ಥ್ರಿಲ್​ಗಾಗಿ ಬೆಟ್ಟ ಏರಿದ್ದ ಯುವತಿಯರಿಗೆ ಶಾಕ್: ವಾಪಸ್​ ಹೋಗಲು ದಾರಿ ಕಾಣದೆ ಆತಂಕ, ರಕ್ಷಣೆ

ರಾಮನಗರ ತಾಲೂಕಿನ ಹಂದಿಗುಂದಿ ಬೆಟ್ಟಕ್ಕೆ ಬೆಂಗಳೂರಿನಿಂದ 6 ಯುವತಿಯರ ತಂಡ ನಿನ್ನೆ ‌ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ದಾರಿ ತಪ್ಪಿ ಬೇರೊಂದು ಬೆಟ್ಟಕ್ಕೆ ತೆರಳಿದ್ದಾರೆ. ಬಂದ ದಾರಿಯಲ್ಲಿ ವಾಪಾಸ್ ಹೋಗಲು ಆಗದೇ ಹಲವು ಗಂಟೆ ಆತಂಕಗೊಂಡಿದ್ದಾರೆ. ಬಳಿಕ ಪ್ರಾಣದ ಹಂಗು ತೊರೆದು ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಥ್ರಿಲ್​ಗಾಗಿ ಬೆಟ್ಟ ಏರಿದ್ದ ಯುವತಿಯರಿಗೆ ಶಾಕ್: ವಾಪಸ್​ ಹೋಗಲು ದಾರಿ ಕಾಣದೆ ಆತಂಕ, ರಕ್ಷಣೆ
ರಕ್ಷಣೆಗೊಳಗಾದ ಯುವತಿಯರು
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ Edited By:

Updated on: Dec 17, 2023 | 8:03 PM

ರಾಮನಗರ, ಡಿಸೆಂಬರ್​ 17: ಟ್ರಕ್ಕಿಂಗ್ (trekking) ವೇಳೆ ಕಾಡುದಾರಿ ತಪ್ಪಿದ್ದ 6 ಯುವತಿಯರನ್ನು ಪ್ರಾಣದ ಹಂಗು ತೊರೆದು ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ. ರಾಮನಗರ ತಾಲೂಕಿನ ಹಂದಿಗುಂದಿ ಬೆಟ್ಟಕ್ಕೆ ಬೆಂಗಳೂರಿನಿಂದ 6 ಯುವತಿಯರ ತಂಡ ನಿನ್ನೆ ‌ಚಾರಣಕ್ಕೆ ಬಂದಿದ್ದಾರೆ. ಈ ವೇಳೆ ದಾರಿ ತಪ್ಪಿ ಬೇರೊಂದು ಬೆಟ್ಟಕ್ಕೆ ತೆರಳಿದ್ದಾರೆ. ಬಂದ ದಾರಿಯಲ್ಲಿ ವಾಪಾಸ್ ಹೋಗಲು ಆಗದೇ ಹಲವು ಗಂಟೆ ಆತಂಕಗೊಂಡಿದ್ದಾರೆ.  ದಿನವೆಲ್ಲ ಸುತ್ತಾಡಿ ಸಂಜೆಯಾಗುತ್ತಿದ್ದಂತೆ ಕೊನೆಗೆ ದಾರಿ ಕಾಣದೆ ಪರದಾಡಿದ್ದಾರೆ.

6 ಯುವತಿಯರು ಬನ್ನೇರುಘಟ್ಟ ರಸ್ತೆ ಹೊರಮಾವು ಬಳಿಯ ನಿವಾಸಿಗಳು ಎನ್ನಲಾಗುತ್ತಿದೆ. ರಾಮನಗರ ಬಸವನಪುರ ಬಳಿ ಕಾರು ನಿಲ್ಲಿಸಿ‌ ನಿನ್ನೆ ಬೆಳಿಗ್ಗೆ 10‌‌ ಗಂಟೆಗೆ ಟ್ರಕ್ಕಿಂಗ್ ತೆರಳಿದ್ದರು. ಮಧ್ಯಾಹ್ನದ ವೇಳೆ ಬೆಟ್ಟ ಇಳಿದು ವಾಪಾಸ್​ ಆಗುತ್ತಿದ್ದು, ಎಷ್ಟೇ ನಡೆದರೂ ಹೆದ್ದಾರಿ ಸಿಗದ ಕಾರಣ ಹೈರಾಣಗಿದ್ದಾರೆ. ರಾತ್ರಿ ಆದರೂ ಕಾಡಿನಲ್ಲೇ ಸುತ್ತಾಡಿದ್ದಾರೆ. ಮತ್ತೆ ವಾಪಾಸ್ ಬೆಟ್ಟ ಹತ್ತಿ 112ಗೆ ಕರೆ ಮಾಡಿದ್ದಾರೆ.

ಇದನ್ನೂ ಓದಿ: ಕನಕಪುರ ಸರ್ಕಾರಿ ಶಾಲೆಯಲ್ಲಿದೆಂತ ಸ್ಥಿತಿ, ಮಕ್ಕಳ ಕೈಯಿಂದಲೇ ಶಾಲೆ ಆವರಣದಲ್ಲಿ ಬಿದ್ದ ಬಿಯರ್ ಬಾಟಲ್, ಮಲ ಸ್ವಚ್ಛ ಕಾರ್ಯ

ಇತ್ತ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಹಾಗೂ ರಮೇಶ್ ಎಂಬುವವರು ಯುವತಿಯರಿಗೆ ಧೈರ್ಯ ತುಂಬಿದ್ದಾರೆ. ಬಳಿಕ ವಾಹನ ತೆರಳಲು ಸಾಧ್ಯವಾಗದೆ ಸ್ಥಳಕ್ಕೆ ಸ್ಥಳಿಯರ ಸಹಾಯದಿಂದ ಕಾಲ್ನಡಿಗೆಯಲ್ಲೇ ಪೊಲೀಸರು ತೆರಳಿದ್ದಾರೆ. ಕಾಡಾನೆ ಪ್ರದೇಶ ಹಿನ್ನೆಲೆ ಯುವತಿಯರು ಬಹಳಷ್ಟು ಭಯ ಪಟ್ಟಿದ್ದರು. ರಾತ್ರಿ 8:3೦ರ ವೇಳೆಗೆ ಬೆಟ್ಟದ ತುದಿಯಲ್ಲಿ ಯುವತಿಯರ ರಕ್ಷಣೆ ಮಾಡಲಾಗಿದೆ. ಪೊಲೀಸರು ಆಗಮನದ ನಂತರ ಯುವತಿಯರು ನಿಟ್ಟುಸಿರು ಬಿಟ್ಟಿದ್ದಾರೆ.

ವನ್ಯ ಮೃಗಗಳ ಭಯದ ನಡುವೆ ರಕ್ಷಣೆಗೆ ನಿಂತ 112 ಸಿಬ್ಬಂದಿ

ಸುಮಾರು 10 ಕಿ.ಮೀ ಕಾಲ್ನಡಿಗೆಯಲ್ಲಿ ಯುವತಿಯರಿಗಾಗಿ ಹುಡುಕಾಟ ನಡೆಸಿದ್ದು, ಮೊಬೈಲ್ ನೆಟ್ ವರ್ಕ್ ಆಧರಿಸಿ, ಟಾರ್ಚ್ ಬೆಳಕಿನೆಡಿಗೆ ಯುವತಿಯರನ್ನು ಹುಡುಕಾಡಲಾಗಿದೆ. ಸತತ ಎರಡು ಗಂಟೆ ಕಾಲ ಯುವತಿಯರ ರಕ್ಷಣೆಗಾಗಿ ಕಾರ್ಯಾಚರಣೆ ಮಾಡಿದ್ದರು, ಬಳಿಕ 6 ಯುವತಿಯರನ್ನು 112 ಪೊಲೀಸರು ರಕ್ಷಿಸಿ ಕರೆತಂದಿದ್ದಾರೆ. ರಾಜೇಶ್ ಹಾಗೂ ರಮೇಶ್​ ಅವರ ಕೆಲಸಕ್ಕೆ‌ ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Loading...
Unable to load recommendations.
Follow Us