ಫೆಬ್ರವರಿ 21-26 ವರೆಗೆ ರಾಯರ ಗುರುವೈಭವೋತ್ಸವ: ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರಗು, ಪ್ರಶಸ್ತಿ ಪ್ರದಾನ
Sri Raghavendra Swamy Matha Mantralayam: ಇದರ ಜೊತೆ ವಿದ್ವಾಂಸರ ಪ್ರವಚಗಳು, ರಾಯರ ಗ್ರಂಥಗಳ ಪಾರಾಯಣಗಳು ನಡೆಯಲಿದೆ. ಈ ಮೂಲಕ ಭಕ್ತರಿಗೆ ಗುರುವೈಭವೋತ್ಸವ ಸುಗ್ಗಿ ಕಾಲದಂತೆ ಭಾಸವಾಗುತ್ತದೆ..
ಭಕ್ತರ ಆರಾಧ್ಯ ದೈವ ಶ್ರೀ ರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವಕ್ಕೆ ದಿನ ಗಣನೆ ಆರಂಭವಾಗಿದೆ… ರಾಯರ 428 ನೇ ಜನ್ಮದಿನೋತ್ಸವ ಇದಾಗಿರೋದ್ರಿಂದ ದೇಶ ವಿದೇಶಗಳಿಂದಲೂ ಭಕ್ತರ ದಂಡೇ ರಾಯರ ಮಠಕ್ಕೆ (Sri Raghavendra Swamy Matha Mantralayam) ಹರಿದು ಬರಲಿದೆ.. ಸ್ವರ್ಗವೇ ಧರೆಗಿಳಿದ ಅನುಭವ ನೀಡೊ ರಾಯರ ಈ ಉತ್ಸವದ ವಿಶೇಷತೆ ಏನು..? ಇಲ್ಲಿದೆ ಮಾಹಿತಿ. ಹೌದು.. ತುಂಗಭದ್ರಾ ನದಿ ತೀರದಲ್ಲಿ ನೆಲೆಸಿರೊ (Raichur) ಶ್ರೀ ರಾಘವೇಂದ್ರ ಮಹಾಸ್ವಾಮಿಗಳ ಲೀಲೆಯೇ ಅಂಥದ್ದು.. ಎಂಥ ಕಠೋರ ಹೃದಯಿ ಆದ್ರೂ ರಾಯರ ಸುಕ್ಷೇತ್ರಕ್ಕೆ ಒಮ್ಮೆ ಕಾಲಿಟ್ಟರೆ ಸಾಕು ಅವರ ಮನಸ್ಸು ಪರಿವರ್ತನೆಯಾಗುತ್ತೆ.. ಇಂತ ಪವಾಡ ಪುರುಷ ರಾಯರಿಗೆ ದೇಶ-ವಿದೇಶಗಳಲ್ಲಿ ಕೋಟ್ಯಾಂತರ ಭಕ್ತರು, ಆರಾಧಕರಿದ್ದಾರೆ (Devotees). ಮಂತ್ರಾಲಯದ ರಾಯರ ಮಠದಲ್ಲಿ ಸಡಗರದ ಗುರುವೈಭವೋತ್ಸವ ಕಾರ್ಯಕ್ರಮ ಜರುಗಲಿದ್ದು, ಪೂರ್ವ ಬಾವಿ ತಯಾರಿಗಳು ನಡೆಯುತ್ತಿವೆ (Spiritual).
ಈ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಹೆಜ್ಜೆ ಇಟ್ಟಲ್ಲೆಲ್ಲಾ ಗತಕಾಲದ ಅನುಭವವಾಗುತ್ತೆ..ವಾದ್ಯ, ವೃಂದಗಳು,ಮೇಳಗಳ ತಾಳಗಳು ಭಕ್ತರ ಗಣವನ್ನು ರೋಮಾಂಚನಗೊಳಿಸುತ್ತೆ..ರಾಯರ 428 ನೇ ಜನ್ಮದಿನೋತ್ಸವದ ಭಾಗವಾಗಿ ಇದೇ ಫೆಬ್ರವರಿ 21 ರಿಂದ 26 ರ ವರೆಗೆ ಗುರುವೈಭವೋತ್ಸವ ಕಾರ್ಯಕ್ರಮ ಜರುಗಲಿದ್ದು, ಮಂತ್ರಾಲಯದ ರಾಯರ ಮಠ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ ಎಂದು ಮಂತ್ರಾಲಯದ ಪೀಠಾಧಿಪತಿ ಡಾ. ಶ್ರೀ ಸುಬುಧೇಂದ್ರ ತೀರ್ಥರು ಮಾಹಿತಿ ನೀಡಿದ್ದಾರೆ.
ರಾಯರ ವರ್ಧಂತಿ ಉತ್ಸವ ಅಂದ್ರೆ ಅವರ 428 ನೇ ಜನ್ಮದಿನೋತ್ಸವ ಇದೇ ಫೆಬ್ರವರಿ 26 ರಂದು ನಡಯಲಿದೆ. ಇದರ ಭಾಗವಾಗಿ ಗುರುವೈಭವೋತ್ಸವ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ.. ಅದರಂತೆ ಈ ವರ್ಷವೂ ಫೆಬ್ರವರಿ 21 ರಿಂದ 26 ರ ವರೆಗೆ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಹ ನೆರವೇರಿಸಲಾಗುತ್ತೆ..
ಇದರಲ್ಲಿ ಪ್ರಮುಖವಾಗಿ ವಾದ್ಯ, ಮೇಳಗಳ ಕಲಾ ತಂಡಗಳ ಪ್ರದರ್ಶನಗಳು ಹೈಲೈಟ್.. ವಿವಿಧ ಭಜನಾ ಮಂಡಳಿಗಳ ಸಮಾವೇಶ, ಸಂಗೀತ, ನೃತ್ಯ, ನೃತ್ಯ ರೂಪಕಗಳು ಸಹ ನಡೆಯಲಿದ್ದು ರಾಯರ ಭಕ್ತರನ್ನ ರೋಮಾಂಚನಗೊಳಿಸಲಿವೆ. ಇದಷ್ಟೇ ಅಲ್ಲ ಮಂತ್ರಾಲಯ ಪೀಠಾಧಿಪತಿ ಡಾ.ಶ್ರೀ ಸುಬುಧೇಂದ್ರ ತೀರ್ಥರ ಮಾರ್ಗದರ್ಶನದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಖುದ್ದು ಶ್ರೀಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇದರ ಜೊತೆ ವಿದ್ವಾಂಸರ ಪ್ರವಚಗಳು, ರಾಯರ ಗ್ರಂಥಗಳ ಪಾರಾಯಣಗಳು ನಡೆಯಲಿದೆ. ಈ ಮೂಲಕ ಭಕ್ತರಿಗೆ ಗುರುವೈಭವೋತ್ಸವ ಸುಗ್ಗಿ ಕಾಲದಂತೆ ಭಾಸವಾಗುತ್ತದೆ.. ಅಷ್ಟೇ ಅಲ್ಲ ಫೆಬ್ರವರಿ 21ರಿಂದ 26 ರವರೆಗೆ ನಡೆಯಲಿರೊ ಶ್ರೀ ಗುರುವೈಭವೋತ್ಸವದ ಪ್ರತಿದಿನ ರಾಯರಿಗೆ ಶ್ರೀಗಳ ನೇತೃತ್ವದಲ್ಲಿ ವಿವಿಧ ವಿಶೇಷ ಪೂಜಾ-ಕೈಂಕರ್ಯಗಳು ಸಹ ನೆರೆವೇರಲಿವೆ. ಒಟ್ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಂತ್ರಾಲಯದಲ್ಲಿ ರಾಯರ ಹುಟ್ಟುಹಬ್ಬದ ಅಂಗವಾಗಿ ಗುರುವೈಭವೋತ್ಸವ ನಡೆಯಲಿದ್ದು ಸಕಲ ರೀತಿಯಲ್ಲಿ ಮಂತ್ರಾಲಯದ ರಾಯರ ಮಠ ಸಿದ್ಧವಾಗಿದೆ.
ವರದಿ: ಭೀಮೇಶ್ ಪೂಜಾರ್, ಟಿವಿ9, ರಾಯಚೂರು