ರಾಯರ 350ನೇ ಆರಾಧನಾ ಮಹೋತ್ಸವ; ಹಿಂದೂ ಧರ್ಮದ ಸಂದೇಶ ಸಾರುವ ಅತ್ಯಾಕರ್ಷಕ ಮ್ಯೂಸಿಯಮ್ ಲೋಕಾರ್ಪಣೆ

ಬೃಹದಾಕಾರದ ಬೃಂದಾವನ, ಸುತ್ತಲೂ ದೇವಾನುದೇವತೆಗಳ ವಿಗ್ರಹಗಳು, ಪ್ರತಿ ವಿಗ್ರಹದ ಸುತ್ತಲೂ ಧಾರ್ಮಿಕ ಸಂದೇಶಗಳು, ಇದುವೇ ಗುರು ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ಮಂತ್ರಾಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಮ್ಯೂಸಿಯಮ್.

ರಾಯರ 350ನೇ ಆರಾಧನಾ ಮಹೋತ್ಸವ; ಹಿಂದೂ ಧರ್ಮದ ಸಂದೇಶ ಸಾರುವ ಅತ್ಯಾಕರ್ಷಕ ಮ್ಯೂಸಿಯಮ್ ಲೋಕಾರ್ಪಣೆ
ಮಂತ್ರಾಲಯದಲ್ಲಿ ಭವ್ಯ ಮ್ಯೂಸಿಯಂ ರಾಯರ ಭಕ್ತರ ಗಮನ ಸೆಳೆಯುತ್ತಿದ್ದು, ಮ್ಯೂಸಿಯಂ ಹಿಂದೂ ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರುತ್ತಿದೆ.
Follow us
TV9 Web
| Updated By: preethi shettigar

Updated on: Aug 23, 2021 | 1:52 PM

ರಾಯಚೂರು: ಕಲಿಯುಗದ ಕಲ್ಪವೃಕ್ಷ ಕಾಮಧೇನು ಗುರು ರಾಘವೇಂದ್ರ ಮಹಾಸ್ವಾಮಿಗಳು ಬೃಂದಾವನಸ್ಥರಾದ ಮಂತ್ರಾಲದಲ್ಲೀಗ ರಾಯರ 350ನೇ ಆರಾಧನೆ ಮಹೋತ್ಸವ ಸಂಭ್ರಮ. ರಾಯರ ಆರಾಧನೆಯ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ವಿಶೇಷ ರೀತಿಯ ಮ್ಯೂಸಿಯಮ್ ನಿರ್ಮಿಸಲಾಗಿದೆ. ಮಂತ್ರಾಲಯಕ್ಕೆ ಬರುವ ರಾಯರ ಭಕ್ತರನ್ನು ಸದ್ಯ ಆ ಮೂಸಿಯಮ್ ಗಮನ ಸೆಳೆಯುತ್ತಿದೆ.

ಬೃಹದಾಕಾರದ ಬೃಂದಾವನ, ಸುತ್ತಲೂ ದೇವಾನುದೇವತೆಗಳ ವಿಗ್ರಹಗಳು, ಪ್ರತಿ ವಿಗ್ರಹದ ಸುತ್ತಲೂ ಧಾರ್ಮಿಕ ಸಂದೇಶಗಳು, ಇದುವೇ ಗುರು ರಾಘವೇಂದ್ರ ಮಹಾಸ್ವಾಮಿಗಳು ನೆಲೆಸಿರುವ ಮಂತ್ರಾಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಮ್ಯೂಸಿಯಮ್. ಹರಿದಾಸ ಮತ್ತು ಸನಾತನ ಹಿಂದೂ ಧರ್ಮದ ಸಂದೇಶಗಳನ್ನು ಸಾರುವ 950ಕ್ಕೂ ಹೆಚ್ಚು ಫಲಕಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದು ಈ ಮ್ಯೂಸಿಯಮನಲ್ಲಿ ಇಡಲಾಗಿದೆ.

ಪ್ರತಿ ವಿಗ್ರಹದ ಪಕ್ಕದಲ್ಲೂ ಒಂದೊಂದು ಬಗೆಯ ಧಾರ್ಮಿಕ ಸಂದೇಶಗಳನ್ನು ಚಿತ್ರಿಸಲಾಗಿದೆ. ಸುಮಾರು 2 ಕೋಟಿಗೂ ಅಧಿಕ ಮೌಲ್ಯದಲ್ಲಿ ನಿರ್ಮಿಸಲಾದ ಈ ಅತ್ಯದ್ಭುತ ಮ್ಯೂಸಿಯಮ್ ಅನ್ನು ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಲೋಕಾರ್ಪಣೆ ಮಾಡಿದ್ದಾರೆ. ಒಂದೊಮ್ಮೆ ಈ ಮ್ಯೂಸಿಯಮ್ನೊಳಗೆ ಪ್ರವೇಶಿಸಿದರೆ ಸಾಕು, ಹಿಂದೂ ಧರ್ಮದ ಅನೇಕ ಸಂದೇಶಗಳ ಪರಿಚಯವಾಗಲಿದೆ. ಇನ್ನು ಧಾರ್ಮಿಕ ಸಂದೇಶಗಳನ್ನು ಜಗತ್ತಿಗೆ ಸಾರುವ ಸದುದ್ದೇಶದಿಂದಲೇ ಈ ಮ್ಯೂಸಿಯಮ್ ಸ್ಥಾಪಿಸಲಾಗಿದೆ ಎಂದು ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಸುಭುಧೇಂದ್ರ ತೀರ್ಥರು ಹೇಳಿದ್ದಾರೆ.

ಗುರು ರಾಯರ 350ನೇ ಆರಾಧನೆ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಅತ್ಯಂತ ಸರಳ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಕೊವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ಮಾರ್ಗ ಸೂಚಿಗಳನ್ನು ಅನುಸರಿಸಿ ಆರಾಧನೆ ಮಹೋತ್ಸವ ನಡೆಸಲಾಗುತ್ತಿದೆ. ಇನ್ನು ಅತ್ಯಾಕರ್ಷಕವಾದ ಮ್ಯೂಸಿಯಮ್ ಈಗಾಗಲೇ ಲೋಕಾರ್ಪಣೆಯಾಗಿದ್ದು, ನಾಡಿನ ಮೂಲೆ ಮೂಲೆಯಿಂದಲು ಆರಾಧನೆ ವೇಳೆಯಲ್ಲಿ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಮ್ಯೂಸಿಯಮ್ ವೀಕ್ಷಿಸಲು ಶ್ರೀಮಠ ವ್ಯವಸ್ಥೆ ಕಲ್ಪಿಸುತ್ತಿದೆ.

Mantralayam Museum

ಹರಿದಾಸ ದರ್ಶಿನಿ ಮ್ಯೂಸಿಯಂ

ದೇಶ ವಿದೇಶಗಳಿಂದ ಬರುವ ರಾಯರ ಭಕ್ತರಿಗೆ ಈ ಬಾರಿ ವಿಶೇಷ ಕೊಡುಗೆ ರೂಪದಲ್ಲಿ ರಾಯರ ಅನೇಕ ಸಂದೇಶಗಳನ್ನು ಸಹ ಮ್ಯೂಸಿಯಮ್ನಲ್ಲಿ ನೋಡಲು ಅವಕಾಶ ಕಲ್ಪಿಸಲಾಗಿದೆ. ಎರಡು ಅಂತಸ್ತಿನ ಸಭಾ ಮಂಟಪವನ್ನು ಸಂಪೂರ್ಣವಾಗಿ ಮ್ಯೂಸಿಯಮ್ ಆಗಿ ಪರಿವರ್ತಿಸಲಾಗಿದೆ. ಇನ್ನು ಮಂತ್ರಾಲಯಕ್ಕೆ ಬರುವ ಭಕ್ತರು ಈ ಮ್ಯೂಸಿಯಮ್ ವೀಕ್ಷಿಸಿ ಜಗತ್ತಿಗೆ ಶಾಂತಿ ಸಂದೇಶ ಹೊತ್ತೊಯಲಿ ಎನ್ನುವುದು ಶ್ರೀಮಠದ ಉದ್ದೇಶವಾಗಿದೆ ಎಂದು ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಸುಭುಧೇಂದ್ರ ತೀರ್ಥರು ತಿಳಿಸಿದ್ದಾರೆ.

ಗುರು ರಾಯರ ಆರಾಧನೆ ಮಹೋತ್ಸವ ಹಿನ್ನೆಲೆಯಲ್ಲಿ ಶ್ರಿಮಠದಲ್ಲಿ ಹತ್ತು ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಪೈಕಿ ಹರಿದಾಸ ಮ್ಯೂಸಿಯಮ್ ಅತ್ಯಂತ ಆಕರ್ಷಣೆಯಾಗಿದೆ. ಈಗಾಗಲೆ ರಾಯರ ಭಕ್ತರು ಮ್ಯೂಸಿಯಮ್ ವೀಕ್ಷಣೆಗೆ ಮುಗಿ ಬಿಳುತ್ತಿದ್ದಾರೆ. ಈ ನಡುವೆ ಕೊವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಶ್ರೀಮಠ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇಲ್ಲಿ ಗಮನಾರ್ಹ ಸಂಗತಿ. ಅದೇನೇ ಇರಲಿ ಈ ಬಾರಿಯ ರಾಯರ ಆರಾಧನೆ ಹಲವಾರು ವಿಶೇಷತೆಗಳಿಂದ ಕೂಡಿದ್ದು, ಇಲ್ಲಿನ ಭಕ್ತರ ಗಮನ ಸೆಳೆಯುತಿದೆ.

ವರದಿ: ಸಿದ್ದು ಬಿರಾದಾರ್

ಇದನ್ನೂ ಓದಿ:

ರಾಯರ ಸನ್ನಿಧಿಯಲ್ಲಿ ಭಕ್ತರ ಗಮನ ಸೆಳೆದ ಹರಿದಾಸ ದರ್ಶಿನಿ ಮ್ಯೂಸಿಯಂ

ಮಂತ್ರಾಲಯದಲ್ಲಿ ಗುರು ರಾಯರ 350ನೇ ಆರಾಧನೆ; ಆ.21ರಿಂದ 27ರ ವರೆಗೆ ಸಪ್ತ ರಾತ್ರೋತ್ಸವ