ಬೆಂಗಳೂರು, ಮೇ 1: ರಾಜ್ಯ ರಾಜಕೀಯದಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಮಾತಿನ ಜಟಾಪಟಿಗೆ ವೇದಿಕೆಯಾಗಿದೆ. ಕಾಂಗ್ರೆಸ್ ನಾಯಕರು ಇದೇ ವಿಚಾರವನ್ನ ಮುಂದಿಟ್ಟುಕೊಂಡು, ಮೈತ್ರಿ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ. ಡಿಕೆ ಸಹೋದರರಂತೂ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪವನ್ನೇ ಮಾಡಿದ್ದಾರೆ. ಇದೀಗ ಡಿಕೆ ಸಹೋದರರ ಆರೋಪಕ್ಕೆ ಕುಮಾರಸ್ವಾಮಿ (HD Kumaraswamy) ಕೆಂಡಮಂಡಲರಾಗಿದ್ದು, ಪ್ರಜ್ವಲ್ ರೇವಣ್ಣನ ಡ್ರೈವರ್ ಆಗಿದ್ದ ಕಾರ್ತಿಕ್ನನ್ನ ಮಲೆಷ್ಯಾಗೆ ಕಳಿಸಿದ್ಯಾರು ಎಂದು ಪ್ರಶ್ನಿಸುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಡ್ರೈವರ್ ವಿಡಿಯೋ ರಿಲೀಸ್ ಮಾಡಿದ್ನಲ್ವಾ? ಆತ ಮಾತನಾಡಿರುವ ವಿಡಿಯೋ ಯಾರು ಮಾಡಿದ್ದು? ನಿನ್ನೆ ಅವನ ಕೈಯಲ್ಲಿ ವಿಡಿಯೋ ಬಿಟ್ಟಿದ್ರು, ಏನ್ ಹೇಳಿಕೆ ಕೊಟ್ಟಾ, ದೇವರಾಜ್ ಕೈಯಲ್ಲಿ ಪೆನ್ಡ್ರೈವ್ ಕೊಟ್ಟಿದ್ದೆ ಅಂತಾ ಹೇಳಿದ್ದ. ಆದರೆ ಇಂದು ಬೆಳಗ್ಗೆ ಈ ಚಿಲ್ಲರೆ ಸಹೋದರರು ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತಾ ಹೇಳಿಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಎಸ್‌ಐಟಿ ನೋಟಿಸ್: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್, ಎಷ್ಟು ದಿನ?
ದೇವರಾಜ್ ಮೊದಲು ನನ್ನನ್ನು ಭೇಟಿಯಾಗಿದ್ದಾನೆಂದು ಈ 420ಗಳು ಹೇಳಿದ್ದಾರೆ. ಎಲ್ಲಿಂದ ವಿಡಿಯೋ ಮಾಡಿ ಬಿಟ್ಟಿದ್ದಾನೆ ಅದನ್ನು ಮೊದಲು ತಿಳಿದುಕೊಳ್ಳಿ. ಸುಲಭವಾಗಿ ನಮ್ಮನು ಕೆಣಕಿದರೆ ನಾವು ಸುಮ್ಮನೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಿಂದ ಪಕ್ಷಕ್ಕಾಗಿರುವ ಮುಜುಗರದ ಬಗ್ಗೆ ಮಾತುಕತೆ ನಡೆಸಲು ಹೆಚ್.ಡಿ.ದೇವೇಗೌಡ ನಿವಾಸಕ್ಕೆ ಹೆಚ್.ಡಿ.ರೇವಣ್ಣ ಮತ್ತು ಹೆಚ್ಡಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ, ಎಸ್‌ಐಟಿ ನೋಟಿಸ್ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮೊನ್ನೆ ಮನೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಒಂದು ಕೆಸ್ಆರ್ಪಿ ತುಕಡಿ ಸೇರಿ 50ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:53 pm, Wed, 1 May 24