ರಾಮನಗರ: ನಾಡಿನಲ್ಲಿ ಬಹಳ ಜನ ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ ಭಗವಂತನ ಇಚ್ಛೆ ಬೇರೆ ಇದೆ ಎಂದು ರಾಮನಗರದಲ್ಲಿ ಆಯೋಜಿಸಿದ್ದ ಚಾಮುಂಡೇಶ್ವರಿ ಕರಗ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ ನೀಡಿದರು. ತಾಯಿ ಚಾಮುಂಡೇಶ್ವರಿ ಇಚ್ಛೆ ಬೇರೆ ಇದೆ. ಚಾಮುಂಡೇಶ್ವರಿ ಮತ್ತು ಜನರ ಆಶಿರ್ವಾದದಿಂದ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಕಳೆದ ಮೂರು ವರ್ಷ ಕೊವಿಡ್ನಿಂದ ಕರಗ ಮಾಡಲು ಸಾಧ್ಯವಾಗಿರಲಿಲ್ಲ. ನನಗೆ ರಾಜಕೀಯ ಜನ್ಮ ಕೊಟ್ಟಿರುವ ನಿಮ್ಮ ಜೊತೆ ಮನಸ್ಸಿನಲ್ಲಿ ಇರುವ ಭಾವನೆ ಹಂಚಿಕೊಳ್ಳಲು ಈ ಕಾರ್ಯಕ್ರಮ. ರೈತರು ನೆಮ್ಮದಿಯಿಂದ ಬದಕಲು ಚಾಮುಂಡೇಶ್ವರಿ ತಾಯಿ ಕರುಣಿಸಲಿ. 2019ರ ಜುಲೈ ರಂದು ನನ್ನ ಅಧಿಕಾರವನ್ನ ಕುತಂತ್ರದಿಂದ ತೆಗೆಯಲಾಗಿತ್ತು. ತಾಯಿ ಚಾಮುಂಡೇಶ್ವರಿ ಆಶಿರ್ವಾದ ಪಡೆದು, ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಷೆ ಮಾಡಿ ಹೊರಟಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಶಿವಕುಮಾರ ಮುಖ್ಯಮಂತ್ರಿ ಆಗೋದು ಕಷ್ಟ: ಹೆಚ್ ಡಿ ಕುಮಾರಸ್ವಾಮಿ
ನಮ್ಮ ಬದುಕು ಇರುವುದು ಹಳ್ಳಿಯಲ್ಲಿ. ಕಳೆದ ರಾಜಕೀಯ ಸನ್ನಿವೇಶದಲ್ಲಿ ಎರಡು ಕಡೆ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ಸ್ವರ್ಧೆ ಮಾಡಿದ್ದೇ. ಸಸಿಯಾಗಿ ನೆಟ್ಟು, ರಾಜ್ಯದಲ್ಲಿ ಹೆಮ್ಮಾರವಾಗಿ ಬೆಳೆಸಿದ್ದೀರಿ. ನಾನು ಮಣ್ಣಲಿ ಮಣ್ಣಾಗುವುದು ಇದೇ ಮಣ್ಣಿನಲ್ಲಿ. ನೀವು ಕೊಟ್ಟ ಶಕ್ತಿಯನ್ನ ಲಕ್ಷಾಂತರ ಜನರಿಗೆ ಧಾರೆ ಎರೆದಿದ್ದೇನೆ. ನನ್ನ ರಾಮನಗರ ತಾಲೂಕಿನ ಸಂಬಂಧ ತಾಯಿ ಮಗನ ಸಂಬಂಧ. ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟರೆ ಮತ್ತೆ ಅಲ್ಲಿ ಗೆಲ್ಲಲೂ ಕಷ್ಟ ಎಂದು ಅಲ್ಲ. ನಾವು ಎಂದು ಜನರಿಗೆ ತೊಂದರೆ ಕೊಟ್ಟಿಲ್ಲ. ನನ್ನ ಜೀವನದ ಸವಾಲು ಪಂಚರತ್ನ ಯೋಜನೆ. ನಾನು ಬದುಕಿರುವ ಒಂದೊಂದು ಕ್ಷಣ ಬಡವರಿಗಾಗಿ. ನೀವು ಕೊಟ್ಟಿರುವ ಶಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ.
ರಾಜೀವ್ ಗಾಂಧಿ ವಿವಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುತ್ತೇನೆ ಎನ್ನುತ್ತಾರೆ ಅಷ್ಟೇ. ಆದರೆ ಕಾಮಗಾರಿ ಆರಂಭಿಸಿಲ್ಲ. ರಾಮನಗರದಲ್ಲಿ ಕೆಲ ತಪ್ಪಿನ ರಾಜಕಾರಣ ಮಾಡುತ್ತಿದ್ದಾರೆ. ಆರೋಗ್ಯದ ಸಮಸ್ಯೆ ಇದ್ದರು ನಿಮ್ಮ ಸೇವೆ ಮಾಡಲು ಹೊರಟಿದ್ದೇನೆ. ನಾನು ಶಿಕ್ಷಣ ಸಂಸ್ಥೆ, ಕೈಗಾರಿಕೆ ಹೊಂದಿಲ್ಲ. ಕೇತಗಾನಬಳಿ 45 ಎಕರೆ ಜಮೀನು ಬಿಟ್ಟರೇ ಬೇರೆ ಏನು ಇಲ್ಲ. ಪ್ರತಿನಿತ್ಯ ಮನೆಯ ಬಳಿ ಜನರು ಬರುತ್ತಾರೆ ಎಲ್ಲಿಂದ ಕೊಡಲಿ. ಐದು ವರ್ಷದ ಸರ್ಕಾರ ಕೊಟ್ಟರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ. ಕೆವರಿಗೆ ತಪ್ಪಾಗಿದ್ದರೇ ನನ್ನಿಂದ ಆಗಿಲ್ಲ. ಭಗವಂತನಿಂದ ಆಗಿದೆ. ಅಪಪ್ರಚಾರಕ್ಕೆ ಒಳಗಾಗಬೇಡಿ. ಏನೇ ಇದ್ದರು ನನ್ನ ಬಳಿ ಬಂದು ತಿಳಿಸಿ. ನನ್ನ ಸಂಕಲ್ಪಕ್ಕೆ ನಿಮ್ಮ ಆರ್ಶಿವಾದ ಬೇಕು. ನನ್ನ ಭಾವನೆಗಳನ್ನ ನಿಮ್ಮ ಮುಂದೆ ಇಟ್ಟಿದ್ದೇನೆ. ನನಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.