ಕಾಲ ಯಾರನ್ನು ಬಿಡಲ್ಲ: ನಿವೃತ್ತಿ ದಿನವೇ ಲೋಕಾಯುಕ್ತ ಬಲೆಗೆ ಬಿದ್ದ ಆರ್​ಟಿಓ!

ತಪ್ಪು ಮಾಡಿದವರನ್ನು ಕಾಲ ಯಾರನ್ನು ಬಿಡುವುದಿಲ್ಲ ಅಂತಾರೆ ಅಲ್ವಾ ಅದರಂತೆ ಇನ್ನೇನು ಇಂದು ಕೊನೆ ದಿನ ಕೆಲಸ ಮುಗಿಸಿ ನಿವೃತ್ತಿ ಜೀವನ ಕಳೆಯಬೇಕಿದ್ದ ರಾಮನಗರ ಆರ್​ಟಿಓ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತಿ ದಿನವಾದ ಇಂದೇ ಆರ್​ಟಿಓ ಶಿವಕುಮಾರ್​ನನ್ನು ಲೋಕಾಯುಕ್ತ ಬಂಧಿಸಿದೆ.

ಕಾಲ ಯಾರನ್ನು ಬಿಡಲ್ಲ: ನಿವೃತ್ತಿ ದಿನವೇ ಲೋಕಾಯುಕ್ತ ಬಲೆಗೆ ಬಿದ್ದ ಆರ್​ಟಿಓ!
ರಾಮನಗರ ಆರ್ ಟಿಓ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jun 28, 2024 | 5:49 PM

ರಾಮನಗರ, (ಜೂನ್ 28): ರಾಮನಗರ ಆರ್ ಟಿಓ ಆಗಿರುವ ಶಿವಕುಮಾರ್ ಅವರದ್ದು ಇಂದು (ಜೂನ್ 28) ಕೆಲಸದ ಕೊನೆ ದಿನ. ಅವರು ಇಂದು ನಿವೃತ್ತಿಯಾಗುವವರು ಇದ್ದರು. ಆದ್ರೆ, ಕೊನೆಯ ದಿನವೇ ಆರ್ ಟಿಓ ಶಿವಕುಮಾರ್ ಅವರಿಗೆ ಲೋಕಾಯುಕ್ತ ಬಿಗ್ ಶಾಕ್ ಕೊಟ್ಟಿದೆ. ಹೌದು…ರಾಮನಗರ ಆರ್ ಟಿಓ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನುವ ದೂರುಗಳ ಮೇರೆಗೆ ಇಂದು (ಜೂನ್ 28) ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಇನ್ನೇನು ಕೊನೆ ದಿನ ಕೆಲಸ ಮುಗಿಸಿ ಮನೆಗೆ ಹೊರಡಬೇಕೆಂದಿದ್ದ ಶಿವಕುಮಾರ್​ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು, ರಾಮನಗರ RTO ಅಧಿಕಾರಿ ಶಿವಕುಮಾರ್, ಎಸ್​ಡಿಎ ರಚಿತ್ ರಾಜ್ ಮತ್ತು ಬ್ರೋಕರ್ ಸತೀಶ್ ಅವರನ್ನು ಬಂಧಿಸಿದ್ದಾರೆ. ಅಲ್ಲದೇ ಇದೀಗ ರಾಮನಗರ ಆರ್​ಟಿಓ ಕಚೇರಿ, ಎಸ್​ಡಿಎ ರಚಿತ್ ರಾಜ್ ಮತ್ತು ಬ್ರೋಕರ್ ಸತೀಶ್ ನಿವಾಸದ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

ಸೀಜ್ ಮಾಡಿರುವ ವಾಹನಗಳ ದಾಖಲೆಯನ್ನು ನೀಡಿ ಮಾರಾಟ, ಹಳೇ ಟ್ರ್ಯಾಕ್ಟರ್​​ಗಳಿಗೆ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ಒಟ್ಟು 2 ಸಾವಿರ ಟ್ರ್ಯಾಕ್ಟರ್​ಗಳಿಗೆ ಹೊಸ ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ. ತಪ್ಪು ಮಾಡಿದವರನ್ನು ಕಾಲ ಯಾರನ್ನು ಬಿಡುವುದಿಲ್ಲ ಅಂತಾರೆ ಅಲ್ವಾ ಅದರಂತೆ ಇನ್ನೇನು ಇಂದು ಕೊನೆ ದಿನ ಕೆಲಸ ಮುಗಿಸಿ ನಿವೃತ್ತಿ ಜೀವನ ಕಳೆಯಬೇಕಿದ್ದ ಆರ್​ಟಿಓ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ಶಾಂಪೆನ್​ ಬಾಟಲ್​ ಓಪನ್​ ಮಾಡಿ ಸಂಭ್ರಮಿಸಿದ ನಾಯಕ ರೋಹಿತ್
T20 World Cup: ಶಾಂಪೆನ್​ ಬಾಟಲ್​ ಓಪನ್​ ಮಾಡಿ ಸಂಭ್ರಮಿಸಿದ ನಾಯಕ ರೋಹಿತ್