ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ಸಿಡಿ ಯುವತಿಗೆ ನೋಟಿಸ್
ಸಿಡಿಯಲ್ಲಿದ್ದ ಯುವತಿಗೆ ಮತ್ತೊಂದು ನೋಟಿಸ್ ನೀಡಿರುವ ಪೊಲೀಸರು, ಗೌಪ್ಯ ಸ್ಥಳದಿಂದ ನೇರವಾಗಿ ಸ್ಥಳಮಹಜರು ಮಾಡುವಲ್ಲಿಗೆ ಹಾಜರಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ. ನಾಳೆ ನೇರವಾಗಿ ಸ್ಥಳಮಹಜರಿಗೆ ಹಾಜರಾಗುವ ಸಾಧ್ಯತೆ ಅಂದಾಜಿಸಲಾಗಿದೆ.
ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸಿಡಿಯಲ್ಲಿದ್ದ ಯುವತಿಗೆ ಮತ್ತೊಂದು ನೋಟಿಸ್ ನೀಡಿದ್ದಾರೆ. ನಾಳೆ (ಏಪ್ರಿಲ್ 1) ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೋಟಿಸ್ ನೀಡಲಾಗಿದೆ. ಸ್ಥಳ ಮಹಜರು ಪ್ರಕ್ರಿಯೆ ಬಾಕಿ ಹಿನ್ನೆಲೆ ನಾಳೆಯೂ ವಿಚಾರಣೆ ನಡೆಯಲಿದೆ.
ಸಿಡಿಯಲ್ಲಿದ್ದ ಯುವತಿಗೆ ಮತ್ತೊಂದು ನೋಟಿಸ್ ನೀಡಿರುವ ಪೊಲೀಸರು, ಗೌಪ್ಯ ಸ್ಥಳದಿಂದ ನೇರವಾಗಿ ಸ್ಥಳಮಹಜರು ಮಾಡುವಲ್ಲಿಗೆ ಹಾಜರಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ. ನಾಳೆ ನೇರವಾಗಿ ಸ್ಥಳಮಹಜರಿಗೆ ಹಾಜರಾಗುವ ಸಾಧ್ಯತೆ ಅಂದಾಜಿಸಲಾಗಿದೆ. ಈ ಮಧ್ಯೆ, ಯುವತಿಯನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಹೇಳಿಕೆ ನೀಡಿದ್ದಾರೆ.
ಸಿಡಿ ಸಂತ್ರಸ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಡಿ ಸಂತ್ರಸ್ತೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನನ್ನ ಮಗಳು ನೀಡಿರುವ ಹೇಳಿಕೆಗಳನ್ನು ಯಾವ ಕಾರಣಕ್ಕೂ ಪರಿಗಣಿಸಬೇಡಿ.. CRPC 164 ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾದ ಹೇಳಿಕೆಗಳನ್ನು ರದ್ದುಗೊಳಿಸಿ ಎಂದು ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ನನ್ನ ಮಗಳು ಯಾವುದೋ ಒತ್ತಡಕ್ಕೆ ಒಳಗಾಗಿ ಹೇಳಿಕೆ ನೀಡಿದ್ದಾಗಿ ಶಂಕೆ ವ್ಯಕ್ತವಾಗುತ್ತಿದೆ. ಆಕೆ ಸ್ವ ಇಚ್ಛೆಯಿಂದ ಹೇಳಿಕೆ ನೀಡುವ ಸ್ಥಿತಿಯಲ್ಲಿ ಈಗಿಲ್ಲ. ಕೆಲ ದಿನಗಳ ಕಾಲ ಆಕೆಯನ್ನು ಏಕಾಂತದಲ್ಲಿ ಇರಿಸಬೇಕು ಅಥವಾ ನ್ಯಾಯಾಂಗದ ಸುಪರ್ಧಿಯಲ್ಲಿ ಇಡಬೇಕು. ಅದೂ ಆಗದೆ ಇದ್ದರೆ ಕೋರ್ಟ್ ಸೂಚಿಸಿದ ಸ್ವತಂತ್ರ್ಯ ಸಂಸ್ಥೆಯ ಸುಪರ್ಧಿಯಲ್ಲಿ ಇಡಬೇಕು. ಅಂದಾಗ ಮಾತ್ರ ನನ್ನ ಮಗಳು ಸ್ವ ಇಚ್ಛೆಯಿಂದ ಹೇಳಿಕೆ ನೀಡಲು ಸಾಧ್ಯ. ಈ ವಿಚಾರವನ್ನು ಹಿಂದೆ ಮಾಧ್ಯಮಗಳ ಮೂಲಕವೂ ಮನವಿ ಮಾಡಿದ್ದೇನೆ ಎಂದು ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಯುವತಿಯ ತಂದೆ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಿಡಿಯಲ್ಲಿರುವ ಯುವತಿ, ವಕೀಲ ಜಗದೀಶ್ ನನ್ನ ಸಹಕಾರ ಕೇಳಿದ್ದಕ್ಕೆ ಅಲ್ಲಿ ಹಾಜರಿದ್ದೆ: ಸೂರ್ಯ ಮುಕುಂದರಾಜ್ ಸ್ಪಷ್ಟನೆ
Published On - 8:24 pm, Wed, 31 March 21