ರಾಯಚೂರು ವಿವಿಯಲ್ಲಿ ಕೋಟ್ಯಾಂತರ ರೂ. ಅನುದಾನ ದುರ್ಬಳಕೆ ಆರೋಪ: ಕುಲಪತಿ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 14, 2023 | 7:56 PM

ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಕಡಿಮೆ ಬೆಲೆಯ ಸಿಸಿಟಿವಿಗಳು, ಸ್ಮಾರ್ಟ್ ಟಿವಿಗಳನ್ನ ದುಪ್ಪಟ್ಟು ದರಕ್ಕೆ ಖರೀದಿಸುವ ಮೂಲಕ ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ಚುರುಕುಕೊಂಡಿದ್ದು, ಫೈನಲ್ ರಿಪೋರ್ಟ್​​ ಸಲ್ಲಿಕೆ ಮಾತ್ರ ಬಾಕಿ ಇದೆ.

ರಾಯಚೂರು ವಿವಿಯಲ್ಲಿ ಕೋಟ್ಯಾಂತರ ರೂ. ಅನುದಾನ ದುರ್ಬಳಕೆ ಆರೋಪ: ಕುಲಪತಿ ಹೇಳಿದ್ದಿಷ್ಟು
ರಾಯಚೂರು ವಿವಿ
Follow us on

ರಾಯಚೂರು: ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ರಾಯಚೂರಿನಲ್ಲೊಂದು ಭ್ರಷ್ಟಾಚಾರ ಆರೋಪ ಪ್ರಕರಣ ಸಂಚಲನ ಸೃಷ್ಟಿಸಿದೆ. ರಾಯಚೂರು ವಿಶ್ವ ವಿದ್ಯಾಲಯ (Raichur University) ದಲ್ಲಿ ಕಡಿಮೆ ಬೆಲೆಯ ಸಿಸಿಟಿವಿಗಳು, ಸ್ಮಾರ್ಟ್ ಟಿವಿಗಳನ್ನ ದುಪ್ಪಟ್ಟು ದರಕ್ಕೆ ಖರೀದಿಸುವ ಮೂಲಕ ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ಚುರುಕುಕೊಂಡಿದ್ದು, ಫೈನಲ್ ರಿಪೋರ್ಟ್​​ ಸಲ್ಲಿಕೆ ಮಾತ್ರ ಬಾಕಿ ಇದೆ.

2022-23ರ ಸಾಲಿನ ಸರ್ಕಾರ ವಿವೇಚಲಾ ನಿಧಿಯಡಿಯಲ್ಲಿ ರಾಯಚೂರು ವಿಶ್ವ ವಿದ್ಯಾಲಯಕ್ಕೆ ಸಿಸಿಟಿವಿ ಕ್ಯಾಮೆರಾಗಳು, ಸ್ಮಾರ್ಟ್ ಟಿವಿಗಳು ಹಾಗೂ ಪೀಠೋಪಕರಣಗಳ ಖರೀದಿಗೆ 9.85 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ 7.38 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿತ್ತಂತೆ. ಆ ಪೈಕಿ ಒಟ್ಟು 2.79 ಕೋಟಿ ಹಣವನ್ನ ಬರೀ ಸಿಸಿಟಿವಿಗಳು, ಸ್ಮಾರ್ಟ್ ಟಿವಿಗಳು ಹಾಗೂ ಅವುಗಳಿಗೆ ಬೇಕಾಗುವ ಉಪಕರಣಗಳಿಗಾಗಿಯೇ ಖರ್ಚು ಮಾಡುವ ಮೂಲಕ ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿತ್ತು.

ರಾಯಚೂರು ವಿವಿ, ಮಾರುಕಟ್ಟೆ ದರಕ್ಕಿಂತ ಒನ್ ಟು ಡಬಲ್ ರೀತಿ ಹೆಚ್ಚಿನ ದರದಲ್ಲಿ ಸಿಸಿಟಿವಿ ಹಾಗೂ ಸ್ಮಾರ್ಟ್ ಟಿವಿಗಳನ್ನ ಖರೀಸಿದೆ ಎನ್ನುವ ಗಂಭೀರ ಆರೋಪ ಸಂಚಲಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಕೆಕೆಆರ್​ಡಿಬಿ(ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ) ಈ ಬಗ್ಗೆ ಖುದ್ದು ರಾಯಚೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಮಿಟಿ ರಚಿಸಿ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: ಬಿಸಿಲುನಾಡು ರಾಯಚೂರಿನಲ್ಲಿ ಬರದ ಛಾಯೆ; ಒಣಗುತ್ತಿರುವ ಹತ್ತಿ ಬೆಲೆ ಕಾಪಾಡಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋದ ರೈತ

ಈ ಬಗ್ಗೆ ಖುದ್ದು ರಾಯಚೂರು ವಿವಿ ಕುಲಪತಿ ಡಾ.ಹರೀಶ್ ರಾಮಸ್ವಾಮಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ವಿಚಾರಣೆ ನಡೆತಿದೆ. ನಾವು ಮುಕ್ತವಾಗಿದ್ದೇವೆ. ನಾನು ನಮ್ಮ ಕೆಲಸವನ್ನ ನಿಯಮಬಾಹಿರವಾಗಿ ಮಾಡಲ್ಲ. ಜೆಮ್ ಪೋರ್ಟಲ್ ಅಲ್ಲಿ ಎಲ್ಲವನ್ನ ಖರೀಸಿದಿಸಲಾಗಿದೆ. ಜಮ್ ಅಲ್ಲಿ ತೆಗೆದುಕೊಳ್ಳಾಗಿದೆ ಅಂದರೆ ಅರಿತು ಕೊಳ್ಳಬೇಕು.

ಅದು ಕೇಂದ್ರ ಸರ್ಕಾರದ ಪೋಟರ್ಲ್ ಆಗಿರೋದ್ರಿಂದ ಅಲ್ಲಿ ನಿಯಮದನುಸಾರವಾಗಿ ಖರಿದಿಸಲಾಗಿದೆ.  ತನಿಖಾ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ ಅಂತ ಹೇಳಿದ್ದಾರೆ.

ಕೆಕೆಆರ್​ಡಿಬಿ ಆದೇಶದ ಮೆರೆಗೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ನೇತೃತ್ವದ ಕಮಿಟಿ ರಾಯಚೂರು ವಿವಿಗೆ ಭೇಟಿ ನೀಡಿದೆ. ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಅಲ್ಲಿನ ಕುಲಪತಿಗಳು, ರಿಜಿಸ್ಟಾರ್ ಸೇರಿ ಇನ್ನಿತರ ಉನ್ನತ ಹುದ್ದೆಯಲ್ಲಿರುವವರನ್ನು ವಿಚಾರಣೆ ನಡೆಸಲಾಗಿದೆ. ಅಲ್ಲದೇ ಸಿಸಿಟಿವಿಗಳು, ಸ್ಮಾರ್ಟ್​ಫೋನ್​ಗಳು, ಉಪಕರಣಗಳ ಖರೀದಿ ಬಗೆಗಿನ ದಾಖಲೆಗಳು, ಬಿಲ್​ಗಳನ್ನು ಪರಿಶೀಲನೆ  ಮಾಡಲಾಗಿದೆ.

ರಾಯಚೂರು ವಿವಿ ಖರೀದಿಸಿರುವ ಉಪಕರಣಗಳು ಯಾವೆಲ್ಲಾ ಕಂಪೆನಿಗಳಿಗೆ ಸೇರಿದ್ದು, ಯಾವೆಲ್ಲಾ ತಂತ್ರಜ್ಞಾನಗಳನ್ನ ಹೊಂದಿದೆ ಅನ್ನೋದರ ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಪ್ರತಿಕ್ರಿಯಿಸಿದ್ದು, ಕೆಕೆಆರ್​ಟಿಬಿ ಆದೇಶದನ್ವಯ ತನಿಖೆ ಕೈಗೊಳ್ಳಲಾಗಿದೆ. ಮೆಗಾ ಹಾಗೂ ಜನರಲ್ ಡೆವೆಲಾಪ್ ಮೆಂಟ್​ಗಾಗಿ ಬಿಡಗಡೆಯಾಗಿರೊ ಅನುದಾನದ ಖರ್ಚು ವೆಚ್ಚದ ಬಗ್ಗೆ ತನಿಖೆ ನಡೆಸಲಾಗ್ತಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ಸರ್ಕಾರಕ್ಕೆ ಮೊಬೈಲ್ ವಾಪಸ್ಸು ನೀಡಲು ತೀರ್ಮಾನ

2.5 ಕೋಟಿ ರೂ. ಬರೀ ಸಿಸಿಟಿವಿಗಳು ಹಾಗೂ ಸ್ಮಾರ್ಟ್ ಟಿವಿಗಳ ಖರೀದಿಗೆ ಬಳಕೆಯಾಗಿರೊ ಆರೋಪವಿದೆ. ಹೀಗಾಗಿ ಉಪಕರಣಗಳ ಖರೀದಿಯ ವಾಸ್ತವತೆಯ ಬಗ್ಗೆ ಪರಿಶೀಲನೆ ನಡೆಸಿ ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ಕೆಕೆಆರ್​ಡಿಬಿಗೆ ವರದಿ ಸಲ್ಲಿಸಲಾಗತ್ತೆ ಎಂದರು.

ರಾಯಚೂರು ವಿವಿಯಲ್ಲಿ ನಡೆದಿದೆ ಎನ್ನಲಾದ ಅನುದಾನ ದುರ್ಬಳಕೆ ವಿಚಾರ ಸಂಚಲಕ್ಕೆ ಕಾರಣವಾಗಿದ್ದು, ಕೂಡಲೇ ತನಿಖಾ ತಂಡ ವಿಚಾರಣೆ ಪೂರ್ಣಗೊಳಿಸಿ, ಕೆಕೆಆರ್​ಡಿಬಿಗೆ ವರದಿ ಸಲ್ಲಿಸುವ ಮೂಲಕ ಸತ್ಯಾಸತ್ಯತೆಯನ್ನ ಹೊರಗೆಳೆಯಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.