ಕೃಷಿ ಭೂಮಿಯಲ್ಲಿ ಕೋಳಿ ಸಾಕಾಣಿಕೆ ವಾಣಿಜ್ಯ ಚಟುವಟಿಕೆಯಲ್ಲ: ಹೈಕೋರ್ಟ್ ಆದೇಶ
ಕೃಷಿ ಭೂಮಿಯಲ್ಲಿ ಕೋಳಿ ಸಾಕಾಣಿಕೆ ವಾಣಿಜ್ಯ ಚಟುವಟಿಕೆಯಲ್ಲ. ಹೀಗಾಗಿ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡವೆಂದು ತೆರಿಗೆ ವಿಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಕೋಳಿ ಸಾಕಾಣಿಕೆಗಾಗಿ ಕೃಷಿ ಭೂಮಿ ಪರಿವರ್ತನೆ ಅಗತ್ಯವಿಲ್ಲ ಎಂದು ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಬೆಂಗಳೂರು, ಸೆ.22: ಕೃಷಿ ಭೂಮಿಯಲ್ಲಿ ಕೋಳಿ ಸಾಕಾಣಿಕೆ ವಾಣಿಜ್ಯ ಚಟುವಟಿಕೆಯಲ್ಲ. ಹೀಗಾಗಿ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡವೆಂದು ತೆರಿಗೆ ವಿಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. ಕೋಳಿ ಸಾಕಾಣಿಕೆಗಾಗಿ ಕೃಷಿ ಭೂಮಿ ಪರಿವರ್ತನೆ ಅಗತ್ಯವಿಲ್ಲ ಎಂದು ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ನರಸಿಂಹಮೂರ್ತಿ ಎಂಬುವರು ತಮ್ಮ ಕೃಷಿ ಜಮೀನಿನಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಕಟ್ಟಡಕ್ಕೆ ಸೊಂಡೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಅವರು 59,551 ರೂ. ತೆರಿಗೆ ಕಟ್ಟಿದ್ದರು. ಹೀಗಾಗಿ ಅವರು ನಿರಾಕ್ಷೇಪಣ ಪತ್ರ ಕೋರಿದ್ದರು.
ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಬಳಕೆಗೂ ವಯೋಮಿತಿ ನಿಗದಿಪಡಿಸಿ: ಕೇಂದ್ರಕ್ಕೆ ಸರ್ಕಾರಕ್ಕೆ ಹೈಕೋರ್ಟ್ ಸಲಹೆ
ಕೃಷಿ ಭೂಮಿಯಲ್ಲಿನ ಕೋಳಿ ಸಾಕಾಣಿಕೆ ಕಟ್ಟಡ ವಾಣಿಜ್ಯ ಕಟ್ಟಡವಾಗುವುದಿಲ್ಲ. ಹೀಗಾಗಿ ವಾಣಿಜ್ಯ ಕಟ್ಟಡವೆಂದು ತೆರಿಗೆ ವಿಧಿಸುವಂತಿಲ್ಲ ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ, ಹಣ ಹಿಂದಿರುಗಿಸಲು ಸೊಂಡೆಕೊಪ್ಪ ಗ್ರಾಮ ಪಂಚಾಯತ್ಗೆ ಸೂಚನೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ