ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಒಂದು ಸಾರ್ವಜನಿಕ ಸಭೆ, ಎರಡು ಕಡೆ ರೋಡ್ ಶೋ ಸಿದ್ದತೆಗೆ ಸಿಎಂ ಸೂಚನೆ
Narendra Modi Bangalore visit: ಪ್ರಧಾನಿ ಮೋದಿ 2 ದಿನ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನಿ ಭೇಟಿ ವೇಳೆ ಎರಡು ಕಡೆಗಳಲ್ಲಿ ರೋಡ್ ಶೋ ಮತ್ತು ಒಂದು ಕಡೆ ಸಾರ್ವಜನಿಕ ಸಭೆ ಆಯೋಜನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ಜೂನ್ 20 ಮತ್ತು 21 ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನಿ ಭೇಟಿ ವೇಳೆ (PM Narendra Modi Bangalore visit) ಎರಡು ಕಡೆಗಳಲ್ಲಿ ರೋಡ್ ಶೋ ಮತ್ತು ಒಂದು ಕಡೆ ಸಾರ್ವಜನಿಕ ಸಭೆ ಆಯೋಜನೆಗೆ ಸಿದ್ದತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಸೂಚನೆ ನೀಡಿದ್ದಾರೆ.
ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣದಲ್ಲಿ ತಲಾ ಒಂದೊಂದು ರೋಡ್ ಶೋ ಏರ್ಪಾಟಾಗಿದೆ. ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂ ನಲ್ಲಿ ಒಂದು ರೋಡ್ ಶೋ ಪ್ಲಾನ್ ಇದೆ. ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಕಡೆ ಸಹ ರೋಡ್ ಶೋ ನಡೆಸಲು ಚಿಂತನೆ ನಡೆದಿದೆ. ಒಟ್ಟು 12 ಕಿಲೋ ಮೀಟರ್ ಮೋದಿ ರೋಡ್ ಶೋ ಸಿದ್ದತೆಗೆ ಸೂಚನೆ ದೊರೆತಿದೆ.
ಇದನ್ನೂ ಓದಿ: Aadhaar Enabled Payment System: ಏನಿದು ಆಧಾರ್ ಎನೇಬಲ್ಡ್ ಪಾವತಿ ವ್ಯವಸ್ಥೆ? ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Wed, 15 June 22