ಕೊರೊನಾ ಮೂರನೇ ಅಲೆ ಮಧ್ಯೆ ಕೆಮ್ಮು, ನೆಗಡಿ, ಕಫ, ಜ್ವರಕ್ಕೆ ಕಂಗಾಲಾದ ರಾಯಚೂರು ಜಿಲ್ಲೆ ಮಕ್ಕಳು, ಪರಿಸ್ಥಿತಿ ಏನು?
ಆತಂಕಕಾರಿ ಕೊರೊನಾ ಮೂರನೆಯ ಅಲೆಯ ಮಧ್ಯೆ ಕೆಮ್ಮು, ನೆಗಡಿ, ಕಫ ಮತ್ತು ಜ್ವರಕ್ಕೆ ರಾಯಚೂರು ಜಿಲ್ಲೆಯ ಮಕ್ಕಳು ಬಸವಳಿದಿದ್ದಾರೆ. ಕೋವಿಡ್ ಮೂರನೇ ಅಲೆ ಮತ್ತು ಓಮಿಕ್ರಾನ್ ಭೀತಿಯ ಮಧ್ಯೆ ನ್ಯುಮೋನಿಯಾ ಕಾಟವೂ ಕಾಡುತ್ತಿದೆ. ಕೊರೊನಾ ಲಕ್ಷಣಗಳು ಹಾಗೂ ನ್ಯುಮೋನಿಯಾ ರೋಗ ಲಕ್ಷಣಗಳು ಒಂದೇ ಆಗಿದ್ದು ರಾಯಚೂರು ಜಿಲ್ಲೆಯ ಶೇಕಡಾ 20 ಮಕ್ಕಳಲ್ಲಿ ನ್ಯುಮೋನಿಯಾ ಲಕ್ಷಣ ಪತ್ತೆಯಾಗಿದೆ.
ರಾಯಚೂರು: ಆತಂಕಕಾರಿ ಕೊರೊನಾ ಮೂರನೆಯ ಅಲೆಯ ಮಧ್ಯೆ ಕೆಮ್ಮು, ನೆಗಡಿ, ಕಫ ಮತ್ತು ಜ್ವರಕ್ಕೆ ರಾಯಚೂರು ಜಿಲ್ಲೆಯ ಮಕ್ಕಳು ಬಸವಳಿದಿದ್ದಾರೆ. ಕೋವಿಡ್ ಮೂರನೇ ಅಲೆ ಮತ್ತು ಓಮಿಕ್ರಾನ್ ಭೀತಿಯ ಮಧ್ಯೆ ನ್ಯುಮೋನಿಯಾ ಕಾಟವೂ ಕಾಡುತ್ತಿದೆ. ಕೊರೊನಾ ಲಕ್ಷಣಗಳು ಹಾಗೂ ನ್ಯುಮೋನಿಯಾ ರೋಗ ಲಕ್ಷಣಗಳು ಒಂದೇ ಆಗಿದ್ದು ರಾಯಚೂರು ಜಿಲ್ಲೆಯ ಶೇಕಡಾ 20 ಮಕ್ಕಳಲ್ಲಿ ನ್ಯುಮೋನಿಯಾ ಲಕ್ಷಣ ಪತ್ತೆಯಾಗಿದೆ.
ಇದು ಮೂರನೇ ಅಲೆಯ ಎಚ್ಚರಿಕೆ ಗಂಟೆ ಇದ್ದಿರಬಹುದು ಎಂದೂ ತಜ್ಞರು ಎಚ್ಚರಿಸಿದ್ದಾರೆ. ಇದೇ 2021 ರ ಎಪ್ರಿಲ್ ನಿಂದ ನವೆಂಬರ್ ವರೆಗಿನ ನ್ಯುಮೋನಿಯಾ ಪ್ರಕರಣಗಳು ರಾಯಚೂರು ಜಿಲ್ಲೆಯಲ್ಲಿ ಒಟ್ಟು 935 ದಾಖಲಾಗಿವೆ.
ಸಿಂಧನೂರು-446 ರಾಯಚೂರು-318 ದೇವದುರ್ಗ-150 ಮಾನ್ವಿ-15 ಲಿಂಗಸುಗೂರು-6 ಕೇಸ್ ದಾಖಲಾಗಿದೆ.
ರೋಗ ನಿರೋಧಕ ಶಕ್ತಿ ಇಲ್ಲದ ಮಕ್ಕಳಿಗೆ ನ್ಯುಮೋನಿಯಾ ಕಂಟಕವಾಗಿದ್ದು, ಬಹುತೇಕ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಫುಲ್ ಆಗಿವೆ. ಈ ಬಗ್ಗೆ ಟಿವಿ9 ಗೆ ಪ್ರತಿಕ್ರಿಯಿಸಿದ ರಿಮ್ಸ್ ಆಸ್ಪತ್ರೆಯ ಮಕ್ಕಳ ತಜ್ಞರು ಕೆಮ್ಮು, ನೆಗಡಿ, ಜ್ವರದಂತಹ ಕೋವಿಡ್ ಲಕ್ಷಣಗಳನ್ನೇ ಈ ನ್ಯುಮೋನಿಯಾ ಸಹ ಹೊಂದಿದೆ. ಜ್ವರ, ಕೆಮ್ಮು, ನೆಗಡಿ ಇದ್ದರೆ ನಿರ್ಲಕ್ಷ್ಯ ಬೇಡ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಂತೆ ಸಲಹೆ ಮಾಡಿದ್ದಾರೆ. ನ್ಯುಮೋನಿಯಾ ಬದಲು ಕೊರೊನಾ ಇದ್ದರೂ ಇರಬಹುದು ಎಂದು ಮಕ್ಕಳ ತಜ್ಞರು ಕಳವಳ ವ್ತಕ್ತಪಡಿಸಿದ್ದಾರೆ.
ಇದನ್ನೂ ಓದಿ
ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್ ಆನಂದ್ ಪುತ್ರಿಯ ಮಸ್ತ್ ಮಾತುಕತೆ
Published On - 9:37 am, Thu, 23 December 21