ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಕರ್ನಾಟಕ ಭಕ್ತರ ವಾಹನಕ್ಕೆ ಲಾರಿ ಡಿಕ್ಕಿ, 23 ಜನರಿಗೆ ಗಾಯ, ಇಬ್ಬರ ಸ್ಥತಿ ಗಂಭೀರ

ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಶಬರಿಮಲೆಗೆ ತೆರಳಿದ್ದ ರಾಜ್ಯದ ಭಕ್ತರ ಬಸ್​​ ಡಿಕ್ಕಿ ಹೊಡೆದ ಪರಿಣಾಮ 23 ಭಕ್ತರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಕರ್ನಾಟಕ ಭಕ್ತರ ವಾಹನಕ್ಕೆ ಲಾರಿ ಡಿಕ್ಕಿ, 23 ಜನರಿಗೆ ಗಾಯ, ಇಬ್ಬರ ಸ್ಥತಿ ಗಂಭೀರ
ಶಬರಿಮಲೆಗೆ ತೆರಳಿದ್ದ ರಾಜ್ಯದ ಭಕ್ತರ ವಾಹನಕ್ಕೆ ಲಾರಿ ಡಿಕ್ಕಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 25, 2022 | 4:09 PM

ರಾಮನಗರ: ಶಬರಿಮಲೆಗೆ ತೆರಳಿದ್ದ ರಾಜ್ಯದ ಭಕ್ತರ ಬಸ್​ಗೆ ಲಾರಿ​​ ಡಿಕ್ಕಿ ಹೊಡೆದ ಪರಿಣಾಮ 23 ಭಕ್ತರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಕೇರಳದ ಕಣ್ಣೂರಿನ ಪೊನ್ನೂರು ಬಳಿ ಅಪಘಾತ ನಡೆದಿದೆ. ಶಬರಿಮಲೆಯಿಂದ ರಾಮನಗರ ತಾಲೂಕಿನ ಪೇಟೆಕುರುಬರಹಳ್ಳಿಯ ಭಕ್ತರು ಹಿಂದಿರುಗುತ್ತಿದ್ದರು. ಈ ವೇಳೆ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಮಿನಿ ಬಸ್​ ಡಿಕ್ಕಿ ಹೊಡೆದಿದೆ. ಗಾಯಾಳು ಭಕ್ತರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಬಸ್​ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ನವೆಂಬರ್ 20 ರ ರಾತ್ರಿ ಶಬರಿಮಲೆ ದರ್ಶನಕ್ಕೆಂದು ಮಾಲೆ ಧರಿಸಿ ತೆರಳಿದ್ದರು. ಶಬರಿಮಲೆ ದರ್ಶನ ಮುಗಿಸಿಕೊಂಡು ಧರ್ಮಸ್ಥಳಕ್ಕೆ ಬರುವಾಗ ಅವಘಡ ಸಂಭವಿಸಿದ್ದು, ಅವಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮರವೇರಿ ಆತ್ಮಹತ್ಯೆಗೆ ಮುಂದಾದ ರೈತ 

ಬೆಂಗಳೂರು: ನೀಲಗಿರಿಯ ಬೃಹತ್ ಮರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೈಸೂರಿನ ರೈತ ಎಚ್ಚರಿಕೆ ನೀಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಹಾರಾಣಿ ಕಾಲೇಜಿನ ಆವರಣದಲ್ಲಿರುವ ಮರವನ್ನು ರೈತ ರೇವಣ್ಣ ಎರಿದ್ದಾರೆ. ರೈತ ಸಂಘಟನೆ ಒಕ್ಕೂಟದಿಂದ ಕಬ್ಬಿನ ಎಫ್ಆರ್ಫಿ ದರವನ್ನು ಹೆಚ್ಚಿಸುವಂತೆ ಫ್ರೀಡಂ ಪಾರ್ಕ್​ನಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಮರದ ಮೇಲೆ ಕುಳಿತು ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ನಾನು ಕೆಳಗೆ ಬೀಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಹಾನ್ ವಂಚಕ ಪತಿ-ಪತ್ನಿ ಪೊಲೀಸರಿಗೆ ಲಾಕ್

ಏರ್ಪೋರ್ಟ್​ನಲ್ಲಿ ಸೀಜ್ ಆದ ಚಿನ್ನಾಭರಣ ಕಡಿಮೆ ಬೆಲೆಗೆ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ ಮಾಡಿದ್ದ ದಾರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಹಾಗೂ ಧನುಷ್ಯ ಅಲಿಯಾಸ್ ರಾಚೆಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ದಾರ್ಬಿನ್ ದಾಸ್ ಕಸ್ಟಮ್ಸ್ ಅಧಿಕಾರಿ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ.

ಏರ್ಪೊರ್ಟ್ ನಲ್ಲಿ ಸೀಜ್ ಆದ ಚಿನ್ನಾಭರಣ ಕಡಿಮೆ ಬೆಲೆಗೆ ಕೊಡಿಸೊದಾಗಿ ಇಂದಿರಾನಗರ ನಿವಾಸಿಯೊಬ್ಬರಿಂದ 68 ಲಕ್ಷ ಹಣ ಪಡೆದು ವಂಚನೆ ಮಾಡಿದ್ದ. ಕೆಲವರಿಗೆ ಏರ್ಪೊರ್ಟ್ ನಲ್ಲಿ ಕೆಲಸ ಕೊಡಿಸೊದಾಗಿ ಸಾವಿರಾರು ರೂ. ಹಣ ಪಡೆದಿದ್ದ. ದೇವನಹಳ್ಳಿಯ ಶಿಕ್ಷಕಿಯಿಂದ 97,750 ರೂ ಹಣ ಪಡೆದು ವಂಚನೆ ಮಾಡಿದ್ದ. ಮತ್ತೊಂದಿಷ್ಟು ಜನರಿಗೆ ಗ್ಯಾಜೆಟ್, ಎಲೆಕ್ಟ್ರಿಕ್ ಉಪಕರಣಗಳನ್ನು ಕಡಿಮೆ ಬೆಲೆಗೆ ಕೊಡಿಸೊದಾಗಿ ಹಣ ಪಡೆದಿದ್ದ. ಹೀಗೆ ಸಾಲು ಸಾಲು ವಂಚನೆ ಮಾಡಿ ಊರು ಬಿಟ್ಟಿದ್ದ ವಂಚಕ ದಂಪತಿಯನ್ನು ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada