ಸ್ಲಂ ನಿವಾಸಿಗಳಿಗೂ ತಟ್ಟಿದ ವಕ್ಫ್​ ಬಿಸಿ: ಸಚಿವರ ಸೂಚನೆ ಮೇರೆಗೆ ಹಕ್ಕುಪತ್ರ ವಿತರಣೆ ಧಿಡೀರ್​ ರದ್ದು

ವಕ್ಫ್ ಬೋರ್ಡ್ ಭೂಮಿ ವಿವಾದದಿಂದ ರಾಯಚೂರಿನ 263 ಸ್ಲಂ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸ್ಲಂ ನಿವಾಸಿಗಳ ಕೈ ಸೇರಬೇಕಾದ ಹಕ್ಕುಪತ್ರಗಳು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಕೊಳೆಯುತ್ತ ಬಿದ್ದಿವೆ. ಇದರಿಂದ ಸ್ಲಂ ನಿವಾಸಿಗಳು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ ಮತ್ತು ತಕ್ಷಣ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದ್ದಾರೆ.

ಸ್ಲಂ ನಿವಾಸಿಗಳಿಗೂ ತಟ್ಟಿದ ವಕ್ಫ್​ ಬಿಸಿ: ಸಚಿವರ ಸೂಚನೆ ಮೇರೆಗೆ ಹಕ್ಕುಪತ್ರ ವಿತರಣೆ ಧಿಡೀರ್​ ರದ್ದು
ವಕ್ಫ್​ ವಿವಾದ: ರಾಯಚೂರಿನ 263 ಸ್ಲಂ ನಿವಾಸಿಗಳ ಕೈ ಸೇರದ ಹಕ್ಕುಪತ್ರ
Follow us
| Updated By: ವಿವೇಕ ಬಿರಾದಾರ

Updated on:Nov 03, 2024 | 9:08 AM

ರಾಯಚೂರು, ನವೆಂಬರ್​ 03: ವಕ್ಫ್​ ಬೋರ್ಡ್​​ (Waqf Board) ಆಸ್ತಿ ವಿವಾದದ ಬಿಸಿ ಸ್ಲಂ‌ ನಿವಾಸಿಗಳಿಗೂ ತಟ್ಟಿದೆ. ಸ್ಲಂ‌ ನಿವಾಸಿಗಳ ಕೈ ಸೇರಬೇಕಾಗಿದ್ದ ನಿವೇಶನ ಹಕ್ಕು ಪತ್ರಗಳು ಸಚಿವರ ಮೌಖಿಕ ಸೂಚನೆ ಮೇರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ (Karnataka Slum Development Board) ಬಿದ್ದಿವೆ. ಇದೇ ವರ್ಷ ಜುಲೈನಲ್ಲಿ ಮಸ್ಕಿ ಪಟ್ಟಣದಲ್ಲಿ 263 ಜನ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ (Zameer Ahmed) ಅವರ ಮೌಖಿಕ ಸೂಚನೆ ಮೇರೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಸಾಜೀದ್ ಸಾಬ್ ಖಾಜಿ ಎಂಬುವರು ಸರ್ವೇ ನಂ.7/1ರಲ್ಲಿರುವ ತಮ್ಮ ಏಳು ಎಕರೆ ಇನಾಂ ಭೂಮಿಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮಾರಾಟ ಮಾಡಿದ್ದರು. 2023ರ ಜುಲೈ 14 ರಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಹೆಸರಿನಲ್ಲಿ ಪಹಣಿ ‌ನೋಂದಣಿಯಾಗಿದೆ. ಪಹಣಿಯ ಕಾಲಂ ನಂ.9ರಲ್ಲಿ ಸ್ಲಂಬೋರ್ಡ್ ಭೂಮಿ ಅಂತ ನಮೂದಾಗಿದೆ. ಈ ಏಳು ಎಕರೆ ಭೂಮಿಯಲ್ಲಿ 300ಕ್ಕೂ ಅಧಿಕ ಬಡ ಕುಟುಂಬಗಳು ಕಳೆದ 30-35 ವರ್ಷಗಳಿಂದ ವಾಸ ಮಾಡುತ್ತಿವೆ. ಇದೀಗ, ಹಕ್ಕುಪತ್ರಕ್ಕಾಗಿ ಜನರು ಕೊಳಗೇರಿ ಅಭಿವೃದ್ಧಿ ಮಂಡಳಿಗೆ 1000ರೂ. ನೀಡಿ, ಡಿಡಿ ಪಡೆದಿದ್ದಾರೆ.

ಇದನ್ನೂ ಓದಿ: ರೈತರ ಜಮೀನಿನ ಮೇಲೆ ವಕ್ಫ್​​ ಬೋರ್ಡ್ ಕಣ್ಣು: ರಾಯಚೂರು, ಕೋಲಾರ ಜಿಲ್ಲೆಗೂ ವ್ಯಾಪಿಸಿದ ವಿವಾದ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಈ ಏಳು ಎಕರೆ ಭೂಮಿಯನ್ನು ನಿವೇಶನಗಳಾಗಿ ಪರಿವರ್ತಿಸಿದೆ. ಈ ನಿವೇಶನಗಳ ಹಕ್ಕುಪತ್ರಗಳನ್ನು 263 ಬಡ ಜನರಿಗೆ ಹಂಚಲು ವಸತಿ ಇಲಾಖೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಇದೇ ವರ್ಷ ಜುಲೈ 29 ರಂದು ಮಸ್ಕಿ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಕ್ಕು ಪತ್ರ ವಿತರಣೆಗಾಗಿ ವಸತಿ ಇಲಾಖೆ ಆಹ್ವಾನ ಪತ್ರಿಕೆಯನ್ನೂ ಸಿದ್ಧಪಡಿಸಿತ್ತು. ಮಸ್ಕಿ ಕಾಂಗ್ರೆಸ್ ಶಾಸಕ ಆರ್. ಬಸನಗೌಡ ತುರ್ವಿಹಾಳ ಅಧ್ಯಕ್ಷತೆಯಲ್ಲಿ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಉಪಸ್ಥತಿಯಲ್ಲಿ ಹಕ್ಕುಪತ್ರ ನೀಡಬೇಕಾಗಿತ್ತು.

ಆದರೆ, ಈ ಏಳು ಎಕರೆ ಭೂಮಿ ವಕ್ಫ್​ ಮಂಡಳಿಗೆ ಸೇರಿದೆ. ಹೀಗಾಗಿ ಹಕ್ಕುಪತ್ರ ನೀಡದಂತೆ ಸಚಿವ ಜಮೀರ್ ಅಹ್ಮದ್ ಮೌಖಿಕ ಸೂಚನೆ ನೀಡಿದರು. ಹೀಗಾಗಿ, ಅಧಿಕಾರಿಗಳು ಕಾರ್ಯಕ್ರಮವನ್ನು ಧಿಡೀರನೆ ರದ್ದು ಮಾಡಿದ್ದಾರೆ. ಕಾರ್ಯಕ್ರಮ ರದ್ದತಿಯಿಂದ ಹಕ್ಕುಪತ್ರಕ್ಕಾಗಿ ಹಣ ಭರ್ತಿ ಮಾಡಿ, ಡಿಡಿ ಪಡೆದಿದ್ದ ಜನರು ಕಂಗಾಲಾಗಿದ್ದಾರೆ. ಹಣವೂ ಹೋಯ್ತು, ಹಕ್ಕುಪತ್ರನೂ ಸಿಗಲಿಲ್ಲವೆಂದು ಬೇಸರಗೊಂಡಿದ್ದು, ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಕೂಡಲೇ ಹಕ್ಕುಪತ್ರ ನೀಡುವಂತೆ ಸ್ಲಂ‌ ನಿವಾಸಿಗಳು ಆಗ್ರಹಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:00 am, Sun, 3 November 24

ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್
ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್
ಸಣ್ಣಪ್ಪನ ಕುಟುಂಬಸ್ಥರು ಆತನ ಸಾವನ್ನು ಖಚಿತಪಡಿಸಿದ್ದಾರೆ: ತೇಜಸ್ವೀ ಸೂರ್ಯ
ಸಣ್ಣಪ್ಪನ ಕುಟುಂಬಸ್ಥರು ಆತನ ಸಾವನ್ನು ಖಚಿತಪಡಿಸಿದ್ದಾರೆ: ತೇಜಸ್ವೀ ಸೂರ್ಯ
‘ಬೊಗಳುವ ನಾಯಿಗೆ...’: ಹನುಮಂತನ ಹಾಡಿನ ಗುರಿ ಯಾರ ಕಡೆಗೆ?
‘ಬೊಗಳುವ ನಾಯಿಗೆ...’: ಹನುಮಂತನ ಹಾಡಿನ ಗುರಿ ಯಾರ ಕಡೆಗೆ?
ರೈತ ಆತ್ಮಹತ್ಯೆ: ತಮ್ಮ ವಿರುದ್ಧ ದಾಖಲಾದ FIRಗೆ ತೇಜಸ್ವಿ ಸೂರ್ಯ ಸ್ಪಷ್ಟನೆ
ರೈತ ಆತ್ಮಹತ್ಯೆ: ತಮ್ಮ ವಿರುದ್ಧ ದಾಖಲಾದ FIRಗೆ ತೇಜಸ್ವಿ ಸೂರ್ಯ ಸ್ಪಷ್ಟನೆ
Video: ಬಾಯಿ ತೆರೆದು ನಿದ್ದೆ ಮಾಡಿದ್ರೆ ಹೀಗೂ ಆಗಬಹುದು ಎಚ್ಚರ
Video: ಬಾಯಿ ತೆರೆದು ನಿದ್ದೆ ಮಾಡಿದ್ರೆ ಹೀಗೂ ಆಗಬಹುದು ಎಚ್ಚರ
ಕಳಪೆ ಕಾಮಗಾರಿ ಕುಸಿತಕ್ಕೆ ಕಾರಣವಾಗಿರೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ!
ಕಳಪೆ ಕಾಮಗಾರಿ ಕುಸಿತಕ್ಕೆ ಕಾರಣವಾಗಿರೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ!
‘ನವಗ್ರಹ’ ರಿ ರೀಲೀಸ್: ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
‘ನವಗ್ರಹ’ ರಿ ರೀಲೀಸ್: ದರ್ಶನ್ ಅಭಿಮಾನಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ವಸತಿ ಶಾಲೆ ಮತ್ತು ಹಾಸ್ಟೆಲ್​ಗಳಿಗೆ ಗಣ್ಯರು ನಿಯಮಿತವಾಗಿ ಭೇಟಿ ನೀಡಬೇಕು
ವಸತಿ ಶಾಲೆ ಮತ್ತು ಹಾಸ್ಟೆಲ್​ಗಳಿಗೆ ಗಣ್ಯರು ನಿಯಮಿತವಾಗಿ ಭೇಟಿ ನೀಡಬೇಕು
ವಿಶೇಷ ಸ್ಥಾನಮಾನ ನಿರ್ಣಯ ಕುರಿತು ಮೂರನೇ ದಿನವೂ ವಿಧಾನಸಭೆಯಲ್ಲಿ ಗದ್ದಲ
ವಿಶೇಷ ಸ್ಥಾನಮಾನ ನಿರ್ಣಯ ಕುರಿತು ಮೂರನೇ ದಿನವೂ ವಿಧಾನಸಭೆಯಲ್ಲಿ ಗದ್ದಲ