IT Raids In Ramanagar: ರಾಮನಗರದಲ್ಲಿ ಮತ್ತೋರ್ವ ಕಾಂಗ್ರೆಸ್ ಮುಖಂಡನಿಗೆ ಐಟಿ ಶಾಕ್

| Updated By: ರಮೇಶ್ ಬಿ. ಜವಳಗೇರಾ

Updated on: Apr 16, 2024 | 9:50 PM

IT Raids In Ramanagara: ಲೋಕಸಭಾ ಚುನಾವನೆ ಹಿನ್ನೆಲೆಯಲ್ಲಿ ಎಲ್ಲೆಡೆ ಹಣದ ಹೊಳೆಯೇ ಹರಿದಾಡುತ್ತಿದೆ. ಇದನ್ನು ತಡೆಯಲು ಐಟಿ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ. ಅದರಲ್ಲೂ ರಾಮನಗರ ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ಇಂದು ಮತ್ತೋರ್ವ ಕಾಂಗ್ರೆಸ್​ ಮುಖಂಡನ ರೆಸಾರ್ಟ್ ಮೇಲೆ ದಾಳಿ ಮಾಡಿದ್ದಾರೆ.

IT Raids In Ramanagar: ರಾಮನಗರದಲ್ಲಿ ಮತ್ತೋರ್ವ ಕಾಂಗ್ರೆಸ್ ಮುಖಂಡನಿಗೆ ಐಟಿ ಶಾಕ್
ಪ್ರಾತಿನಿಧಿಕ ಚಿತ್ರ
Follow us on

ರಾಮನಗರ, (ಏಪ್ರಿಲ್ 16): ಕಳೆದ ಒಂದು ವಾರದಿಂದ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಐಟಿ ಅಧಿಕಾರಿಗಳು ಕಾರ್ಯಚರಣೆ() ನಡೆಸಿದ್ದಾರೆ. ಇಂದು (ಏಪ್ರಿಲ್ 16) ಮಧ್ಯಾಹ್ನ ಬೆಂಗಳೂರು, ಗ್ರಾಮಾಂತರಜಿಲ್ಲೆಯ ನೆಲಮಂಗಲದಲ್ಲಿ(Nelamangala) ರಿಯಲ್ ಎಸ್ಟೇಟ್ ಉದ್ಯಮಿ, ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಮುಖಂಡ ವಿಜಯ್ ದೇವ್ ರೆಸಾರ್ಟ್ ‌ಮೇಲೆ ಐಟಿ ದಾಳಿಯಾಗಿದೆ. ರಾಮನಗರ(Ramanagara) ಜಿಲ್ಲೆಯ ಕನಕಪುರ‌ ತಾಲೂಕಿನ‌ ‌ಮರಳೇಬೇಕುಪ್ಪೆ ಗ್ರಾಮದಲ್ಲಿರುವ ತಪ್ಪಲು ಕಾಂಗ್ರೆಸ್ ಮುಖಂಡ ವಿಜಯ್ ದೇವ್ ಮಾಲೀಕತ್ವದ ರೆಸಾರ್ಟ್​ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ವಿಜಯ್ ದೇವ್ ಅವರ ರೆಸಾರ್ಟ್​ ಮೇಲೆ ಇಂದು ಸಂಜೆ ಐಟಿ ದಾಳಿಯಾಗಿದ್ದು, ರೆಸಾರ್ಟ್​ಗೆ ಸಂಬಂಧಿಸಿದಂತೆ ಸುಮಾರು ಒಂದು ಗಂಟೆ‌ವರೆಗೆ ದಾಖಲೆ‌ ಪರಿಶೀಲಿಸಿ ತೆರಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಉದ್ಯಮಿ ಮನೆ ಮೇಲೆ ಐಟಿ ದಾಳಿ

ಇಂದು ಮಧ್ಯಾಹ್ನ ಅಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ(Nelamangala) ರಿಯಲ್ ಎಸ್ಟೇಟ್ ಉದ್ಯಮಿ, ಕಾಂಗ್ರೆಸ್​​ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವೆಂಕಟ್ ರಾಜು ಮನೆ ಮೇಲೆ ದಾಳಿಯಾಗಿತ್ತು. ಸುಮಾರು 6 ಕಾರುಗಳಲ್ಲಿ ಬಂದಿದ್ದ 20 ಐಟಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ