ರಾಯಚೂರು: ದೇವಸ್ಥಾನ ತೆರವುಗೊಳಿಸಿ, ಶಾಲೆ ನಿರ್ಮಾಣಕ್ಕೆ ಸಂಘಟನೆಗಳ ಪಟ್ಟು; ಕೋಮು ಗಲಭೆ ಆತಂಕ
ರಾಯಚೂರಿನಲ್ಲಿ ವಿವಾದಕ್ಕೆ ಕಾರಣವಾದ ದೇವಸ್ಥಾನ ತೆರವು ಪ್ರಕರಣ. ರಾಯಚೂರು ನಗರದ ಚಂದ್ರಬಂಡಾ ರಸ್ತೆಯ ಸಂತೋಷ ನಗರದಲ್ಲಿರುವ ಸಿಎ ಸೈಟ್ ನಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆ ಆದೇಶಸಿತ್ತು. ಇದೇ ಸ್ಥಳದಲ್ಲಿ ಶಿವ ಲಿಂಗ ದೇವಸ್ಥಾನ ಇದೆ. ಸದ್ಯ ಈಗ ದೇವಸ್ಥಾನ ತೆರವುಗೊಳಿಸಿ ಶಾಲೆ ಕಟ್ಟುವ ವಿಚಾರಕ್ಕೆ ಸಂಘಟನೆಗಳ ನಡುವೆ ಹಗ್ಗ-ಜಗ್ಗಾಟ ನಡೆಯುತ್ತಿದೆ.

ರಾಯಚೂರು, ಫೆ.08; ಲೋಕಸಭಾ ಚುನಾವಣೆ (Lok Sabha Election)ಸಮಯದಲ್ಲೇ ಗಡಿ ಜಿಲ್ಲೆ ರಾಯಚೂರಿನಲ್ಲಿ (Raichur) ದೇವಸ್ಥಾನ ದಂಗಲ್ ಬುಗಿಲೇಳುವ ಲಕ್ಷಣಗಳು ಗೋಚರಿಸುತ್ತಿದೆ. ದೇವಸ್ಥಾನ ತೆರವು ವಿಚಾರಕ್ಕಾಗಿ ಒಂದು ಕೋಮಿನ ಜನ ದೇವಸ್ಥಾನ ತೆರವುಗೊಳಿಸೋದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ದೇವಸ್ಥಾನ ತೆರವು ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ರಾಯಚೂರು ನಗರದ ಚಂದ್ರಬಂಡಾ ರಸ್ತೆಯ ಸಂತೋಷ ನಗರದಲ್ಲಿರುವ ಸಿಎ ಸೈಟ್ ನಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆ ಆದೇಶಸಿತ್ತು. ಇದೇ ಸ್ಥಳದಲ್ಲಿ ಶಿವ ಲಿಂಗ ದೇವಸ್ಥಾನ ಇದೆ. ಹೀಗಾಗಿ ಆ ದೇವಸ್ಥಾನ ತೆರುವುಗೊಳಿಸಬೇಕು ಅಂತ ಆದೇಶಿಸಲಾಗಿತ್ತು. ಇದೇ ವಿಚಾರದ ವಿರುದ್ಧ ಕಾಲೋನಿ ನಿವಾಸಿಗಳು ದೇವಸ್ಥಾನ ತೆರವುಗೊಳಿಸದಂತೆ ಒತ್ತಾಯಿಸುತ್ತಿದ್ದಾರೆ.
ದೇವಸ್ಥಾನ ತೆರವುಗೊಳಿಸುವುದಕ್ಕೆ ವಿರೋಧ ವ್ಯಕ್ತವಾದ ಬೆನ್ನಲೆ ವಿವಿಧ ಸಂಘಟನೆಗಳು ದೇವಸ್ಥಾನ ತೆರವುಗೊಳಿಸಲೇಬೇಕು ಅಂತ ಪಟ್ಟು ಹಿಡಿದಿವೆ.ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟ ಸಚಿವರಿಗೂ ದೂರು ನೀಡಿದ್ದಾರೆ. ದೇವಸ್ಥಾನ ತೆರವುಗೊಳಿಸೋ ಬಗ್ಗೆ ಸ್ಥಳೀಯರ ವಾದ ಬೇರೆ ಇದೆ. ಈ ಹಿಂದೆ ದೇವಸ್ಥಾನ ಇರೋ ಸ್ಥಳದಲ್ಲಿ ಉರ್ದು ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಅಂತ ಶಾಲೆ ಕಟ್ಟಲು ವಿರೋಧಿಸಿದ್ದರು. ಆದರೆ ಅಧಿಕಾರಿಗಳು ಅಲ್ಲಿ ಉರ್ದು ಶಾಲೆಯಲ್ಲ, ಕನ್ನಡ ಶಾಲೆ ನಿರ್ಮಾಣ ಮಾಡಲಾಗುತ್ತಿದೆ ಅಂತ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸ್ಥಳೀಯರು ಈಗ, ದೇವಸ್ಥಾನ ತೆರವುಗೊಳಿಸದೇ ದೇವಸ್ಥಾನದ ಪಕ್ಕ ಕನ್ನಡ ಶಾಲೆ ನಿರ್ಮಾಣ ಮಾಡಿ ಅಂತ ಹೇಳಿದ್ದಾರೆ. ಆದರೆ ಸ್ಥಳೀಯರ ನಿರ್ಧಾರಕ್ಕೆ ವಿವಿಧ ಸಂಘಟನೆಗಳು ಕೆರಳಿವೆ. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವುಗೊಳಿಸದೇ ಕಟ್ಟಡ ನಿರ್ಮಾಣ ಮಾಡಬಾರ್ದು. ಕೂಡಲೇ ದೇವಸ್ಥಾನ ತೆರವುಗೊಳಿಸಿ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೇವಸ್ಥಾನ ಜಾಗ
ಇದನ್ನೂ ಓದಿ: ತುಮಕೂರು ಬಿಜೆಪಿ ಟಿಕೆಟ್ ಫೈಟ್: ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಧುಸ್ವಾಮಿ; ಮತ್ತೊಬ್ಬ ಆಕಾಂಕ್ಷಿ ವಿ ಸೋಮಣ್ಣ ಹೇಳುವುದೇನು?
ಈ ಮಧ್ಯೆ ದೇವಸ್ಥಾನದ ತೆರವು ವಿಚಾರ ಕೋಮು ಗಲಭೆಗೆ ಸಾಕ್ಷಿಯಾಗೋ ಲಕ್ಷಣಗಳಿವೆ. ಇದೆ ಅನುಮಾನದಿಂದ ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಸೂಕ್ಷ್ಮವಾಗಿ ಈ ಪ್ರಕರಣವನ್ನು ಪರಿಗಣಿಸಿವೆ. ಇದೇ ಕಾರಣಕ್ಕೆ ರಾಯಚೂರು ನಗರದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ದೇವಸ್ಥಾನ ತೆರವುಗೊಳಿಸದೇ ಇರೋದಕ್ಕೆ ಮುಂದಾಗಿದ್ದಾರೆ. ಧರ್ಮ ಸಂಘರ್ಷ ಶಂಕೆ ಬೆನ್ನಲ್ಲೇ ಶಾಲಾ ಕಟ್ಟಡ ಬೇರೆಡೆ ನಿರ್ಮಿಸಲು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮುಂದಾಗಿದ್ದು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ದೇವಸ್ಥಾನವಿರೊ ಸ್ಥಳದಲ್ಲಿ ನನ್ನ ಗಮನಕ್ಕೆ ಇಲ್ಲದೇ ಶಾಲೆ ಕಟ್ಟಡ ನಿರ್ಮಾಣಕ್ಕೆ ಆದೇಶ ಆಗಿದೆ. ಆ ಸ್ಥಳದಲ್ಲಿ ಸಮಸ್ಯೆ ಇದೆ. ಕೂಡಲೇ ಆ ಆದೇಶ ತಡೆಹಿಡಿಯಿರಿ ಅಂತ ಪತ್ರ ಬರೆದಿದ್ದಾರೆ. ಆದರೆ ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ



