ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲೇ ಪೊಲೀಸರ ಗಲಾಟೆ: ದೂರು ನೀಡಲು ಬಂದವರು ಕಂಗಾಲು

ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲೇ ಪೊಲೀಸ್ ಇನ್ಸ್​ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ ನಡೆದಿರುವಂತಹ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲೇ ಮಹಿಳಾ ಸಿಬ್ಬಂದಿ ಮುಂದೆಯೇ ಅವಾಚ್ಯ ಶಬ್ದಗಳಿಂದ ಸಿಬ್ಬಂದಿ ನಿಂದಿಸಿದ್ದಾರೆ. ಬಾಯಿಗೆ ಬಂದಂತೆ ಪಿಐ, ಪೊಲೀಸ್ ಸಿಬ್ಬಂದಿಗಳು ಬೈದಾಡಿಕೊಂಡಿದ್ದಾರೆ.

ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲೇ ಪೊಲೀಸರ ಗಲಾಟೆ: ದೂರು ನೀಡಲು ಬಂದವರು ಕಂಗಾಲು
ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲೇ ಪೊಲೀಸರ ಗಲಾಟೆ: ದೂರು ನೀಡಲು ಬಂದವರು ಕಂಗಾಲು
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on: Nov 22, 2024 | 3:49 PM

ಬೆಂಗಳೂರು, ನವೆಂಬರ್​ 22: ಪೊಲೀಸ್ ಇನ್ಸ್​ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಗಳ ನಡುವೆ ಠಾಣೆಯಲ್ಲೇ ಗಲಾಟೆ ಆಗಿರುವಂತಹ ಘಟನೆ ನಗರದ ಸದಾಶಿವನಗರ ಠಾಣೆಯಲ್ಲಿ (Sadashivnagar police station) ನಡೆದಿದೆ. ಇನ್ಸ್​​ಪೆಕ್ಟರ್​ ಗಿರೀಶ್, ಎಎಸ್​ಐ ರಂಗಸ್ವಾಮಿ, ಹೆಡ್​ ಕಾನ್​ಸ್ಟೇಬಲ್​ಗಳಾದ ಕದಂಬ ಮತ್ತು ವಸಂತ ನಡುವೆ ಗಲಾಟೆ ಆಗಿದೆ. ಸದ್ಯ ಪರಸ್ಪರ ನಿಂದನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೊಲೀಸ್ ಠಾಣೆಯಲ್ಲೇ ಮಹಿಳಾ ಸಿಬ್ಬಂದಿ ಮುಂದೆಯೇ ಅವಾಚ್ಯ ಶಬ್ದಗಳಿಂದ ಸಿಬ್ಬಂದಿ ನಿಂದಿಸಿದ್ದಾರೆ. ಬಾಯಿಗೆ ಬಂದಂತೆ ಪಿಐ, ಪೊಲೀಸ್ ಸಿಬ್ಬಂದಿಗಳು ಬೈದಾಡಿಕೊಂಡಿದ್ದಾರೆ. ಪೊಲೀಸರ ಗಲಾಟೆ ನೋಡಿ ದೂರು ಕೊಡಲು ಬಂದವರು ಕಂಗಾಲಾಗಿದ್ದಾರೆ.

ಕರ್ತವ್ಯ ಲೋಪ: ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಎಎಸ್ಐ ಅಮಾನತ್ತು

ಇನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಎಎಸ್ಐ ಅಮಾನತ್ತು ಮಾಡಲಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ನಂಜಪ್ಪ, ಎಎಸ್ಐ ಶಿವಶಂಕರೆಡ್ಡಿ ಸಸ್ಪೆಂಡ್ ಆದ ಅಧಿಕಾರಿಗಳು. ಕರ್ತವ್ಯಲೋಪ ಹಿನ್ನಲೆ ಅಮಾನತು ಗೊಳಿಸಿ ಕೇಂದ್ರ ವಲಯ ಐಜಿಪಿ ಲಾಬು ರಾಮ್ ಆದೇಶ ಹೊರಡಿಸಿದ್ದರು.

ಅ. 29 ರಂದು ಬಂಗಾರಪೇಟೆ ಪೊಲೀಸ್ ಠಾಣೆ ಎಎಸ್ಐ ಫರಿದಾ ಬಾನು ಅವರಿಗೆ ಚಾಕು ಇರಿದ ಪ್ರಕರಣ ಸಂಬಂಧದಲ್ಲಿ ಬಿಹಾರ ಮೂಲದ ಅಜಯ್ ಸಿಂಗ್ ಎನ್ನುವರಿಂದ ಚಾಕು ಇರಿದು ಗಾಯಗೊಳಿಸಿದ್ದರು. ಚಾಕು ಇರಿತಕ್ಕು ಮೊದಲು ಅಜಯ್ ಸಿಂಗ್ ಅವರನ್ನು ಪೊಲೀಸರು ಠಾಣೆಗೆ ಕರೆತಂದು ವಾಪಾಸ್ ಕಳಿಸಿದ್ದರು.

ಇದನ್ನೂ ಓದಿ: ಕಾರ್ಯಪ್ಪ, ತಿಮ್ಮಯ್ಯಗೆ ಅವಮಾನಿಸಿ ಪೋಸ್ಟ್: ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಪಾನಮತ್ತನಾಗಿ ಚಾಕು ಹಿಡಿದು ಓಡಾಡಿದ ಆರೋಪಿ ಆಜಯಸಿಂಗ್ ಅವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ಬಿಟ್ಟು ಕಳಿಸಿದ್ದರು. ಇನ್ನು ಅದೇ ದಿನ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಎಎಸ್ಐ ಫರಿದಾ ಬಾನು ಅವರ ಕೈಗೆ ಇರಿದು ಗಾಯಗೊಳಿದ್ದು, ಈ ಬಗ್ಗೆ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಕೇಂದ್ರ ವಲಯ ಐಜಿಪಿ ಲಾಬು ರಾಮ್ ಅವರು ಸಿಪಿಐ ನಂಜಪ್ಪ ಮತ್ತು ಎಎಸ್ ಐ ಶಿವಕುಮಾರ್ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು