ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 10 ಆರೋಪಿಗಳನ್ನು ಬಂಧಿಸಿದ ಮಾಗಡಿ ಪೊಲೀಸರು

SSLC ಪರೀಕ್ಷೆ ವೇಳೆ ಎಲ್ಲಾ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಪ್ರತಿದಿನ ಪರೀಕ್ಷೆ ಆರಂಭಕ್ಕೂ ಮುನ್ನ ಪ್ರಶ್ನೆ ಪತ್ರಿಕೆಯನ್ನು ವಾಟ್ಸಾಪ್ ಮೂಲಕ ಸೋರಿಕೆ ಮಾಡಲಾಗುತ್ತಿತ್ತು. ನಂತರ ಶಿಕ್ಷಕರಿಂದ ಪ್ರಶ್ನೆಗಳಿಗೆ ಉತ್ತರ ಬರೆಸಲಾಗುತ್ತಿತ್ತು.

ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 10 ಆರೋಪಿಗಳನ್ನು ಬಂಧಿಸಿದ ಮಾಗಡಿ ಪೊಲೀಸರು
ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 10 ಆರೋಪಿಗಳನ್ನು ಬಂಧಿಸಿದ ಮಾಗಡಿ ಪೊಲೀಸರು
Follow us
TV9 Web
| Updated By: ಆಯೇಷಾ ಬಾನು

Updated on:May 25, 2022 | 7:37 PM

ರಾಮನಗರ: ಪಿಎಸ್ ಐ ಆಕ್ರಮ ನೇಮಕಾತಿ ಹಗರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಅದು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಆಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನ ಪರೀಕ್ಷೆ ಆರಂಭಕ್ಕೂ ಮುನ್ನವೇ ವಾಟ್ಸ್ ಅಪ್ ಮೂಲಕ ಕಳುಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟು ಇದೀಗ ಶಿಕ್ಷಕರು ಸೇರಿದಂತೆ ಕೆಲವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಗಡಿ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ರಾಮನಗರ ಜಿಲ್ಲೆ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಗಡಿ ಕೆಂಪೇಗೌಡ ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ್, ಕ್ಲರ್ಕ್ ರಂಗೇಗೌಡ, ಶಿಕ್ಷಕರಾದ ಕೃಷ್ಣಮೂರ್ತಿ, ಅರ್ಜುನ್, ನಾಗರಾಜ್, ಅಲೀಂ, ಶ್ರೀನಿವಾಸ್, ಲೋಕೇಶ್ ಸುಬ್ರಹ್ಮಣ್ಯ, ಪತ್ರಕರ್ತ ವಿಜಯ್ ಬಂಧಿತ ಆರೋಪಿಗಳು.

SSLC ಪರೀಕ್ಷೆ ವೇಳೆ ಎಲ್ಲಾ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಪ್ರತಿದಿನ ಪರೀಕ್ಷೆ ಆರಂಭಕ್ಕೂ ಮುನ್ನ ಪ್ರಶ್ನೆ ಪತ್ರಿಕೆಯನ್ನು ವಾಟ್ಸಾಪ್ ಮೂಲಕ ಸೋರಿಕೆ ಮಾಡಲಾಗುತ್ತಿತ್ತು. ನಂತರ ಶಿಕ್ಷಕರಿಂದ ಪ್ರಶ್ನೆಗಳಿಗೆ ಉತ್ತರ ಬರೆಸಲಾಗುತ್ತಿತ್ತು. ಉತ್ತರಗಳನ್ನು ರಂಗೇಗೌಡನ ವಾಟ್ಸಾಪ್ಗೆ ಕಳಿಸಲಾಗುತ್ತಿತ್ತು. ಬಳಿಕ ಉತ್ತರಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ರಂಗೇಗೌಡ ಭೇಟಿ ನೀಡುತ್ತಿದ್ದರು. ಪರೀಕ್ಷಾ ಕೇಂದ್ರಕ್ಕೆ ಹೋಗಿ ರಂಗೇಗೌಡ ಉತ್ತರ ಬರೆಸುತ್ತಿದ್ದರು. ಇದನ್ನೂ ಓದಿ: Heart Care: ನಿಮ್ಮ ಹೃದಯಕ್ಕೆ ಹಾನಿಮಾಡಬಲ್ಲ ಈ ಆಹಾರಗಳಿಂದ ದೂರವಿರಿ

ರಾಜ್ಯದಲ್ಲಿ ಪಿಎಸ್ ಐ ಆಕ್ರಮ ನೇಮಕಾತಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಸಾಕಷ್ಟು ಜನರನ್ನ ಬಂಧಿಸಿ ಜೈಲಿಗೂ ಅಟ್ಟಿದ್ದಾರೆ. ಅದು ಮಾಸುವ ಮುನ್ನವೇ ಮತ್ತೊಂದು ಆಕ್ರಮ, ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಂದಹಾಗೆ ಕಳೆದ ತಿಂಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದು ಇದೀಗ ಫಲಿತಾಂಶ ಕೂಡ ಬಂದಿದೆ. ಆದರೆ ಪರೀಕ್ಷೆಯಲ್ಲಿ ಬಾರಿ ಆಕ್ರಮ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಇದುವರೆಗೂ ಹತ್ತು ಜನರನ್ನ ಸಹಾ ಬಂದಿಸಿದ್ದಾರೆ. ಅಂದಹಾಗೆ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಎಂಬಾತ, ಏಪ್ರಿಲ್ 11 ರಂದು ವಿಜ್ಷಾನ ಪ್ರಶ್ನೆ ಪತ್ರಿಕೆಯನ್ನ, ಕೆಂಪೇಗೌಡ ಪ್ರೌಢಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಇರುವ ಎಚ್ ಎಮ್ ಮಾಗಡಿ ಟೌನ್ ಎಂಬಾ ವಾಟ್ಸ್ ಅಪ್ ಗ್ರೂಪ್ ಗೆ ಹರಿಬಿಟ್ಟಿದ್ದ. ಈ ವಿಚಾರ ಗೊತ್ತಿದ್ದರು ಕೆಲವರು ಸುಮ್ಮನೇ ಇದ್ದರು. ಆದರೆ ನೆನ್ನೆ ಈ ವಿಚಾರವಾಗಿ ಡಿಡಿಪಿಐ ಗಂಗಣ್ಣಸ್ವಾಮಿ ಎಂಬುವವರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಈ ಸಂಬಂಧ ಪೊಲೀಸರು ಕ್ಲರ್ಕ್ ರಂಗೇಗೌಡ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಆಗ ಅಸಲಿ ಸತ್ಯ ಬೆಳಕಿಗೆ ಬಂದಿತ್ತು. ಕೇವಲ ಒಂದು ಪತ್ರಿಕೆಯನ್ನು ಮಾತ್ರವಲ್ಲದೇ ಎಲ್ಲ ಪ್ರಶ್ನೆ ಪತ್ರಿಕೆಗಳನ್ನ ಸೋರಿಕೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಂದಹಾಗೆ ಮಾಗಡಿ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ, ರಂಗನಾಥ ಪ್ರೌಢಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಜೊತೆ ಶಾಮೀಲಾಗಿ, ರಂಗನಾಥ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಿಂದ ಬೆಳಗ್ಗೆ 10.15 ರ ಸುಮಾರಿಗೆ ಮೊಬೈಲ್ ಮೂಲಕ ಪ್ರಶ್ನೆ ಪತ್ರಿಕೆಗಳ ಪೋಟೆ ತೆಗೆದು ಕೃಷ್ಣಮೂರ್ತಿ ರಂಗೇಗೌಡನಿಗೆ ಕಳುಹಿಸುತ್ತಿದ್ದ. ಅದನ್ನ ರಂಗೇಗೌಡ ಇತರೇ ವಿಷಯ ಪರಿಣಿತರಿಗೆ ಪರೀಕ್ಷೆ ದಿನದಂದು ಕಳುಹಿಸಿ ಉತ್ತರವನ್ನ ವಾಟ್ಸ್ ಮೂಲಕ ತರುಹಿಸಿಕೊಳ್ಳುತ್ತಿದ್ದ. ಅದನ್ನ ಇತರೇ ಶಿಕ್ಷಕರಿಗೆ ನೀಡಿ ಪರೀಕ್ಷಾ ಕೇಂದ್ರದಲ್ಲಿ ಇದ್ದ ಮಕ್ಕಳಿಗೆ ಕೇಳಿಕೊಡುತ್ತಿದ್ದ. ಈ ಮೂಲಕ ಶಾಲೆಗೆ ಹೆಚ್ಚು ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದ. ಅದರಂತೆ ಒಟ್ಟು ಆರು ಪರೀಕ್ಷೆಗಳಲ್ಲೂ ಇದೇ ರೀತಿ ಆಕ್ರಮ ಎಸೆಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಂಪೇಗೌಡ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ್, ಕ್ಲರ್ಕ್ ರಂಗೇಗೌಡ, ರಂಗನಾಥ ಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ, ವಿಷಯ ಪರಿಣಿತರಾದ ಅರ್ಜುನ್, ನಾಗರಾಜ್, ಅಲೀಂ, ಶ್ರೀನಿವಾಸ್, ಸುಬ್ರಮಣ್ಯ, ಸೇರಿದಂತೆ ಈ ಮೊದಲು ಆಕ್ರಮದ ಬಗ್ಗೆ ಗೊತ್ತಿದ್ದರು ಡೀಲ್ ಮಾಡಿಕೊಂಡು ಸುಮ್ಮನೆ ಇದ್ದ ಶಿಕ್ಷಕ ಲೋಕೇಶ್, ಖಾಸಗಿ ಪತ್ರಿಕೆ ವರದಿಗಾರ ವಿಜಯ್ ಎಂಬಾತನ್ನ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಇದನ್ನೂ ಓದಿ: Watch: ಕೆನಡಾದ ರಸ್ತೆ ಮಧ್ಯೆ ಹೊತ್ತಿ ಉರಿದ ಟೆಸ್ಲಾ ಮಾಡೆಲ್ ವೈ; ಕಿಟಕಿ ಒಡೆದು ಅಪಾಯದಿಂದ ಪಾರಾದ ಮಾಲೀಕ

Published On - 7:09 pm, Wed, 25 May 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್