AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದನದಲ್ಲಿ ಅಂಗಿ ಬಿಚ್ಚಿದ ಸಂಗಮೇಶ್​ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಶಾಸಕ ಆರಗ ಜ್ಞಾನೇಂದ್ರ

ಕಾಂಗ್ರೆಸ್ ಪ್ರತಿಭಟನೆ ನಡೆಸಿದ ವೇಳೆ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಲಾಗಿದೆ‌ ಎಂದು ಹಕ್ಯುಚ್ಯುತಿ ಮಂಡಿಸಿದ್ದು, ಹಕ್ಕುಚ್ಯುತಿ ಬಗ್ಗೆ ಇಂದು ಸದನದಲ್ಲಿ ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇದನ್ನು ಹಕ್ಕುಚ್ಯುತಿ ಸಮಿತಿಗೆ ಕಳಿಸುವುದಾಗಿ ತಿಳಿಸಿದರು.

ಸದನದಲ್ಲಿ ಅಂಗಿ ಬಿಚ್ಚಿದ ಸಂಗಮೇಶ್​ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಶಾಸಕ ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
Skanda
| Updated By: ganapathi bhat|

Updated on: Mar 09, 2021 | 2:06 PM

Share

ಬೆಂಗಳೂರು: ವಿಧಾನಸಭೆಯಲ್ಲಿ ಒಂದು ರಾಷ್ಟ್ರ – ಒಂದು ಚುನಾವಣೆ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​ ಅಂಗಿ ಬಿಚ್ಚಿದ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಕ್ಕುಚ್ಯುತಿ ಮಂಡಿಸಿದರು. ಕಾಂಗ್ರೆಸ್ ಪ್ರತಿಭಟನೆ ನಡೆಸಿದ ವೇಳೆ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಲಾಗಿದೆ‌ ಎಂದು ಹಕ್ಯುಚ್ಯುತಿ ಮಂಡಿಸಿದ್ದು, ಹಕ್ಕುಚ್ಯುತಿ ಬಗ್ಗೆ ಇಂದು ಸದನದಲ್ಲಿ ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇದನ್ನು ಹಕ್ಕುಚ್ಯುತಿ ಸಮಿತಿಗೆ ಕಳಿಸುವುದಾಗಿ ತಿಳಿಸಿದರು.

ಆದರೆ, ಇದಕ್ಕೆ ಆಕ್ಷೇಪ ಎತ್ತಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಗಮೇಶ್‌ರನ್ನು ಈಗಾಗಲೇ ಸಸ್ಪೆಂಡ್ ಮಾಡಲಾಗಿದೆ. ಮತ್ತೇಕೆ ಹಕ್ಕುಚ್ಯುತಿಗೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಒಬ್ಬ ಶಾಸಕನ ಕುಟುಂಬದ ಮೇಲೆ ಕೇಸ್ ಹಾಕಿದ್ದಾರೆ. ಏಳು ಜನರ ಮೇಲೆ ಸುಳ್ಳು ದೂರು ದಾಖಲಾಗಿದೆ. ಈ ಕಾರಣಕ್ಕಾಗಿ ಅವರು ಗಮನ ಸೆಳೆಯಲು ಹಾಗೆ ಮಾಡಿದ್ದಾರೆ. ಹಿಂದೆ ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡಿದ್ರು ಆಗ ಅವರನ್ನು ಅಮಾನತು ಮಾಡಿದ್ರಾ? ಅಂದಮೇಲೆ ಈಗ ಸಂಗಮೇಶ್‌ರನ್ನು ಏಕೆ ಸಸ್ಪೆಂಡ್ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ಆಗ ಮಧ್ಯ ಪ್ರವೇಶಿಸಿದ ಗೂಳಿಹಟ್ಟಿ ಶೇಖರ್​, ಅಂದು ನಾನು ಅಂಗಿ ಹರಿದುಕೊಂಡಿರಲಿಲ್ಲ, ವಿಧಾನಸೌಧಕ್ಕೆ ಬರುವ ಮುನ್ನವೇ ಅದು ಹರಿದು ಹೋಗಿತ್ತು ಎಂದು ಪ್ರತ್ಯುತ್ತರಿಸಿದರು.

ಅಷ್ಟೇ ಅಲ್ಲದೇ, ಸಂಗಮೇಶ್​ ಇಲ್ಲಿ ಇಲ್ಲದಿರುವಾಗ ಅವರು ಸಮರ್ಥನೆ ಮಾಡಿಕೊಳ್ಳುವುದು ಹೇಗೆ? ಇದು ನಮ್ಮ ನಿಯಾಮವಳಿಗೆ ವಿರುದ್ಧವಾಗಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದ ಸಿದ್ದರಾಮಯ್ಯ ಸಿಟ್ಟು ಹೊರಹಾಕಿದರು. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹಕ್ಕುಚ್ಯುತಿ ಬಗ್ಗೆ ಸಮರ್ಥಿಸಿಕೊಂಡರು. ಇದಕ್ಕೆ ವಿಧಾನಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜೊತೆಗೆ ಕಾಂಗ್ರೆಸ್ ಸದಸ್ಯರು ಸಿಡಿ ಸಿಡಿ ಎಂದು ಜೋರಾಗಿ ಕೂಗಿದ ಘಟನೆಯೂ ನಡೆದಿದೆ.

ಇದನ್ನೂ ಓದಿ: ವಿಧಾನಸೌಧ ಯಡಿಯೂರಪ್ಪಂದು ಅಲ್ಲ, ಕಾಗೇರಿದೂ ಅಲ್ಲ; ಶಾಸಕ ಸಂಗಮೇಶ್​ರನ್ನು ಹೌಸ್ ಒಳಗೆ ಬಿಡ್ರಿ: ಸಿದ್ದರಾಮಯ್ಯ ಗುಡುಗು

ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಕಾಂಗ್ರೆಸ್​ ಶಾಸಕ ಬಿ.ಕೆ.ಸಂಗಮೇಶ್ ಒಂದು ವಾರಗಳ ಕಾಲ ಅಮಾನತು