Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ನಿಗಮ ಹಗರಣ: ಕನ್ನಡ ಕೋಟ್ಯಧಿಪತಿಯಲ್ಲಿ 50 ಲಕ್ಷ ರೂ. ಗೆದ್ದಿದ್ದ ಪಂಪಣ್ಣ ಹಿನ್ನೆಲೆಯೇ ರೋಚಕ!

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದ ಒಂದೊಂದೇ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬರುತ್ತಿವೆ. ಈ ಮಧ್ಯೆ, ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣಗೆ ಸಂಬಂಧಿಸಿದ ಸ್ವಾರಸ್ಯಕರ ಅಂಶವೊಂದು ಈಗ ತಿಳಿದುಬಂದಿದೆ. ಕಡು ಬಡವರಾಗಿದ್ದ, ಸಮಾಧಿಗಳಿಗೆ ಎಡೆ ಇಟ್ಟಿದ್ದನ್ನೇ ಊಟ ಮಾಡಿ ಬೆಳೆದಿದ್ದ ಪಂಪಣ್ಣ ನಂತರ ದದ್ದಲ್ ಪಿಎ ಆಗುವ ವರೆಗೆ ಬೆಳದು ಬಂದಿದ್ಹೇಗೆ ಎಂಬ ಮಾಹಿತಿ ಇಲ್ಲಿದೆ.

ವಾಲ್ಮೀಕಿ ನಿಗಮ ಹಗರಣ: ಕನ್ನಡ ಕೋಟ್ಯಧಿಪತಿಯಲ್ಲಿ 50 ಲಕ್ಷ ರೂ. ಗೆದ್ದಿದ್ದ ಪಂಪಣ್ಣ ಹಿನ್ನೆಲೆಯೇ ರೋಚಕ!
ಕನ್ನಡ ಕೋಟ್ಯಧಿಪತಿಯಲ್ಲಿ 50 ಲಕ್ಷ ಗೆದ್ದಿದ್ದ ಪಂಪಣ್ಣ ಹಿನ್ನೆಲೆಯೇ ರೋಚಕ!
Follow us
ಭೀಮೇಶ್​​ ಪೂಜಾರ್
| Updated By: Ganapathi Sharma

Updated on:Jul 11, 2024 | 12:59 PM

ಬೆಂಗಳೂರು, ಜುಲೈ 11: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಒಳಗಾಗಿರುವ ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಹಿನ್ನೆಲೆಯೇ ರೋಚಕವಾಗಿದೆ! ಕಡು ಬಡತನದಲ್ಲಿ ಓದಿ ಸರ್ಕಾರಿ ಶಿಕ್ಷಕರಾಗಿದ್ದ ಪಂಪಣ್ಣ ರಾಠೋಡ್‌ ‘ಪಂಪಣ್ಣ ಮಾಸ್ತರ್’ ಅಂತಲೇ ಫೇಮಸ್ ಆಗಿದ್ದರು. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಂಪಣ್ಣ 50 ಲಕ್ಷ ರೂ. ಗೆದ್ದಿದ್ದರು. ಆ ಮೂಲಕ ಅವರು ರಾಜ್ಯದಲ್ಲಿ ಪ್ರಸಿದ್ಧಿಗೆ ಬಂದಿದ್ದರು.

ಸಮಾಧಿಗಳಿಗೆ ಎಡೆ ಇಟ್ಟಿದ್ದನ್ನೇ ಊಟ ಮಾಡಿ ಬೆಳೆದಿದ್ದ ಪಂಪಣ್ಣ!

ಸಮಾಧಿಗಳಿಗೆ ಎಡೆ ಇಟ್ಟಿದ್ದನ್ನೇ ಊಟ ಮಾಡಿ ಬೆಳೆದಿದ್ದ ಪಂಪಣ್ಣ, ಕಡು ಬಡತನದಲ್ಲಿ ಓದಿ ಸರ್ಕಾರಿ ಶಿಕ್ಷಕರಾಗಿದ್ದರು. ಬಳಿಕ ಪಿಡಿಒ ಆಗಿ ಮತ್ತೊಂದು ಹಂತಕ್ಕೆ ಬೆಳೆದಿದ್ದರು. ಪಿಡಿಒ ಹುದ್ದೆಯಲ್ಲಿದ್ದ ವೇಳೆ ರಾಜಕೀಯದತ್ತ ಪಂಪಣ್ಣಗೆ ಒಲವು ಮೂಡಿತ್ತು. ಜನಪ್ರತಿನಿಧಿಗಳ ಸಂಪರ್ಕದ ಮೂಲಕ ರಾಜಕೀಯದತ್ತ ಒಲವು ವ್ಯಕ್ತವಾಗಿತ್ತು. ಆ ಬಳಿಕ ಬಿವಿ ನಾಯಕ್ ಪಿಎ ಆಗಿ ಕೆಲಸ ಮಾಡಿದ್ದ ಪಂಪಣ್ಣ, ನಂತರ ಕಾಂಗ್ರೆಸ್​ ಶಾಸಕ ದದ್ದಲ್​ಗೆ ಆಪ್ತ ಸಹಾಯಕನಾಗಿದ್ದರು. ದದ್ದಲ್ ವಾಲ್ಮೀಕಿ ನಿಗಮ ಅಧ್ಯಕ್ಷರಾದ ಬಳಿಕ ಪಂಪಣ್ಣ ಹೆಸರು ಬೆಳಕಿಗೆ ಬಂದಿದೆ.

ಸದ್ಯ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್, ನಾಗೇಂದ್ರ ಪಿಎ ಹರೀಶ್ ಸೇರಿದಂತೆ ಅನೇಕರು ಎಸ್​ಐಟಿ ಹಾಗೂ ಜಾರಿ ನಿರ್ದೇಶನದ ಬಲೆಯಲ್ಲಿದ್ದಾರೆ. ಬುಧವಾರವಷ್ಟೇ ರಾಜ್ಯದಾದ್ಯಂತ ದಾಳಿ ನಡೆಸಿದ್ದ ಇ.ಡಿ ನಾಗೇಂದ್ರ, ದದ್ದಲ್ ಹಾಗೂ ನಾಗೇಂದ್ರ ಪಿಎಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ಹರೀಶ್​​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಬಳಿಕ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಈವರೆಗೆ ಬಂಧನಕ್ಕೊಳಗಾದವರು ಯಾರೆಲ್ಲ? ವಿವರ ಇಲ್ಲಿದೆ ನೋಡಿ

ದದ್ದಲ್ ಸಂಬಂಧಿಯ ವಿಚಾರಣೆಗೆ ಕರೆದೊಯ್ದ ಇ.ಡಿ

ರಾಯಚೂರಿನ ದದ್ದಲ್​ ನಿವಾಸದಲ್ಲಿ ಶೋಧ ನಡೆಸಿರುವ ಇ.ಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ಬಳಿಕ ದದ್ದಲ್ ಸಂಬಂಧಿಯನ್ನು ಕರೆದೊಯ್ದಿದ್ದಾರೆ. ತರಾತುರಿಯಲ್ಲಿ ದದ್ದಲ್ ಸಂಬಂಧಿಯನ್ನ ಕಾರಿನಲ್ಲಿ ಕರೆದೊಯ್ದ ಇ.ಡಿ ತಂಡ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಆರಂಭಿಸಿದೆ. ಸಂಬಂಧಿಯ ಹೇಳಿಕೆ ಆಧರಿಸಿ ದದ್ದಲ್ ನಿವಾಸದಲ್ಲಿ ಹೆಚ್ಚಿನ ಶೋಧ ನಡೆಸುವ ಸಾಧ್ಯತೆ ಇದೆ.

ಈಗೆಲ್ಲಿದ್ದಾರೆ ಪಂಪಣ್ಣ?

ಶಾಸಕ ಬಸವನಗೌಡ ದದ್ದಾಲ್ ಮನೆಯಲ್ಲಿ ಇ.ಡಿ ಅಧಿಕಾರಿಗಳು ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ವಿಚಾರಣೆ ವೇಳೆ ಯಾವುದನ್ನೂ ಶಾಸಕ ದದ್ದಲ್ ಒಪ್ಪಿಕೊಳ್ಳುತ್ತಿಲ್ಲ. ಎಲ್ಲದಕ್ಕೂ ಪಂಪಣ್ಣನತ್ತ ಬೊಟ್ಟು ಮಾಡುತ್ತಿದ್ದಾರೆ. ಆದರೆ ಪಂಪಣ್ಣ ಸದ್ಯ ನಾಪತ್ತೆಯಾಗಿದ್ದಾರೆ. ಪಂಪಣ್ಣ ಪಡೆದುಕೊಂಡಿರುವ 55 ಲಕ್ಷ ರೂ. ಹಣದ ಬಗ್ಗೆ ಇ.ಡಿ ಅಧಿಕಾರಿಗಳು ದದ್ದಲ್ ಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಆ ವಿಚಾರ ನನಗೆ ಗೊತ್ತೇ ಎಂದು ದದ್ದಲ್ ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:40 am, Thu, 11 July 24

ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ