
ಮೈಸೂರು, ಜೂನ್ 03: ಖ್ಯಾತ ಕಾನೂನು ತಜ್ಞ ಪ್ರೊ. ಅಜ್ಜಪ್ಪ (95) (Prof. Ajjappa) ಅವರು ವಯೋಸಹಜವಾಗಿ ಇಂದು ವಿಧಿವಶರಾಗಿದ್ದಾರೆ (passed away). ಮೈಸೂರಿನ ಕುವೆಂಪು ನಗರದ ಅನಿಕೇತನ ರಸ್ತೆಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಜ್ಜಪ್ಪ ಮೂಲತಃ ದಾವಣಗೆರೆ ಜಿಲ್ಲೆಯ ಡಿ ದುರ್ಗ ಗ್ರಾಮದವರು. ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಕೀಲರಾಗಿ ಸೇವೆಸಲ್ಲಿರುವ ಅವರು ಬಡವರ ಪರ ಧ್ವನಿಯಾಗಿದ್ದರು. ಜೊತೆಗೆ ಕಾನೂನು ವಿಚಾರವಾಗಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಕಿರಿಯ ವಕೀಲರಿಗೆ ಮಾರ್ಗದರ್ಶಕರಾಗಿದ್ದರು. ಇಂದು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.