ಆನ್ಲೈನ್ ದೋಖಾ: ಗಣೇಶ ಹಬ್ಬಕ್ಕೆ ಹೊಸ ವ್ಯಾಪಾರ ಆರಂಭಿಸಬಿಸಲು ಸೀರೆ ಆರ್ಡರ್ ಮಾಡಿದ್ದ ದಂಪತಿಗೆ ಮೋಸ
ರಾಯಚೂರಿನ ಮಾನ್ವಿ ಪಟ್ಟಣದ ಮಹಾದೇವ್ ಮತ್ತು ಕಾಳಮ್ಮ ದಂಪತಿಗಳು ಸಾಮಾಜಿಕ ಜಾಲತಾಣದ ಜಾಹೀರಾತಿನಲ್ಲಿ ನೋಡಿದ ಸೀರೆಗಳನ್ನು ಆರ್ಡರ್ ಮಾಡಿದ್ದಾರೆ. 10,000 ರೂ. ಪಾವತಿಸಿ ಸೀರೆಗಳನ್ನು ಆರ್ಡರ್ ಮಾಡಿದ್ದ ಅವರಿಗೆ ಹರಿದ ಮತ್ತು ದುರ್ವಾಸನೆಯ ಸೀರೆಗಳು ಬಂದಿವೆ. ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಅವರು ಮನವಿ ಮಾಡುತ್ತಿದ್ದಾರೆ.

ರಾಯಚೂರು, ಆಗಸ್ಟ್ 27: ಸಾಮಾಜಿಕ ಜಾಲತಾಣದಲ್ಲಿನ (Social Media) ಜಾಹಿರಾತು ನಂಬಿ ಸೀರೆ ಆರ್ಡ್ರ್ ಮಾಡಿದ್ದ ದಂಪತಿ ಮೊಸ ಹೋಗಿದ್ದಾರೆ. ಮನೆಯಲ್ಲೇ ಕುಳಿತು ಸೀರೆ ಬ್ಯುಸಿನೆಸ್ ಮಾಡಬೇಕು, ಗೌರಿ-ಗಣೇಶ ಹಬ್ಬಕ್ಕೆ (Ganesha Festival) ಹೊಸ ವ್ಯಾಪಾರ ಆರಂಭಿಸಬೇಕು ಎಂದು ರಾಯಚೂರಿನ (Raichur) ಮಾನ್ವಿ ಪಟ್ಟಣದ ನಿವಾಸಿ ಮಹಾದೇವ್ ಹಾಗೂ ಕಾಳಮ್ಮ ದಂಪತಿ ಕನಸು ಕಂಡಿದ್ದರು. ಹೀಗಿರುವಾಗ, ದಂಪತಿ ಸಾಮಾಜಿಕ ಜಾಲತಾಣದಲ್ಲಿ 100 ರೂ.ಗೆ 3 ಸಾರಿ ಎಂಬ ಜಾಹಿರಾತು ನೋಡಿದ್ದಾರೆ. ಜಾಹಿರಾತಿದಲ್ಲಿ ಇದ್ದ ಸೀರೆಗಳ ಬಣ್ಣ, ವೆರೈಟಿ ಡಿಸೈನ್ಗಳನ್ನು ನೋಡಿ ಫಿದಾ ಆಗಿದ್ದಾರೆ.
ನಂತರ, ಜಾಹಿರಾತು ನೀಡಿದವರನ್ನು ಸಂಪರ್ಕಿಸಿ, 10 ಸಾವಿರ ರೂ. ಹಣವನ್ನು ಆನ್ಲೈನ್ ಮೂಲಕ ಪೇ ಮಾಡಿ 70 ಸೀರೆ ಆರ್ಡರ್ ಮಾಡಿದ್ದಾರೆ. ಒಂದು ವಾರದ ಬಳಿಕ ಮನೆಗೆ ಬಂದಿದ್ದ ಪಾರ್ಸಲ್ ನೋಡಿ ದಂಪತಿ ಕಕ್ಕಾಬಿಕ್ಕಿಯಾಗಿದ್ದಾರೆ. ಆರ್ಡರ್ ಮಾಡಿದ್ದ ಅಷ್ಟೂ ಸೇರೆಗಳು ಹರಿದು ಹೋಗಿದ್ದವು. ಇದಷ್ಟೇ ಅಲ್ಲದೆ ಸೀರೆಗಳು ದುರ್ವಾಸನೆ ಬರುತ್ತಿದ್ದವು. ಇದರಿಂದ ಕಕ್ಕಾಬಿಕ್ಕಿಯಾದ ದಂಪತಿಗಳು ಆನ್ಲೈನ್ ಮಾರಾಟಗಾರನನ್ನು ಸಂಪರ್ಕಿಸಿದಾಗ ಮಾರಾಟಗಾರ ಬೇಕಾಬಿಟ್ಟಿಯಾಗಿ ಪ್ರತಿಕ್ರಿಯಿಸಿದ್ದಾನೆ. ತಾವು ಮೋಸ ಹೋದ ಬಗ್ಗೆ ದೂರು ನೀಡಲು ಹೋದರೂ ಮಾನ್ವಿ ಠಾಣೆ ಪೊಲೀಸರು ದೂರು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು ಅಂತ ಮಹದೇವ ದಂಪತಿ ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 am, Wed, 27 August 25



