 PM (IST)

    PM Modi Karnataka Visit Live:ಯಲಹಂಕ ವಾಯುನೆಲೆಯಿಂದ ತೆರಳಿದ ಪ್ರಧಾನಿ ಮೋದಿ

    ಹೆಲಿಕಾಪ್ಟರ್​ನಲ್ಲಿ HQTCಗೆ ತೆರಳಿದ ಪ್ರಧಾನಿ ಮೋದಿ ಹೆಡ್ ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ ಇಂಡಿಯನ್ ಏರ್‌ಫೋರ್ಸ್

  • 20 Jun 2022 12:13 PM (IST)

    PM Modi Karnataka Visit Live: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಿಂದ ಮೋದಿಗೆ ಸ್ವಾಗತ

    ಬೆಂಗಳೂರಿಗೆ ಬಂದ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸ್ವಾಗತ

  • 20 Jun 2022 12:09 PM (IST)

    PM Modi Karnataka Visit Live:ವಿಶೇಷ ಹೆಲಿಕಾಪ್ಟರ್ ನಿಯೋಜನೆ

    ಮೂರು ವಿಶೇಷ ಹೆಲಿಕಾಪ್ಟರ್​ನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಜತೆ ಪ್ರಧಾನಿ ಮೋದಿ ಕಚೇರಿಯ ಅಧಿಕಾರಿಗಳು ತೆರಳಲಿದ್ದಾರೆ.

  • 20 Jun 2022 12:08 PM (IST)

    PM Modi Karnataka Visit Live: ಮೈಸೂರು ಅರಮನೆಯಲ್ಲಿ ಯೋಗ ದಿನಾಚರಣೆಗೆ ಕ್ಷಣಗಣನೆ

    ಮೈಸೂರು ಅರಮನೆಯಲ್ಲಿ ಯೋಗ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ಆವರಣದಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಜಯ ಮಾರ್ತಂಡ ದ್ವಾರದಲ್ಲಿ ಮುಖ್ಯ ವೇದಿಕೆ ನಿರ್ಮಾಣವಾಗಿದೆ. ಅರಮನೆ ಕಾಣುವಂತೆ ಮುಖ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಯೋಗಪಟುಗಳಿಗೆ ಬ್ಲಾಕ್ ಗಳ ನಿರ್ಮಾಣ. ಪ್ರತಿ ಬ್ಲಾಕ್ ನಲ್ಲಿ ಒಬ್ಬ ಯೋಗ ಗುರು ಹಾಗೂ ಸಿಸಿ ಕ್ಯಾಮೆರಾ ಕಣ್ಗಾವಲು ನೋಂದಾವಣಿ ಮಾಡಿಕೊಂಡಿರುವವರಿಗಾಗಿ ನಿಗದಿತ ದ್ವಾರದಲ್ಲಿ ಪ್ರವೇಶ, ಗಣ್ಯರಿಗಾಗಿ ಕರಿಕಲ್ಲು ತೊಟ್ಟಿ ಪ್ರವೇಶ ದ್ವಾರದ ಮೂಲಕ ಅವಕಾಶ, ಯೋಗ ಮಾಡದ ಗಣ್ಯರಿಗೆ ಪ್ರತ್ಯೇಕ ಆಸನ, ಬೆಳಗ್ಗೆ 5.30ರ ಒಳಗೆ ಅರಮನೆಯಲ್ಲಿ ಇರುವವರಿಗೆ ಮಾತ್ರ ಅವಕಾಶ, ನಂತರ ಬಂದವರಿಗೆ ಪ್ರವೇಶ ಇಲ್ಲ.

  • 20 Jun 2022 12:05 PM (IST)

    PM Modi Karnataka Visit Live:ಯಲಹಂಕ ವಾಯುನೆಲೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ

    ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಯಲಹಂಕ ವಾಯುನೆಲೆಗೆ ಬಂದಿಳಿದಿದ್ದಾರೆ.

  • 20 Jun 2022 12:03 PM (IST)

    PM Modi Karnataka Visit Live: ಮೂರು ಹೆಲಿಕಾಪ್ಟರ್​ಗಳಲ್ಲಿ 15 ಮಂದಿ ಅಧಿಕಾರಿಗಳು ಪ್ರಯಾಣ

    ಮೂರು ಹೆಲಿಕಾಪ್ಟರ್​ಗಳಲ್ಲಿ 15 ಮಂದಿ ಅಧಿಕಾರಿಗಳು ಪ್ರಯಾಣ

  • 20 Jun 2022 11:56 AM (IST)

    PM Modi Karnataka Visit Live:10 ಸಾವಿರ ಪೊಲೀಸರ ನಿಯೋಜನೆ

    ಪ್ರಧಾನಿ ನರೇಂದ್ರ ಬೆಂಗಳೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ 10 ಸಾವಿರ ಪೊಲೀಸರ ನಿಯೋಜನೆ, ಮೇಖ್ರಿ ವೃತ್ತದಲ್ಲಿ 1 ಸಾವಿರ ಪೊಲೀಸರ ಸರ್ಪಗಾವಲು.

  • 20 Jun 2022 11:49 AM (IST)

    PM Modi Karnataka Visit Live: ನಮೋ ನಮಃ ಘೋಷಣೆ

    ಬೆಂಗಳೂರಿನಾದ್ಯಂತ ನಮೋ ನಮಃ ಎಂದು ಘೋಷಣೆ ಕೂಗಲಾಗುತ್ತಿದೆ.

  • 20 Jun 2022 11:44 AM (IST)

    PM Modi Karnataka Visit Live:ಕೆಲವೇ ಕ್ಷಣಗಳಲ್ಲಿ ಬೆಂಗಳೂರು ವಿವಿ ರಸ್ತೆ ಬಂದ್

    ಪ್ರಧಾನಿ ಮೋದಿ ಆಗಮನ ಹಿನ್ನೆಲೆ, ಬೆಂಗಳೂರು ವಿವಿಯೊಳಗೆ ಸಾರ್ವಜನಿಕ ವಾಹನ ಪ್ರವೇಶ ನಿರ್ಬಂಧಿಸಲಾಗುತ್ತದೆ. ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶ ಇರುವುದಿಲ್ಲ. ಮೋದಿ ಬೆಂಗಳೂರಿಗೆ ಬಂದ ಕೂಡಲೇ ಬೆಂ. ವಿವಿ ರಸ್ತೆ ಕ್ಲೋಸ್ ಮಾಡಲಾಗುತ್ತದೆ. 3 ರಿಂದ 4 ತಾಸಿನವರೆಗೆ ಬೆಂಗಳೂರು ವಿವಿ ರಸ್ತೆ ಸಂಪೂರ್ಣ ಕ್ಲೋಸ್ ಆಗಲಿದೆ. ಬೇಸ್ ಉದ್ಘಾಟನೆಗೆ ಬೆಂಗಳೂರು ವಿವಿ ಆವರಣಕ್ಕೆ ಮೋದಿ ಆಗಮಿಸಲಿದ್ದಾರೆ.

  • 20 Jun 2022 11:37 AM (IST)

    PM Modi Karnataka Visit Live:ಕೆಲವೇ ಕ್ಷಣಗಳಲ್ಲಿ ಯಲಹಂಕ ವಾಯುನೆಲೆಗೆ ಪ್ರಧಾನಿ ಮೋದಿ ಆಗಮನ

    ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದಾರೆ. ಮೋದಿ ಸ್ವಾಗತಕ್ಕೆ ಏರ್​ಬೇಸ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನ, ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರು ಸಜ್ಜು.

  • 20 Jun 2022 11:34 AM (IST)

    PM Modi Karnataka Visit Live:ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೊಮ್ಮಘಟ್ಟ ಮೈದಾನದಲ್ಲಿ ಸಿದ್ಧತೆ ಹೇಗೆ ನಡೆದಿದೆ?

    ಕೊಮ್ಮಘಟ್ಟದಲ್ಲಿ ಇಂದು ಪ್ರಧಾನಿ ಮೋದಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಬೃಹತ್ ಸಾರ್ವಜನಿಕ ಸಮಾರಂಭಕ್ಕೆ ಕೊಮ್ಮಘಟ್ಟ ಪ್ರದೇಶ ಸಿದ್ಧವಾಗಿದೆ. 10 ಎಕರೆ ಪ್ರದೇಶದಲ್ಲಿ ಕೊಮ್ಮಘಟ್ಟ ನೈಸ್ ಮೈದಾನದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರಿಗೆ ಮೂರು ಭಾಗಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. 140/140 ವಿಸ್ತೀರ್ಣದಿಂದ ಕೂಡಿರುವ ಮುಖ್ಯ ವೇದಿಕೆ, 700/400 ವಿಸ್ತೀರ್ಣದಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಸುಮಾರು 40 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ಸ್ಥಳದಿಂದ ಅರ್ಧ ಕಿ.ಮೀ. ದೂರದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಕೇಂದ್ರೀಯ ಭದ್ರತಾ ತಂಡ ಮತ್ತು ರಾಜ್ಯ ಪೊಲೀಸರಿಂದ ಭದ್ರತಾ ವ್ಯವಸ್ಥೆ, ವೇದಿಕೆ ಮೇಲೆ ಪ್ರಧಾನಿ ಹೊರತು ಪಡಿಸಿ, ಉಳಿದವರಿಗೆ ಪಾಸ್ ಕಡ್ಡಾಯವಾಗಿರುತ್ತದೆ.

  • 20 Jun 2022 11:31 AM (IST)

    PM Modi Karnataka Visit Live:ಕಪ್ಪು ಬಟ್ಟೆ ಧರಿಸಿದ್ದರೆ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿಲ್ಲ

    ಕಪ್ಪು ಬಟ್ಟೆ ಧರಿಸಿದ್ದರೆ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿಲ್ಲ ಎಂದು ಹೇಳಲಾಗಿದೆ. ಕೊಮ್ಮಘಟ್ಟ ಸಾರ್ವಜನಿಕ ಸಮಾರಂಭದಲ್ಲಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರು ಸಾರ್ವಜನಿಕರ ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದಾರೆ, ಕಪ್ಪು ಶರ್ಟ್, ಕಪ್ಪು ಮಾಸ್ಕ್, ನೀರಿನ ಬಾಟಲ್, ಗುಟ್ಕಾ ಚೀಟಿಗಳು ನಿರ್ಬಂಧ ಹೇರಲಾಗಿದೆ.

  • 20 Jun 2022 11:28 AM (IST)

    PM Modi Karnataka Visit Live: ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಳ್ಳಲು ವಿಶೇಷ ಹೆಲಿಪ್ಯಾಡ್ ಸಿದ್ಧ

    ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಹಾರಾಜ ಮೈದಾನದ ಪಕ್ಕದಲ್ಲೇ ವಿಶೇಷ ಹೆಲಿಪ್ಯಾಡ್ ಸಿದ್ಧಗೊಂಡಿದೆ. ಸಂಜೆ 5.50 ಕ್ಕೆ ಮಹಾರಾದ ಮೈದಾನದದ ಪಕ್ಕದಲ್ಲೆ ಸಿದ್ದವಾಗಿರುವ ಹೆಲಿಪ್ಯಾಡ್ ನಲ್ಲಿ ನರೇಂದ್ರ ಮೋದಿ ಲ್ಯಾಂಡ್​ ಆಗಲಿದ್ದಾರೆ. ಬಳಿಕ ಕೇಂದ್ರ ಪಲಾನುಭವಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ. ಒಂದು ಗಂಟೆಗಳಕಾಲ ಕೇಂದ್ರ ಪಲಾನುಭವಿಗಳು ಹಾಗೂ ಕಾರ್ಯಕರ್ತರನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

  • 20 Jun 2022 11:22 AM (IST)

    PM Modi Karnataka Visit Live: ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಸುತ್ತ ಬಿಗಿ ಭದ್ರತೆ

    ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಸುತ್ತ ಭದ್ರತೆ, ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನೆಲೆ ಹೆಚ್ಚು ಭದ್ರತೆ ಒದಗಿಸಲಾಗಿದೆ. ಮೈದಾನದ ಸುತ್ತ 3 ಕಿ.ಮೀ. ವ್ಯಾಪ್ತಿಯಲ್ಲಿ ಪೊಲೀಸರ ಹದ್ದಿನ ಕಣ್ಣು ಇರಿಸಲಾಗಿದೆ. ಮಹಾರಾಜ ಕಾಲೇಜು ಮೈದಾನ, ಸುತ್ತಲಿನ ಪ್ರದೇಶದಲ್ಲಿ ತಪಾಸಣೆ ನಡೆಸಲಾಗುತ್ತಿದೆ.

  • 20 Jun 2022 11:14 AM (IST)

    PM Modi Karnataka Visit Live:ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ: ಮೋದಿ ಟ್ವೀಟ್

  • 20 Jun 2022 11:12 AM (IST)

    PM Modi Karnataka Visit Live: ಡಾ. ಬಿಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಮೋದಿ ಟ್ವೀಟ್

  • 20 Jun 2022 11:11 AM (IST)

    PM Modi Karnataka Visit Live: 2,700 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ: ಮೋದಿ ಟ್ವೀಟ್

  • 20 Jun 2022 11:10 AM (IST)

    PM Modi Karnataka Visit Live: ಕನ್ನಡದಲ್ಲಿ ಪ್ರಧಾನಿ ಮೋದಿ ಟ್ವೀಟ್

  • 20 Jun 2022 11:08 AM (IST)

    PM Modi Karnataka Visit Live:ಮೈಸೂರಿನಲ್ಲಿ ಯೋಗಪಟುಗಳಿಂದ ಭರ್ಜರಿ ತಾಲೀಮು

    ಯೋಗ ದಿನಾಚರಣೆಗೆ ಪ್ರಧಾನಿ ಮೋದಿ ಆಗಮನಕ್ಕೆ ಸಿದ್ದತೆ ನಡೆಯುತ್ತಿದೆ. ಶರತ್ ಜೋಯಿಸ್ ಅವರಿಂದ ಯೋಗಾಭ್ಯಾಸ, ಶರತ್ ಯೋಗ ಗುರು ಪಟ್ಟಾಭೀ ಜೋಯಿಶ್ ಅವರ ಮೊಮ್ಮಗ, ಪಟ್ಟಾಭಿ ಜೋಯಿಶ್ ಯೋಗ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು. ಶರತ್ ಯೋಗ ಶಾಲೆ ನಡೆಸುತ್ತಿದ್ದು, 50ಕ್ಕೂ ಹೆಚ್ಚು ದೇಶದ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ್ದಾರೆ.

  • 20 Jun 2022 11:01 AM (IST)

    PM Modi Karnataka Visit Live:ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗಗಳಲ್ಲಿ ಭಾರಿ ಗಾತ್ರದ ವಾಹನಗಳಿಗೆ ನಿರ್ಬಂಧ

    ಬೆಂಗಳೂರಲ್ಲಿ ಇಂದು ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ನಿರ್ಬಂಧ, ಇಂದು ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಕೆಲವು ಸ್ಥಳಗಳಲ್ಲಿ ನಿಷೇಧ ಹೇರಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಚಾರ ನಿಷೇಧ:

    -ನಾಗರಬಾವಿ ರಿಂಗ್‌ ರಸ್ತೆಯ ಚೌಡೇಶ್ವರಿ ಬಸ್ ನಿಲ್ದಾಣದಿಂದ , ನಾಗರಬಾವಿ ಜಂಕ್ಷನ್‌ವರೆಗೆ ಎರಡೂ ಕಡೆಗಳಲ್ಲಿ ಸಂಚಾರ ನಿಷೇಧ

    -ಜ್ಞಾನಭಾರತಿ ಜಂಕ್ಷನ್‌ನಿಂದ ಜೈರಾಮ್ ದಾಸ್ ಜಂಕ್ಷನ್‌ವರೆಗೆ, ಹಳೇ ರಿಂಗ್‌ ರಸ್ತೆ ಕೆಂಗುಂಟೆ ಜಂಕ್ಷನ್‌ನಿಂದ ಶಿರ್ಕೆ ಜಂಕ್ಷನ್‌ವರೆಗೆ

    -ಜ್ಞಾನಭಾರತಿ ಆವರಣದಲ್ಲಿರುವ ಎಲ್ಲಾ ರಸ್ತೆಗಳಲ್ಲಿ ಸಂಚಾರ ನಿಷೇಧ

    -ಮೈಸೂರು ರಸ್ತೆಯ ನೈಸ್ ರೋಡ್ ಬಳಿ ಪರ್ಯಾಯ ಮಾರ್ಗ ನಿಷೇಧಿಸಲಾದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ, ಮಾಗಡಿ ಮುಖ್ಯರಸ್ತೆ ಮೂಲಕ ನೈಸ್ ರಸ್ತೆಯ ಮುಖಾಂತರ, ಉತ್ತರಹಳ್ಳಿ ಮುಖ್ಯರಸ್ತೆ ಕಡೆಗೆ, ಬೆಂಗಳೂರು ನಗರದ ಕಡೆಗೆ ಅವಕಾಶ

    -ಹೊಸಕೋಟೆ ಟೋಲ್‌ನಿಂದ ಬೂದಿಗೆರೆ ಕ್ರಾಸ್ ಮೂಲಕ ಅವಕಾಶ, ನೈಸ್ ರಸ್ತೆ ಮೂಲಕ ತುಮಕೂರು ರಸ್ತೆ, ಮೈಸೂರು ರಸ್ತೆ ಕಡೆ ಅವಕಾಶ ನೀಡಲಾಗಿದೆ.

  • 20 Jun 2022 10:49 AM (IST)

    PM Modi Karnataka Visit Live:ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ

    ₹15,767 ಕೋಟಿ ವೆಚ್ಚದ ಉಪನಗರ ರೈಲು ಯೋಜನೆ, ಕಂಟೋನ್ಮೆಂಟ್ ಹಾಗೂ ಯಶವಂತಪುರ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಪ್ರಗತಿ ಕಾರ್ಯಗಳಿಗೆ ಚಾಲನೆ ಹಾಗೂ ಉದ್ಘಾಟನೆಯನ್ನು ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ನೆರವೇರಿಸಲಿದ್ದಾರೆ ಎಂದು ಸಚಿವ ಕೆ ಗೋಪಾಲಯ್ಯ ತಿಳಿಸಿದ್ದಾರೆ.

  • 20 Jun 2022 10:45 AM (IST)

    PM Modi Karnataka Visit Live: ಪ್ರಧಾನಿ ಮೋದಿಗೆ ಆಕರ್ಷಕ ಪೇಟ

    ಮೈಸೂರಿಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಮೋದಿಗಾಗಿ ಆಕರ್ಷಕ ಪೇಟ ಸಿದ್ದಪಡಿಸಿದ ಕಲಾವಿದ. ಮೈಸೂರಿನ ಕಲಾವಿದ ನಂದನ್ ತಯಾರಿಸಿರುವ ಮೈಸೂರು ಪೇಟ ಸಿದ್ಧಪಡಿಸಿದ್ದಾರೆ. ರೇಷ್ಮೆ ನೂಲಗಳಿಂದ ಕೈನಲ್ಲೇ ಸಿದ್ದಪಡಿಸಿದ ಮೈಸೂರು ಪೇಟ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಮಾದರಿ ಪೇಟ, ಕೆಂಪು ಹಾಗೂ ಗೋಲ್ಡ್ ಕಲರ್ ಮೈಸೂರು ಸಾಂಪ್ರ್ರದಾಯಿಕ ಶೈಲಿಯಲ್ಲಿ ಈ ಪೇಟವಿದೆ.

  • 20 Jun 2022 10:43 AM (IST)

    PM Modi Karnataka Visit Live:ಪ್ರಧಾನಿ ಮೋದಿಗೆ ನೀಡಲು ಮೈಸೂರು ಪಾಕ್​ ಸಿದ್ಧ

    ನರೇಂದ್ರ ಮೋದಿ ಮೈಸೂರು ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮದುವಣಗಿತ್ತಿಯಂತೆ ಮೈಸೂರು ಸಜ್ಜಾಗಿದೆ. ಮೈಸೂರಿನ ಕಲೆ ಸಂಸ್ಕೃತಿ ಪರಂಪರೆ ಬಗೆಗೆ ತಿಳಿಸಲು ಜನರು ಮುಂದಾಗಿದ್ದಾರೆ. ಗುರು ಸ್ವೀಟ್ ಮಾಲೀಕರಿಂದ ಮೋದಿಗೆ ನೀಡಲು ಮೈಸೂರು ಪಾಕ್ ಸಿದ್ಧಗೊಂಡಿದೆ. ರಾಜರ ಬಾಣಸಿಗ ಕಾಕಾಸುರ ಮಾದಪ್ಪರಿಂದ ಈ ಮೈಸೂರು ಪಾಕ್ ಸಿದ್ಧಗೊಂಡಿತ್ತು, ಪಾಕದಿಂದ ಸಿಹಿ ತಿನಿಸು ಮಾಡಿದ್ದ ಕಾಕಾಸುರ ಮಾದಪ್ಪ ಹಾಗಾಗಿ ಅದಕ್ಕೆ ಮೈಸೂರು ಪಾಕ್ ಎಂದು ಕೃಷ್ಣರಾಜ ಒಡೆಯರ್ ನಾಮಕರಣ ಮಾಡಿದ್ದರು.

  • 20 Jun 2022 10:39 AM (IST)

    PM Modi Karnataka Visit Live: ಪ್ರಧಾನಿ ನರೇಂದ್ರ ಮೋದಿ ಕೊಮ್ಮಘಟ್ಟದ ಕಾರ್ಯಕ್ರಮದಲ್ಲಿ ಭಾಗಿ

     ಮೋದಿಯವರು ಕೊಮ್ಮಘಟ್ಟದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಭಾನುವಾರ ಸಿದ್ಧತೆ ಪರಿಶೀಲಿಸಲಾಯಿತು. ಸಚಿವರಾದ ಶ್ರೀ ಎಸ್ ಟಿ ಸೋಮಶೇಖರ ಶಾಸಕ ಮುನಿರತ್ನ ಉಪಸ್ಥಿತರಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.

  • 20 Jun 2022 10:37 AM (IST)

    PM Modi Karnataka Visit Live:ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿಗೆ ಸಕಲ ಸಿದ್ಧತೆ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಭೇಟಿ ಕೈಗೊಳ್ಳಲಿದ್ದು, ಇದಕ್ಕೆ ಸಚಿವರು, ಬಿಜೆಪಿ ಮುಖಂಡರು ಯಾವುದೇ ಲೋಪದೋಷ ಬಾರದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಇಂದು 20-6-22 ಸಂಜೆ 5:30ಕ್ಕೆ ನರೇಂದ್ರ ಮೋದಿಜಿ ಅವರು ಮೈಸೂರಿನ ಮಹಾರಾಜ ಮೈದಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ, ಶಂಕುಸ್ಥಾಪನೆ & ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 7:00ಕ್ಕೆ ಶ್ರೀ ಸುತ್ತೂರು ಮಠ, 7:50ಕ್ಕೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ ತಿಳಿಸಿದ್ದಾರೆ.

  • 20 Jun 2022 10:35 AM (IST)

    PM Modi Karnataka Visit Live:ಮೈಸೂರು ರಾಜ ಮನೆತನದವರ ಜತೆ ನರೇಂದ್ರ ಮೋದಿ ಬೆಳಗಿನ ಉಪಹಾರ

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಮತಿ ಪ್ರಮೋದದೇವಿ ಒಡೆಯರ್ ಅವರಿಂದ ಉಪಹಾರಕ್ಕೆ ಆಹ್ವಾನ ನೀಡಿದ್ದಾರೆ. ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಲಾಗಿದೆ. ಬೆಳಗ್ಗೆ 8.30ಕ್ಕೆ ಅರಮನೆಯ ನಿವಾಸದಲ್ಲಿ ಉಪಹಾರ ಸವಿಯಲಿದ್ದಾರೆ.

  • 20 Jun 2022 10:22 AM (IST)

    PM Modi Karnataka Visit Live: ಪ್ರಧಾನಿ ಮೋದಿ ಭೇಟಿ: ವಿವಿಧ ಮಾರ್ಗಗಳ ಬದಲಾವಣೆ

  • 20 Jun 2022 10:02 AM (IST)

    PM Modi Karnataka Visit Live:ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ಲೋಕಾರ್ಪಣೆ

    ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಶವೆಂದರೆ ಬೈಯಪ್ಪನಹಳ್ಳಿಯಲ್ಲಿ ಭಾರತದ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡುವುದು. ₹315 ಕೋಟಿ ವೆಚ್ಚದಲ್ಲಿ ಆಧುನಿಕ ವಿಮಾನ ನಿಲ್ದಾಣದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

  • 20 Jun 2022 09:51 AM (IST)

    PM Modi Karnataka Visit Live:ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ರಮ

    ಮೋದಿ ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಕಾರ್ಯಕ್ರಮಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಈ ಎರಡು ವಿಮಾನ ನಿಲ್ದಾಣಗಳನ್ನು ಕ್ರಮವಾಗಿ ಸುಮಾರು ₹ 500 ಕೋಟಿ ಮತ್ತು ₹ 375 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

  • 20 Jun 2022 09:39 AM (IST)

    PM Modi Karnataka Visit Live:ಬೆಂಗಳೂರಿನಲ್ಲಿ ಯಾವ್ಯಾವ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿ

    ಪ್ರಧಾನಿ ಮೋದಿ ಅವರು ಬೆಂಗಳೂರು ಉಪನಗರ ರೈಲು ಯೋಜನೆಗೆ (BSRP) ಚಾಲನೆ ನೀಡಲಿದ್ದಾರೆ, ಇದು ರಾಜಧಾನಿಯನ್ನು ಅದರ ಉಪನಗರಗಳು ಮತ್ತು ಉಪಗ್ರಹ ಟೌನ್‌ಶಿಪ್‌ಗಳೊಂದಿಗೆ ಸಂಪರ್ಕಿಸುತ್ತದೆ. ₹ 15,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯು ಒಟ್ಟು 148 ಕಿ.ಮೀ ಉದ್ದದ ನಾಲ್ಕು ಕಾರಿಡಾರ್‌ಗಳನ್ನು ಹೊಂದಿದೆ.

  • 20 Jun 2022 09:34 AM (IST)

    PM Modi Karnataka Visit Live:ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಸಾದಹಳ್ಳಿ ಕಡೆಯಿಂದ ಸಂಚರಿಸುವ ವಾಹನಗಳು

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- 2ನೇ ಸರ್ಕಲ್ – 1ನೇ ಸರ್ಕಲ್ – ಏರ್‌ಪೋರ್ಟ್ ಟೋಲ್ – ಚಿಕ್ಕಜಾಲ ಕೋಟೆ ಕ್ರಾಸ್ ಜಂಕ್ಷನ್ ಸರ್ವಿಸ್ ರಸ್ತೆ – ವಿದ್ಯಾನಗರ ಕ್ರಾಸ್-ಅಂಡರ್‌ಪಾಸ್ ಬಲತಿರುವು- ಎಂವಿಐಟಿ ಜಂಕ್ಷನ್- ಬಲತಿರುವು- ದೊಡ್ಡಬಳ್ಳಾಪುರ ರಸ್ತೆ- ಎಡ ತಿರುವು ರಾಜಾನುಕುಂಟೆ – ಎಡತಿರುವು- ಎಂಎಸ್ ಪಾಳ್ಯ – ಗಂಗಮ್ಮಗುಡಿ ಸರ್ಕಲ್ – ಬಿಇಎಲ್ ಜಂಕ್ಷನ್- ಗೊರಗುಂಟೆ ಪಾಳ್ಯ

  • 20 Jun 2022 09:26 AM (IST)

    PM Modi Karnataka Visit Live:ಮಾರ್ಗ ಬದಲಾವಣೆ: ಕಂಟೋನ್ಮೆಂಟ್ ರೈಲ್ವೇ ಬ್ರಿಡ್ಜ್, ಜೆ.ಸಿ ನಗರ, ಆರ್.ಟಿ ನಗರ ಕಡೆಯಿಂದ ಸಂಚರಿಸುವ ವಾಹನಗಳು

    ಜಯಮಹಲ್ ಮುಖ್ಯರಸ್ತೆ- ಸಿಕ್ಯೂಎಎಲ್ ಕ್ರಾಸ್- ಬಲ ತಿರುವು- ವಾಟರ್ ಟ್ಯಾಂಕ್ ಜಂಕ್ಷನ್- ಪಿಆರ್‍‌ಟಿಸಿ ಜಂಕ್ಷನ್- ಎಡತಿರುವು- ದೇವೆಗೌಡ ರಸ್ತೆ- ದಿನ್ನೂರು ಜಂಕ್ಷನ್ ಬಲ ತಿರುವು-ಕಾವಲ್ ಬೈರಸಂದ್ರ ರಸ್ತೆ – ನಾಗವಾರ ಜಂಕ್ಷನ್- ಹೆಣ್ಣೂರು ಕ್ರಾಸ್- ಎಡತಿರುವು-ಕೊತ್ತನೂರು- ಕಣ್ಣೂರು- ಬಾಗಳೂರು ಸರ್ಕಲ್- ಬಾಗಲೂರು ಪಿಎಸ್-ಹೂವಿನನಾಯಕನಹಳ್ಳಿ ಕ್ರಾಸ್- ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ- ಮೈಲನಹಳ್ಳಿ ಕ್ರಾಸ್-ಎಡತಿರುವು- ಬೇಗೂರು ಬ್ಯಾಕ್‌ಗೇಟ್‌- ಬಲ ತಿರುವು- 1ನೇ ಸರ್ಕಲ್- 2ನೇ ಸರ್ಕಲ್- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

  • 20 Jun 2022 09:20 AM (IST)

    PM Modi Karnataka Visit Live: ಮೈಸೂರಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ

    ಬೆಂಗಳೂರಿನ ಕೊಮ್ಮಘಟ್ಟದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ ನಂತರ, ವಿಮಾನದ ಮೂಲಕ ಮೈಸೂರಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ತೆರಳಲಿದ್ದಾರೆ.

  • 20 Jun 2022 09:18 AM (IST)

    PM Modi Karnataka Visit Live:ವಿಧಾನ ಸೌಧ, ರಾಜ್ ಭವನ್ ಮತ್ತು ಕೆ.ಆರ್ ಮಾರ್ಕೆಟ್ ಕಡೆಯಿಂದ ಸಂಚರಿಸುವ ವಾಹನಗಳು

    ಕಾವೇರಿ ಜಂಕ್ಷನ್-ಎಡ ತಿರುವು -ಬಾಷ್ಯಂ ಸರ್ಕಲ್ – ಸ್ಯಾಂಕಿ ರಸ್ತೆ- ಮಲ್ಲೇಶ್ವರಂ 18ನೇ ಕ್ರಾಸ್-ಮಾರಮ್ಮ ಸರ್ಕಲ್ – ಯಶವಂತಪುರ ಸರ್ಕಲ್ – ಯು ಟರ್ನ್- ಮತ್ತಿಕೆರೆ ಕ್ರಾಸ್-ಎಡ ತಿರುವು-ಹೆಚ್.ಎಂ.ಟಿ ಮುಖ್ಯರಸ್ತೆ- ಬಿಇಎಲ್ ಸರ್ಕಲ್- ಗಂಗಮ್ಮನಗುಡಿ ಸರ್ಕಲ್-ಎಂಎಸ್‌ಪಾಳ್ಯ- ಯಲಹಂಕ ಮದರ್ ಡೈರಿ ಜಂಕ್ಷನ್ – ಮೇ|| ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್ – ಎಡತಿರುವು – ನಾಗೇನಹಳ್ಳಿ ಗೇಟ್ – ಸಿಂಗನಾಯಕನಹಳ್ಳಿ – ರಾಜಾನುಕುಂಟೆ – ಬಲತಿರುವು –ಎಂವಿಐಟಿಜಂಕ್ಷನ್ – ಎಡತಿರುವು -ವಿದ್ಯಾನಗರ ಕ್ರಾಸ್ – ಚಿಕ್ಕಜಾಲ – ಸಾದಹಳ್ಳಿ ಗೇಟ್ – ಏರ್ಪೋರ್ಟ್ ಟೋಲ್ – 1ನೇ ಸರ್ಕಲ್ – 2ನೇ ಸರ್ಕಲ್ – ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

  • 20 Jun 2022 09:15 AM (IST)

    PM Modi Karnataka Visit Live:ತುಮಕೂರು ರಸ್ತೆ ಮತ್ತು ರಿಂಗ್ ರಸ್ತೆ ಕಡೆಯಿಂದ ಸಂಚರಿಸುವ ವಾಹನಗಳು

    ಗೊರಗುಂಟೆ ಪಾಳ್ಯ – ಬಿಇಎಲ್ ಜಂಕ್ಷನ್ – ಎಡತಿರುವು – ಗಂಗಮ್ಮನಗುಡಿ ಸರ್ಕಲ್ – ಎಂ ಎಸ್ ಪಾಳ್ಯ -ಯಲಹಂಕ ಮದರ್ ಡೈರಿ ಜಂಕ್ಷನ್ – ಮೇ. ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್ – ಎಡತಿರುವು – ನಾಗೇನಹಳ್ಳಿ ಗೇಟ್ – ಸಿಂಗನಾಯಕನಹಳ್ಳಿ – ರಾಜಾನುಕುಂಟೆ – ಬಲತಿರುವು – ಎಂವಿಐಟಿ ಜಂಕ್ಷನ್ – ಎಡತಿರುವು -ವಿದ್ಯಾನಗರ ಕ್ರಾಸ್ – ಚಿಕ್ಕಜಾಲ ಸಾದಹಳ್ಳಿ ಗೇಟ್ – ಏರ್‍‌ಪೋರ್ಟ್‌ ಟೋಲ್ – 1ನೇ ಸರ್ಕಲ್ – 2ನೇ ಸರ್ಕಲ್ – ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

  • 20 Jun 2022 09:08 AM (IST)

    PM Modi Karnataka Visit Live:ಹವಾನಿಯಂತ್ರಿತ ರೈಲು ನಿಲ್ದಾಣ ಲೋಕಾರ್ಪಣೆ

    ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕಕ್ಕೆ ಆಗಮಿಸಲಿದ್ದು, ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ, ಭಾರತದ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ಲೋಕಾರ್ಪಣೆ, ಕೊಂಕಣ ರೈಲು ಮಾರ್ಗಕ್ಕೆ ಶೇ 100 ರಷ್ಟು ವಿದ್ಯುದ್ದೀಕರಣ, 150 ಟೆಕ್ನಾಲಜಿ ಹಬ್‌ಗಳಿಗೆ ಚಾಲನೆ ನೀಡಿ ಬಳಿಕ ಮೈಸೂರಿನಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

  • 20 Jun 2022 09:05 AM (IST)

    PM Modi Karnataka Visit Live: ಕೆಆರ್​ಪುರಂ ಮತ್ತು ರಿಂಗ್ ರಸ್ತೆಕಡೆಯಿಂದ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ

    ಟಿನ್ ಫ್ಯಾಕ್ಟರಿ, ರಾಮಮೂರ್ತಿನಗರ, ಹೆಣ್ಣೂರು ಕ್ರಾಸ್ ಬಲತಿರುವು-ಹೆಣ್ಣೂರು ಮುಖ್ಯರಸ್ತೆ, ಭೈರತಿ ಕ್ರಾಸ್, ಹೊಸೂರು ಬಂಡೆ, ಚಾಗಲಹಟ್ಟಿ, ಬಾಗಲೂರು ಗುಂಡಪ್ಪ ಸರ್ಕಲ್ ಬಲತಿರುವು ಬಾಗಲೂರು ಬಸ್ ನಿಲ್ದಾಣ, ಎಡ ತಿರುವು, ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ, ಮೈಲನಹಳ್ಳಿ ಕ್ರಾಸ್, ಎಡ ತಿರುವು, ಬೇಗೂರು ಬ್ಯಾಕ್​ಗೇಟ್, ಬಲ ತಿರುವು, ಒಂದನೇ ಸರ್ಕಲ್, ಎರಡನೇ ಸರ್ಕಲ್, ಕೆ.ಅಂ.ರಾ.ವಿ.ನಿ.

  • Published On - Jun 20,2022 8:49 AM

    Follow us
    ‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
    ‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
    Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
    Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
    ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
    ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
    ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
    ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?