AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mekedatu Padayatra: 2 ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ಸೈಯದ್ ಹುಸೇನ್ ನಡಿಗೆ; ವಿಭಿನ್ನ ಹೋರಾಟ

ಬಿಸಿಲಿನಲ್ಲಿ ನಾವೂ ನಡೆಯೋದೆ ಕಷ್ಟ/ ಆದ್ರೆ ನಾನು ಬಿಂದಿಗೆಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗ್ತಿರೋದು ನಮ್ಮ ನೀರಿಗಾಗಿ. ಈ ಹೋರಾಟ ಎಷ್ಟೇ ಕಷ್ಟವಾದರೂ ನಿರಂತರವಾಗಿ ಸಾಗಲಿದೆ ಎಂದು ಹುಸೇನ್ ತಿಳಿಸಿದ್ದಾರೆ.

Mekedatu Padayatra: 2 ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ಸೈಯದ್ ಹುಸೇನ್ ನಡಿಗೆ; ವಿಭಿನ್ನ ಹೋರಾಟ
ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ನಾಯಕರ ಪಾದಯಾತ್ರೆ
TV9 Web
| Edited By: |

Updated on: Feb 27, 2022 | 3:59 PM

Share

ರಾಮನಗರ: ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಹುಸೇನ್ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡಿದ್ದಾರೆ. 2 ಬಿಂದಿಗೆಗಳಲ್ಲಿ ನೀರನ್ನು ತುಂಬಿಸಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಹುಸೇನ್ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ. ಮೇಕೆದಾಟು ಕೊಳದಿಂದ ನೀರು ತುಂಬಿಸಿಕೊಂಡು ನಡೆಯುತ್ತಿದ್ದಾರೆ. ನಮಗೆ ಮುಂದಿನ ದಿನಗಳಲ್ಲಿ ಇದೇರೀತಿ ನೀರು ತುಂಬಿಸಿಕೊಂಡು ನಡೆಯಬೇಕಾದ ಪರಿಸ್ಥಿತಿ ಬರಬಹುದು ಅನ್ನೋ ಸೂಚನೆ ಇದು ಎಂದು ಹೇಳಿದ್ದಾರೆ.

ಹೈಕಮಾಂಡ್ ಜೊತೆ ಮಾತನಾಡಿ ಈ ನೀರನ್ನು ಒಂದು ಮುಖ್ಯ ಕಾರ್ಯಕ್ಕೆ ಬಳಸಿಕೊಳ್ಳುತ್ತೇನೆ. ಬಿಸಿಲಿನಲ್ಲಿ ನಾವೂ ನಡೆಯೋದೆ ಕಷ್ಟ/ ಆದ್ರೆ ನಾನು ಬಿಂದಿಗೆಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗ್ತಿರೋದು ನಮ್ಮ ನೀರಿಗಾಗಿ. ಈ ಹೋರಾಟ ಎಷ್ಟೇ ಕಷ್ಟವಾದರೂ ನಿರಂತರವಾಗಿ ಸಾಗಲಿದೆ ಎಂದು ಹುಸೇನ್ ತಿಳಿಸಿದ್ದಾರೆ.

ಬಳಿಕ ಇದೀಗ ಮೇಕೆದಾಟು ಪಾದಯಾತ್ರೆಗೆ ಭೋಜನ ವಿರಾಮ ನೀಡಲಾಗಿದೆ. ಮಾಯಗಾನಹಳ್ಳಿ ತಲುಪಿದ ಮೇಕೆದಾಟು ಪಾದಯಾತ್ರೆ ಭೋಜನ ವಿರಾಮ ತೆಗೆದುಕೊಳ್ಳಲಾಗಿದೆ. ಇಲ್ಲಿಂದ ಬಿಡದಿಗೆ ಇನ್ನೂ 6-7 ಕಿಲೋ ಮೀಟರ್ ಬಾಕಿ ಇದೆ. ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೆವಾಲಾ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭೋಜನ ವಿಶ್ರಾಂತಿಗೆ ತೆರಳಿದ್ದಾರೆ.

ಇದನ್ನೂ ಓದಿ: Mekedatu Padayatra 2.0 Live: ಮಾಯಗಾನಹಳ್ಳಿ ತಲುಪಿದ ಮೇಕೆದಾಟು ಪಾದಯಾತ್ರೆ

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ನಟ ಪ್ರೇಮ್​ ಬೆಂಬಲ; ನಗಾರಿ ಬಾರಿಸಿ ಹುರಿದುಂಬಿಸಿದ ‘ಲವ್ಲಿ ಸ್ಟಾರ್​’

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ