ಕೊಲೆಗಡುಕರಿಗೆ ಶರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡಿ; ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಉಗ್ರ ಭಾಷಣ

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಯಲ್ಲಿ ಬಿಜೆಪಿಯಿಂದ ಕೊಲೆ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ಕೊಲೆಗಡುಕರಿಗೆ ಶರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡಿ; ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಉಗ್ರ ಭಾಷಣ
ಶಾಸಕ ರಘುಪತಿ ಭಟ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 27, 2022 | 3:10 PM

ಉಡುಪಿ: ಕಠೋರ ಮುಸ್ಲಿಮರು ಶರಿಯತ್ ಕಾನೂನು ಪಾಲಿಸಲು ತಯಾರಿರಲಿ. ಹರ್ಷನನ್ನು ಕೊಂದವರನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಲು ಅವಕಾಶ ಕೊಡಬೇಕು. ಕೊಲೆಗಡುಕರಿಗೆ ಶರಿಯತ್ ಕಾನೂನು (Shariat Law) ಪ್ರಕಾರ ಶಿಕ್ಷೆ ನೀಡುತ್ತೀರಾ ಎಂದು ಶಾಸಕ ರಘುಪತಿ ಭಟ್ ಉಗ್ರ ಭಾಷಣ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಯಲ್ಲಿ ಬಿಜೆಪಿಯಿಂದ ಕೊಲೆ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಇದೇ ವೇಳೆ ಉಗ್ರವಾಗಿ ಭಾಷಣ ಮಾಡಿದ ಶಾಸಕ ರಘುಪತಿ ಭಟ್,  ಶರಿಯತ್ ಪ್ರಕಾರ ಶಿಕ್ಷೆ ನೀಡಿದರೆ ಹಿಜಾಬ್ ಧರಿಸಲು ಅವಕಾಶ ಕೊಡಬಹುದು. ಕಠಿಣ ಶಿಕ್ಷೆ ಬೇಡ ತರಗತಿಯಲ್ಲಿ ಹಿಜಬ್ ಬೇಕು ಎಂದರೆ ಅದು ಆಗೂದಿಲ್ಲ. ಭಾರತ ದೇಶದ ಗಾಳಿ, ನೀರು, ಅನ್ನ ತಿನ್ನುತ್ತಿದ್ದೀರಿ. ಹಿಜಬ್ ವಿಚಾರದ ನಿಲುವೇನು? ಹರ್ಷ ಕೊಲೆಯಲ್ಲಿ ನಿಲುವೇನು? ದುಬೈ ಸೌದಿಗಳಲ್ಲಿ ಶರಿಯತ್ ಕಾನೂನು ಇದ್ದರೂ ಆಧುನಿಕತೆಯನ್ನು ಒಪ್ಪಿಕೊಳ್ಳಲಾಗುತ್ತಿದೆ. ಹಿಂದೂಗಳ ಕೆಲ ಪದ್ಧತಿ ಕಾಲ ಕಾಲಕ್ಕೆ ಬದಲಾವಣೆಯಾಗಿದೆ. ನಮ್ಮ ವಿದ್ವಾಂಸರು ಸತಿ ಸಹಗಮನ, ಬಾಲ್ಯವಿವಾಹ, ಅಸ್ಪೃಶ್ಯತೆ ಅಸಮಾನತೆಯನ್ನು ತೊಡೆದುಹಾಕಿದ್ದಾರೆ. ಶರಿಯತ್ ಕಾನೂನು ಒಪ್ಪುವುದಾದರೆ ಎಲ್ಲವನ್ನೂ ಮುಸ್ಲೀಮರಿಗೆ ಕಡ್ಡಾಯ ಮಾಡಿ ನಾವು ಭಾರತದ ಸಂವಿಧಾನ ಒಪ್ಪುವವರು. ಸಾಕಷ್ಟು ಒಳ್ಳೆಯ ಮುಸ್ಲೀಮರು ಸಂವಿಧಾನ ಒಪ್ಪುತ್ತಾರೆ. ಕ್ಲಾಸ್ ರೂಮಲ್ಲಿ ಹಿಜಬ್ ಬೇಕು ಅನ್ನುವವರಿಗೆ ಶರಿಯತ್ ಕಾನೂನು ಜಾರಿಗೆ ತನ್ನಿ. ಕೊಲೆ, ಅತ್ಯಾಚಾರ, ಭಯೋತ್ಪಾದನೆ ಮಾಡಿದಾಗ ಶರಿಯತ್ ಬೇಡ್ವಾ? ಕಠೋರ ಮುಸ್ಲಿಮರು ಈಗಲೇ ಹೇಳಿಕೆಯನ್ನು ನೀಡಬೇಕು. ಅಪರಾಧ ಮಾಡಿದಾಗ ಭಾರತದ ಸಂವಿಧಾನ ಸುಪ್ರೀಂ ಕೋರ್ಟ್ ನೆನಪಾಗುತ್ತದೆ. ಕಾಲೇಜಿನ, ತರಗತಿಯ ಶಿಸ್ತು ಪಾಲಿಸುವ ಮುಸಲ್ಮಾನರಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ. ಕಾಂಗ್ರೆಸ್ ಪಕ್ಷ ಪಲಾಯನ ಮಾಡಬೇಡಿ, ನಿಮ್ಮ ನಿಲುವು ಸ್ಪಷ್ಟಪಡಿಸಿ ಎಂದು ಉಗ್ರವಾಗಿ ಭಾಷಣ ಮಾಡಿದ್ದಾರೆ.

ಹರ್ಷಾ ಮನೆಗೆ ಮಲೆನಾಡು ವೀರಶೈವ ಮಠಾಧೀಶರ ಭೇಟಿ:

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತರ ಹರ್ಷಾ ಮನೆಗೆ ಮಲೆನಾಡು ವೀರಶೈವ ಮಠಾಧೀಶರ ಪರಿಷತ್ತು ಸ್ವಾಮೀಜಿಗಳು ಭೇಟಿ ನೀಡಿದರು. ಶಿವಮೊಗ್ಗದ ಬೆಕ್ಕಿನ ಕಲ್ಮಠ್ ಸ್ವಾಮೀಜಿ ನೇತೃತ್ವದಲ್ಲಿ ಮಲೆನಾಡಿನ 13 ಮಠಗಳ ಸ್ವಾಮೀಜಿಗಳು ಭೇಟಿ ನೀಡಿದ್ದು, ಹರ್ಷ ಕುಟುಂಬಕ್ಕೆ ಸಾಂತ್ವನ ಮತ್ತು ಧೈರ್ಯ ತುಂಬಿದ್ದಾರೆ. ಇದೇ ರೀತಿಯಾಗಿ ನಿನ್ನೆ ಸಂಸದ ಪ್ರತಾಪ್ ಸಿಂಹ ಕೂಡ ಹರ್ಷ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಜೊತೆಗೆ 5ಲಕ್ಷ ರೂ. ಪರಿಹಾರವನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ:

ಉಕ್ರೇನ್​​ನಿಂದ ಸಾವಿರಾರು ಜನರನ್ನು ಮರಳಿ ಕರೆತರಲು ಕೇಂದ್ರ ಹಗಲಿರುಳು ಶ್ರಮಿಸುತ್ತಿದೆ: ಮೋದಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ