ಡಿಕೆ ಶಿವಕುಮಾರ್ರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ: ಪರೀಕ್ಷೆ ಮುಂದೂಡಿದ ಆಡಳಿತ ಮಂಡಳಿ
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಗ್ರಾಮದ ಶಾಲಾ ಆವರಣದಲ್ಲಿ ಸರಕಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಮತ್ತು ಉದ್ಘಾಟನೆ ಹಿನ್ನೆಲೆ ಪ್ರೌಢಶಾಲೆಯ ಮಧ್ಯಂತರ ಪರೀಕ್ಷೆಯ ನಡೆಯಬೇಕಿದ್ದ ಕನ್ನಡ ಪರೀಕ್ಷೆಯನ್ನು ಆಡಳಿತ ಮಂಡಳಿ ಮುಂದೂಡಿದೆ.
ರಾಮನಗರ, ಅಕ್ಟೋಬರ್ 06: ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಗ್ರಾಮದ ಶಾಲಾ ಆವರಣದಲ್ಲಿ ಸರಕಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಮತ್ತು ಉದ್ಘಾಟನೆ ಹಿನ್ನೆಲೆ ಪ್ರೌಢಶಾಲೆಯ ಮಧ್ಯಂತರ ಪರೀಕ್ಷೆಯ ನಡೆಯಬೇಕಿದ್ದ ಕನ್ನಡ ಪರೀಕ್ಷೆಯನ್ನು ಆಡಳಿತ ಮಂಡಳಿ ಮುಂದೂಡಿದೆ. ಕಾರ್ಯಕ್ರಮದ ಕಿರಿಕಿರಿ ನಡುವೆಯೇ ಪದವಿ ಪರೀಕ್ಷೆ ಮುಂದುವರೆದಿವೆ. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಭಾಗಿಯಾಗಿದ್ದರು.
ಸರ್ಕಾರಿ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳ ಬಳಕೆ ಕೂಡ ಮಾಡಲಾಗಿದೆ. ತರಗತಿಗಳನ್ನು ಮೊಟಕುಗೊಳಿಸಿ ಸರಕಾರಿ ಶಾಲೆ ಹಾಗೂ ಕಾಲೇಜು ಮಕ್ಕಳನ್ನು ಕಾರ್ಯಕ್ರಮದಲ್ಲಿ ಬಳಕೆ ಮಾಡಲಾಗಿದೆ.
ಕುಡಿಯುವುದನ್ನು ಯಾರೂ ತಪ್ಪಿಸಲು ಸಾಧ್ಯವಾಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಳೆದ 30 ವರ್ಷದಿಂದ ಯಾವುದೇ ಅಬಕಾರಿ ಲೈಸೆನ್ಸ್ ನೀಡಿಲ್ಲ. ಹಳ್ಳಿಯಲ್ಲಿ ನಾವು ಬಾರ್ ತೆಗೆಯುವುದಿಲ್ಲ. ಚರ್ಚಿಸಿ ಸೂಕ್ತ ಪ್ರದೇಶಗಳಲ್ಲಿ ಬಾರ್ಗಳನ್ನು ತೆರೆಯಲಾಗುವುದು. ಕುಡಿಯುವುದನ್ನು ಯಾರೂ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಚಾಯಿತಿಗೊಂದು ಬಾರ್ ವಿವಾದದ ಬಗ್ಗೆ ಸಿಎಂ, ಡಿಸಿಎಂ ಸ್ಪಷ್ಟನೆ: ಎಲ್ಲಾ ಅಂತೆ-ಕಂತೆಗಳಿಗೆ ತೆರೆ
ನಮ್ಮ ಜಿಲ್ಲೆಗೆ ಇದು ಸಂತೋಷ ದಿನ. ಗ್ರಾಮೀಣ ಪ್ರದೇಶದಲ್ಲಿ ಸಿಎಸ್ಆರ್ ನಿಧಿ ಮೂಲಕ ರಾಜ್ಯದಲ್ಲಿ ಮಾದರಿ ಸರಕಾರಿ ಶಾಲೆ ಕಟ್ಟಬೇಕು ಎಂಬ ಉದ್ದೇಶ ಈಗ ಕುದೂರಿನ ಮೂಲಕ ನನಸಾಗಿದೆ. ರಾಮನಗರದಲ್ಲಿ 288 ಶೌಚಾಲಯ ನಿರ್ಮಿಸಿದ್ದ ಟಯೋಟ ಸಂಸ್ಥೆ ಈಗ ಶಾಲೆಗಳಿಗಾಗಿ 16 ಕೋಟಿ ರೂ. ವೆಚ್ಚ ಮಾಡಲು ಮುಂದೆ ಬಂದಿದೆ. ಹೀಗಾಗಿ ಇಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಕೆಪಿಎಸ್ ಶಾಲೆ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀಟ್ ಓಪನ್: ಸಚಿವ ಭೈರತಿ ಸುರೇಶ್
ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯು ಇಂತಹ ಶಾಲೆಗಳು ತಲೆ ಎತ್ತಲಿವೆ. ಶಿಕ್ಷಣಕ್ಕಾಗಿ ಬೆಂಗಳೂರಿಗೆ ಓಡಾಡುವ ಪರದಾಟ ತಪ್ಪಿಸಲು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದಲ್ಲಿನ ಎಲ್ಲ ಕಾರ್ಖಾನೆಗಳು ಈ ವರ್ಷ ಎರಡು ಸಾವಿರ ಶಾಲೆ ನಿರ್ಮಿಸುವಂತೆ ಮನವಿ ಮಾಡಲಾಗಿದೆ. ಶಿಕ್ಷಕರ ಕೊರತೆಯನ್ನು ನಿಗಿಸುವ ಕೆಲಸವನ್ನು ಸರಕಾರ ಮಾಡಲಿದೆ. ಲಿಂಗಾಯಿತ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಧಿಕಾರಿಗಳು ಮಾತನಾಡುತ್ತಾರೆ ಅಷ್ಟೇ. ಜನರು ನಮಗೆ ನೀಡಿರುವ ಅವಕಾಶವನ್ನು ನಾವು ಬಳಸಿಕೊಂಡು ಸೇವೆ ಸಲ್ಲಿಸುತ್ತೆವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.