ಮಾಗಡಿ ಪುರಸಭೆ ಮುಖ್ಯಾಧಿಕಾರಿಗೆ ಸಚಿವ ಹೆಚ್.ಸಿ. ಬಾಲಕೃಷ್ಣ ತರಾಟೆ: ಸಿಬ್ಬಂದಿ ವೇತನ ವಿಳಂಬ, ತೆರಿಗೆ ಸಂಗ್ರಹಕ್ಕೆ ಅಸಮಾಧಾನ
ಮಾಗಡಿ ಪುರಸಭೆಗೆ ದಿಢೀರ್ ಭೇಟಿ ನೀಡಿದ ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು ಮುಖ್ಯಾಧಿಕಾರಿ ಶ್ರೀನಿವಾಸ್ರನ್ನಯ ತರಾಟೆ ತೆಗೆದುಕೊಂಡಿದ್ದಾರೆ. ಸಿಬ್ಬಂದಿ ವೇತನ ಬಾಕಿ, ಕಳಪೆ ತೆರಿಗೆ ಸಂಗ್ರಹ, ಕಸ ವಿಲೇವಾರಿ ಸಮಸ್ಯೆ ಹಾಗೂ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ರಾಮನಗರ, ಅಕ್ಟೋಬರ್ 11: ಮಾಗಡಿ ಪುರಸಭೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆದಿದ ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು, ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ರನ್ನು ಸಚಿವರು ತರಾಟೆ ತೆಗೆದುಕೊಂಡಿದ್ದು, ಕ್ಷೇತ್ರದಲ್ಲಿ ಮನೆ ಮಾಡದೇ, ಬೆಳಗ್ಗೆ ಫೀಲ್ಡ್ನಲ್ಲಿ ಇರದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಸಿಬ್ಬಂದಿ ಹಾಜರಾತಿ ಪಡೆದು ಸಮಸ್ಯೆ ಆಲಿಸಿದ ಹೆಚ್.ಸಿ.ಬಾಲಕೃಷ್ಣ, ಸಿಬ್ಬಂದಿಯ ಎರಡು ತಿಂಗಳ ವೇತನದ ಬಗ್ಗೆಯೂ ಪ್ರಶ್ನಿಸಿದ್ದಾರೆ. ತೆರಿಗೆ ಸಂಗ್ರಹ ಕುರಿತು ಮಾಹಿತಿ ಪಡೆದ ಸಚಿವರು, 3 ಕೋಟಿ ಗುರಿಯ ಪೈಕಿ ಕೇವಲ 1.62 ಕೋಟಿ ಸಂಗ್ರಹವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಂಗಡಿಗಳ ಹರಾಜು ನಡೆಸಿ ಆದಾಯ ಹೆಚ್ಚಿಸಲು ಸೂಚಿಸಿದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

