ರಾಮಮಂದಿರಕ್ಕೆ ಬಾಂಬ್‌ ಬೆದರಿಕೆ ವಿಚಾರ: ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆಗೆ ಸೂಚಿಸುವೆ: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ರಾಮಮಂದಿರಕ್ಕೆ ಬಾಂಬ್‌ ಬೆದರಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆ ಕೈಗೊಳ್ಳಲು ಸೂಚನೆ ನೀಡುವೆ. ಎಂಡಿಗೆ ಆದೇಶ ಕೊಟ್ಟಿದ್ದೇನೆ, ತನಿಖೆ ನಡೆಸುತ್ತಾರೆ ಎಂದು ಹೇಳಿದ್ದಾರೆ. ಬೆದರಿಕೆ ಇ-ಮೇಲ್ ಕಳಿಸುತ್ತಾರೆ, ಪೊಲೀಸರು ಎಚ್ಚರಿಕೆ ವಹಿಸುತ್ತಾರೆ ಎಂದಿದ್ದಾರೆ.

ರಾಮಮಂದಿರಕ್ಕೆ ಬಾಂಬ್‌ ಬೆದರಿಕೆ ವಿಚಾರ: ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆಗೆ ಸೂಚಿಸುವೆ: ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Mar 09, 2024 | 5:13 PM

ದಾವಣಗೆರೆ, ಮಾರ್ಚ್​​ 09: ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆ ಕೈಗೊಳ್ಳಲು ಸೂಚನೆ ನೀಡುವೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (RamalingaReddy) ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ರಾಮಮಂದಿರಕ್ಕೆ ಬಾಂಬ್‌ ಬೆದರಿಕೆ ವಿಚಾರವಾಗಿ ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆದರಿಕೆ ಇ-ಮೇಲ್ ಕಳಿಸುತ್ತಾರೆ, ಪೊಲೀಸರು ಎಚ್ಚರಿಕೆ ವಹಿಸುತ್ತಾರೆ. ಎಂಡಿಗೆ ಆದೇಶ ಕೊಟ್ಟಿದ್ದೇನೆ, ತನಿಖೆ ನಡೆಸುತ್ತಾರೆ ಎಂದು ಹೇಳಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಅವಧಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ವಾ? 6 ಕಡೆ ಸ್ಫೋಟ ಆಗಿದೆ. ಪ್ರಪಂಚ ಹುಟ್ಟಿದಾಗಿನಿಂದ ಇಂತಹ ಘಟನೆ ಆಗುತ್ತಿವೆ ಎಂದು ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸರಣಿ ಸ್ಫೋಟಗಳಾಗಿತ್ತು. ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿದೆ. ಬಿಜೆಪಿ ಅವಧಿಯ ಬಾಂಬ್ ಸ್ಫೋಟ ಪ್ರಕರಣಗಳ ಬಗ್ಗೆ ಚೀಟಿಯಲ್ಲಿ ಬರೆದುಕೊಂಡು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಇವುಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗೋಣಾ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿ: ನಿಪ್ಪಾಣಿ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ

ಈ ಹಿಂದೆ ಶಕ್ತಿ ಯೋಜನೆ ಬಗ್ಗೆ ಪ್ರತಿಪಕ್ಷ ವಿಭಿನ್ನ ಹೇಳಿಕೆ ನೀಡಿದ್ದರು.‌ ನಮ್ಮ ಸರ್ಕಾರ ಅಧಿಕಾರಕ್ಕೆ 15 ದಿನಗಳಲ್ಲಿ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ವಿರೋಧಿಗಳು ಲೋಕಸಭೆ ಚುನಾವಣೆ ಬಳಿಕ ನಮ್ಮ ಸರ್ಕಾರ ಪತನ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಅವರು ಬಡವರ ವಿರೋಧಿಗಳು. ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನೀರಿಗೆ ಬರ: ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆ

ಕೊರೊನಾ ಕಾಲದಲ್ಲಿ ನಿಲ್ಲಿಸಲಾದ 3600 ಬಸ್​ಗಳನ್ನ ಪುನರ್ ಆರಂಭ ಮಾಡಲಾಗುವುದು. ಈಗ 5800 ಹೊಸ ಬಸ್ ಖರೀದಿಸಲಾಗಿದೆ. ಸದ್ಯದಲ್ಲಿ 900 ಸಿಬ್ಬಂದಿ ನೇಮಕಾತಿ ಇಷ್ಟರಲ್ಲಿಯೇ ಆಗಲಿದೆ. ಕಲ್ಯಾಣ ಕರ್ನಾಟಕದ 1600 ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ