ಯುವತಿ ಹೆಸರಿನ ಖಾತೆ ಮೂಲಕ ಅವಹೇಳನಕಾರಿ ಪೋಸ್ಟ್​​: ಎರಡು ಕೋಮಿನ ನಡುವೆ ಗಲಾಟೆ

ಇನ್​ಸ್ಟಾಗ್ರಾಂನಲ್ಲಿ ​ಅನ್ಯಕೋಮಿನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್​ಹೆಚ್​ ಕ್ಯಾಂಪ್ ಎರಡರಲ್ಲಿ ನಡೆದಿದೆ.

ಯುವತಿ ಹೆಸರಿನ ಖಾತೆ ಮೂಲಕ ಅವಹೇಳನಕಾರಿ ಪೋಸ್ಟ್​​: ಎರಡು ಕೋಮಿನ ನಡುವೆ ಗಲಾಟೆ
ಎರಡು ಕೋಮಿನ ನಡುವೆ ಗಲಾಟೆ
Follow us
| Updated By: ವಿವೇಕ ಬಿರಾದಾರ

Updated on: Jul 17, 2023 | 10:45 AM

ರಾಯಚೂರು ಜು.17: ಇನ್​ಸ್ಟಾಗ್ರಾಂನಲ್ಲಿ (Instagram) ಅನ್ಯಕೋಮಿನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ (Post) ಹಾಕಿದ್ದಕ್ಕೆ ಎರಡು ಕೋಮಿನ ನಡುವೆ ಗಲಾಟೆ (Clash) ನಡೆದಿರುವ ಘಟನೆ ಜಿಲ್ಲೆಯ ಸಿಂಧನೂರು (Sindhanuru) ತಾಲೂಕಿನ ಆರ್​ಹೆಚ್​ ಕ್ಯಾಂಪ್ ಎರಡರಲ್ಲಿ ನಡೆದಿದೆ. ಹಿಂದೂ ಯುವಕರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಬರ್, ಶಾಮೀದ್, ತಾಜುದ್ದೀನ್, ಸಮೀರ್ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವತಿ ಹೆಸರಿನ ಖಾತೆ ಮೂಲಕ ಇನ್​ಸ್ಟಾಗ್ರಾಮ್​​ನಲ್ಲಿ ಅನ್ಯಕೋಮಿನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ನಂತರ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಅಲ್ಲದೇ ಈ ಪೋಸ್ಟ್​​ ಸ್ಥಳೀಯ ವಾಟ್ಸಪ್​​ಗ್ರೂಪ್​ಗಳಲ್ಲೂ ಹರದಾಡಿದೆ. ಹೀಗಾಗಿ ಈ ಪೋಸ್ಟ್​ ಯಾರು ಹಾಕಿದ್ದಾರೆ ಎಂದು ಅನ್ಯಕೋಮಿನ ಯುವಕರು ವಿಚಾರಿಸಲೆಂದು ಆರ್​ಹೆಚ್​ ಕ್ಯಾಂಪ್​ಗೆ ಆಗಮಿಸಿದ್ದಾರೆ.

ಇದನ್ನೂ ಓದಿ: RTPS: ರಾಯಚೂರು ವಿದ್ಯುತ್ ಉತ್ಪಾದನಾ ಕೇಂದ್ರದ 3 ಘಟಕಗಳು ಬಂದ್; ಅನಧಿಕೃತ ಲೋಡ್​ ಶೆಡ್ಡಿಂಗ್ ಆರೋಪ​​

ವಿಚಾರಿಸಲೆಂದು ಬಂದ ಅನ್ಯಕೋಮಿನ ಯುವಕರಲ್ಲಿ ಓರ್ವ ಆರ್​ಹೆಚ್​ ಕ್ಯಾಂಪ್ ಎರಡರ ದುರ್ಗಾದೇವಿ ದೇವಸ್ಥಾನದಲ್ಲಿ ಮಲಗಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದು ಗಲಾಟೆಯಾಗಿ, ಹಿಂದೂ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಈ ಹಿನ್ನೆಲೆ ಹಿಂದೂ ಯುವಕರು ಅನ್ಯಕೋಮಿನ 20 ಜನರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ