AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಕಾರ್ಯಕರ್ತರ ಆಸೆ ಈಡೇರಿತು: ರಾಮನಗರ ಕ್ಷೇತ್ರವನ್ನ ಮತ್ತೆ ಪಡೆಯಲು ದಳಪತಿಗಳ ಪ್ಲ್ಯಾನ್

ಕೊನೆಗೂ ಕಾರ್ಯಕರ್ತರ ಆಸೆ ಈಡೇರಿತು: ರಾಮನಗರ ಕ್ಷೇತ್ರವನ್ನ ಮತ್ತೆ ಪಡೆಯಲು ದಳಪತಿಗಳ ಪ್ಲ್ಯಾನ್

ಪ್ರಶಾಂತ್​ ಬಿ.
| Edited By: |

Updated on: Aug 27, 2026 | 9:29 PM

Share

ರಾಮನಗರ ವಿಧಾನಸಭಾ ಕ್ಷೇತ್ರ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಕೆಲ ವರ್ಷಗಳ ಕೆಳಗೆ ಜೆಡಿಎಸ್ ಪ್ರಾಬಲ್ಯವಿದ್ದ ಕ್ಷೇತ್ರ. ಆದರೆ ಇದೀಗ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಹೀಗಾಗಿ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ದಳಪತಿಗಳು ಮುಂದಾಗಿದ್ದಾರೆ. ಇದಕ್ಕೊಂದು ದಳಪತಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳು ಇವೆ. ಆಗಲೇ ಕುಮಾರಸ್ವಾಮಿ ರಣತಂತ್ರ ಹೆಣೆದಿದ್ದಾರೆ.

ಬೆಂಗಳೂರು, (ಆಗಸ್ಟ್​ 27): 2028ರ ಚುನಾವಣೆಯನ್ನ ಗಮನದಲ್ಲಿ ಇಟ್ಟುಕೊಂಡು ದಳಪತಿಗಳು ರಾಮನಗರದಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅಂದಹಾಗೆ ರಾಮನಗರ ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ತನ್ನದ ಆದ ಚಾಪು ಮೂಡಿಸಿರೋ ಕ್ಷೇತ್ರ. ದೇವೆಗೌಡರ ಕುಟುಂಬಕ್ಕೆ ರಾಜಕೀಯ ಜನ್ಮ ನೀಡಿರೋ ಕ್ಷೇತ್ರ. ರಾಮನಗರ ಕ್ಷೇತ್ರದಿಂದಲೇ ಗೆದ್ದು ಕುಮಾರಸ್ವಾಮಿ ಅವರು ಸಿಎಂ ಆಗಿದ್ರು. 2004 ರಿಂದ 2023ರವರೆಗೂ ಜೆಡಿಎಸ್ ಪ್ರಾಬಲ್ಯವಿತ್ತು. ಆದರೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಗೆ ಟಕ್ಕರ್ ನೀಡಿ ಕಾಂಗ್ರೆಸ್ ತನ್ನ ತೆಕ್ಕೆಗೆ ಕ್ಷೇತ್ರವನ್ನ ತೆಗೆದುಕೊಂಡಿತ್ತು‌. ಇದೀಗ ಮತ್ತೆ ‌ಕ್ಷೇತ್ರವನ್ನ ಮರಳಿ ವಶಕ್ಕೆ ಪಡೆಯಲು ದಳಪತಿಗಳು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪಕ್ಷದ ಕಚೇರಿ ತೆರೆದಿದ್ದಾರೆ.

ಅಂದಹಾಗೆ ಚುನಾವಣೆ ನಂತರ ಸಾಕಷ್ಟು ಇನ್ ಆಕ್ಟಿವ್ ಆಗಿದ್ದ ಕಾರ್ಯಕರ್ತರಿಗೆ ಬೂಸ್ಟ್ ನೀಡಲು ಇದೀಗ ದಳಪತಿಗಳು ರಾಮನಗರದಲ್ಲಿ ಪಕ್ಷದ ಜಿಲ್ಲಾ ಕಚೇರಿಯನ್ನ ತೆರೆದಿದ್ದಾರೆ. ಅಷ್ಟಕ್ಕೂ ಜಿಲ್ಲಾ ಕೇಂದ್ರದಲ್ಲಿ ಇದುವರೆಗೂ ಪಕ್ಷದ ಕಚೇರಿ ಇರಲಿಲ್ಲ. ಸಭೆಗಳನ್ನ ಹೊರಭಾಗದಲ್ಲಿ ಮಾಡುವಂತಹ ಪರಿಸ್ಥಿತಿ ‌ಇತ್ತು. ಇದು ಕೂಡ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಇಂದಿನಿಂದಲೇ ಕಾರ್ಯಕರ್ತರನ್ನ ಆಕ್ಟಿವ್ ಮಾಡಲು ಪಕ್ಷದ ಕಚೇರಿ ತೆರೆದು ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.

ಒಟ್ಟಾರೆ ಮುಂದಿನ ಚುನಾವಣೆಯನ್ನ ಗಮನದಲ್ಲಿ ‌ಇಟ್ಟುಕೊಂಡು ಪಕ್ಷದ ಕಚೇರಿ ತೆರೆಯುವ ಮೂಲಕ ಚುನಾವಣೆಗೆ ಸಿದ್ದತೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us