ರಾಯಚೂರು: ನ.29 ರಂದು ಕೃಷಿ ವಿವಿ 11 ನೇ ಘಟಿಕೋತ್ಸವ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ರಿಂದ ಉದ್ಘಾಟನೆ

2019-2020 ನೇ ಸಾಲಿನಲ್ಲಿ ಒಟ್ಟು 44 ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಅವುಗಳಲ್ಲಿ 10 ಬೆಳೆ ಉತ್ಪಾದನೆ ಹೆಚ್ಚಿಸುವಂತವುಗಳಾಗಿದ್ದು, 16 ತಂತ್ರಜ್ಞಾನಗಳು ಕೃಷಿ ತಾಂತ್ರಿಕತೆಗೆ ಸಂಬಂಧಿಸಿವೆ ಹಾಗೂ ಪೂರಕ ಸಂಶೋಧನೆಗಳಡಿಯಲ್ಲಿ 8 ತಂತ್ರಜ್ಞಾನಗಳನ್ನು ಸಮರ್ಪಿಸಲಾಗಿದೆ.

ರಾಯಚೂರು: ನ.29 ರಂದು ಕೃಷಿ ವಿವಿ 11 ನೇ ಘಟಿಕೋತ್ಸವ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ರಿಂದ ಉದ್ಘಾಟನೆ
ಕೃಷಿ ವಿವಿಯಲ್ಲಿ ನಡೆದ ಮಾದ್ಯಮಗೋಷ್ಠಿ
Follow us
TV9 Web
| Updated By: preethi shettigar

Updated on: Nov 27, 2021 | 3:00 PM

ರಾಯಚೂರು: ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ 11 ನೇ ಘಟಿಕೋತ್ಸವದ ಕುರಿತು ಇಂದು ಮಾದ್ಯಮಗೋಷ್ಠಿ ನಡೆಸಲಾಯ್ತು. ರಾಯಚೂರಿನ ಕೃಷಿ ವಿವಿಯಲ್ಲಿ ನಡೆದ ಮಾದ್ಯಮಗೋಷ್ಠಿಯಲ್ಲಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಘಟಿಕೋತ್ಸವದ ಬಗ್ಗೆ ಮಾಹಿತಿ ನೀಡದರು. ಇದೇ ನವೆಂಬರ್ 29 ರಂದು 11 ಘಟಿಕೋತ್ಸವ ಕಾರ್ಯಕ್ರಮವನ್ನು ರಾಯಚೂರು ನಗರದಲ್ಲಿರುವ ಕೃಷಿ ವಿವಿಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮನ್ನು ರಾಜ್ಯಪಾಲ ಡಾ.ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಇವರ ಜೊತೆ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಿಸ್ತರಣಾ ವಿಭಾಗದ ಉಪ ಮಹಾನಿರ್ದೇಶಕ ಡಾ.ಎ.ಕೆ.ಸಿಂಗ್ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ 2019-2020 ರ ಸಾಲಿನಲ್ಲಿ ರಾಯಚೂರು ಕೃಷಿ ವಿವಿ ಮಾಡಿದ ಸಾಧನೆಗಳ ಕುರಿತು ವಿವರಿಸಲಾಗುತ್ತಿದೆ. ಶಿಕ್ಷಣ, ಸಂಶೋಧನೆ, ವಿಸ್ತರಣೆ, ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿ ಕಾರ್ಯಗಳು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸೇರಿ ವಿವಿಧ ವಿಭಾಗಗಳ ಸಾಧನೆಯನ್ನು ವಿವರಿಸಲಾಗುತ್ತಿದೆ. ಈ ಘಟಿಕೋತ್ಸವದಲ್ಲಿ ಒಟ್ಟು 303 ಸ್ನಾತಕ, 107 ಸ್ನಾತಕ್ಕೋತ್ತರ ಹಾಗೂ 26 ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಇದರಲ್ಲಿ ಕ್ರಮವಾಗಿ ಸ್ನಾತಕ ಪದವಿಯಲ್ಲಿ 120, ಸ್ನಾತಕೋತ್ತರದಲ್ಲಿ 46 ಹಾಗೂ ಡಾಕ್ಟರೇಟ್ ಪದವಿಯಲ್ಲಿ 6 ವಿದ್ಯಾರ್ಥಿನಿಯರು ಕೂಡ ಒಳಗೊಂಡಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಸ್ನಾತಕ ಪದವಿಯಲ್ಲಿ 21 ಚಿನ್ನದ ಪದಕ, ಸ್ನಾತಕೋತ್ತರ ಪದವಿಯಲ್ಲಿ 14 ಚಿನ್ನದ ಪದಕ ಹಾಗೂ ಡಾಕ್ಟರೇಟ್ ಪದವಿಯಲ್ಲಿ 10 ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುತ್ತಿದೆ.

2019-2020 ನೇ ಸಾಲಿನಲ್ಲಿ ಒಟ್ಟು 44 ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಅವುಗಳಲ್ಲಿ 10 ಬೆಳೆ ಉತ್ಪಾದನೆ ಹೆಚ್ಚಿಸುವಂತವುಗಳಾಗಿದ್ದು, 16 ತಂತ್ರಜ್ಞಾನಗಳು ಕೃಷಿ ತಾಂತ್ರಿಕತೆಗೆ ಸಂಬಂಧಿಸಿವೆ ಹಾಗೂ ಪೂರಕ ಸಂಶೋಧನೆಗಳಡಿಯಲ್ಲಿ 8 ತಂತ್ರಜ್ಞಾನಗಳನ್ನು ಸಮರ್ಪಿಸಲಾಗಿದೆ. ಅಲ್ಲದೇ ಇದೇ ಸಾಲಿನಲ್ಲಿ ರಾಯಚೂರು ಕೃಷಿ ವಿವಿ ಒಟ್ಟು 10,664 ಕ್ವಿಂಟಾಲ್ಗಳಷ್ಟು ವಿವಿಧ ಬೆಳೆಗಳ ಬೀಜೋತ್ಪಾನೆಯನ್ನು ಮಾಡಿದೆ.

ಇದರಲ್ಲಿ 3100 ಕ್ವಿಂಟಾಲ್ ತೊಗರಿ, 2975 ಕ್ವಿಂಟಾಲ್ ಭತ್ತ, 15 ಕ್ವಿಂಟಾಲ್ ಮೆಕ್ಕೆಜೋಳ, 390 ಕ್ವಿಂಟಾಲ್ ಸೋಯಾ, ಅವರೆ, 138 ಕ್ವಿಂಟಾಲ್ ಶೇಂಗಾ, 107 ಕ್ವಿಂಟಾಲ್ ಸಿರಿಧಾನ್ಯ, 5 ಕ್ವಿಂಟಾಲ್ ಸೂರ್ಯಕಾಂತಿ, 3330 ಕ್ವಿಂಟಾಲ್ ಕಡಲೆ ಹಾಗೂ 386 ಕ್ವಿಂಟಾಲ್ ಜೋಳದ ಬೀಜಗಳನ್ನು ಆಧ್ಯತೆಗನುಸಾರವಾಗಿ ಉತ್ಪಾದಿಸಿ ಯೋಗ್ಯ ದರದಲ್ಲಿ ರೈತರಿಗೆ ಪೂರೈಸಲಾಗಿದೆ.

ಇದನ್ನೂ ಓದಿ: ಮೈಸೂರು ವಿವಿ 101ನೇ ಘಟಿಕೋತ್ಸವ; ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಹೆಗಡೆ 20 ಚಿನ್ನದ ಪದಕಗಳ ಸಾಧನೆ

ಮೈಸೂರು ವಿಶ್ವ ವಿದ್ಯಾಲಯದ 101ನೇ ಘಟಿಕೋತ್ಸವದ ಬಗ್ಗೆ ಕುಲಪತಿ ಪ್ರೊ. ಜಿ ಹೇಮಂತ್ ಕುಮಾರ್ ಮಾಹಿತಿ

ದಾವಣಗೆರೆ ವಿಶ್ವವಿದ್ಯಾಲಯ ಘಟಿಕೋತ್ಸವ: ಮೆದುಳಿನಲ್ಲಿ ರಕ್ತಸ್ರಾವ ಆದರೂ ಛಲ ಬಿಡದೆ ಚಿನ್ನದ ಪದಕ ಮುಡಿಗೇರಿಸಿಕೊಂಡ ಯುವತಿ

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು