ಉಡುಪಿಯಲ್ಲಿ ಅಯೋಧ್ಯ ರಾಮನ ಮಹೋತ್ಸವ; ಗೊಂಬೆ ಹೇಳುವ ಕಥೆಗೆ ಉತ್ಸುಕರಾದ ಜನತೆ

ಎರಡು ವಾರಗಳ ಕಾಲ ನಡೆಯುವ ಈ ಸರಳ ಧಾರ್ಮಿಕ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ರಾಮನ ಕಥೆ ಹೇಳುವ ಗೊಂಬೆಗಳು. ಧಾತು ಸಂಸ್ಥೆ ಬೆಂಗಳೂರು ಇದರ ಸುಮಾರು 4 ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿ ರಾಮದೇವರ ಜೀವನಕಥೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಉಡುಪಿಯಲ್ಲಿ ಅಯೋಧ್ಯ ರಾಮನ ಮಹೋತ್ಸವ; ಗೊಂಬೆ ಹೇಳುವ ಕಥೆಗೆ ಉತ್ಸುಕರಾದ ಜನತೆ
ಉಡುಪಿಯಲ್ಲಿ ಅಯೋಧ್ಯ ರಾಮನ ಮಹೋತ್ಸವ
Follow us
preethi shettigar
| Updated By: shruti hegde

Updated on: Apr 16, 2021 | 11:50 AM

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಅಯೋಧ್ಯ ರಾಮನ ಮಹೋತ್ಸವ ನಡೆಯುತ್ತಿದೆ. ಅಷ್ಟಮಠಗಳ ರಥಬೀದಿ ಈಗ ರಾಮ ಜಪದಲ್ಲಿ ಮಿಂದೇಳುತ್ತಿದ್ದು, ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ದೇವರ ಜೀವನ ಕಥೆ ಹೇಳುವ ಗೊಂಬೆಗಳು ಭಕ್ತರ ಮನ ಸೆಳೆಯುತ್ತಿದೆ. ಉಡುಪಿ ಕೃಷ್ಣ ದೇವರ ಆರಾಧನಾ ಕೇಂದ್ರವಾದರೂ ರಾಮದೇವರ ಬಗ್ಗೆ ಇಲ್ಲಿನ ಅಷ್ಟ ಮಠಗಳಿಗೆ ಎಲ್ಲಿಲ್ಲದ ಪ್ರೀತಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ನಿತ್ಯ ಜಪ ನಡೆಸಿದ ಧಾರ್ಮಿಕ ಕೇಂದ್ರಗಳಲ್ಲಿ ಉಡುಪಿಯ ಕೃಷ್ಣ ಮಠವು ಒಂದು. ಈಗ ಅಯೋಧ್ಯೆಯಲ್ಲಿ ರಾಮಮಂದಿರ ತಲೆಯೆತ್ತುತ್ತಿದೆ. ಕೃಷ್ಣನೂರು ಉಡುಪಿಯಲ್ಲಿ ರಾಮದೇವರ ಗುಣಗಾನ ಮಾಡುವ ರಾಮೋತ್ಸವ ನಡೆಯುತ್ತಿದೆ.

ಎರಡು ವಾರಗಳ ಕಾಲ ನಡೆಯುವ ಈ ಸರಳ ಧಾರ್ಮಿಕ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ರಾಮನ ಕಥೆ ಹೇಳುವ ಗೊಂಬೆಗಳು. ಧಾತು ಸಂಸ್ಥೆ ಬೆಂಗಳೂರು ಇದರ ಸುಮಾರು 4 ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿ ರಾಮದೇವರ ಜೀವನಕಥೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ರಾಮನ ಹುಟ್ಟು, ರಾಮ ದೇವರ ಯೌವನ ಕಾಲದಲ್ಲಿ ತೋರಿಸಿದ ಸಾಹಸ, ಸೀತಾ ಪರಿಣಯ, ಅಯೋಧ್ಯೆ ತೊರೆದು ಅರಣ್ಯ ಸೇರುವ ರಾಮ ದೇವರ ಭಾವುಕ ಕ್ಷಣಗಳು ಸೇರಿದಂತೆ ಶ್ರಾವಣದ ಅಂತ್ಯದವರೆಗಿನ ಎಲ್ಲಾ ಕಥಾನಕಗಳು ಇಲ್ಲಿ ಗೊಂಬೆಯ ರೂಪದಲ್ಲಿ ಪ್ರಸ್ತುತ ಗೊಂಡಿವೆ. ಯಾವುದೇ ಪುರಾಣ ಪ್ರವಚನ ಹೇಳುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಇಲ್ಲಿ ಗೊಂಬೆಗಳು ರಾಮನ ಕಥೆ ಹೇಳುತ್ತಿವೆ ಎಂದು ಕಲಾಸಂಘಟಕರಾದ ಪುರುಷೋತ್ತಮ ಅಡ್ವೆ ಹೇಳಿದ್ದಾರೆ.

ಮರದ ಪೆಟ್ಟಿಗೆಗಳ ಒಳಗೆ ಮಂದ ಬೆಳಕಿನ ಕೆಳಗೆ ಪುಟ್ಟ ಪುಟ್ಟ ಗೊಂಬೆಗಳನ್ನು ಇಲ್ಲಿ ಜೋಡಿಸಿಡಲಾಗಿದೆ. 4 ಹಂತಗಳಲ್ಲಿ ಈ ಗೊಂಬೆಗಳು ಪ್ರದರ್ಶನಕ್ಕೆ ಜೋಡಣೆ ಗೊಂಡಿವೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ರಾಮನ ಕಥೆ ಹೇಳಲು ಯುವಕರ ತಂಡ ಸಿದ್ಧವಾಗಿ ಕುಳಿತಿದೆ. ನೋಡುಗರಿಗೆ ಮನಮುಟ್ಟುವ ರೀತಿಯಲ್ಲಿ ಯುವಕರು ರಾಮದೇವರ ಕಥೆ ಹೇಳುತ್ತಿದ್ದಾರೆ. ಇದರಿಂದ ಯುವಕರಲ್ಲಿ ಪುರಾಣ ಪ್ರಜ್ಞೆಯು ಬೆಳೆಯುವುದಕ್ಕೆ ಸಾಧ್ಯವಾಗಿದೆ ಎಂದು ಅದಮಾರು ಮಠದ ಮ್ಯಾನೇಜರ್ ಗೊವಿಂದಾ ರಾಜ್ ತಿಳಿಸಿದ್ದಾರೆ.

rama vaibava

ರಾಮನ ಕಥೆ ಹೇಳುವ ಗೊಂಬೆಗಳು

ಇದೇ ವೇಳೆ ಅದಮಾರು ಮಠದ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರ ತರಬೇತಿ ಶಿಬಿರವು ನಡೆಯುತ್ತಿದೆ ದೇಶದ ನಾನಾ ಭಾಗಗಳಿಂದ ಬಂದಿರುವ ಕಲಾವಿದರು ಇಲ್ಲಿ ಕಾರ್ಯಾಗಾರ ನಡೆಸುತ್ತಿದ್ದಾರೆ. ಸದ್ಯ ಅಷ್ಟಮಠಗಳ ಉಡುಪಿ ರಾಮಕೃಷ್ಣ ದೇವರ ಜಪದಲ್ಲಿ ತಲ್ಲೀನವಾಗಿದೆ ಕಲ್ ಆರಾಧನೆಯ ಮೂಲಕ ದೇವರ ಪೂಜೆ ನಡೆಸುವುದು ಅದಮಾರು ಪರ್ಯಾಯ ಮಠದ ಆಶಯವಾಗಿದೆ.

rama vaibava

ಪುರಾಣ ಕಥನದ ದೃಶ್ಯ

ಇದನ್ನೂ ಓದಿ:

ಉಡುಪಿ ಜಿಲ್ಲಾಧಿಕಾರಿಯ ಕೃಷಿ ಆಸಕ್ತಿ; ಮನೆಯ ಪಕ್ಕದಲ್ಲೇ ತರಕಾರಿ ಬೆಳೆದು ಇತರರಿಗೆ ಮಾದರಿಯಾದ ಜಿ. ಜಗದೀಶ್

ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ‘Y’ ಶ್ರೇಣಿಯ ಭದ್ರತೆ ನೀಡಿದ ರಾಜ್ಯ ಸರ್ಕಾರ

(Rama Navami 2021 Udupi is getting ready for celebrate Ayodhya Ram Utsav and people are excited)