AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೌರಿಂಗ್ ಆಸ್ಪತ್ರೆಯಲ್ಲಿ ಚಿತ್ರಾನ್ನ ಸೇವಿಸಿದ ಸಿಡಿ ಲೇಡಿ; ಕೌನ್ಸೆಲಿಂಗ್ ನಡೆಸಿ ಸಂತ್ರಸ್ತೆಗೆ ಧೈರ್ಯ ತುಂಬಿದ ಮನೋವೈದ್ಯರು

ಯುವತಿಗೆ ಮೆಡಿಕಲ್ ಟೆಸ್ಟ್ ಮುಕ್ತಾಯವಾಗುತ್ತಿದ್ದಂತೆ, ಬೌರಿಂಗ್ ಆಸ್ಪತ್ರೆಗೆ ವಕೀಲ ಜಗದೀಶ್ ಆಗಮಿಸಿದ್ದಾರೆ. ಸ್ಥಳದಲ್ಲಿರುವ ಅಧಿಕಾರಿಗಳ ಜೊತೆ ಜಗದೀಶ್‌ ಮಾತುಕತೆ ನಡೆಸಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಚಿತ್ರಾನ್ನ ಸೇವಿಸಿದ ಸಿಡಿ ಲೇಡಿ; ಕೌನ್ಸೆಲಿಂಗ್ ನಡೆಸಿ ಸಂತ್ರಸ್ತೆಗೆ ಧೈರ್ಯ ತುಂಬಿದ ಮನೋವೈದ್ಯರು
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಗೆ ಕೌನ್ಸಿಲಿಂಗ್
Follow us
TV9 Web
| Updated By: ganapathi bhat

Updated on:Apr 05, 2022 | 1:02 PM

ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿ, ಸಿಡಿಯಲ್ಲಿರುವ ಯುವತಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಸಿಡಿ ಯುವತಿಗೆ ಮನೋವೈದ್ಯರಿಂದ ಕೌನ್ಸೆಲಿಂಗ್ ಕೂಡ ಮಾಡಲಾಗಿದೆ. ಮನೋ ವೈದ್ಯರು, ಸಮಾಜದಲ್ಲಿನ ಮುಂದಿನ ಆಗುಹೋಗುಗಳ ಬಗ್ಗೆ ತಿಳಿವಳಿಕೆ ನೀಡಿ, ಕಾನೂನು ಹೋರಾಟ, ಪೊಲೀಸರ ವಿಚಾರಣೆ ಬಗ್ಗೆ ಧೈರ್ಯತುಂಬಿದ್ದಾರೆ.

ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಯುವತಿಗೆ ಒಆರ್​ಎಸ್ ಹಾಗೂ ಚಿತ್ರಾನ್ನ ನೀಡಲಾಗಿದೆ. ಸಿಡಿಯಲ್ಲಿರುವ ಯುವತಿ ಒಆರ್​ಎಸ್ ಕುಡಿದು, ಚಿತ್ರಾನ್ನ ಸೇವಿಸಿದ್ದಾರೆ.

ಯುವತಿಗೆ ಮೆಡಿಕಲ್ ಟೆಸ್ಟ್ ಮುಕ್ತಾಯವಾಗುತ್ತಿದ್ದಂತೆ, ಬೌರಿಂಗ್ ಆಸ್ಪತ್ರೆಗೆ ವಕೀಲ ಜಗದೀಶ್ ಆಗಮಿಸಿದ್ದಾರೆ. ಸ್ಥಳದಲ್ಲಿರುವ ಅಧಿಕಾರಿಗಳ ಜೊತೆ ಜಗದೀಶ್‌ ಮಾತುಕತೆ ನಡೆಸಿದ್ದಾರೆ. ಸಂತ್ರಸ್ತೆ ಇರುವ ಎಮರ್ಜೆನ್ಸಿ ಕಟ್ಟಡದ ಪ್ರವೇಶ ದ್ವಾರದ ಬಳಿ ನಿಂತಿರುವ ವಕೀಲ ಜಗದೀಶ್, ಸ್ಥಳದಲ್ಲಿರುವ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಎಸ್​ಐಟಿ ಸೂಚಿಸಿರುವ ಐದು ಪರೀಕ್ಷೆಗಳು ಮುಕ್ತಾಯ ಸಂತ್ರಸ್ತ ಯುವತಿ ಇನ್ನು ಅರ್ಧಗಂಟೆ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ತಿಳಿದುಬಂದಿದೆ. ಅರ್ಧಗಂಟೆ‌ಯ ನಂತರ ಯುವತಿಯನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ. ಎಸ್​ಐಟಿ ಸೂಚಿಸಿರುವ ಐದು ಮುಖ್ಯ ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ಮಾಡಲಾಗಿದೆ. ಉಗುರು, ಚರ್ಮ, ಕೂದಲು, ರಕ್ತದ ಮಾದರಿ ಸಂಗ್ರಹಿಸಿ ಮುಂದಿನ ಹಂತದ ತಯಾರಿ ಮಾಡಿಕೊಳ್ಳಲಾಗಿದೆ. ಈ ಮಾದರಿಗಳನ್ನು ಸೀಲ್ ಮಾಡಿ, ನೇರವಾಗಿ ಎಫ್​ಎಸ್​ಎಲ್​ಗೆ ರವಾನೆ ಮಾಡಲಾಗುತ್ತದೆ. ಈ ಮಧ್ಯೆ ಯುವತಿಗೆ ವಿಶ್ರಾಂತಿ ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಯುವತಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಸಿಡಿ ಯುವತಿಗೆ ವಿಶ್ರಾಂತಿ ಇಲ್ಲ; ತಲೆ ನೋವು, ಕೈಕಾಲು ನಡುಗುತ್ತಿದೆ: ಬೌರಿಂಗ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್

ಇದನ್ನೂ ಓದಿ: ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ.. ರಮೇಶ್​ ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್? ರಮೇಶ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ

Published On - 3:47 pm, Wed, 31 March 21

25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?