ರಾಯಚೂರು: ಕಾಸು ಕೊಟ್ಟರೆ ಮಾತ್ರ ಚಿಕಿತ್ಸೆ; ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ನಿಂದ ರೋಗಿಗಳ ಬಳಿ ಹಣಕ್ಕೆ ಒತ್ತಾಯ
ರೋಗಿ ಹಣ ಇಲ್ಲ ಅಂದ್ರೂ, ಅವು ಎಲ್ಲಾ ನನಗೆ ಹೇಳಬೇಡ ಎಂಬಂತೆ ಹೇಳಿರುವುದು ತಿಳಿದುಬಂದಿದೆ. ಮೊದಲು ಹಣ ಕೊಡು ಆ ಮೇಲೆ ಚಿಕಿತ್ಸೆ ಎಂದು ನರ್ಸ್ ಹೇಳಿರುವುದಾಗಿ ಆರೋಪ ವ್ಯಕ್ತವಾಗಿದೆ. ನರ್ಸ್ ಲಂಚಾವತಾರದ ವಿಡಿಯೋ ಈಗ ವೈರಲ್ ಆಗಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ರಾಯಚೂರು: ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳ ಬಳಿ ನರ್ಸ್ ಹಣಕ್ಕೆ ಒತ್ತಾಯಿಸುವ ವಿಡಿಯೋ ಒಂದು ವೈರಲ್ ಆಗಿದೆ. ರೋಗಿ ಬಳಿ 100 ರೂಪಾಯಿಗೆ ಬೇಡಿಕೆ ಇಡುವ ವಿಡಿಯೋ ವೈರಲ್ ಆಗಿದ್ದು 50 ರೂಪಾಯಿ ಕೊಡಲು ಹೋದರೆ ಕೇಳದೆ 100 ರೂಪಾಯಿಗೆ ಬೇಡಿಕೆ ಇಟ್ಟಿರುವುದಾಗಿ ಆರೋಪ ಕೂಡ ಕೇಳಿಬಂದಿದೆ. ನರ್ಸ್ ವಿರುದ್ಧ ಕ್ರಮಕ್ಕೆ ಸ್ಥಳೀಯರಿಂದ ಒತ್ತಾಯ ಕೇಳಿಬಂದಿದೆ. ಹಣ ಕೊಟ್ಟರೇ ಮಾತ್ರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಅನ್ನೊ ಆರೋಪ ಇದ್ದು, ರೋಗಿ ಹಣ ಇಲ್ಲ ಅಂದ್ರೂ, ಅವು ಎಲ್ಲಾ ನನಗೆ ಹೇಳಬೇಡ ಎಂಬಂತೆ ಹೇಳಿರುವುದು ತಿಳಿದುಬಂದಿದೆ. ಮೊದಲು ಹಣ ಕೊಡು ಆ ಮೇಲೆ ಚಿಕಿತ್ಸೆ ಎಂದು ನರ್ಸ್ ಹೇಳಿರುವುದಾಗಿ ಆರೋಪ ವ್ಯಕ್ತವಾಗಿದೆ. ನರ್ಸ್ ಲಂಚಾವತಾರದ ವಿಡಿಯೋ ಈಗ ವೈರಲ್ ಆಗಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ತುಮಕೂರು: ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಶಾಸಕರಿಂದ ಸಹಾಯ
ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಶಾಸಕರಿಂದ ಸಹಾಯ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಶಿರಾ ಶಾಸಕ ರಾಜೇಶ್‌ಗೌಡರಿಂದ ಸಹಾಯ ಮಾಡಲಾಗಿದೆ. ಶಿರಾ-ಅಮರಾಪುರ ರಸ್ತೆಯ ಕೊಟ್ಟ ಗೇಟ್ ಬಳಿ ಬೈಕ್ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಾಯಾಗೊಂಡವರನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಲ್ಲಿ ಭೂತರಾಜು, ಓಬಣ್ಣಗೆ ಗಂಭೀರ ಗಾಯವಾಗಿತ್ತು, ಅವರನ್ನು ಶಾಸಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Crime News: ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆಯತ್ನ, ಪುಟ್ಟ ಮಗಳಿಗೂ ಕಿರುಕುಳ; ಆರೋಪಿ ಬಾಬು ಅರೆಸ್ಟ್
ಇದನ್ನೂ ಓದಿ: Tractor accident: ಓವರ್ ಲೋಡ್ ಧಾವಂತದಿಂದ ಟ್ರ್ಯಾಕ್ಟರ್ ಪಲ್ಟಿ -ನಿಶ್ಚಿತಾರ್ಥಕ್ಕೆ ಹೊರಟಿದ್ದ 4 ಮಂದಿ ಸಾವು