AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಾಯುಕ್ತ ಕಸ್ಟಡಿಯಲ್ಲಿರುವ ಅಜಿತ್​​ ರೈ ರಾಯಚೂರಗೆ ವರ್ಗ​: ಸಾರ್ವಜನಿಕರಿಂದ ಭಾರಿ ವಿರೋಧ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಕಸ್ಟಡಿಯಲ್ಲಿರುವ ತಹಶೀಲ್ದಾರ್ ಅಜೀತ್ ರೈ ಅವರ ವರ್ಗಾವಣೆಗೆ ರಾಯಚೂರು ಜಿಲ್ಲೆಯ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಲೋಕಾಯುಕ್ತ ಕಸ್ಟಡಿಯಲ್ಲಿರುವ ಅಜಿತ್​​ ರೈ ರಾಯಚೂರಗೆ ವರ್ಗ​: ಸಾರ್ವಜನಿಕರಿಂದ ಭಾರಿ ವಿರೋಧ
ಅಜಿತ್​ ರೈ (ಎಡಚಿತ್ರ) ಸಾರ್ವಜನಿಕರ ವಿರೋಧ (ಬಲಚಿತ್ರ)
TV9 Web
| Edited By: |

Updated on:Jul 05, 2023 | 12:02 PM

Share

ರಾಯಚೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ (Lokayukta) ಕಸ್ಟಡಿಯಲ್ಲಿರುವ (Ajit Rai) ತಹಶೀಲ್ದಾರ್ (Tehsildar) ಅಜೀತ್ ರೈ ಅವರ ವರ್ಗಾವಣೆಗೆ ರಾಯಚೂರು ಜಿಲ್ಲೆಯ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ಸಿರವಾರ ತಾಲೂಕಿಗೆ ತಹಶೀಲ್ದಾರ್ ಗ್ರೇಡ್-1 ನಿಂದ ತಹಶಿಲ್ದಾರ್ ಗ್ರೇಡ್-2 ಹುದ್ದೆಗೆ ಹಿಂಬಡ್ತಿಯಾಗಿ ಅಜಿತ್ ರೈ ವರ್ಗಾವಣೆಯಾಗಿದ್ದರು. ಇದಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಜಿತ್​ ರೈ ಅಮಾನತ್ತಿನಲ್ಲಿದ್ದರೂ ಜೂನ್ 30 ರಂದು ನೇಮಕಾತಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ. ಇನ್ನು ತಹಶಿಲ್ದಾರ್ ಅಜಿತ್ ರೈ  ಅವರ 7 ದಿನಗಳ ಪೊಲೀಸ್ ಕಸ್ಟಡಿ ಇಂದು (ಜು.05) ಅಂತ್ಯವಾಗಲಿದೆ.

ಇದನ್ನೂ ಓದಿ: ಅನುಕಂಪದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದ ತಹಶೀಲ್ದಾರ್ ಅಜಿತ್ ರೈ ಕೋಟಿ ಒಡೆಯ, ಇಲ್ಲಿದೆ ಮನೆಯಲ್ಲಿ ಸಿಕ್ಕ ವಸ್ತುಗಳ ವಿವರ

ಲೋಕಾಯುಕ್ತರು ಜೂನ್ 28 ರಂದು ಬೆಂಗಳೂರಿನ ಸಹಕಾರ ನಗರದಲ್ಲಿರುವ ಅಜಿತ್ ರೈ ಅವರ ನಿವಾಸ ಮತ್ತು ಇತರ 10 ಸ್ಥಳಗಳ ಮೇಲೆ ದಾಳಿ ನಡೆಸಿ 40 ಲಕ್ಷ ನಗದು, 3.5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳು ಮತ್ತು ಹಲವಾರು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಇತ್ತೀಚೆಗಷ್ಟೇ ಕೆಆರ್ ಪುರಂ ತಹಶೀಲ್ದಾರ್ ಹುದ್ದೆಗೆ ಅಜಿತ್ ವರ್ಗಾವಣೆಯಾಗಿದ್ದು, ಹುದ್ದೆಯ ಜವಾಬ್ದಾರಿ ಸ್ವೀಕರಿಸಲು ಕಾಯುತ್ತಿದ್ದರು ಎನ್ನಲಾಗಿತ್ತು. ಆದರೆ ಲೋಕಾಯುಕ್ತ ಬಲೆಗೆ ಬಿದ್ದ ಹಿನ್ನೆಲೆ ಹಿಂಬಡ್ತಿಯಾಗಿ ರಾಯಚೂರಿಗೆ ವರ್ಗಾವಣೆಯಾಗಿದ್ದಾರೆ.

ಅಜಿತ್​ ರೈಗೆ ಸಂಬಂಧಿಸಿದ 10 ಸ್ಥಳಗಳಿಗೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳನ್ನು, ಐಷಾರಾಮಿ ಕಾರು ಮತ್ತು ಬೈಕ್​ಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿದ್ದವು. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:22 am, Wed, 5 July 23