ಸಿದ್ದರಾಮಯ್ಯ ಆಳ, ಆಗಲ ಮತ್ತು ಉದ್ದವನ್ನು ನೋಡಿಕೊಳ್ಳಬೇಕು: ಅಶ್ವತ್ಥನಾರಾಯಣ ವಾಗ್ದಾಳಿ
ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಅವರು ಮಾತನಾಡಬೇಕು. ಆರೋಪಿ ಶಾಂತಕುಮಾರ್ ಮೊದಲು ಕಾಂಗ್ರೆಸ್ನಲ್ಲಿಯೇ ಇದ್ದರು ಎಂದು ಅಶ್ವತ್ಥ ನಾರಾಯಣ ಹೇಳಿದರು.
ರಾಮನಗರ: ಕರ್ನಾಟಕದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ (PSI Recruitment Scam) ಕುರಿತು ಪ್ರತಿಕ್ರಿಯಿಸಿರುವ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮೊದಲು ಸಿದ್ದರಾಮಯ್ಯ ಅವರು ಆಳ, ಆಗಲ ಮತ್ತು ಉದ್ದವನ್ನು ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಅವರು ಮಾತನಾಡಬೇಕು. ಆರೋಪಿ ಶಾಂತಕುಮಾರ್ ಮೊದಲು ಕಾಂಗ್ರೆಸ್ನಲ್ಲಿಯೇ ಇದ್ದರು. ಈ ವಿಚಾರದ ಬಗ್ಗೆಯೂ ಸಿದ್ದರಾಮಯ್ಯ ಮುಕ್ತವಾಗಿ ಮಾತನಾಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಯಾವೆಲ್ಲಾ ರೀತಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಬಗ್ಗೆಯೂ ಅವರು ಮಾತನಾಡಬೇಕಿದೆ. ಅವರ ಕಾಲದ ಹಗರಣಗಳನ್ನು ಮುಚ್ಚಿ ಹಾಕಿಕೊಂಡರು. ಇಡೀ ಲೋಕಕ್ಕೆ ಗೊತ್ತಿರುವ ಸತ್ಯವನ್ನ ನಾನು ಹೇಳುತ್ತಿದ್ದೇನೆ. ಈ ಹಿಂದೆ ಆಗಿರುವ ಅಕ್ರಮದ ಬಗ್ಗೆಯೂ ತನಿಖೆ ಆಗಬೇಕು. ‘ಹ್ಯೂಬ್ಲೆಟ್’ ಸಿದ್ದರಾಮಯ್ಯನವರು ಎಂದಿಗೂ ಬಡವರ ಪರ ಇರಲಿಲ್ಲ. ಅವರು ಹೇಳುವುದು ಬಡವರ ಪರ, ಮಾಡುವುದೆಲ್ಲ ಮೋಜು ಮಸ್ತಿ ಎಂದು ವಿವರಿಸಿದರು.
ಸಿದ್ದರಾಮಯ್ಯ ಕಾಲದಲ್ಲಿ ಯಾವೆಲ್ಲ ರೀತಿಯಲ್ಲಿ ರೀತಿಯಲ್ಲಿ ಅವ್ಯವಹಾರ ಆಗಿದೆ ಎನ್ನುವ ಬಗ್ಗೆಯೂ ಅವರು ಮಾತನಾಡಬೇಕು. ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಮುಖ್ಯಮಂತ್ರಿ ಆಗಿ ನಿವೃತ್ತಿ ಆಗುತ್ತೇನೆ ಎಂದಿದ್ದರು. ಸಿದ್ದರಾಮಯ್ಯ ಕಾಲದಲ್ಲಿ ಹಗರಣವನ್ನು ಮುಚ್ಚಿ ಹಾಕಿಕೊಂಡರು. ಲೋಕಕ್ಕೆ ಗೊತ್ತಿರುವ ಸತ್ಯವನ್ನು ಹೇಳುತ್ತಿದ್ದೇನೆ. ಅವರು ಮಾಡಿರುವ ಆಕ್ರಮ ಲೋಕಕ್ಕೆ ಗೊತ್ತಿದೆ. ಹಿಂದೆ ಆಗಿರುವ ಆಕ್ರಮದ ಬಗ್ಗೆ ತನಿಖೆ ಆಗಬೇಕು. ನಾನು ಕೂಡ ಒತ್ತಾಯ ಮಾಡುತ್ತೇನೆ. ಸಿದ್ದರಾಮಯ್ಯ ಕಾಲದಲ್ಲಿ ಆಗಿರುವ ಪಿಎಸ್ಐ ಹಗರಣದ ತನಿಖೆ ನಡೆಯಬೇಕು ಎಂದು ದೂರಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ನಿಂದ ಸಿದ್ದರಾಮೋತ್ಸವ ಆಯೋಜಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಂಥ ಕಾರ್ಯಕ್ರಮಗಳಿಂದ ನಮಗೆ ಆತಂಕ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದೊಳಗೆ ಆತಂಕ ಇದೆ. ಕಾಂಗ್ರೆಸ್ ಪಕ್ಷದ ನಾಯಕರಲ್ಲೇ ಪೈಪೋಟಿ ಶುರುವಾಗಿದೆ. ವ್ಯಕ್ತಿಯ ಕಾರ್ಯಕ್ರಮ ಮಾಡಬೇಕೇ, ಬೇಡವೇ ಎನ್ನುವ ಗೊಂದಲ ಆರಂಭವಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲೆ ಕಳೆದುಕೊಂಡಿದೆ. ಯಾರು ಯಾವ ಉತ್ಸವ ಬೇಕಾದರೂ ಮಾಡಿಕೊಳ್ಳಲಿ. ರಾಜ್ಯದಲ್ಲಿ ಕಾಂಗ್ರೆಸ್ಗೆ ನೆಲೆ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಇಡೀ ದೇಶದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ಭವಿಷ್ಯವಿಲ್ಲದ ಕಾಂಗ್ರೆಸ್ ಪಕ್ಷವು ಮುಳುಗುವ ಹಡಗಿನಂತೆ ಆಗಿದೆ. ಯಾರು ಯಾವ ಉತ್ಸವ ಬೇಕಾದರೂ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
Published On - 2:23 pm, Thu, 14 July 22