AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿ​ ನಾಯಿ ತಿನ್ನದ ಬಿಸ್ಕತ್ತು​ ಕಾರ್ಯಕರ್ತರಿಗೆ‌ ನೀಡುತ್ತಾರೆ: ಗೋವಾ ಸಿಎಂ ಕಿಡಿ

ಚಿತ್ರದುರ್ಗದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಭೂತ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್​​, ಯುಪಿಎ ಅವಧಿಯಲ್ಲಾದ ಒಂದೇ ಒಂದು ಅಭಿವೃದ್ಧಿ ತೋರಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿ ನಾಯಿಯನ್ನು ಜತೆಗೆ ಕರೆದೊಯ್ಯುತ್ತಾರೆ. ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತರಿಗೆ‌ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ​ ನಾಯಿ ತಿನ್ನದ ಬಿಸ್ಕತ್ತು​ ಕಾರ್ಯಕರ್ತರಿಗೆ‌ ನೀಡುತ್ತಾರೆ: ಗೋವಾ ಸಿಎಂ ಕಿಡಿ
ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Mar 07, 2024 | 6:46 PM

Share

ಚಿತ್ರದುರ್ಗ, ಮಾರ್ಚ್​ 7: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ (Rahul Gandhi) ನಾಯಿಯನ್ನು ಜತೆಗೆ ಕರೆದೊಯ್ಯುತ್ತಾರೆ. ನಾಯಿ ತಿನ್ನದ ಬಿಸ್ಕತ್ತು ಕಾರ್ಯಕರ್ತರಿಗೆ‌ ನೀಡುತ್ತಾರೆ ಎಂದು ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್​ ವಾಗ್ದಾಳಿ ಮಾಡಿದ್ದಾರೆ. ಲೋಕಸಭಾ ಕ್ಷೇತ್ರದ ಬಿಜೆಪಿ ಭೂತ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯ ಸಂಗತಿ. ರೈತರಿಗೆ ನೀಡುವ ಸಬ್ಸಿಡಿ ಮತ್ತಿತರೆ ಯೋಜನೆಗಳು ನೀಡಿಲ್ಲ. ಸಿಎಂ ಸಿದ್ಧರಾಮಯ್ಯ ಘೋಷಿಸಿದ ಗ್ಯಾರಂಟಿ ಪೂರ್ಣಗೊಳಿಸಿಲ್ಲ. ಬದಲಿಗೆ ಪ್ರಧಾನಿ ಮೋದಿ ನೀಡಿದ ಗ್ಯಾರಂಟಿ ಪೂರ್ಣಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿ ಮನೆಗೆ ನೀರು, ವಿದ್ಯುತ್, ಶೌಚಾಲಯ ಮೋದಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ, ಮುದ್ರಾ ಯೋಜನೆಯಂತಹ ಗ್ಯಾರಂಟಿ ಯೋಜನೆ ಮೋದಿ ನೀಡಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆ ಮೋದಿ ಯೋಜನೆ, ಸಾಮಾಜಿಕ ನ್ಯಾಯ ನೀಡುವ ಕೆಲಸ ಮೋದಿ ಸರ್ಕಾರ ಮಾಡಿದೆ. ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಕಾರ್ಯಗಳು ಮಾಡಲಾಗುತ್ತಿವೆ.

ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ನಾಯಕರ ಒತ್ತಾಯ, ಅಂತಿಮವಾಗಿ ಕಣಕ್ಕಿಳಿಯುತ್ತಾರಾ ಪುಟ್ಟರಾಜು?

ತ್ರಿಬಲ್ ತಲಾಕ್ ರದ್ದುಗೊಳಿಸಿ ಮಹಿಳಾ ನ್ಯಾಯ ನೀಡಿದ್ದು ಮೋದಿ ಸರ್ಕಾರ. ಮಹಿಳೆಯರಿಗೆ ಮೀಸಲಾತಿ ನೀಡುವ ಯೋಜನೆ ಮೋದಿ ಸರ್ಕಾರ ತಂದಿದೆ. ಯುವಸಮೂಹಕ್ಕೆ ಸ್ಕಿಲ್ ಇಂಡಿಯಾ ಯೋಜನೆ, ಕಿಸಾನ್ ಫಸಲ್‌ ವಿಮಾ, ಬ್ಯಾಂಕ್ ಸಾಲ ಸೇರಿ ಅನೇಕ ಮೋದಿ ಗ್ಯಾರಂಟಿ ಯೋಜನೆಗಳು. ದೇಶಾದ್ಯಂತ ಗರೀಬ್ ಕಲ್ಯಾಣಕ್ಕಾಗಿ 5ಕೆಜಿ ಅಕ್ಕಿ ಉಚಿತ ಪಡಿತರ ಯೋಜನೆ, ಅಂತ್ಯೋದಯ, ಗ್ರಾಮೋದಯ, ಸರ್ವೋದಯ ಬಿಜೆಪಿ,‌ ಮೋದಿ ತತ್ವ.

ಸಿದ್ಧರಾಮಯ್ಯಗೆ ಸವಾಲು ಹಾಕಿದ ಪ್ರಮೋದ್ ಸಾವಂತ್​ 

ಸಿಎಂ ಸಿದ್ಧರಾಮಯ್ಯ ಅವರಿಗೆ ನಾನು ಸವಾಲು ಹಾಕುತ್ತೇನೆ. ಯುಪಿಎ ಅವಧಿಯಲ್ಲಾದ ಒಂದೇ ಒಂದು ಅಭಿವೃದ್ಧಿ ತೋರಿಸಲಿ. ಮೋದಿ ಸರ್ಕಾರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ತೋರಿಸುತ್ತೇನೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರವಾಗಿದೆ. ಕರ್ನಾಟಕದ ಲೂಟಿ ಸರ್ಕಾರ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿಗಾಗಿ ಸರ್ಕಾರ. ಜನರಿಗಾಗಿ ಯಾವುದೇ ಯೋಜನೆ ತಲುಪಿಸಲು ಆಗುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗಾಗಿ ದೆಹಲಿಯಲ್ಲಿ ತಡ ರಾತ್ರಿವರೆಗೂ ಸಭೆ: 5 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಕೊಕ್ ಸಾಧ್ಯತೆ

ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ನಡುವೆ ಜಿದ್ದಾಜಿದ್ದಿ ನಡೆದಿದೆ. ಇನ್ನೂ ಐವರು ಸಿಎಂ ಆಗಲು ಸರದಿಯಲ್ಲಿ ನಿಂತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಾರಕಿಹೊಳಿಗೆ ಸಿಎಂ ಬಯಕೆ ಇದೆ. ತಾನು ಸೂಪರ್ ಸಿಎಂ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಶಾಡೋ ಸಿಎಂ ಯತೀಂದ್ರ ಸಿದ್ಧರಾಮಯ್ಯ. ಬಿಜೆಪಿಯಲ್ಲಿ ಒಬ್ಬರೇ ದೇಶದ ಪ್ರಧಾನಿ ನರೇಂದ್ರ ಮೋದಿ. ಯುಪಿಎ ಆಡಳಿತದ ಹತ್ತು ವರ್ಷದಲ್ಲಿ ಹಗರಣಗಳ ಸರಣಿ ನಡೆದಿತ್ತು. ಮೋದಿ ಆಡಳಿತದಲ್ಲಿ ಯಾವುದೇ ಹಗರಣಗಳು ಇಲ್ಲ. ಯುಪಿಎ ಅವಧಿಯಲ್ಲಿ ಅನೇಕರು ಒಳಗೆ ಹೋಗಿದ್ದರು, ಕೆಲವರು ಹೊರಗೆ ಬಂದಿದ್ದಾರೆ. ಈಗ ಹೊರಗೆ ಇರುವವರೂ ಸಹ ಒಳಗೆ ಹೋಗುವವರಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಚುನಾವಣೆಗೆ ಮುನ್ನ ಘೋಷಿಸಿದ ಒಂದು ಗ್ಯಾರಂಟಿಯೂ ಪೂರ್ಣಗೊಳಿಸಿಲ್ಲ. ಕರ್ನಾಟಕದ ಜನ ಈಗ ಪಶ್ಚಾತ್ತಾಪ ಪಡುವಂತಾಗಿದೆ. ಬೈ ಮಿಸ್ಟೇಕ್ ಕಾಂಗ್ರೆಸ್​​ಗೆ ಆಡಳಿತಕ್ಕೆ ಅವಕಾಶ ನೀಡಿದ ಭಾವನೆ ಜನರಲ್ಲಿದೆ. ಮತ್ತೊಮ್ಮೆ ಡಬಲ್‌ಇಂಜಿನ್ ಸರ್ಕಾರ ಶೀಘ್ರ ಬರುವ ವಿಶ್ವಾಸವಿದೆ. 70ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲಾಗದ ಸಾಧನೆ ಮೋದಿ ಕಾಲದಲ್ಲಾಗಿದೆ. ಎಲ್ಲಾ ವಿಭಾಗದಲ್ಲೂ ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ. ರಾಜ್ಯದ 28ಕ್ಕೆ 28 ಕ್ಷೇತ್ರದಲ್ಲಿ ಎನ್​ಡಿಎಗೆ, ಮೋದಿಗೆ ಗೆಲುವಾಗಲಿದೆ. ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬಿಜೆಪಿಯ ಮೂಲಮಂತ್ರ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:29 pm, Thu, 7 March 24