ರಾಮನಗರ: ಕೊಂಡ ಹಾಯುವಾಗ ಬಿದ್ದು ಅರ್ಚಕನಿಗೆ ಗಾಯ; ಪಟ್ಟಲದಮ್ಮ ಕೊಂಡೋತ್ಸವದ ವೇಳೆ ಅವಗಢ

ಅರ್ಚಕ ರಾಜುವಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಕೊಂಡದಿಂದ ಭಕ್ತರು ಮೇಲಿತ್ತಿದ್ದಾರೆ. ಸದ್ಯ ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ಅರ್ಚಕರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ರಾಮನಗರ: ಕೊಂಡ ಹಾಯುವಾಗ ಬಿದ್ದು ಅರ್ಚಕನಿಗೆ ಗಾಯ; ಪಟ್ಟಲದಮ್ಮ ಕೊಂಡೋತ್ಸವದ ವೇಳೆ ಅವಗಢ
ಕೊಂಡ ಹಾಯುವಾಗ ಬಿದ್ದು ಅರ್ಚಕನಿಗೆ ಗಾಯ
Follow us
TV9 Web
| Updated By: preethi shettigar

Updated on:Mar 26, 2022 | 9:37 AM

ರಾಮನಗರ: ಕೊಂಡ ಹಾಯುವಾಗ ಕೊಂಡಕ್ಕೆ ಬಿದ್ದು, ಅರ್ಚಕರು (Priest) ಗಾಯಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗ್ರಾಮದೇವತೆ ಪಟ್ಟಲದಮ್ಮ ದೇವಿಯ ಕೊಂಡೋತ್ಸವದ ವೇಳೆ ಅವಗಢ ಸಂಭವಿಸಿದೆ. ಅರ್ಚಕ ರಾಜುವಿಗೆ ಗಂಭೀರ ಗಾಯವಾಗಿದ್ದು(Injury), ತಕ್ಷಣ ಕೊಂಡದಿಂದ ಭಕ್ತರು ಮೇಲಿತ್ತಿದ್ದಾರೆ. ಸದ್ಯ ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ (Hospital) ಅರ್ಚಕರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಚಾಮರಾಜನಗರ: ಮೈಮೇಲೆ ಕೆಂಡ ಸುರಿದುಕೊಂಡು ದೇವರಿಗೆ ಪೂಜೆ

ಚಾಮರಾಜನಗರ ಜಿಲ್ಲೆಯ ತೆಳ್ಳನೂರ ಗ್ರಾಮದಲ್ಲಿ ಉರುಕಾತಮ್ಮ ಜಾತ್ರೆಯಲ್ಲಿ ಮೈಮೇಲೆ ಕೆಂಡ ಸುರಿದುಕೊಂಡು ದೇವಸ್ಥಾನದ ಪೂಜಾರಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಚಾಮರಾಜನಗರದಲ್ಲಿ ವಿಶಿಷ್ಟವಾಗಿ ಜಾತ್ರೆ ಆಚರಣೆ ಮಾಡಲಾಗಿದೆ. ಮೈಮೇಲೆ ಕೆಂಡ ಸುರಿದುಕೊಂಡರು ಯಾವುದೇ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಇಲ್ಲಿ ಚಾಲ್ತಿಯಲ್ಲಿದೆ. ನೂರಾರು ವರ್ಷಗಳಿಂದ ಗ್ರಾಮದಲ್ಲಿ ಜಾತ್ರೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ವಿಷ ಸರ್ಪ ಕಚ್ಚಿದರೆ ದೇವರಿಗೆ ಪೂಜೆ ಸಲ್ಲಿಸಿದರೆ ಬದುಕುಳಿಯುತ್ತಾರೆ ಎಂಬ ನಂಬಿಕೆ ಕೂಡ ಇಲ್ಲಿ ಇದೆ.

ಈ ಹಿಂದೆ ಮಂಡ್ಯದಲ್ಲೂ ಮೂಕಮಾರಮ್ಮ ಹಬ್ಬದ ಕೊಂಡೋತ್ಸವದಲ್ಲಿ ಕೊಂಡ ಹಾಯುವಾಗ ಅರ್ಚಕ ಬಿದ್ದಿದ್ದರು ಕೊಂಡ ಹಾಯುವಾಗ ಅರ್ಚಕೋರ್ವರು ಬಿದ್ದು ಗಾಯಗೊಂಡಿರುವ ಘಟನೆ ಮಂಡ್ಯ  ಜಿಲ್ಲೆ ಮಳವಳ್ಳಿ ತಾಲೂಕಿನ ತಮ್ಮಡಹಳ್ಳಿಯಲ್ಲಿ ನಡೆದಿದೆ. ಗ್ರಾಮದಲ್ಲಿ ಮೂಕಮಾರಮ್ಮ ಹಬ್ಬದ ಕೊಂಡೋತ್ಸವದ ವೇಳೆ ಘಟನೆ ನಡೆದಿದೆ. ಕೊಂಡ ಹಾಯುವ ವೇಳೆ ಪೂಜಾರಿ ನಿಂಗರಾಜು ಕೆಂಡಕ್ಕೆ ಬಿದ್ದಿದ್ದು, ಗಾಯಗೊಂಡಿದ್ದಾರೆ. ಅವರನ್ನು ಸ್ಥಳದಲ್ಲಿದ್ದ ಭಕ್ತರು ತಕ್ಷಣ ರಕ್ಷಿಸಿದ್ದಾರೆ. ಪ್ರಸ್ತುತ ನಿಂಗರಾಜು ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಳವಳ್ಳಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ:

ಹಾಸನದಲ್ಲಿ ಚಪ್ಪಲಿ ಅಂಗಡಿಗೆ ಬೆಂಕಿಬಿದ್ದು ಲಕ್ಷಾಂತರ ಬೆಲೆಯ ಪಾದರಕ್ಷೆಗಳು ಭಸ್ಮ, ಶಾರ್ಟ್ ಸರ್ಕ್ಯೂಟ್​ನಿಂದಾದ ಅವಗಢ

 ಭದ್ರಾವತಿ ಕಟ್ಟಿಗೆ ಮಿಲ್ಲೊಂದರಲ್ಲಿ ಅಗ್ನಿ ಅವಗಢ, ಲಕ್ಷಾಂತರ ರೂಪಾಯಿ ಮೌಲ್ಯದ ಕಟ್ಟಿಗೆ ಸುಟ್ಟು ಬೂದಿ

Published On - 9:29 am, Sat, 26 March 22