ಮೆಸೇಜ್ ಇದ್ದರಷ್ಟೇ ಕೊರೊನಾ ಲಸಿಕೆ: 50 ವರ್ಷ ಮೇಲ್ಪಟ್ಟವರ ಮಾಹಿತಿ ಸಂಗ್ರಹಕ್ಕೆ ಮುಂದಾದ ಬಿಬಿಎಂಪಿ
ಕೊರೊನಾ ಲಸಿಕೆಗೆ ಸಂಬಂಧಿಸಿದ ವೆಬ್ಸೈಟ್ನಿಂದ ಜನರ ಮೊಬೈಲ್ ನಂಬರ್ಗೆ ಲಸಿಕೆ ಸ್ವೀಕರಿಸುವಂತೆ ಬಿಬಿಎಂಪಿ ವತಿಯಿಂದ ಸಂದೇಶ ಹೋಗಲಿದೆ. ಆದರೆ, ಸಾರ್ವಜನಿಕರು ವೆಬ್ಸೈಟ್ನಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ.
ಬೆಂಗಳೂರು: ನಗರದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆಗಳೂ ಆಗಿವೆ. ಸರ್ಕಾರದಿಂದ ಆದೇಶ ಬಂದ ತಕ್ಷಣವೇ ಲಸಿಕೆ ನೀಡುವ ಕಾರ್ಯಕ್ರಮ ಶುರುವಾಗಲಿದೆ. ಆದರೆ, ಸಾರ್ವಜನಿಕರೆಲ್ಲರಿಗೂ ಏಕಕಾಲಕ್ಕೆ ಲಸಿಕೆ ವಿತರಣೆ ಆಗುವುದಿಲ್ಲ. ಬದಲಾಗಿ, ಯಾರಿಗೆ ಬಿಬಿಎಂಪಿ ವತಿಯಿಂದ ಮೆಸೇಜ್ ಹೋಗಿರುತ್ತದೋ ಅವರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಬಿಬಿಎಂಪಿ ಉನ್ನತ ಮೂಲಗಳು ಟಿವಿ9ಗೆ ಮಾಹಿತಿ ನೀಡಿವೆ.
ಕೊರೊನಾ ಲಸಿಕೆಗೆ ಸಂಬಂಧಿಸಿದ ವೆಬ್ಸೈಟ್ನಿಂದ ಜನರ ಮೊಬೈಲ್ ನಂಬರ್ಗೆ ಲಸಿಕೆ ಸ್ವೀಕರಿಸುವಂತೆ ಸಂದೇಶ ಹೋಗಲಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು ಮತದಾರರ ಪಟ್ಟಿ ಆಧಾರದ ಮೇಲೆ 50 ವರ್ಷ ಮೇಲ್ಪಟ್ಟವರ ಮಾಹಿತಿ ಕಲೆ ಹಾಕಲಿದ್ದಾರೆ.
ನಂತರ ಅವರ ಮೊಬೈಲ್ ನಂಬರ್ ಪಡೆದು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಆ ನಂಬರ್ಗಳಿಗೆ ಕೊರೊನಾ ಲಸಿಕೆ ಯಾವ ಜಾಗದಲ್ಲಿ, ಯಾವ ಸಮಯದಲ್ಲಿ ವಿತರಣೆ ಆಗಲಿದೆ ಎಂಬ ವಿವರಗಳನ್ನು ರವಾನಿಸಲಾಗುವುದು. ಆದರೆ, ಸಾರ್ವಜನಿಕರು ವೆಬ್ಸೈಟ್ನಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಲಸಿಕೆ ಹಂಚಿಕೆಗೆ ಸಿದ್ಧವಾಗಿರುವ ಬಿಬಿಎಂಪಿ, ಮೊದಲ ಹಂತದಲ್ಲಿ 1ಲಕ್ಷದ 60 ಸಾವಿರ ಕೊರೊನಾ ಹೆಲ್ತ್ ವಾರಿಯರ್ಸ್ಗೆ ಲಸಿಕೆ ವಿತರಿಸಲಿದೆ. 2ನೇ ಹಂತದಲ್ಲಿ ಪೊಲೀಸ್, ಹೋಮ್ ಗಾರ್ಡ್, ಬಿಬಿಎಂಪಿ ಸಿಬ್ಬಂದಿ ಸೇರಿದಂತೆ ಕೊರೊನಾ ಫ್ರಂಟ್ಲೈನ್ ವಾರಿಯರ್ಸ್ಗೆ ನೀಡಲಾಗುವುದು ಮತ್ತು 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಲಸಿಕೆ ವಿತರಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಕೊವಿಶೀಲ್ಡ್ ಹೆಸರಿಗೆ ಆಕ್ಷೇಪ: ಸೆರಮ್ ವಿರುದ್ಧ ಕೋರ್ಟ್ ಮೊರೆ ಹೋದ ಕ್ಯೂಟಿಸ್ ಬಯೋಟೆಕ್ ಕಂಪನಿ