Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಬ್ಯುಲೆನ್ಸ್​ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ತಾಯಿ: ಸುಸೂತ್ರವಾಗಿ ಹೆರಿಗೆ ಮಾಡಿಸಿದ ಶುಶ್ರೂಷಕಿಗೆ ಸ್ಥಳೀಯರ ಶ್ಲಾಘನೆ

ಹೆರಿಕೆ ನೋವು ಕಾಣಿಸಿಕೊಂಡ ಹಿನ್ನೆಲೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಮಾರ್ಗ ಮಧ್ಯೆ ನೋವು ಹೆಚ್ಚಾದ ಕಾರಣ ಆಂಬುಲೆನ್ಸ್‌ ವಾಹನದಲ್ಲಿಯೇ ಹೆರಿಗೆ ಮಾಡಲಾಗಿದೆ.

ಆಂಬ್ಯುಲೆನ್ಸ್​ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ತಾಯಿ: ಸುಸೂತ್ರವಾಗಿ ಹೆರಿಗೆ ಮಾಡಿಸಿದ ಶುಶ್ರೂಷಕಿಗೆ ಸ್ಥಳೀಯರ ಶ್ಲಾಘನೆ
ಆಂಬುಲೆನ್ಸ್​ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ತಾಯಿ
Follow us
ಆಯೇಷಾ ಬಾನು
|

Updated on:Jun 01, 2023 | 9:38 AM

ರಾಯಚೂರು: ಚಲಿಸುತ್ತಿದ್ದ 108 ಆಂಬುಲೆನ್ಸ್‌(Ambulance) ವಾಹನದಲ್ಲಿಯೇ ತಾಯಿ ಮಗುವಿಗೆ ಜನ್ಮ(Birth) ನೀಡಿದ್ದಾರೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕುರುಕುಂದ ಗ್ರಾಮದ ಬಳಿ ಹೆರಿಗೆಯಾಗಿದೆ. ಹೆರಿಕೆ ನೋವು ಕಾಣಿಸಿಕೊಂಡ ಹಿನ್ನೆಲೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಮಾರ್ಗ ಮಧ್ಯೆ ನೋವು ಹೆಚ್ಚಾದ ಕಾರಣ ಆಂಬುಲೆನ್ಸ್‌ ವಾಹನದಲ್ಲಿಯೇ ಹೆರಿಗೆ ಮಾಡಲಾಗಿದೆ. ಗರ್ಭಿಣಿ ಮಹಿಳೆ ಆರೋಗ್ಯಕರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಿನ್ನೆ(ಮೇ 31) ತಡ ರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಇದೇ ಗ್ರಾಮದ ರೇಣುಕಾ ವಿರೇಶ್ ಎಂಬ ಗರ್ಭಿಣಿ ಮಹಿಳೆಯನ್ನು 108 ಮೂಲಕ ಸಿರವಾರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಮಾರ್ಗ ಮಧ್ಯೆ ರೇಣುಕಾಳ ಹೆರಿಗೆ ನೋವು ತೀವ್ರಗೊಂಡಿದ್ದು ಮಾರ್ಗ ಮಧ್ಯೆಯೇ ಶುಶ್ರೂಷಕಿ ಲಕ್ಷ್ಮೀ ಅವರು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಂಬುಲೆನ್ಸ್‌ ವಾಹನದಲ್ಲಿಯೇ ರೇಣುಕಾಳ ಹೆರಿಗೆ ಮಾಡಿಸಿದ್ದಾರೆ. ಆಂಬುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗುವನ್ನು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಅಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಸಿದ ಶುಶ್ರೂಷಕಿ ಲಕ್ಷ್ಮೀ ಹಾಗೂ ಚಾಲಕ ಯಾಸಿನ್​ಗೆ ಸ್ಥಳೀಯರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Chikmagluru: ಚಲಿಸುವ ಬಸ್​ನಲ್ಲಿ ಹೆರಿಗೆ ನೋವು; ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ ಮಹಿಳಾ ಕಂಡಕ್ಟರ್.. ಪ್ರಶಂಸೆಯ ಮಹಾಪೂರ!

ಆಂಬ್ಯುಲೆನ್ಸ್​ಗೆ ಕೊಡಲು ಹಣವಿಲ್ಲದೆ ಮಗನ ಶವವನ್ನು ಚೀಲದೊಳಗೆ ಹೊತ್ತು 200 ಕಿ.ಮೀ ಪ್ರಯಾಣಿಸಿದ ವ್ಯಕ್ತಿ

ವಲಸೆ ಕಾರ್ಮಿಕರೊಬ್ಬರು ಆಂಬ್ಯುಲೆನ್ಸ್​ಗೆ ಕೊಡಲು ಹಣವಿಲ್ಲದೆ ಮಗನ ಶವವನ್ನು ಚೀಲದೊಳಗೆ ಹಾಕಿ 200 ಕಿ.ಮೀಗಳಷ್ಟು ದೂರ ಪ್ರಯಾಣಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮುಸ್ತಫಾನಗರ ಗ್ರಾಮಪಂಚಾಯತ್​ನ ಡಂಗಿಪಾರಾ ಗ್ರಾಮದ ವಲಸೆ ಕಾರ್ಮಿಕ ಅಸೀಂ ದೇವಶರ್ಮಾ, ಆಂಬ್ಯುಲೆನ್ಸ್​ ಚಾಲಕ ಕೇಳಿದ ಶುಲ್ಕವನ್ನು ಭರಿಸಲು ಸಾಧ್ಯವಾಗದ ಕಾರಣ ಶವವನ್ನು ಹೊತ್ತುಕೊಂಡು 200 ಕಿ.ಮೀ ದೂರ ಸಾಗಿದ್ದಾರೆ. ಕಣ್ಣೀರು ತಡೆದುಕೊಂಡು ಬಸ್ ಹತ್ತಿದ್ದರು, ಬಸ್​ನಲ್ಲಿ ಯಾರಿಗೂ ತಿಳಿಯದಂತೆ ಎಚ್ಚರವಹಿಸಿದ್ದರು, ಒಂದೊಮ್ಮೆ ಹೇಳಿಬಿಟ್ಟರೆ ತಮ್ಮನ್ನು ಬಸ್ಸಿನಿಂದ ಇಳಿಸಬಹುದು ಎನ್ನುವ ಭಯವಿತ್ತು ಎಂದು ಹೇಳಿಕೊಂಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:23 am, Thu, 1 June 23

ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್