ಚನ್ನಪಟ್ಟಣವನ್ನು ಗಂಭೀರವಾಗಿ ತೆಗೆದುಕೊಂಡ ಡಿಕೆ ಶಿವಕುಮಾರ್, ಮತ್ತೆ 3 ದಿನ ಕ್ಷೇತ್ರ ಪ್ರವಾಸ
ಲೋಕಸಭಾ ಚುನಾವಣೆಯಲ್ಲಾದ ಸೋಲನ್ನು ಮರೆಯಲು ಚನ್ನಪಟ್ಟಣ ಚುನಾವಣೆಯನ್ನು ಫುಲ್ ಸೀರಿಯಸ್ ಆಗಿ ತೆಗೆದುಕೊಂಡ ಡಿಸಿಎಂ ಡಿಕೆ ಶಿವಕುಮಾರ್(DK Shivakumar), ಚನ್ನಪಟ್ಟಣ ಪ್ರವಾಸವನ್ನ ಮುಂದುವರಿಸಿದ್ದಾರೆ. ಈಗಾಗಲೇ ಮೂರು ಬಾರಿ ಕಾರ್ಯಕ್ರಮ ಯಶಸ್ವಿಗೊಳಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್, ಜುಲೈ 1 ರಿಂದ ಮೂರು ದಿನಗಳ ಕಾಲ ಮತ್ತೆ ಬೊಂಬೆನಾಡಿಗೆ ಭೇಟಿ ನೀಡಲಿದ್ದಾರೆ.
ರಾಮನಗರ, ಜೂ.28: ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ರಾಜೀನಾಮೆ ಬಳಿಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ(Channapatnam by election) ನಡೆಯಲಿದ್ದು, ಹೇಗಾದರೂ ಅದನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಅದರಂತೆ ಲೋಕಸಭಾ ಚುನಾವಣೆಯಲ್ಲಾದ ಸೋಲನ್ನು ಮರೆಯಲು ಚನ್ನಪಟ್ಟಣ ಚುನಾವಣೆಯನ್ನು ಫುಲ್ ಸೀರಿಯಸ್ ಆಗಿ ತೆಗೆದುಕೊಂಡ ಡಿಸಿಎಂ ಡಿಕೆ ಶಿವಕುಮಾರ್(DK Shivakumar), ಚನ್ನಪಟ್ಟಣ ಪ್ರವಾಸವನ್ನ ಮುಂದುವರಿಸಿದ್ದಾರೆ.
ಎರಡು ವಾರದ ಅಂತರದಲ್ಲಿ ಸತತ ಆರನೇ ಪ್ರವಾಸ
ಹೌದು, ಲೋಕಸಭಾ ಸೋಲಿನಿಂದ ಕೆರಳಿರುವ ಕನಕಪುರದ ಬಂಡೆ ಡಿಕೆ ಸಿವಕುಮಾರ್, ಎರಡು ವಾರದ ಅಂತರದಲ್ಲಿ ಸತತ ಆರನೇ ಪ್ರವಾಸ ಕೈಗೊಂಡಿದ್ದಾರೆ. ಜುಲೈ 1 ರಿಂದ ಮೂರು ದಿನಗಳ ಕಾಲ ಮತ್ತೆ ಬೊಂಬೆನಾಡಿಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಚನ್ನಪಟ್ಟಣ ಕ್ಷೇತ್ರವನ್ನ ವಶಕ್ಕೆ ಪಡೆಯಲು ಜಬರ್ ದಸ್ತ್ ಕಸರತ್ತು ನಡೆಸಿದ್ದಾರೆ.
ಇದನ್ನೂ ಓದಿ:ಚನ್ನಪಟ್ಟಣ ಬೈ ಎಲೆಕ್ಷನ್: ಬಿಜೆಪಿ-ಜೆಡಿಎಸ್ ನಡುವೆ ಟಿಕೆಟ್ ಫೈಟ್, ದಿಲ್ಲಿಯಿಂದ ಯೋಗೇಶ್ವರ್ ಸ್ಫೋಟಕ ಹೇಳಿಕೆ
ಚನ್ನಪಟ್ಟಣ ಪ್ರವಾಸದ ವಿವರ ಹೀಗಿದೆ
- ಜುಲೈ 1 ತಾರೀಕಿಗೆ ಭೂಹಳ್ಳಿ, ವಿರಾಪಿಕ್ಷಿಪುರ ಗ್ರಾಮಕ್ಕೆ ಭೇಟಿ
- ಜುಲೈ-2 ರಂದು ಮಳೂರು, ಹೊಂಗನೂರಿಗೆ ಭೇಟಿ
- ಜುಲೈ-3ರಂದು ಚನ್ನಪಟ್ಟಣ ಟೌನ್ ನಲ್ಲಿ ಎರಡು ಕಡೆ ಕಾರ್ಯಕ್ರಮ
- ರಾಜ್ಯ ಸರಕಾರದ ನೂತನ ಕಾರ್ಯಕ್ರಮ ಜನಸ್ಪಂದನ ಸಭೆ
ಈಗಾಗಲೇ ಮೂರು ಬಾರಿ ಕಾರ್ಯಕ್ರಮ ಯಶಸ್ವಿಗೊಳಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್, ಮನೆ ಬಾಗಿಲಿಗೆ ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಟೈಟಲ್ ಅಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಮೂಲಕ ಹೇಗಾದರೂ ಮಾಡಿ ಮತದಾರ ಪ್ರಭುಗಳನ್ನು ಒಲಿಸಿಕೊಳ್ಳಲು ಸ್ವತಃ ಡಿಸಿಎಂ ಹರಸಾಹಸ ಪಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ