ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಮಾತನಾಡುತ್ತಾರೆ; ಶಾಸಕ ಹುಲಿಗೇರಿ ಎದುರು ಮಹಿಳಾ ಇಂಜಿನಿಯರ್ ಕಣ್ಣೀರು!
ಶಾಸಕ ಡಿ.ಎಸ್.ಹುಲಿಗೇರಿಗೆ ಇಂಜಿನಿಯರ್ ಅಸ್ಮ ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಮತ್ತು ಅವರ ಮಗನ ವಿರುದ್ಧ ದೂರು ನೀಡಿದ್ದು, ಪುರಸಭೆ ಅಧ್ಯಕ್ಷರಿಗೆ ಶಾಸಕ ಹುಲಿಗೇರಿ ತರಾಟೆಗೆ ತೆಗೆದುಕೊಂಡರು.
ರಾಯಚೂರು: ಶಾಸಕ ಡಿ.ಎಸ್.ಹುಲಿಗೇರಿ (MLA Hoolageri) ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತಿತ್ತು. ಈ ವೇಳೆ ಶಾಸಕ ಹುಲಿಗೇರಿ ಎದುರು ಮಹಿಳಾ ಇಂಜಿನಿಯರ್ ಕಣ್ಣೀರು ಹಾಕಿದ್ದಾರೆ. ಈ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪುರಸಭೆಯಲ್ಲಿ ನಡೆದಿದೆ. ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಮತ್ತು ಅವರ ಮಗನ ವಿರುದ್ಧ ಕಣ್ಣೀರಿಡುತ್ತಲೇ ಶಾಸಕರಿಗೆ ದೂರು ನೀಡಿದ ಮಹಿಳಾ ಇಂಜಿನಿಯರ್, ಅಧ್ಯಕ್ಷೆ ಗದ್ಯಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಮಾತನಾಡುತ್ತಾರೆ. ಅವರ ಮಗ ಪುರಸಭೆಗೆ ಬಂದು ಏಕವಚನದಲ್ಲಿ ಮಾತನಾಡುತ್ತಾನೆ ಅಂತ ಆರೋಪಿಸಿದ್ದಾರೆ.
ಶಾಸಕ ಡಿ.ಎಸ್.ಹುಲಿಗೇರಿಗೆ ಇಂಜಿನಿಯರ್ ಅಸ್ಮ ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಮತ್ತು ಅವರ ಮಗನ ವಿರುದ್ಧ ದೂರು ನೀಡಿದ್ದು, ಪುರಸಭೆ ಅಧ್ಯಕ್ಷರಿಗೆ ಶಾಸಕ ಹುಲಿಗೇರಿ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಜೊತೆ ಈ ರೀತಿಯ ವರ್ತನೆ ಮಾಡಿದರೆ ನಿನ್ನ ಮಗನಿಗೆ ಜೈಲಿಗೆ ಕಳಿಸುತ್ತೇನೆ ಅಂತ ಶಾಸಕ ಡಿ.ಎಸ್.ಹುಲಿಗೇರಿ ಪುರಸಭೆ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದರು. ಈ ಬಾರಿ ಒಂದು ಸಲ ಎಸ್ಕ್ಯೂಸ್ ಮಾಡಿ, ಇನ್ನೊಂದು ಸಲ ಹೀಗೆ ಆದರೆ ಕೇಸ್ ಮಾಡಿ ಅಂತ ಇಂಜಿನಿಯರ್ ಅಸ್ಮಗೆ ಶಾಸಕ ಹುಲಿಗೇರಿ ಹೇಳಿದರು.
ಮುಂದೆ ಇಟ್ಟರೆ ತಿನ್ನುತ್ತೀಯಾ ಎಂದು ಪುರಸಭೆ ಅಧ್ಯಕ್ಷೆ ಗದ್ಯಮ್ಮ ಇಂಜಿನಿಯರ್ಗೆ ಅವಾಜ್ ಹಾಕಿದ್ದರು. ಈ ಬಗ್ಗೆ ಇಂಜಿನಿಯರ್ ಶಾಸಕರಿಗೆ ತಿಳಿಸಿ ಅವರ ಮುಂದೆ ಕಣ್ಣೀರಾಕಿದ್ದಾರೆ. ಹೀಗಾಗಿ ಪುರಸಭೆ ಅಧ್ಯಕ್ಷೆ ಗದ್ಯಮ್ಮಗೆ ಶಾಸಕ ಡಿ.ಎಸ್.ಹುಲಿಗೇರಿ ಈ ರೀತಿ ಮೊತ್ತೊಮ್ಮೆ ಆದರೆ ಜೈಲಿಗೆ ಕಳುಹಿಸುತ್ತೇನೆ ಅಂತ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ
ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ; ಬಿಎಂಟಿಸಿ ಸೇವೆಯಿಂದ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರು ವಜಾ
ಕಾರ್ಖಾನೆ ರಸ್ತೆಗಾಗಿ ಅಡಕೆ ಮರಗಳ ತೆರವು; ರೈತರಿಗೆ ನೋಟಿಸ್ ನೀಡದೆ ತಿಪಟೂರು ತಹಶಿಲ್ದಾರ್ ಏಕಾಏಕಿ ಕಾರ್ಯಾಚರಣೆ
(A woman engineer is weeping in front of MLA Hoolageri at raichur)