ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ

ಮಹಿಳಾ ಉದ್ಯೋಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ನಗರದ ಐಬಿ ಕಾಲೋನಿಯಲ್ಲಿ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ ಆಗಿದೆ. ಗಂಡ ಮತ್ತು ಅತ್ತೆಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಸದ್ಯ ರಾಯಚೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸುಗೂಸಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ತಾಯಿ ಸಾವು: ಮಹಿಳಾ ಉದ್ಯೋಗಿ ಸಾವಿನ ಸುತ್ತ ಅನುಮಾನದ ಹುತ್ತ
ಮೃತ ಮಹಿಳೆ
Image Credit source: tv9 kannada
Edited By:

Updated on: Mar 30, 2026 | 3:17 PM

ರಾಯಚೂರು, ಮಾರ್ಚ್​ 30: ಮಗುವಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ಅನುಮಾನಾಸ್ಪದವಾಗಿ ತಾಯಿ ಹೆಣವಾಗಿ (death) ಪತ್ತೆಯಾದ ಘಟನೆ ನಗರದ ಐಬಿ ಕಾಲೋನಿಯಲ್ಲಿ ನಡೆದಿದೆ. ವಿದ್ಯಾ (30) ಮೃತ ತಾಯಿ. ಗಂಡ ಮಂಜುನಾಥ್, ಅತ್ತೆ ಕವಿತಾ ನೇಣುಬಿಗಿದು ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಯಚೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಡಿವೈಎಸ್​ಪಿ ಶಾಂತವೀರ್ ನೇತೃತ್ವದಲ್ಲಿ ತನಿಖೆ ನಡೆದಿದೆ.

ನಡೆದಿದ್ದೇನು?

ಕಳೆದ ಎರದು ವರ್ಷಗಳ ಹಿಂದೆ ವಿದ್ಯಾ ಮತ್ತು ಮಂಜುನಾಥ್​ ವಿವಾಹವಾಗಿದೆ. ದಂಪತಿಗೆ 11 ತಿಂಗಳ ಮಗು ಕೂಡ ಇದೆ. ನಗರದ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾ ಕಾರ್ಯನಿರ್ವಹಿಸುತ್ತಿದ್ದರು. ಮದುವೆ ಆದಾಗಿನಿಂದ ವರದಕ್ಷಿಣೆಗಾಗಿ ಗಂಡ ಮತ್ತು ಅತ್ತೆ ಪೀಡಿಸುತ್ತಿದ್ದರು. 30 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ಆಭರಣವನ್ನ ವಿದ್ಯಾ ಕುಟುಂಬ ವರದಕ್ಷಿಣೆಯಾಗಿ ನೀಡಿದ್ದರು.

ಇದನ್ನೂ ಓದಿ: ಜಗದ್ಗುರು ಶಿವಾನಂದ ಮಠ ಕಟ್ಟಿದ್ದ ಶಿಕ್ಷಕ ಕಮ್ ಸ್ವಾಮೀಜಿ ಆತ್ಮಹತ್ಯೆ, ಕಾರಣ ನಿಗೂಢ

ನಿನ್ನೆ ಸಂಜೆ ಪತಿ ಮಂಜುನಾಥ್ ಕಂಠಪೂರ್ತಿ ಕುಡಿದು ಬಂದು ವಿದ್ಯಾಳನ್ನ ಕೆಲಸದಿಂದ ಕರೆತಂದಿದ್ದ. ಆ ಬಳಿಕ ಮನೆಯಲ್ಲಿ 11 ತಿಂಗಳ ಹಸುಗೂಸಿಗೆ ಹಾಲುಣಿಸಿದ ವಿದ್ಯಾ, ಇದೇ ವೇಳೆ ಗಂಡನ ಕುಡಿತದ ಬಗ್ಗೆ ಅತ್ತೆಗೆ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ಕೆಲಹೊತ್ತಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾ ಮೃತದೇಹ ಪತ್ತೆ ಆಗಿದೆ. ಗಂಡ ಮತ್ತು ಅತ್ತೆಯೇ ನೇಣುಬಿಗಿದು ಕೊಲೆಗೈದಿರುವುದಾಗಿ ಆರೋಪ ಕೇಳಿಬಂದಿದೆ. ಸದ್ಯ ಮಂಜುನಾಥ್ ಮತ್ತು ಕವಿತಾ ವಿರುದ್ಧ ದೂರು ದಾಖಲಾಗಿದೆ.

ಖಾಸಗಿ ಆಸ್ಪತ್ರೆ ಮೇಲಿಂದ ಬಿದ್ದು ಬಾಣಂತಿ ಸಾವು

ಖಾಸಗಿ ಆಸ್ಪತ್ರೆಯ 3ನೇ ಮಹಡಿ ಮೇಲಿಂದ ಬಿದ್ದು ಬಾಣಂತಿ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಇದೇ ಮಾರ್ಚ್ 26ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾನ್ವಿ ಪಟ್ಟಣದ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಬಿದ್ದು ಐದು ದಿನದ ಬಾಣಂತಿ ವಾಸವಿ (22) ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಮೂರು ಭೀಕರ ರಸ್ತೆ ಅಪಘಾತ: ಆರು ಬಂದಿ ಸಾವು

ಬಾಣಂತಿ ವಾಸವಿ ಐದು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅನಾರೋಗ್ಯಕ್ಕೆ ಒಳಗಾದ ಮಗುವಿಗೆ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಣಂತಿ ಸಾವಿಗೂ ಮುನ್ನ ಮಹಡಿ ಹತ್ತುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More
Loading...
Unable to load recommendations.
Follow Us