‘ಒಂದು ರೂಪಾಯಿಯೂ ಖರ್ಚಿಲ್ಲದೆ ಅವರನ್ನು ಮಂತ್ರಿ ಮಾಡ್ತೀನಿ’

|

Updated on: Nov 15, 2019 | 12:30 PM

ಬೆಂಗಳೂರು: ರಾಣಿಬೆನ್ನೂರಿನಿಂದ ಆರ್.ಶಂಕರ್ ಸ್ಪರ್ಧೆ ಮಾಡಬೇಕು ಅಂತಾ ಆಸೆ ಪಟ್ಟಿದ್ದು ನಿಜ. ಆದರೆ ಅದರದೇ ಆದ ವಿಶೇಷ ಕಾರಣಗಳಿಂದ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಒಂದು ರೂಪಾಯಿ ಖರ್ಚು ಇಲ್ಲದೆ ಅವರನ್ನು ಎಂಎಲ್​ಸಿ ಮಾಡಿ ಮಂತ್ರಿ ಮಾಡ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆರ್. ಶಂಕರ್ ಹಾಗು ಅವರ ಪತ್ನಿ ಜೊತೆ ಮಾತನಾಡಿದ್ದೇನೆ. ಸಂತೋಷದಿಂದ ಯಾರು ಕಣದಲ್ಲಿ ಇಳಿದ್ರೂ ಬೆಂಬಲಿಸಿ, ಅವರ ಪರ ಕೆಲಸ ಮಾಡುವುದಾಗಿ ಆರ್.ಶಂಕರ್ ಮತ್ತು ಅವರ ಪತ್ನಿ ತಿಳಿಸಿದ್ದಾರೆ. ಎಂಎಲ್​ಸಿ ಮಾಡಿ ಅವರಿಗೆ ಸಚಿವ […]

‘ಒಂದು ರೂಪಾಯಿಯೂ ಖರ್ಚಿಲ್ಲದೆ ಅವರನ್ನು ಮಂತ್ರಿ ಮಾಡ್ತೀನಿ’
Follow us on

ಬೆಂಗಳೂರು: ರಾಣಿಬೆನ್ನೂರಿನಿಂದ ಆರ್.ಶಂಕರ್ ಸ್ಪರ್ಧೆ ಮಾಡಬೇಕು ಅಂತಾ ಆಸೆ ಪಟ್ಟಿದ್ದು ನಿಜ. ಆದರೆ ಅದರದೇ ಆದ ವಿಶೇಷ ಕಾರಣಗಳಿಂದ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಒಂದು ರೂಪಾಯಿ ಖರ್ಚು ಇಲ್ಲದೆ ಅವರನ್ನು ಎಂಎಲ್​ಸಿ ಮಾಡಿ ಮಂತ್ರಿ ಮಾಡ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಆರ್. ಶಂಕರ್ ಹಾಗು ಅವರ ಪತ್ನಿ ಜೊತೆ ಮಾತನಾಡಿದ್ದೇನೆ. ಸಂತೋಷದಿಂದ ಯಾರು ಕಣದಲ್ಲಿ ಇಳಿದ್ರೂ ಬೆಂಬಲಿಸಿ, ಅವರ ಪರ ಕೆಲಸ ಮಾಡುವುದಾಗಿ ಆರ್.ಶಂಕರ್ ಮತ್ತು ಅವರ ಪತ್ನಿ ತಿಳಿಸಿದ್ದಾರೆ. ಎಂಎಲ್​ಸಿ ಮಾಡಿ ಅವರಿಗೆ ಸಚಿವ ಸ್ಥಾನ ನೀಡೋ ಜವಾಬ್ದಾರಿ ನನ್ನದು ಅಂತ ಭರವಸೆ ಕೊಟ್ಟಿದ್ದೇನೆ.

ನಾನು ಖುರ್ಚಿಗೆ ಅಂಟಿಕೊಂಡವನಲ್ಲ: 
ಇದೇ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ನನ್ನ ಜೀವನದಲ್ಲಿ ನಾನು ಯಾವತ್ತೂ ಕುರ್ಚಿಗೆ ಅಂಟಿಕೊಂಡವನಲ್ಲ. ಯಾರಿಗೆ ಆಗಲಿ, ನಾನು ಏನು ಭರವಸೆ ಕೊಡ್ತಿನೋ, ಆ ಭರವಸೆಯನ್ನು ನಾನು ಈಡೇರಿಸುತ್ತೇನೆ. ಅದರಂತೆ ಆರ್.ಶಂಕರ್​ಗೆ ಕೊಟ್ಟಿರೋ ಬೇಡಿಕೆ ಕೂಡ ಈಡೇರಿಸುತ್ತೇನೆ ಎಂದರು.