Bangalore: ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ಇರಿ ಸರ್, ವಿಲ್ಲಾ ನಿವಾಸಿಗಳಿಂದ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ

ಪೂರ್ವಾಂಕರ ವಿಲ್ಲಾ ಒತ್ತುವರಿ ತೆರವು ವಿಚಾರ ಸಂಬಂಧ ಅಲ್ಲಿನ ನಿವಾಸಿಗಳು ಏಕಾಏಕಿ ಕೆಡವಿ ಹಾಕಿದರೆ ನಾವೆಲ್ಲಿ ಹೋಗೋಣ? ಸ್ವಲ್ಪ ತಾಳ್ಮೆಯಿಂದ ಇರುವಂತೆ ಬಿಬಿಎಂಪಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Bangalore: ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ಇರಿ ಸರ್, ವಿಲ್ಲಾ ನಿವಾಸಿಗಳಿಂದ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ
ಪ್ರಾತಿನಿಧಿಕ ಚಿತ್ರ
Updated By: Rakesh Nayak Manchi

Updated on: Sep 20, 2022 | 7:00 PM

ಬೆಂಗಳೂರು: ಮಹದೇವಪುರದ ರಾಚೇನಹಳ್ಳಿಯಲ್ಲಿರುವ ಪೂರ್ವಾಂಕರ ವಿಲ್ಲಾ ಒತ್ತುವರಿ ತೆರವು ವಿಚಾರ ಸಂಬಂಧ ಅಲ್ಲಿನ ನಿವಾಸಿಗಳು ಏಕಾಏಕಿ ಕೆಡವಿ ಹಾಕಿದರೆ ನಾವೆಲ್ಲಿ ಹೋಗೋಣ? ಸ್ವಲ್ಪ ತಾಳ್ಮೆಯಿಂದ ಇರುವಂತೆ ಬಿಬಿಎಂಪಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಪೂರ್ವಾಂಕರ ಲಿಮಿಟೆಡ್ ರಾಜಕಾಲುವೆಗಳ ಒತ್ತವರಿ ಮಾಡಿಕೊಂಡಿರುವುದು ಸಮೀಕ್ಷೆ ವೇಳೆ ತಿಳಿದುಬಂತಿದ್ದು. ಅದರಂತೆ ಇಂದು ಬುಲ್ಡೋಜರ್​ಗಳು ಒತ್ತುವರಿ ತೆರವು ಮಾಡುವ ನಿಟ್ಟಿನಲ್ಲಿ ಸ್ಥಳಕ್ಕೆ ಆಗಮಿಸಿತ್ತು. ಈ ವೇಳೆ ಅಧಿಕಾರಿಗಳಿಗೆ ವಿಲ್ಲಾ ನಿವಾಸಿಗಳು ಸಮಯಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನ್ಯಾಯಾಲಯದಿಂದ ಸ್ಟೇ ಆರ್ಡರ್ ಇದೆ. ನಾವು ಕಷ್ಟದಲ್ಲಿದ್ದೇವೆ, ನಮಗೆ ಸಮಯ ಕೊಡಿ. ಏಕಾಏಕಿ‌ ಬಂದು ಕೆಡವಿ ಹಾಕಿದರೆ ನಾವು ಎಲ್ಲಿಗೆ ಹೋಗಬೇಕು? ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ನಮಗೆ ಟೈಂ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕೋರ್ಟ್ ಸ್ಟೇ ಆರ್ಡರ್ ಇದೆ ಎಂದು ಹೇಳುತ್ತಾ ಕಾಲಾವಕಾಶ ಕೇಳಿದ ವಿಲ್ಲಾ ನಿವಾಸಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಕೋರ್ಟ್ ಆರ್ಡರ್ ಪ್ರತಿ ತೋರಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಏಕಾಏಕಿ ತೆರವು ಬಗ್ಗೆ ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ನಾವು ದಿಢೀರ್ ಅಂತ ಬಂದು ತೆರವು ಮಾಡುತ್ತಿಲ್ಲ ಎಂದಿದ್ದಾರೆ. ನಾವು ನಿಮಗೆ ದಿಢೀರ್ ಬಂದು ಮಾರ್ಕಿಂಗ್ ಮಾಡಿ ತೆರವು ಮಾಡುತ್ತಿಲ್ಲ. ಸುಮ್ಮನೆ ಸ್ಟೇ ಆರ್ಡರ್ ಅಂತ ಹೇಳುತ್ತಿದ್ದೀರಿ. ಎಲ್ಲಿದೆ ತೋರಿಸಿ ಸ್ಟೇ ಆರ್ಡರ್ ಎಂದು ಕೇಳಿದ್ದಾರೆ. ಅಲ್ಲದೆ ನಾವು ಕೋರ್ಟ್ ಆರ್ಡರ್ ಇದಿದ್ದರೆ ಸುಮ್ಮನೆ ಇರುತ್ತಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳದಲ್ಲೇ ನಿಂತಿರುವ ಬುಲ್ಡೋಜರ್​ಗಳು

ಒತ್ತುವರಿ ತೆರವಿಗೆ ನಿವಾಸಿಗಳ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಒತ್ತುವರಿ ತೆರವು ಕಾರ್ಯಾಚರಣೆಗೆ ಆಗಮಿಸಿದ ಜೆಸಿಬಿ ಹಾಗೂ ಹಿಟಾಚಿ ಸ್ಥಳದಲ್ಲೇ ನಿಂತಿವೆ. ದಯವಿಟ್ಟು ತೆರವು ಮಾಡಬೇಡಿ ಎಂದು ರಸ್ತೆಯಲ್ಲೇ ಚೇರ್ ಹಾಕಿ ವೃದ್ಧ ಮಹಿಳೆ ಕುಳಿತುಕೊಂಡಿದ್ದಾರೆ. ಅಲ್ಲದೆ ನಿವಾಸಿಗಳು ಕೂಡ ಜೆಸಿಬಿ ವಾಹನಕ್ಕೆ ಅಡ್ಡಲಾಗಿ ನಿಂತಿದಿದ್ದಾರೆ. ಒತ್ತುವರಿ ತೆರವಿಗೆ ಅಡ್ಡಿ ಪಡಿಸುತ್ತಿರುವ ಹಿನ್ನೆಲೆ ರಕ್ಷಣೆ ಕೊಡಿ ಎಂದು ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ಸೂಚಿಸಿದ್ದಾರೆ.

ನಮ್ಮನ್ನ ಎಳೆದು ಹಾಕಬೇಡಿ, ಹೊಟ್ಟೆ ಉರಿಸಬೇಡಿ

ಪೂರ್ವ ಪಾರ್ಕ್ ರಿಡ್ಜ್ ಒತ್ತುವರಿಗೆ ನಿವಾಸಿಗಳಿಂದ ಅಡ್ಡಿ ವ್ಯಕ್ತವಾಗುತ್ತಿದೆ. ಪೊಲೀಸರು ನಮಗೆ ರಕ್ಷಣೆ ಕೊಡಬೇಕು. ನಮ್ಮನ್ನ ಎಳೆದು ಹಾಕಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 2.5 ಮೀ ಅಗಲ, 100 ಮೀಟರ್ ಒತ್ತುವರಿ ತೆರವು ಮಾಡುವ ಸಲುವಾಗಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ನಿವಾಸಿಗಳು, ನಾಳೆಯವರೆಗಾ ಸಮಯ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ನಮ್ಮ ಹೊಟ್ಟೆ ಉರಿಸಬೇಡಿ ಎಂದು ಮಹಿಳೆಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಾವು ತೆರವಿಗೆ ಬಿಡುವುದಿಲ್ಲ, ಒಂದು ದಿನ ಕಾಲಾವಕಾಶ ಕೊಡಿ. ಕತ್ತಲಲ್ಲಿ ಹೇಗೆ ಮನೆ ತೆರವು ಮಾಡುತ್ತೀರಿ ಎಂದು ವಾದುಕ್ಕಿಳಿದಿದ್ದಾರೆ.

ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Tue, 20 September 22