ಬಿಡದಿ ಪ್ಲ್ಯಾನಿಂಗ್ ಅಥಾರಿಟಿಗೆ ಗ್ರೇಟರ್ ಬೆಂಗಳೂರು ಎಂದು ನಾಮಕರಣ: ಡಿಕೆ ಶಿವಕುಮಾರ್

ರಾಮನಗರದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​​, ರಾಮನಗರ ಮಾದರಿ ಜಿಲ್ಲೆಯಾಗಿ ಮಾಡಲು ಸಂಸದರು, ಶಾಸಕರು ನಿರ್ಧರಿಸಿದ್ದಾರೆ. ಬಿಡದಿ ಪ್ಲ್ಯಾನಿಂಗ್ ಅಥಾರಿಟಿಯನ್ನು ಗ್ರೇಟರ್ ಬೆಂಗಳೂರು ಅಂತಾ ನಾಮಕರಣ ಮಾಡಿ ನಕ್ಷೆ ತಯಾರಾಗುತ್ತಿದೆ ಎಂದು ಹೇಳಿದ್ದಾರೆ. ತ್ರದ ಅಭಿವೃದ್ಧಿಗೆ ರಾಮಲಿಂಗಾರೆಡ್ಡಿ ದೊಡ್ಡ ಕ್ರಾಂತಿ ಮಾಡುತ್ತಿ ದ್ದಾರೆ. ನನ್ನ ಜಿಲ್ಲೆಯ ಜನರ ಪರವಾಗಿ ರಾಮಲಿಂಗಾರೆಡ್ಡಿಗೆ ಅಭಿನಂದಿಸುತ್ತೇನೆ ಎಂದಿದ್ದಾರೆ.

ಬಿಡದಿ ಪ್ಲ್ಯಾನಿಂಗ್ ಅಥಾರಿಟಿಗೆ ಗ್ರೇಟರ್ ಬೆಂಗಳೂರು ಎಂದು ನಾಮಕರಣ: ಡಿಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 12, 2024 | 5:14 PM

ರಾಮನಗರ, ಫೆಬ್ರವರಿ 12: ಬಿಡದಿ ಪ್ಲ್ಯಾನಿಂಗ್ ಅಥಾರಿಟಿಯನ್ನು ಗ್ರೇಟರ್ ಬೆಂಗಳೂರು ಅಂತಾ ನಾಮಕರಣ ಮಾಡಿ ನಕ್ಷೆ ತಯಾರಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಮನಗರ ಮಾದರಿ ಜಿಲ್ಲೆಯಾಗಿ ಮಾಡಲು ಸಂಸದರು, ಶಾಸಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇವೆ. ಬಿಡದಿ, ಆನೇಕಲ್​ಗೆ ಮೆಟ್ರೋ ವಿಸ್ತರಿಸಲು DPR​ ರೆಡಿ‌ ಮಾಡುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ರಾಮಲಿಂಗಾರೆಡ್ಡಿ ದೊಡ್ಡ ಕ್ರಾಂತಿ ಮಾಡುತ್ತಿ ದ್ದಾರೆ. ನನ್ನ ಜಿಲ್ಲೆಯ ಜನರ ಪರವಾಗಿ ರಾಮಲಿಂಗಾರೆಡ್ಡಿಗೆ ಅಭಿನಂದಿಸುತ್ತೇನೆ. ಪ್ಯಾಸೆಂಜರ್ ಸೀಟು ಅನುಕೂಲ ಆಗುತ್ತೆ. ಇದಕ್ಕೆ‌ ಕ್ಯಾಮೆರಾ, ಫೋನ್ ಚಾರ್ಜರ್ ಅಳವಡಿಸಿದ್ದಾರೆ. ಇಡೀ ದೇಶದಲ್ಲಿ ನಮ್ಮ ಸರಕಾರ ರೋಡ್ ಟ್ರಾನ್ಫರ್ಟೇಷನ್ ದೇಶಕ್ಕೆ ಮಾದರಿ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಒಂದು ಕಾರ್ಪೋರೇಷನ್ ಕೊಟ್ಟಿದ್ದರು. ಈ ಹಿಂದೆ ಶಕ್ತಿ ಯೋಜನೆ ಬಗ್ಗೆ ನಮ್ಮ ಅಧಿಕಾರಿಗಳ ಜೊತೆ‌ ಮಾತನಾಡಿದ್ದೆ. ಕೆಲವು ನನ್ನ ಡ್ರೈವರ್, ಕಂಡಕ್ಟರ್​ ಹುಡುಗರಿಗೆ ಮಾತನಾಡಿದ್ದೆ. ಅವರೆಲ್ಲಾ ಹೇಳಿದ್ದರು, ಸರ್ ನಮ್ ಇಲಾಖೆ ಬರಿದಾಗಿಬಿಡುತ್ತೆ ಎಂದಿದ್ದರು.

ಇದನ್ನೂ ಓದಿ: ಶಾಸಕರಿಗಾಗಿ ನಿರ್ಮಿಸಲಾದ ಕ್ಲಬ್ ಉದ್ಘಾಟನೆ: ​ಇಲ್ಲಿ‌ ಸ್ವಲ್ಪ ಎಣ್ಣೆ ಹಾಕಬಹುದು ಎಂದ ಹೊರಟ್ಟಿ

ಈಗ ಹೇಳ್ರಪ್ಪ, ಏನಾಯ್ತು. ಕೋಟ್ಯಾಂತರ ಜನ ಪ್ರಯಾಣ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗುವವರೂ ಹೆಚ್ಚಾಗಿದ್ದಾರೆ. ಹುಂಡಿಯಲ್ಲಿ ಹಣ ಬಿಳುವುದು ಜಾಸ್ತಿ ಆಗ್ತಾ ಇದೆ. ನನ್ನ ಮತ್ತು ಸಿದ್ರಾಮಯ್ಯನವರ ಹೆಸರು ಕೂಡ ಜನ ಬರೆದು ಹಾಕಿದ್ದಾರೆ ಇವರಿಗೆ ಒಳ್ಳೆಯದಾಗಲಿ ಎಂದರು.

ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿಯವರಿಗೆ ಹೊಟ್ಟೆ ಉರಿ. ನಮ್ಮ ರಾಜ್ಯದ ಮಹಿಳೆಯರಿಗೆ ಬಸ್ ಫ್ರೀ ಬಿಟ್ಟರೆ ಬಿಟ್ಟಿ ಅಂತಾರೆ. 5 ಕೆಜಿ ಅಕ್ಕಿ ಕೊಟ್ಟು ಬಡತನದಿಂದ ಮೇಲಕ್ಕೆ ಎತ್ತಿಬಿಟ್ವಿ ಅಂತಾರೆ. ಹಿಂದೆ ನಾವು ತಲಾ 7 ಕೆಜಿ ಅಕ್ಕಿ ಕೊಟ್ಟಿದ್ದೆವು. ಜನರಿಗೆ ಸಹಾಯ ಆಗಲಿ ಅಂತಾ ಯೋಜನೆಗಳನ್ನು ತಂದಿದ್ದೇವೆ. ಜನ‌ ಬುದ್ಧಿವಂತರು, ತಾಳೆ ಮಾಡಿ ನೋಡುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿಯವರ ಮನೆದೇವರೇ ಸುಳ್ಳು, ಅವರ ಮಾತಿಗೆ ಕಿಮ್ಮತ್ತಿಲ್ಲ

ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಮಾಹಿತಿ ಇದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಈ ಹಿಂದೆ 9 ವರ್ಷ ಬಿಜೆಪಿ ಸರ್ಕಾರ ಇತ್ತು. 9 ಬಾರಿಯೂ ರಾಜ್ಯಪಾಲರು ಸರ್ಕಾರ ಕೊಟ್ಟ ಭಾಷಣ ಓದಿದ್ದಾರೆ. ಬಿಜೆಪಿಯವರ ಮನೆದೇವರೇ ಸುಳ್ಳು, ಅವರ ಮಾತಿಗೆ ಕಿಮ್ಮತ್ತಿಲ್ಲ. ಬಿಜೆಪಿಯವರ ರೀತಿ ನಮಗೆ ಸುಳ್ಳು ಹೇಳುವುದಕ್ಕೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಎಂದು ಕಾಂಗ್ರೆಸ್​ ಕಡಿದು ಕಟ್ಟಿಹಾಕಿದ್ದು ಏನಿಲ್ಲ, ಅಭಿವೃದ್ಧಿ ಶೂನ್ಯ: ಬಿವೈ ವಿಜಯೇಂದ್ರ

ರಾಜ್ಯ ಸರ್ಕಾರ ಜಾಹಿರಾತು ಸರ್ಕಾರ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಬಸ್​ನಲ್ಲಿ ಜನರ ಕರೆತಂದು ಜನಸಂಪರ್ಕ ಸಭೆ ಮಾಡಿಲ್ಲ. ಬಹಿರಂಗ ಸಭೆ ಅಂದ್ರೆಯೇ ಬೇರೆ ಯಾರಾದ್ರೂ ಬರಬಹುದು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ಆಗುತ್ತೆ. ಫಲಾನುಭವಿಗಳು ಎಲ್ಲಾ ಒಂದೇ ಕಡೆ ಇರೋದಿಲ್ಲ. ಎಲ್ಲಾ ಸರ್ಕಾರ ಜನ ಕರೆದುಕೊಂಡು ಬಂದಾಗೆ ನಮ್ಮ ಸರ್ಕಾರ ಕರೆತಂದಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.